Viral Video | ಸುಡುಬಿಸಿಲಿನಲ್ಲಿ ಕುಳಿತಿದ್ದ ವೃದ್ಧೆಯ ಎಲ್ಲ ಹಣ್ಣು ಖರೀದಿಸಿ, ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ - Vistara News

ವೈರಲ್ ನ್ಯೂಸ್

Viral Video | ಸುಡುಬಿಸಿಲಿನಲ್ಲಿ ಕುಳಿತಿದ್ದ ವೃದ್ಧೆಯ ಎಲ್ಲ ಹಣ್ಣು ಖರೀದಿಸಿ, ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

ಸುಡು ಬಿಸಿಲಿನಲ್ಲಿ ವ್ಯಾಪಾರ ಮಾಡುತ್ತಿದ್ದ ಮುದುಕಿಯ ಮೇಲೆ ಪೊಲೀಸ್ ಅಧಿಕಾರಿ ತೋರಿದ ಕರುಣೆಯ ವಿಡಿಯೋ ಸಖತ್ ವೈರಲ್ ಆಗಿದೆ(Viral Video).

VISTARANEWS.COM


on

Aged Woman Selling fruits @ Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸುಡು ಬಿಸಿಲಿನಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದ ವೃದ್ಧೆಯ ಸಂಕಟ ನೋಡಲಾಗದ ಪೊಲೀಸ್ ಅಧಿಕಾರಿಯೊಬ್ಬರು, ಆಕೆಯ ಬಳಿ ಮಾರಾಟಕ್ಕಿದ್ದ 2 ಕೆ.ಜಿ ಪೇರಲ ಹಣ್ಣುಗಳನ್ನು ಖರೀದಿಸಿ ವಿಶ್ರಾಂತಿಗಾಗಿ ಮನೆಗೆ ಕಳುಹಿಸಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನರ ಮೇಲೆ ಸ್ವಲ್ಪವೇ ಕರುಣೆ ತೋರಿಸಿದರೂ ಸಾಕು ಅದು ಬೀರುವ ಪರಿಣಾಮ ಬಹಳ ದೊಡ್ಡದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗುತ್ತಿದೆ(Viral Video).

ರಸ್ತೆಯ ಪಕ್ಕದಲ್ಲಿ ಮುದುಕಿಯೊಬ್ಬಳು ಪೇರಲ ಹಣ್ಣು ಮಾರುತ್ತಿರುತ್ತಾಳೆ. ಇದನ್ನು ಗಮನಿಸಿದ ಪೊಲೀಸ್ ಅಧಿಕಾರಿ ಆಕೆಯ ಪರಿಚಯವನ್ನು ಮಾಡಿಕೊಳ್ಳುತ್ತಾರೆ. ಎಲ್ಲ ಪೇರಲು ಹಣ್ಣು ಖರೀದಿಸಿದರೆ ಮನೆಗೆ ಹೋಗಿ ವಿಶ್ರಾಂತಿ ಮಾಡುತ್ತೀರಾ ಎಂದು ಕೇಳುತ್ತಾರೆ. ಅದಕ್ಕೆ ವೃದ್ಧೆ ಹೌದು ಎನ್ನುತ್ತಾಳೆ. ಬಳಿಕ, 1 ಕೆ.ಜಿ ಪೇರಲ ಹಣ್ಣಿಗೆ ಎಷ್ಟು ಎಂದು ಕೇಳುತ್ತಾರೆ. ಅಜ್ಜಿ 1 ಕೆ.ಜಿ. ಪೇರಲ ಹಣ್ಣಿಗೆ 20 ರೂ. ಎನ್ನುತ್ತಾಳೆ. ಪೊಲೀಸ್ ಅಧಿಕಾರಿ ನೂರರ ನೋಟು ನೀಡಿ, ಎಲ್ಲ ಹಣ್ಣನ್ನು ಖರೀದಿಸುತ್ತಾರೆ. ಬಳಿಕ, ಮನೆಗೆ ಹೋಗಿ ವಿಶ್ರಾಂತಿ ಮಾಡುವಂತೆ ಸೂಚಿಸುತ್ತಾರೆ. ಎಲ್ಲ ಹಣ್ಣು ಮಾರಾಟವಾದ ಖುಷಿಯಲ್ಲಿ ಪೊಲೀಸ್ ಅಧಿಕಾರಿಗೆ ಒಳ್ಳೆಯದಾಗಲಿ ಎಂದು ವೃದ್ಧೆ ಹಾರೈಸುತ್ತಾಳೆ. ಈ ವೃದ್ಧೆಯ ಹೆಸರು ಫೂಲ್‌ರಾಣಿ.

ಸುಮಾರು ಒಂದೂವರೆ ನಿಮಿಷದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. Bundeli Bauchhar ಎಂಬ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಷೇರ್ ಮಾಡಲಾಗಿದ್ದು, ಅಧಿಕಾರಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಈವರೆಗೆ 1.1 ಮಿಲಿಯನ್ ವೀವ್ಸ್ ಬಂದಿದೆ.

ಇದನ್ನೂ ಓದಿ | Petrol Pump Robbery | ಪೆಟ್ರೋಲ್ ಪಂಪ್ ದರೋಡೆಗೆ ಬಂದು ಹೆಣವಾದ! ವಿಡಿಯೋ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

CM Siddaramaiah: ಏರ್‌ಪೋರ್ಟ್‌ನಲ್ಲೇ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ; 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೊ!

CM Siddaramaiah: ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯನವರು ಕ್ರಿಕೆಟ್‌ ನೋಡಿದ್ದ ವಿಡಿಯೊ ವೈರಲ್‌ ಆಗಿದ್ದು, ಮುಖ್ಯಮಂತ್ರಿಗಳ ಕ್ರಿಕೆಟ್‌ ಪ್ರೇಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

CM Siddaramaiah
Koo

ಬೆಂಗಳೂರು: ಟಿ20 ವಿಶ್ವಕಪ್​ 2024 ಚಾಂಪಿಯನ್‌ ಆಗಿ ಹೊರ ಹೊಮ್ಮಿದ ಟೀಮ್‌ ಇಂಡಿಯಾಗೆ (T20 World Cup 2024) ಅಭಿನಂದನೆಗಳ ಪ್ರವಾಹವೇ ಹರಿದು ಬರುತ್ತಿದೆ. ಈ ನಡುವೆ ಜೂನ್‌ 29ರಂದು ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡದ ನಡುವಿನ ಫೈನಲ್‌ ಪಂದ್ಯವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಏರ್‌ಪೋರ್ಟ್‌ನಲ್ಲೇ ವೀಕ್ಷಿಸಿದ್ದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗುತ್ತಿದ್ದು, ಸಿಎಂ ಕ್ರಿಕೆಟ್‌ ಪ್ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೊವನ್ನು 70 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 1.3 ಲಕ್ಷ ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ಕಮೆಂಟ್‌ ಮಾಡಿದ್ದಾರೆ.

ಶನಿವಾರ ಟಿ20 ವಿಶ್ವಕಪ್‌ನ ಫೈನಲ್‌ ನಡೆದು, ಭಾರತ ತಂಡ ರೋಚಕ ಜಯದೊಂದಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದೆ. ಪ್ರತಿ ಎಸೆತವೂ ಪಂದ್ಯದ ಗತಿ ಬದಲಿಸುವಂತಿದ್ದುದ್ದರಿಂದ ಇಡೀ ದೇಶವೇ ಫೈನಲ್‌ ಪಂದ್ಯವನ್ನು ನಿಬ್ಬೆರಗಾಗಿ ವೀಕ್ಷಿಸಿದೆ. ಮೂರು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, 9.30ರ ವಿಮಾನ ಹತ್ತಿ ಬೆಂಗಳೂರಿಗೆ ವಾಪಾಸಾಗಬೇಕಿತ್ತು. ಇದೆಲ್ಲದರ ನಡುವೆ ಅವರಿಗೆ ಸಿಕ್ಕಿದ್ದು ಕೆಲವೇ ಕೆಲವು ನಿಮಿಷಗಳು ಮಾತ್ರ, ಅದೇ ಅಲ್ಪ ಬಿಡುವಿನ ಸಮಯದಲ್ಲಿ ವಿಮಾನದ ಬಾಗಿಲಲ್ಲಿ ನಿಂತು ವಿಶ್ವಕಪ್‌ ಟಿ20 ಫೈನಲ್‌ ಪಂದ್ಯ ವೀಕ್ಷಿಸಿ ಅದನ್ನು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿದ್ದರು. ಅದರ ಜೊತೆಗೆ ಭಾರತವು ಸಂಘಟಿತ ಪ್ರದರ್ಶನದ ಮೂಲಕ ವಿಶ್ವಕಪ್‌ ಗೆದ್ದು ಬರಲಿ ಎಂದು ಮನದುಂಬಿ ಹಾರೈಸಿದ್ದರು.

ಈ ರೀತಿ ಸಿದ್ದರಾಮಯ್ಯನವರು ಶೇರ್‌ ಮಾಡಿದ್ದ ವಿಡಿಯೊ ಇದೀಗ ಜಾಲತಾಣದಲ್ಲಿ ಭಾರೀ ಹವಾ ಸೃಷ್ಟಿಸಿದೆ. ಈವರೆಗೆ ವಿಡಿಯೋವನ್ನು 70 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ, 1,30,000 ಮಂದಿ ಸಿದ್ದರಾಮಯ್ಯನವರ ಕ್ರಿಕೆಟ್‌ ಪ್ರೇಮಕ್ಕೆ ಲೈಕ್‌ ಒತ್ತಿ ಮೆಚ್ಚಿದ್ದಾರೆ. ಸಾವಿರಾರು ಮಂದಿ ಕಮೆಂಟ್‌ ಗಳ ಸುರಿಮಳೆಗೈದು ನಿಮ್ಮ ಕ್ರೀಡಾ ಪ್ರೀತಿಗೆ ನಾವು ಅಭಿಮಾನಿಯಾಗಿದ್ದೇವೆಂದು ಕೊಂಡಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣಿಯೊಬ್ಬರ ಸಾಮಾಜಿಕ ಜಾಲತಾಣದಲ್ಲಿ ಹಾಕಲ್ಪಟ್ಟ ಯಾವೊಂದು ವೀಡಿಯೋ ಕೂಡ ಇಷ್ಟು ವೈರಲ್‌ ಆಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ | ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ಆಗಾಗ್ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳಿಗೆ ಹೋಗಿ ಪಂದ್ಯ ವೀಕ್ಷಿಸಿ ಆಟಗಾರರಿಗೆ ಚಪ್ಪಾಳೆಯ ಮೂಲಕ ಹುರಿದುಂಬಿಸುತ್ತಿದ್ದ ಸಿದ್ದರಾಮಯ್ಯನವರು ಬಿಡುವಿರದ ದಿನಚರಿಯ ಕಾರಣಕ್ಕೆ ವಿಮಾನದ ಬಾಗಿಲಲ್ಲಿ ನಿಂತು ಕ್ರಿಕೆಟ್‌ ವೀಕ್ಷಿಸಿದ್ದಕ್ಕೆ ಕರುನಾಡು ಕೊಂಡಾಡುತ್ತಿದೆ.
ಒಂದೆಡೆ ಭಾರತ ವಿಶ್ವಕಪ್‌ ಗೆದ್ದಿದೆ, ಇನ್ನೊಂದೆಡೆ ಸಿದ್ದರಾಮಯ್ಯನವರು ನಾಡಿನ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ.

Continue Reading

Latest

Viral News: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

Viral News: ಈಗ ಹಣ ಮಾಡುವುದಕ್ಕೆ ಜನ ಯಾವುದೆಲ್ಲಾ ದಾರಿ ಹಿಡಿಯುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ತೈವಾನ್ ಕರಾವಳಿ ಭಾಗದ ತೈಚುಂಗ್‌ನ ರೆಸ್ಟೋರೆಂಟ್‌ವೊಂದರಲ್ಲಿ ಗ್ರಾಹಕರಿಗೆ ಪ್ಲೇಟ್ ಇಲ್ಲದೇ ಬೆತ್ತಲೆಯಾಗಿರುವ ಮಹಿಳೆಯ ಮೈಮೇಲೆ ಆಹಾರವನ್ನು ಬಡಿಸಲಾಗುತ್ತದೆಯಂತೆ. ಆದರೆ ಈ ಆಹಾರವನ್ನು ಸೇವಿಸುವವರು ಸ್ಪೂನ್ ಬಳಸುವಂತಿಲ್ಲ. ತಮ್ಮ ಕೈಯಿಂದ ತೆಗೆದುಕೊಂಡು ತಿನ್ನಬೇಕು. ಈ ಭೋಜನ ತುಂಬಾ ದುಬಾರಿಯಾಗಿದ್ದು, ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಬರೋಬರಿ 2.58 ಲಕ್ಷ ರೂ. ಎನ್ನಲಾಗಿದೆ. ಈ ಭೋಜನಕ್ಕೆ ‘ನ್ಯೂಟೈಮೊರಿ ಡಿನ್ನರ್’ ಎಂದು ಹೆಸರಿಡಲಾಗಿದೆ.

VISTARANEWS.COM


on

Viral News
Koo

ಪುರಾತನ ಕಾಲದಲ್ಲಿ ಮಹಿಳೆಯರಿಗೆ ಅಪಾರ ಗೌರವ ನೀಡುತ್ತಿದ್ದರು. ಪರಸ್ತ್ರೀಯನ್ನು ಮುಟ್ಟಲೂ ಹೆದರುತ್ತಿದ್ದರು ಎಂಬ ಮಾತಿತ್ತು. ಆದರೆ ಇಂದಿನ ಕಾಲದಲ್ಲಿ ಮಹಿಳೆಯರ ದೇಹವನ್ನೇ ಬಳಸಿಕೊಂಡು ವ್ಯಾಪಾರ ಮಾಡಲು ಶುರುಮಾಡಿದ್ದಾರೆ. ಈಗ ಮಹಿಳೆಯರನ್ನು ನಗ್ನವಾಗಿ ಬಳಸಿಕೊಂಡು ವ್ಯಾಪಾರ ಮಾಡುವ ಪ್ರವೃತ್ತಿ ರೆಸ್ಟೋರೆಂಟ್‌ಗಳಲ್ಲಿಯೂ ಬಂದಿದೆ. ಗ್ರಾಹಕರನ್ನು ಆಕರ್ಷಿಸಲು ಕ್ಲಬ್ ರೆಸ್ಟೋರೆಂಟ್‌ಗಳು ಮಹಿಳೆಯರನ್ನು ಬೆತ್ತಲೆ ಮಾಡಿದ್ದು, ಇದಕ್ಕೆ ಸಂಬಂಧಪಟ್ಟ ಪೋಟೊ ವೈರಲ್ (Viral News) ಆಗಿದೆ. ತೈವಾನ್ ಕರಾವಳಿ ಭಾಗದ ತೈಚುಂಗ್‌ನ ರೆಸ್ಟೋರೆಂಟ್‌ವೊಂದರಲ್ಲಿ ಗ್ರಾಹಕರಿಗೆ ಪ್ಲೇಟ್ ಇಲ್ಲದೇ ಬೆತ್ತಲೆಯಾಗಿರುವ ಮಹಿಳೆಯ ಮೈಮೇಲೆ ಆಹಾರವನ್ನು ಬಡಿಸಲಾಗುತ್ತದೆ. ಆದರೆ ಈ ಆಹಾರವನ್ನು ಸೇವಿಸುವವರು ಸ್ಪೂನ್ ಬಳಸುವಂತಿಲ್ಲ. ತಮ್ಮ ಕೈಯಿಂದ ತೆಗೆದುಕೊಂಡು ತಿನ್ನಬೇಕು. ಈ ಭೋಜನ ತುಂಬಾ ದುಬಾರಿಯಾಗಿದ್ದು, ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ ಬರೋಬ್ಬರಿ 2.58 ಲಕ್ಷ ರೂ. ಎನ್ನಲಾಗಿದೆ. ಈ ಭೋಜನಕ್ಕೆ ‘ನ್ಯೂಟೈಮೊರಿ ಡಿನ್ನರ್’ ಎಂದು ಹೆಸರಿಡಲಾಗಿದೆ.

Viral News

ಹಾಗೇ ಯುವತಿಯ ಬೆತ್ತಲೆ ದೇಹದ ಪ್ಲೇಟ್‌ಗೆ ‘ಸುಶಿ ಬೋಟ್’ ಎಂದು ಕರೆಯಲಾಗುತ್ತದೆ. ಈ ಭೋಜನಕ್ಕೆ ಭಾರೀ ಬೇಡಿಕೆ ಇದ್ದು, ಇದನ್ನು ಪಡೆಯಲು ಗ್ರಾಹಕರು ಮೊದಲೇ ಬುಕ್ ಮಾಡಬೇಕು. ನಂತರ ಅವರು ತಿಳಿಸಿದ ದಿನ ಕ್ಲಬ್ ಗೆ ಹೋದರೆ ಸಾಕಂತೆ. ಅಲ್ಲಿ ಮೊದಲು ಟೇಬಲ್ ಮೇಲೆ ಬೆತ್ತಲೆಯಾದ ಯುವತಿ ಬಂದು ಮಲಗುತ್ತಾಳೆ ನಂತರ ಅವಳ ಮೇಮೇಲೆ ವಿವಿಧ ರೀತಿಯ ಸಲಾಡ್, ಫುಡ್ ಅನ್ನು ಇಡಲಾಗುತ್ತದೆ.

Viral News

ಇದಕ್ಕೆ ಸಂಬಂಧಪಟ್ಟ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದೆ. ಈ ಪ್ರಕರಣವು ಆನ್‌ಲೈನ್‌ನಲ್ಲಿ ಸಾಕಷ್ಟು ಟೀಕೆಗಳನ್ನು ಹುಟ್ಟುಹಾಕಿದೆ. ಅದರ ನಂತರ ಸ್ಥಳೀಯ ಅಧಿಕಾರಿಗಳು ಈ ಕ್ಲಬ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಬಂದಿಲ್ಲ, ಆದರೂ ಈ ಬಗ್ಗೆ ತನಿಖೆ ಮಾಡುವುದಾಗಿ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

ವರದಿ ಪ್ರಕಾರ, ಈ ‘ನ್ಯೂಟೈಮೊರಿ’ ಭೋಜನಾ ವ್ಯವಸ್ಥೆ 1980ರ ದಶಕದಲ್ಲಿ ಜಪಾನ್‌ನಲ್ಲಿ ಹುಟ್ಟಿಕೊಂಡಿತು. ಪುರುಷರ ದೇಹದ ಮೇಲೆ ಆಹಾರವನ್ನು ನೀಡುವುದಕ್ಕೆ ‘ನ್ಯೂಟೈಮೊರಿ’ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಟೀಕೆಗಳನ್ನು ಕೇಳಿಬಂದರೂ ಕೂಡ ಇದು ಇನ್ನೂ ಅನೇಕ ಸ್ಥಳಗಳಲ್ಲಿ ಆಚರಣೆಯಲ್ಲಿದೆ ಎನ್ನಲಾಗಿದೆ. ಆದರೆ ಅತ್ಯಂತ ದುಬಾರಿಯಾದ್ದರಿಂದ ಸಾರ್ವಜನಿಕ ಆರೋಗ್ಯ ಕಾಳಜಿಗಳು ಮತ್ತು ನೈತಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಚೀನಾ ಸರ್ಕಾರವು 2005 ರಲ್ಲಿ ‘ನ್ಯೂಟೈಮೊರಿ’ಯನ್ನು ನಿಷೇಧಿಸಿತು ಎನ್ನಲಾಗಿದೆ.

Continue Reading

Latest

Viral Video: 1 ನಿಮಿಷದಲ್ಲಿ 35 ಪುಲ್-ಅಪ್! ಮೇಜರ್ ಜನರಲ್ ವಿಡಿಯೊ ಫುಲ್ ವೈರಲ್

Viral Video: ಮೇಜರ್ ಜನರಲ್ ಪ್ರಸನ್ನ ಜೋಶಿ ಅವರು ಒಂದು ನಿಮಿಷದಲ್ಲಿ 35 ಪುಲ್-ಅಪ್ ಗಳನ್ನು ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ಲೆಫ್ಟಿನೆಂಟ್ ಕರ್ನಲ್ ಜೆ.ಎಸ್.ಸೋಧಿ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದು, ಭಾರತೀಯ ಸೇನೆಯ ಮೇಜರ್ ಜನರಲ್ ಪ್ರಸನ್ನ ಜೋಶಿ ಅವರ ದೈಹಿಕ ಸಾಮರ್ಥ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
Koo

ಮುಂಬೈ : ಮೇಜರ್ ಜನರಲ್ ಪ್ರಸನ್ನ ಜೋಶಿ ಅವರು ಒಂದು ನಿಮಿಷದಲ್ಲಿ 35 ಪುಲ್-ಅಪ್ ಗಳನ್ನು ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಫಿಟ್‌ನೆಸ್ ಮತ್ತು ಕಠಿಣ ವ್ಯಾಯಾಮಗಳನ್ನು ಮಾಡುವ ಅವರ ಸಾಮರ್ಥ್ಯದ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊವನ್ನು ಲೆಫ್ಟಿನೆಂಟ್ ಕರ್ನಲ್ ಜೆ.ಎಸ್.ಸೋಧಿ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದು, ಭಾರತೀಯ ಸೇನೆಯ ಮೇಜರ್ ಜನರಲ್ ಪ್ರಸನ್ನ ಜೋಶಿ ಅವರ ದೈಹಿಕ ಸಾಮರ್ಥ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತು ಅಕ್ಟೋಬರ್ 2022 ರಲ್ಲಿ ಜರ್ಮನ್ ಪಬ್ಲಿಕೇಶನ್ ಸ್ಟ್ಯಾಟಿಸ್ಟಾ ಭಾರತೀಯ ಸೇನೆಯನ್ನು ವಿಶ್ವದ ಅತ್ಯುತ್ತಮ ಹೋರಾಟದ ಪಡೆ ಎಂದು ಹೊಗಳಿದೆ. ಹಾಗಾಗಿ ತಮಗೆ ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್ ಎಂದು ಬರೆದಿದ್ದಾರೆ.

ಈ ವಿಡಿಯೊದಲ್ಲಿ ಮೇಜರ್ ಜನರಲ್ ಜೋಶಿ ಅವರು ಇತರ ಸೇನಾ ಸಿಬ್ಬಂದಿಗಳ ಜೊತೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಆ ವೇಳೆ ಅವರು ನಿರಂತರವಾಗಿ ಪುಲ್-ಅಪ್‌ಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಅವರ ವರ್ಕೌಟ್ ಮುಗಿದ ಬಳಿಕ ಅಲ್ಲಿರುವ ಪ್ರತಿಯೊಬ್ಬರೂ ಅವರ ದೈಹಿಕ ಸಾಮರ್ಥ್ಯವನ್ನು ಕಂಡು ಹೊಗಳಿದ್ದಾರೆ.

Viral Video

ಇದನ್ನೂ ಓದಿ: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

ಈ ವಿಡಿಯೊವನ್ನು ಜೂನ್ 29ರಂದು ಪೋಸ್ಟ್ ಮಾಡಿದ್ದು, ಈ ವಿಡಿಯೊ ಒಂದು ಲಕ್ಷಕ್ಕೂ ಹೆಚ್ಚು ವೀವ್ಸ್‌ಗಳು ಮತ್ತು 4,000 ಕ್ಕೂ ಹೆಚ್ಚು ಲೈಕ್ಸ್‌ಗಳು ಸಿಕ್ಕಿವೆ .ಇದಕ್ಕ ಹಲವರು ಕಾಮೆಂಟ್ ಮಾಡಿದ್ದಾರೆ. ಜಿಮ್‌ನಲ್ಲಿ 25 ಪುಲ್-ಅಪ್‌ಗಳನ್ನು ಮಾಡಿದ ನಂತರವೂ ಅವರು ಸಮವಸ್ತ್ರದ ಶರ್ಟ್ ಅನ್ನು ಸರಿಯಾಗಿ ಧರಿಸಿದ್ದಾರೆ ಎಂದು ಅವರ ಶಿಸ್ತಿನ ಬಗ್ಗೆ ಒಬ್ಬ ವ್ಯಕ್ತಿ ಬರೆದಿದ್ದಾರೆ. ಇನ್ನೊಬ್ಬರು ಅವರನ್ನು ರಿಯಲ್ ಹೀರೊ ಎಂದು ಹೊಗಳಿದ್ದಾರೆ. ಅತ್ಯಂತ ಸವಾಲಿನ ಪರಿಸ್ಥಿತಿಗಳನ್ನು ನಗುತ್ತಾ ಹೆದರದೆ ಎದುರಿಸುವ ವ್ಯಕ್ತಿ ಅವರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೇ ಇನ್ನೊಬ್ಬರು ಮೇಜರ್ ಜನರಲ್‌ಗೆ ಪುಲ್-ಅಪ್ ಗಳು ಮತ್ತು ಫಿಟ್ನೆಸ್ ಬಗ್ಗೆ ಇರುವ ಉತ್ಸಾಹದ ಬಗ್ಗೆ ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral News: ಇದೆಂಥಾ ಹುಚ್ಚಾಟ! ಎನ್‌ಡಿಎ ಕಳಪೆ ಪ್ರದರ್ಶನದಿಂದ ಖಿನ್ನತೆ; ವ್ಯಕ್ತಿ ಆತ್ಮಹತ್ಯೆಗೆ ಶರಣು

Viral News:ಶ್ರೀನಗರ ಗ್ರಾಮದ ಸುಖ್ವಿಂದರ್‌ ಎಂಬಾತ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಬಹುಮತ ಗಳಿಸುವಲ್ಲಿ ವಿಫಲರಾಗಿರುವ ಹಿನ್ನೆಲೆ ಖಿನ್ನತೆಗೊಳಗಾಗಿದ್ದ, ಜೂ.4ರಂದು ಫಲಿತಾಂಶ ಬಂದ ನಂತರ ಅವರು ಖಿನ್ನತೆಗೊಳಗಾಗಿದ್ದರು. ಕುಟುಂಬಸ್ಥರು ಆತನಿಗೆ ಎಷ್ಟೇ ಸಮಾಧಾನ ಹೇಳಿದರೂ ಆತ ಏನೂ ಹೇಳದೇ ಬರೀ ಮೌನ ವಹಿಸಿದ್ದ. ಇದೇ ಬೇಸರದಲ್ಲಿ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

VISTARANEWS.COM


on

Koo

ಹರಿಯಾಣ: ಚುನಾವಣೆ(Election) ಅಂದ್ರೆನೇ ಹಾಗೆಯೇ ಅದೊಂದು ತರಹ ಯುದ್ಧದ ರೀತಿಯೇ ಭಾಸವಾಗುತ್ತದೆ. ತಮ್ಮ ತಮ್ಮ ನೆಚ್ಚಿನ ಪಕ್ಷಗಳು, ನಾಯಕರ ಗೆಲುವಿಗೆ ನೂರಾರು ಕಾರ್ಯಕರ್ತರು, ಬೆಂಬಲಿಗರು ಹಂಬಲಿಸೋದು ಸಹಜ. ಕೆಲವೊಮ್ಮೆ ಕಾರ್ಯಕರ್ತರ ಪಕ್ಷದ ಬಗೆಗಿನ ಒಲವು ಅತಿರೇಕಕ್ಕೆ ತಿರುಗಿದಾಗ ಅನೇಕ ಅವಘಡಗಳು ಸಂಭವಿಸುತ್ತಿರುತ್ತವೆ. ಅಂತಹದ್ದೇ ಒಂದು ಘಟನೆ(Viral News) ಹರಿಯಾಣದಲ್ಲಿ ನಡೆದಿದೆ. ಇಲ್ಲಿ ಹಿಸಾರ್‌ ಜಿಲ್ಲೆಯ ಮಿರ್ಜಾಪುರ ರಸ್ತೆ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಕಳಪೆ ಪ್ರದರ್ಶನ ತೋರಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ವಿವರ:

ಶ್ರೀನಗರ ಗ್ರಾಮದ ಸುಖ್ವಿಂದರ್‌ ಎಂಬಾತ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಬಹುಮತ ಗಳಿಸುವಲ್ಲಿ ವಿಫಲರಾಗಿರುವ ಹಿನ್ನೆಲೆ ಖಿನ್ನತೆಗೊಳಗಾಗಿದ್ದ, ಜೂ.4ರಂದು ಫಲಿತಾಂಶ ಬಂದ ನಂತರ ಅವರು ಖಿನ್ನತೆಗೊಳಗಾಗಿದ್ದರು. ಕುಟುಂಬಸ್ಥರು ಆತನಿಗೆ ಎಷ್ಟೇ ಸಮಾಧಾನ ಹೇಳಿದರೂ ಆತ ಏನೂ ಹೇಳದೇ ಬರೀ ಮೌನ ವಹಿಸಿದ್ದ. ಇದೇ ಬೇಸರದಲ್ಲಿ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಇಂತಹದ್ದೇ ಒಂದು ಛತ್ತೀಸ್‌ಗಡದಲ್ಲಿ ನಡೆದಿತ್ತು. ಎನ್‌ಡಿಎ(NDA) ಬಹುಮತದೊಂದಿಗೆ ಗೆಲವು ಸಾಧಿಸಿರುವ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಬೆರಳು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ್ದಾನೆ.ಛತ್ತೀಸ್‌ಗಡದ ಬಾಲರಾಮ್‌ಪುರದಲ್ಲಿ ಈ ಘಟನೆ ನಡೆದಿದ್ದು, ದುರ್ಗೇಶ್‌ ಪಾಂಡೆ ಎಂಬಾತನೇ ಬಿಜೆಪಿ ಬೆಂಬಲಿಗ. ಜೂ.4ರಂದು ಚನಾವಣಾ ಫಲಿತಾಂಶ ಹೊರಬಿದ್ದಾಗ ಆರಂಭದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದಂತೆ ತೀವ್ರ ಬೇಸರಗೊಂಡಿದ್ದನಂತೆ. ಈ ಬಾರಿ ಅಧಿಕಾರ ಎನ್‌ಡಿಎ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕಕ್ಕೆ ಬಿದ್ದ ದುರ್ಗೇಶ್‌, ಕಾಳಿ ಮಂದಿರಕ್ಕೆ ತೆರಳಿ ಬಿಜೆಪಿ ಗೆಲುವಿಗೆ ಪ್ರಾರ್ಥಿಸಿದ್ದಾನೆ. ಅಲ್ಲದೇ ತನ್ನ ಒಂದು ಬೆರಳನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ.

ಇನ್ನು ಬೆರಳು ಕತ್ತರಿಸಿಕೊಂಡ ದುರ್ಗೇಶ್‌ ಪಾಂಡೆ, ಬಟ್ಟೆಯನ್ನು ಕಟ್ಟಿ ಸುರಿಯುತ್ತಿದ್ದ ರಕ್ತವನ್ನು ತಡೆಯಲು ಯತ್ನಿಸಿದ್ದಾನೆ. ಆದರೆ ರಕ್ತ ಮಾತ್ರ ನಿಲ್ಲಲೇ ಇಲ್ಲ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಆತನ ಕುಟುಂಬಸ್ಥರು ಆತನನ್ನು ತಕ್ಷಣ ಸಮಾರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಆತನನ್ನು ಅಂಬಿಕಾಪುರದ ಮೆಡಿಕಲ್‌ ಕಾಲೇಜಿಗೆ ರವಾನಿಸಲಾಗಿತ್ತು. ಬಹಳ ಹೊತ್ತಾದ ಕಾರಣ ನಜ್ಜುಗುಜ್ಜಾಗಿದ್ದ ಆತನ ಬೆರಳನ್ನು ಮತ್ತೆ ಜೋಡಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

Continue Reading
Advertisement
Mangalore Jail
ಕರ್ನಾಟಕ10 mins ago

Mangalore Jail: ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

Virat Kohli
ಕ್ರಿಕೆಟ್23 mins ago

Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

Challa Sreenivasulu Setty
ವಾಣಿಜ್ಯ23 mins ago

Challa Sreenivasulu Setty: ಚಲ್ಲಾ ಶ್ರೀನಿವಾಸುಲು ಸೆಟ್ಟಿ; ಅಂದು ಪ್ರೊಬೆಷನರಿ ಅಧಿಕಾರಿ, ಈಗ ಎಸ್‌ಬಿಐ ಅಧ್ಯಕ್ಷ!

CM Siddaramaiah
ವೈರಲ್ ನ್ಯೂಸ್39 mins ago

CM Siddaramaiah: ಏರ್‌ಪೋರ್ಟ್‌ನಲ್ಲೇ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ; 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೊ!

Sha Rukh Khan
Latest58 mins ago

Sha Rukh Khan: ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

ZIM v IND 2024
ಪ್ರಮುಖ ಸುದ್ದಿ59 mins ago

ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

A total of Rs 13.93 crore livelihood relief for the farmer families of the district says DC Gangubai Manakar
ಉತ್ತರ ಕನ್ನಡ1 hour ago

Uttara Kannada News: ಜಿಲ್ಲೆಯ ರೈತ ಕುಟುಂಬಗಳಿಗೆ 13.93 ಕೋಟಿ ರೂ. ಜೀವನೋಪಾಯ ಪರಿಹಾರ: ಡಿಸಿ

IND vs SA:
ಪ್ರಮುಖ ಸುದ್ದಿ1 hour ago

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

Viral News
Latest1 hour ago

Viral News: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

Viral Video
Latest1 hour ago

Viral Video: 1 ನಿಮಿಷದಲ್ಲಿ 35 ಪುಲ್-ಅಪ್! ಮೇಜರ್ ಜನರಲ್ ವಿಡಿಯೊ ಫುಲ್ ವೈರಲ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ4 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌