Site icon Vistara News

Viral Video: ಮೈಮೇಲೆ ಒಂದಲ್ಲ..ಎರಡಲ್ಲ ಬರೋಬ್ಬರಿ 25ಕೆ.ಜಿ ಚಿನ್ನ; ತಿಮ್ಮಪ್ಪನ ಸನ್ನಿಧಿಗೆ ಬಂದ ವಿಶೇಷ ಭಕ್ತರು ಇವರೇ ನೋಡಿ

viral video

ಹೈದರಾಬಾದ್‌: ಇಡೀ ಪ್ರಪಂಚದಲ್ಲಿಯೇ ಚಿನ್ನದ ಮೇಲಿನ ಮೋಹ ಭಾರತೀಯರಿಗಿರುವಷ್ಟು ಬೇರೆ ಯಾವ ದೇಶದಲ್ಲೂ ಕಾಣಲು ಸಾಧ್ಯವೇ ಇಲ್ಲ. ಇಲ್ಲಿ ಚಿನ್ನಕ್ಕೆ ತನ್ನದೇ ಆದ ಸ್ಪೆಶಲ್‌ ಸ್ಥಾನವಿದೆ. ದರ ಎಷ್ಟೇ ಏರಿಕೆಯಾದ್ರೂ ಚಿನ್ನ ಖರೀದಿಸುವವರ ಸಂಖ್ಯೆಯ ಮಾತ್ರ ಕಡಿಮೆ ಆಗಿಲ್ಲ. ಇದಕ್ಕೆ ಪೂರಕವೆಂಬಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್‌(Viral Video) ಆಗುತ್ತಿದೆ.

ತಿರುಪತಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಕುಟುಂಬವೊಂದು ಭೇಟಿ ಭೇಟಿ ನೀಡಿರುವ ವಿಡಿಯೋವೊಂದು ಅಸಾಮಾನ್ಯ ಕಾರಣಕ್ಕೆ ವೈರಲ್ ಆಗಿದೆ. ಕ್ಲಿಪ್‌ನಲ್ಲಿ, ಒಂದು ಕುಟುಂಬವು ಭಾರೀ ಚಿನ್ನಾಭರಣಗಳನ್ನು ಧರಿಸಿರುವುದನ್ನು ಕಾಣಬಹುದು. ಅವರು 25 ಕೆಜಿ ಚಿನ್ನದೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.

ಪುಣೆ ಮೂಲದ ಈ ಕುಟುಂಬವು ತಿರುಪತಿಗೆ ಭೇಟಿ ನೀಡಿದ್ದು, ಮೈ ಮೇಲೆ ಬರೋಬ್ಬರಿ 25 ಕೆಜಿ ಚಿನ್ನವನ್ನು ಧರಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇಂದು ಮುಂಜಾನೆ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವೀಡಿಯೋದಲ್ಲಿ ನಾಲ್ವರ ಕುಟುಂಬವೊಂದು ಕೈಮುಗಿದು ನಿಂತಿರುವ ದೃಶ್ಯವಿದೆ. ಬಿಳಿಯ ವಸ್ತ್ರಗಳು ಮತ್ತು ಧೋತಿಗಳನ್ನು ಧರಿಸಿರುವ ಇಬ್ಬರು ಪುರುಷರು ಕುತ್ತಿಗೆಯಲ್ಲಿ ದಪ್ಪ ಸರಪಳಿಯಂತಹ ಚಿನ್ನ ಧರಿಸಿದ್ದಾರೆ. ಚಿನ್ನದ ಬಣ್ಣದ ಸೀರೆಯುಟ್ಟ ಮಹಿಳೆಯು ಸಂಪೂರ್ಣವಾಗಿ ಚಿನ್ನದ ಆಭರಣದಿಂದ ಮುಚ್ಚಲ್ಪಟ್ಟಿದ್ದಾರೆ. ಇವರ ಜೊತೆ ಒಂದು ಮಗು ನಿಂತಿರುವುದು ಸಹ ಕಂಡುಬರುತ್ತದೆ.

ವೀಡಿಯೊ ಮುಂದುವರೆದಂತೆ, ಪುಣೆಯ ಕುಟುಂಬವು ಪೊಲೀಸ್ ಸಿಬ್ಬಂದಿಯೊಂದಿಗೆ ದೇವಾಲಯದ ಆವರಣದೊಳಗೆ ನಡೆಯುತ್ತಿರುವುದು ಕಂಡುಬರುತ್ತದೆ. ಇನ್ನು ಈ ವಿಡಿಯೋ 1.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ, ಶೇರ್ 400 ಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಅಲ್ಲದೇ ಅನೇಕರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಆದಾಯ ತೆರಿಗೆ ಇಲಾಖೆ ಕಣ್ಣು ನಿಮ್ಮ ಮೇಲಿದೆ ಎಂದು ಹಲವರು ತಮಾಷೆ ಮಾಡಿದ್ದಾರೆ. ದೇವರ ಮುಂದೆ ಈ ಪ್ರದರ್ಶನ ಏಕೆ?” ನಾಲ್ಕನೆಯವರು ಬರೆದಿದ್ದಾರೆ, “ಇದು ತುಂಬಾ ಹುಚ್ಚುತನ ಎಂದು ಮತ್ತೆ ಕೆಲವರು ಕಮೆಂಟ್‌ ಮಾಡಿದ್ದಾರೆ.

ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ಈ ದೇವಾಲಯವು ದಟ್ಟವಾದ ಕಾಡಿನ ನಡುವೆ ನೆಲೆಸಿದೆ. ಹಿಂದೂ ಧರ್ಮದ ಅನುಯಾಯಿಗಳಿಂದ ಇದು ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದ ಪ್ರಕಾರ, ಈ ದೇವಾಲಯವು ಭಗವಾನ್ ವಿಷ್ಣುವಿನ ಅವತಾರವೆಂದು ನಂಬಲಾದ ವೆಂಕಟೇಶ್ವರನಿಗೆ ಸಮರ್ಪಿತವಾಗಿದೆ. ದೇವಾಲಯವು ಕೇವಲ ಧಾರ್ಮಿಕವಲ್ಲ, ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದೆ. ಇಲ್ಲಿಗೆ ಗಣ್ಯಾತಿಗಣ್ಯರು ಭೇಟಿ ನೀಡುತ್ತಲೇ ಇರುತ್ತಾರೆ.

ಇದನ್ನೂ ಓದಿ: ಕೋತಿಗಳ ಮುಂದೆ ಮಂಗಾಟ ಮಾಡುವ ಮುನ್ನ ಈ ವೈರಲ್‌ ವಿಡಿಯೋ ನೋಡಿ

Exit mobile version