ಸತಾರಾ: ಸೆಲ್ಫಿ ತೆಗೆದುಕೊಳ್ಳುವಾಗ (Taking Selfie) ಯುವತಿಯೊಬ್ಬಳು 100 ಅಡಿ ಆಳದ ಕಮರಿಗೆ ಬಿದ್ದಿರುವ ಘಟನೆ ಮಹಾರಾಷ್ಟ್ರದ ಸತಾರಾ (Maharashtra’s Satara district) ಜಿಲ್ಲೆಯ ಉಂಗಾರ್ ರಸ್ತೆಯ ಬೋರ್ನ್ ಘಾಟ್‌ನಲ್ಲಿ ನಡೆದಿದೆ. ಭಾರೀ ಮಳೆಯಾಗುತ್ತಿರುವ ಪ್ರದೇಶಕ್ಕೆ ಅವರು ಶನಿವಾರ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಸ್ಥಳೀಯರು ಹಗ್ಗವನ್ನು ಬಳಸಿ ಆಕೆಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಥಳೀಯರು ದಪ್ಪ ಹಗ್ಗವನ್ನು ಕಮರಿಗೆ ಎಸೆದಿದ್ದು ಮಹಿಳೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ವ್ಯಕ್ತಿಯೊಬ್ಬರು ಇಳಿಯುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಮರಳಿ ಕರೆತರುವಾಗ ಆಕೆ ನೋವಿನಿಂದ ಅಳುವುದು ಕೇಳುತ್ತದೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ತೀವ್ರ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆದರೆ ಅಪಾಯದಿಂದ ಪಾರಾಗಿದ್ದಾಳೆ.
#Maharashtra #Satara के उनघर रोड की बोर्ने घाट में गिरी एक युवती के रेस्क्यू का सनसनीखेज़ वीडियो सामने आया..सेल्फी लेने के दौरान युवती का पैर फिसला और घाट में गिर गई..100 फीट गहरे घाट में गिरी युवती को रस्सी से रेस्क्यू कर बाहर निकाला गया..3 अगस्त शाम की घटना@indiatvnews pic.twitter.com/GXdDJmxmsm
— Atul singh (@atuljmd123) August 4, 2024
ಇನ್ನೊಂದು ಘಟನೆಯಲ್ಲಿ ಮಹಿಳೆ ಸಾವು
ಇತ್ತೀಚೆಗೆ ನಡೆದ ಇನ್ನೊಂದು ಘಟನೆಯಲ್ಲಿ ಮುಂಬಯಿ ನಿವಾಸಿ ಮತ್ತು ಪ್ರಸಿದ್ಧ ಪ್ರವಾಸಿ ಪ್ರಭಾವಿ ಆನ್ವಿ ಕಾಮ್ದಾರ್ (26) ಅವರು ಮಹಾರಾಷ್ಟ್ರದ ರಾಯಗಢ ಬಳಿಯ ಕುಂಭೆ ಜಲಪಾತದಲ್ಲಿ ಇನ್ ಸ್ಟಾಗ್ರಾಮ್ ರೀಲ್ ಮಾಡುತ್ತಿದ್ದಾಗ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಯಾಣದ ವಿಷಯಕ್ಕಾಗಿ ಆನ್ವಿ ಪ್ರಸಿದ್ಧರಾಗಿದ್ದರು. ಜುಲೈ 16ರಂದು ತಮ್ಮ ಸ್ನೇಹಿತರೊಂದಿಗೆ ಚಿತ್ರೀಕರಣ ಮಾಡುವಾಗ 350 ಅಡಿ ಆಳದ ಕಮರಿಗೆ ಬಿದ್ದಿದ್ದಾರೆ.
ಕೋಸ್ಟ್ ಗಾರ್ಡ್ ಮತ್ತು ಸ್ಥಳೀಯ ರಕ್ಷಣಾ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಯನ್ನು ವೇಗವಾಗಿ ನಡೆಸಿತ್ತು. ಸುಮಾರು ಆರು ಗಂಟೆಗಳ ಅನಂತರ ಅಣ್ವಿಯನ್ನು ರಕ್ಷಿಸಲಾಯಿತು. ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮದುವೆಯಾದ ಮೇಲೂ ಪತ್ನಿಗೆ ಹಳೇ ಲವ್ವರ್ ಮೇಲೆ ಮೋಹ; ಆತನೊಂದಿಗೇ ಮದುವೆ ಮಾಡಿಸಿದ ಪತಿ!
ಅವರು ಬಿದ್ದ ಮಾಹಿತಿ ತಿಳಿದ ಸ್ಥಳೀಯ ರಕ್ಷಕರು ಸುಮಾರು 15 ನಿಮಿಷಗಳಲ್ಲಿ ಬಿದ್ದ ಸ್ಥಳವನ್ನು ತಲುಪಿದ್ದರು. ಅವರು ಬಿದ್ದ ಸ್ಥಳ ತಲುಪುವಾಗ ದೊಡ್ಡ ಕಲ್ಲುಗಳು ಅವರ ಮೇಲೆ ಬೀಳುವುದರಲ್ಲಿತ್ತು. ಆದರೆ ಭಾರಿ ಅನಾಹುತ ಆ ಕ್ಷಣದಲ್ಲಿ ತಪ್ಪಿತ್ತು. ಆರಂಭದಲ್ಲಿ ರಕ್ಷಕರು ಅವರು ಸತ್ತಿರಬಹುದು ಎಂದು ಭಾವಿಸಿದ್ದರು. ಆದರೆ ಪರೀಕ್ಷಿಸಿದಾಗ ಅವರು ಇನ್ನೂ ಉಸಿರಾಡುತ್ತಿರುವುದನ್ನು ಗಮನಿಸಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಯಿತು. ಸ್ವಲ್ಪ ದೂರದವರೆಗೆ ಅವರನ್ನು ಸ್ಟ್ರೆಚರ್‌ನಲ್ಲಿ ಹೊತ್ತೊಯ್ದು ಅನಂತರ ಹಗ್ಗದ ಮೂಲಕ ಮೇಲಕ್ಕೆ ಎತ್ತಲಾಗಿತ್ತು. ಬಳಿಕ ಅವರನ್ನು ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.