ಬೆಂಗಳೂರು: ಘೇಂಡಾಮೃಗ ನೋಡಿದರೆ ಭಯ ಆಗುವುದು ಸಾಮಾನ್ಯ. ಒಂದು ವೇಳೆ ಅದೇ ಘೇಂಡಾಮೃಗ ನಿಮ್ಮ ಗಾಡಿ ಬಳಿ ಬಂದು, ಗಾಡಿ ಹತ್ತಿ ಕುಳಿತುಕೊಳ್ಳಲು ಯತ್ನಿಸಿಬಿಟ್ಟರೆ? ಇಂಥದ್ದೇ ದೃಶ್ಯವಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral News : ಐಎಎಸ್ ಅಧಿಕಾರಿಯ ಈ ಪೋಸ್ಟ್ ನೋಡಿ ತಮ್ಮ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು
ಘೇಂಡಾಮೃಗವೊಂದು ರಸ್ತೆಯಲ್ಲಿ ಜೋರಾಗಿ ಓಡುತ್ತಿದೆ. ಓಡುತ್ತಿದ್ದ ಘೇಂಡಾಮೃಗ ಅಲ್ಲೇ ನಿಂತಿದ್ದ ಆಟೋ ರಿಕ್ಷಾವನ್ನು ಗಮನಿಸಿ ಅದರ ಬಳಿ ತೆರಳಿದೆ. ಅದನ್ನು ಹತ್ತುವ ರೀತಿಯಲ್ಲಿ ಪ್ರಯತ್ನ ಮಾಡಿದೆ. ಇದನ್ನು ಕಂಡೊಡನೆ ಆಟೋದಲ್ಲಿದ್ದ ಚಾಲಕ ಹೆದರಿ ಓಡಿದ್ದಾನೆ. ನಂತರ ಘೇಂಡಾಮೃಗ ಕೂಡ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ರಸ್ತೆಯಲ್ಲಿ ಓಡುವುದನ್ನು ಮುಂದುವರಿಸಿದೆ.
ಈ ದೃಶ್ಯವಿರುವ ವಿಡಿಯೊವನ್ನು ಅರಣ್ಯ ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 20 ಸೆಕೆಂಡುಗಳ ಕಾಲ ಇರುವ ಈ ವಿಡಿಯೊ ಸಾವಿರಾರು ಮಂದಿಯಿಂದ ವೀಕ್ಷಣೆ ಪಡೆದಿದೆ. ಹಲವರು ವಿಡಿಯೊವನ್ನು ಮೆಚ್ಚಿ ಲೈಕ್ ಮಾಡಿದ್ದಾರೆ. “ಆಟೋ ಚಾಲಕರು ಹೀಗೆಯೇ. ಎಲ್ಲಿಗಾದರೂ ಹೋಗಬೇಕೆಂದು ಕೇಳಿದಾಕ್ಷಣ ಓಡಿಹೋಗಿಬಿಡುತ್ತಾರೆ” ಎಂದು ಕೆಲವರು ಕಾಮೆಂಟ್ ಅಲ್ಲಿ ನಗೆಚಟಾಕಿ ಹಾರಿಸಿದ್ದಾರೆ. ಇನ್ನು ಕೆಲವರು “ಮನುಷ್ಯ ಕಾಡು ನಾಶ ಮಾಡುತ್ತಿರುವುದರಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರಲಾರಂಭಿಸಿವೆ” ಎಂದು ಕಾಮೆಂಟ್ ಅಲ್ಲಿ ಹೇಳಿದ್ದಾರೆ.