Viral Video: ಮನೆಗೆ ಬಿಡು ಎಂದು ಆಟೋ ಹತ್ತಲು ಬಂದ ಘೇಂಡಾಮೃಗ! ಮುಂದೇನಾಯ್ತು ನೋಡಿ - Vistara News

ವೈರಲ್ ನ್ಯೂಸ್

Viral Video: ಮನೆಗೆ ಬಿಡು ಎಂದು ಆಟೋ ಹತ್ತಲು ಬಂದ ಘೇಂಡಾಮೃಗ! ಮುಂದೇನಾಯ್ತು ನೋಡಿ

ರಸ್ತೆಯಲ್ಲಿ ಓಡುತ್ತಿರುವ ಘೇಂಡಾಮೃಗವೊಂದು ಆಟೋ ಹತ್ತುವುದಕ್ಕೆ ಯತ್ನಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಘೇಂಡಾಮೃಗ ನೋಡಿದರೆ ಭಯ ಆಗುವುದು ಸಾಮಾನ್ಯ. ಒಂದು ವೇಳೆ ಅದೇ ಘೇಂಡಾಮೃಗ ನಿಮ್ಮ ಗಾಡಿ ಬಳಿ ಬಂದು, ಗಾಡಿ ಹತ್ತಿ ಕುಳಿತುಕೊಳ್ಳಲು ಯತ್ನಿಸಿಬಿಟ್ಟರೆ? ಇಂಥದ್ದೇ ದೃಶ್ಯವಿರುವ ವಿಡಿಯೊ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಇದನ್ನೂ ಓದಿ: Viral News : ಐಎಎಸ್ ಅಧಿಕಾರಿಯ ಈ ಪೋಸ್ಟ್ ನೋಡಿ ತಮ್ಮ ಬಾಲ್ಯ ನೆನಪಿಸಿಕೊಂಡ ನೆಟ್ಟಿಗರು
ಘೇಂಡಾಮೃಗವೊಂದು ರಸ್ತೆಯಲ್ಲಿ ಜೋರಾಗಿ ಓಡುತ್ತಿದೆ. ಓಡುತ್ತಿದ್ದ ಘೇಂಡಾಮೃಗ ಅಲ್ಲೇ ನಿಂತಿದ್ದ ಆಟೋ ರಿಕ್ಷಾವನ್ನು ಗಮನಿಸಿ ಅದರ ಬಳಿ ತೆರಳಿದೆ. ಅದನ್ನು ಹತ್ತುವ ರೀತಿಯಲ್ಲಿ ಪ್ರಯತ್ನ ಮಾಡಿದೆ. ಇದನ್ನು ಕಂಡೊಡನೆ ಆಟೋದಲ್ಲಿದ್ದ ಚಾಲಕ ಹೆದರಿ ಓಡಿದ್ದಾನೆ. ನಂತರ ಘೇಂಡಾಮೃಗ ಕೂಡ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ರಸ್ತೆಯಲ್ಲಿ ಓಡುವುದನ್ನು ಮುಂದುವರಿಸಿದೆ.


ಈ ದೃಶ್ಯವಿರುವ ವಿಡಿಯೊವನ್ನು ಅರಣ್ಯ ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 20 ಸೆಕೆಂಡುಗಳ ಕಾಲ ಇರುವ ಈ ವಿಡಿಯೊ ಸಾವಿರಾರು ಮಂದಿಯಿಂದ ವೀಕ್ಷಣೆ ಪಡೆದಿದೆ. ಹಲವರು ವಿಡಿಯೊವನ್ನು ಮೆಚ್ಚಿ ಲೈಕ್ ಮಾಡಿದ್ದಾರೆ. “ಆಟೋ ಚಾಲಕರು ಹೀಗೆಯೇ. ಎಲ್ಲಿಗಾದರೂ ಹೋಗಬೇಕೆಂದು ಕೇಳಿದಾಕ್ಷಣ ಓಡಿಹೋಗಿಬಿಡುತ್ತಾರೆ” ಎಂದು ಕೆಲವರು ಕಾಮೆಂಟ್ ಅಲ್ಲಿ ನಗೆಚಟಾಕಿ ಹಾರಿಸಿದ್ದಾರೆ. ಇನ್ನು ಕೆಲವರು “ಮನುಷ್ಯ ಕಾಡು ನಾಶ ಮಾಡುತ್ತಿರುವುದರಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರಲಾರಂಭಿಸಿವೆ” ಎಂದು ಕಾಮೆಂಟ್ ಅಲ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Wayanad Landslide: ಕೇರಳದ ವಯನಾಡು ಭೂಕುಸಿತಕ್ಕೆ ಅಕ್ರಮವಾಗಿ ರೆಸಾರ್ಟ್‌ಗಳನ್ನು ನಿರ್ಮಿಸಿರುವುದು, ಸೂಕ್ಷ್ಮ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವುದು, ಅರಣ್ಯ ನಾಶಪಡಿಸುವುದು ಸೇರಿ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಆದರೆ, ಬಿಜೆಪಿ ನಾಯಕ ಜ್ಞಾನದೇವ್‌ ಅಹುಜಾ ಅವರು ಭೂಕುಸಿತಕ್ಕೆ ಬೇರೆಯದ್ದೇ ಕಾರಣ ನೀಡಿದ್ದಾರೆ. ಮುಂದೆ ಓದಿ…

VISTARANEWS.COM


on

Wayanad Landslide
Koo

ತಿರುವನಂತಪುರಂ/ಜೈಪುರ: ಕೇರಳದ ವಯನಾಡು ಈಗ ಅಕ್ಷರಶಃ ಮಸಣದಂತಾಗಿದೆ. ಭಾರಿ ಮಳೆ, ಭೀಕರ ಭೂಕುಸಿತದಿಂದಾಗಿ (Wayanad Landslide) 350ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇನ್ನೂ 300 ಜನ ನಾಪತ್ತೆಯಾಗಿದ್ದಾರೆ. ಎಲ್ಲೆಂದರಲ್ಲಿ ಶವಗಳು ಸಿಗುತ್ತಿವೆ. ಸಾವಿರಾರು ಎಕರೆ ಕೃಷಿ ಭೂಮಿ ಹಾಳಾಗಿದೆ. ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈಗಲೂ ಹಗಲು-ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು, ಭೂಕುಸಿತಕ್ಕೆ ಅರಣ್ಯ ನಾಶ, ರೆಸಾರ್ಟ್‌ಗಳ ನಿರ್ಮಾಣ ಸೇರಿ ಹಲವು ಕಾರಣಗಳನ್ನು ಗುರುತಿಸಲಾಗುತ್ತಿದೆ. ಇದರ ಬೆನ್ನಲ್ಲೇ, “ಕೇರಳದಲ್ಲಿ ಭೂಕುಸಿತ ಉಂಟಾಗಲು ಗೋವುಗಳ ಹತ್ಯೆಯೇ ಕಾರಣ” ಎಂಬುದಾಗಿ ಬಿಜೆಪಿ ನಾಯಕ ಜ್ಞಾನದೇವ್‌ ಅಹುಜಾ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ರಾಜಸ್ಥಾನದ ಬಿಜೆಪಿ ನಾಯಕ, ಮಾಜಿ ಶಾಸಕ ಜ್ಞಾನದೇವ್‌ ಅಹುಜಾ ಹೇಳಿಕೆ ಈಗ ಭಾರಿ ಚರ್ಚೆಗೂ ಗ್ರಾಸವಾಗಿದೆ. “ವಯನಾಡಿನಲ್ಲಿ ಭೂಕಂಪ ಸಂಭವಿಸಿರುವುದು ಗೋಹತ್ಯೆಯ ಪರಿಣಾಮವಾಗಿದೆ. ಕೇರಳದಲ್ಲಿ ಗೋಹತ್ಯೆಯನ್ನು ನಿಲ್ಲಿಸದಿದ್ದದರೆ ಇಂತಹ ಹಲವು ದುರಂತಗಳು ಸಂಭವಿಸುತ್ತಲೇ ಇರುತ್ತವೆ. 2018ರಿಂದಲೂ ನಾನು ಇದನ್ನು ಗಮನಿಸುತ್ತಿದ್ದೇನೆ. ಎಲ್ಲೆಲ್ಲಿ ಗೋವುಗಳ ಹತ್ಯೆಯು ಜಾಸ್ತಿಯಾಗಿರುತ್ತದೆಯೋ, ಅಲ್ಲೆಲ್ಲ ಭೂಕುಸಿತ ಸಂಭವಿಸುತ್ತಿರುತ್ತವೆ. ಕೇರಳದ ವಯನಾಡು ಇದಕ್ಕೆ ನಿದರ್ಶನ” ಎಂದು ಮಾಧ್ಯಮವೊಂದರ ಜತೆ ಮಾತನಾಡುವಾಗ ಅಹುಜಾ ಹೇಳಿದ್ದಾರೆ. ಆದರೆ, ಗೋವುಗಳ ಹತ್ಯೆಗೂ, ಭೂಕುಸಿತಕ್ಕೂ ಹೇಗೆ ನಂಟಿದೆ ಎಂಬುದನ್ನು ಅವರು ವಿವರಿಸಿಲ್ಲ.

ಸಹಾಯಹಸ್ತ ಚಾಚಿದ ಕರ್ನಾಟಕ

ವಯನಾಡು ಭೂಕುಸಿತದಿಂದ ಸಾವಿರಾರು ಜನ ನಿರಾಶ್ರಿತರಾಗಿದ್ದು, ಅವರ ನೆರವಿಗೆ ಕರ್ನಾಟಕ ಸರ್ಕಾರ ಧಾವಿಸಿದೆ. “ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್‌ ಮಾಡಿದ್ದಾರೆ.

ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿದ್ದರು. ಭೂಕುಸಿತದಿಂದ ಸಂಕಷ್ಟದಲ್ಲಿರುವ ಕನ್ನಡಿಗರ ನೆರವಿಗೆ ಧಾವಿಸಲು ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಗಡಿ ಜಿಲ್ಲೆ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿತ್ತು. ಹೆಚ್.ಡಿ ಕೋಟೆಯಲ್ಲಿ ಗಾಯಾಳುಗಳನ್ನು ಕರೆತಂದು ಅಗತ್ಯ ಚಿಕಿತ್ಸೆ ಕೊಡಿಸಲು ಬಸ್‌ಗಳನ್ನು ಏರ್ಪಡಿಸಲಾಗಿತ್ತು. ಅಗತ್ಯ ಸಲಕರಣೆಗಳನ್ನು ಹೊತ್ತ ಬೆಂಗಳೂರಿನ ಎನ್.ಡಿ.ಆರ್.ಎಫ್ ಹಾಗೂ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಸೇನಾಪಡೆಯ ತಂಡಗಳು ವಯನಾಡು ತಲುಪಿದ್ದವು.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತ: ದುರಂತದ ಮಧ್ಯೆಯೂ ಭರವಸೆಯ ಕಿರಣ; ಸಂತ್ರಸ್ತರ ರಕ್ಷಣೆಯೇ ರೋಚಕ

Continue Reading

ದೇಶ

Wayanad Landslide: ವಯನಾಡು ಭೂಕುಸಿತ: ದುರಂತದ ಮಧ್ಯೆಯೂ ಭರವಸೆಯ ಕಿರಣ; ಸಂತ್ರಸ್ತರ ರಕ್ಷಣೆಯೇ ರೋಚಕ

Wayanad Landslide: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ 340ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ. ಈ ಮಧ್ಯೆ ದಟ್ಟ ಅರಣ್ಯದೊಳಗೆ ಆಹಾರವಿಲ್ಲದೆ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದ ಬುಡಕಟ್ಟು ಕುಟುಂಬವೊಂದನ್ನು ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಕಾಪಾಡಿದೆ. ಮಗುವನ್ನು ಅಧಿಕಾರಿಗಳು ಎತ್ತಿಕೊಂಡು ಬರುತ್ತಿರುವ ಫೊಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Wayanad Landslide
Koo

ತಿರುವನಂತಪುರಂ: ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ (Wayanad Landslide) 340ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ (Wayanad Landslide). ನಾಪತ್ತೆಯಾದವರ ರಕ್ಷಣೆಗಾಗಿ ಸೇನೆ, ಅರಣ್ಯ ಇಲಾಖೆ ಸಿಬ್ಬಂದಿ, ಎನ್‌ಡಿಆರ್‌ಎಫ್‌ ಪಡೆ, ಸ್ಥಳೀಯರು, ವಿವಿಧ ಸಂಘ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ. ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲಾಗುತ್ತದೆ. ಈ ಮಧ್ಯೆ ದಟ್ಟ ಅರಣ್ಯದೊಳಗೆ ಆಹಾರವಿಲ್ಲದೆ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದ ಬುಡಕಟ್ಟು ಕುಟುಂಬವೊಂದನ್ನು ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಕಾಪಾಡಿದೆ. ಮಗುವನ್ನು ಅಧಿಕಾರಿಗಳು ಎತ್ತಿಕೊಂಡು ಬರುತ್ತಿರುವ ಫೊಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral News).

ಮೆಪ್ಪಾಡಿಯ ಸೂಜಿಪ್ಪಾರ ಜಲಪಾತವಿರುವ ಎರಾಕುಂಡ್‌ ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣನ್‌, ಅವರ ಪತ್ನಿ ಶಾಂತಾ ಮತ್ತು ನಾಲ್ಕು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ನಾಲ್ವರು ಅರಣ್ಯಾಧಿಗಳ ಗುಂಪು ಸತತ ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. 10 ಹಗ್ಗಗಳನ್ನು ಸೇರಿಸಿ ಕಟ್ಟಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಲ್ಪೆಟ್ಟ ರೇಂಜ್‌ ಫಾರೆಸ್ಟ್‌ ಆಫೀಸರ್‌ ಕೆ.ಆಶೀಫ್‌, ಮುಂಡಕೈ ಸೆಕ್ಷನ್‌ ಫಾರೆಸ್ಟ್‌ ಆಫೀಸರ್‌ ಜಯಚಂದ್ರನ್‌, ಕಲ್ಪೆಟ್ಟ ರೇಂಜ್‌ ಬೀಟ್‌ ಫಾರೆಸ್ಟ್‌ ಆಫೀಸರ್‌ ಕೆ.ಅನಿಲ್‌ ಕುಮಾರ್‌ ಮತ್ತು ಕಲ್ಪೆಟ್ಟ ಆರ್‌.ಆರ್‌.ಡಿ. ಅನೂಪ್‌ ತೋಮಸ್‌ ಅವರನ್ನೊಳಗೊಂಡ ಗುಂಪು ಅತ್ಯಂತ ಸಾಹಸಿಕವಾಗಿ ಈ ಆದಿವಾಸಿ ಕುಟುಂಬನ್ನು ಕಾಪಾಡಿದೆ.

ಕಾಡಿನಲ್ಲಿ ಗುಡಿಸಲೊಂದರಲ್ಲಿ ಜೀವಿಸುತ್ತಿದ್ದ ಈ ಕುಟುಂಬ ಆಹಾರವಿಲ್ಲದೆ ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಬಳಿಕ ಅರಣ್ಯಾಧಿಕಾರಿಗಳು ಅವರನ್ನು ಕರೆದೊಯ್ಯಲು ಮುಂದಾಗಿದ್ದಾರೆ. ಮೊದ ಮೊದಲು ಅವರು ಬರಲು ನಿರಾಕರಿಸಿದರು. ಬಳಿಕ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಸಿದ ಬಳಿಕ ನಮ್ಮೊಂದಿಗೆ ಬರಲು ಒಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪೈಕಿ ಚಿಕ್ಕ ಚಿಕ್ಕ ಮಕ್ಕಳಿಗೆ ಬಟ್ಟೆ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರು. ನಮ್ಮ ಬಟ್ಟೆಯನ್ನು ಅವರಿಗೆ ತೊಡಿಸಿ ಎದೆಗವುಚಿಕೊಂಡು ಅವರನ್ನು ಹೊರ ಕರೆ ತಂದೆವು ಎಂದು ಅವರು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ರಾತ್ರಿ ಇಡಿ ಕಾವಲು ನಿಂರ ಕಾಡಾನೆ

ಇನ್ನು ದುರಂತದಿಂದ ಪಾರಾಗಿ ಸದ್ಯ ಮೇಪ್ಪಾಡಿ ಜಿಎಚ್‌ಎಸ್‌ಎಸ್‌ನಲ್ಲಿರುವ ಚುರಲ್​​ಮಲದ ಸುಜಾತಾ ಅವರದ್ದು ಇನ್ನೊಂದು ರೋಚಕ ಅನುಭವ. ಮಂಗಳವಾರ ದುರಂತದಿಂದ ಪಾರಾಗಿ ಓಡಿ ಬಂದಿದ್ದ ತಮಗೆ ಕಾಡಾನೆಯೊಂದು ಕಾವಲಾಗಿ ನಿಂತಿರುವ ಅಪರೂಪದ ಕ್ಷಣವನ್ನು ಅವರು ಹಂಚಿಕೊಂಡಿದ್ದಾರೆ. ಮಂಗಳವಾರ ಮುಂಜಾನೆ ಭೂಕುಸಿತದಿಂದ ಸುಜಾತಾ ಅವರ ಮನೆ ನೆಲಸಮವಾಗಿತ್ತು. ಈ ವೇಳೆ ಅವರು ಮತ್ತು ಕುಟುಂಬದ ನಾಲ್ವರು ಸಿಕ್ಕಿ ಬಿದ್ದಿದ್ದರು. ಕೂಡಲೇ ಅವರ ಮಗ ಗಿಗೀಶ್ ಪ್ರತಿಯೊಬ್ಬರನ್ನೂ ಹೊರಗೆ ಕರೆ ತಂದಿದ್ದರು.

ಸುತ್ತಲೂ ನೀರು ಆವರಸಿತ್ತು. ಹೇಗೋ ಈಜುತ್ತಾ ಬೆಟ್ಟದ ಬಳಿ ಬಂದಿದ್ದರು. ಎಲ್ಲರ ಕೈಕಾಲುಗಳಿಗೆ ಗಾಯವಾಗಿತ್ತು. ಅಲ್ಲಿಗೆ ಬಂದಾಗ ದೊಡ್ಡ ಕಾಡಾನೆಯೊಂದು ಎದುರಾಗಿತ್ತು. ʼʼನಾವು ಒಂದು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೀವಿ. ನೀನು ನಮಗೇನೂ ಮಾಡಬೇಡಪ್ಪ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆಣೆಗೂ ಕರಣೆ ಉಕ್ಕಿತ್ತು. ಬಳಿಕ ಬೆಳಗಾಗುವವರೆಗೆ ನಾವು ಆನೆಯ ಕಾಲ ಹತ್ತಿರವೇ ಸಮಯ ಕಳೆದೆವು. ಬೆಳಗ್ಗೆ ಎಲ್ಲಿಂದಲೂ ಬಂದವರು ನಮ್ಮನ್ನು ಕರೆದುಕೊಂಡು ಈ ಕಾಳಜಿ ಕೇಂದ್ರಕ್ಕೆ ತಲುಪಿಸಿದರುʼʼ ಎಂದು ಸುಜಾತಾ ವಿವರಿಸಿದ್ದಾರೆ.

ಇದನ್ನೂ ಓದಿ: Wayanad Landslide: ಭೂಕುಸಿತದ ಹಾಟ್‌ಸ್ಪಾಟ್‌ಗಳಲ್ಲಿ ಕಾಮಗಾರಿಗೆ ಅನುಮತಿ ನೀಡಿದ್ದೇಕೆ? ಹಸಿರು ನ್ಯಾಯ ಮಂಡಳಿ ಪ್ರಶ್ನೆ

Continue Reading

Latest

Viral Video: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

Viral Video: ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ಇನ್ಸ್ಟಾಗ್ರಾಂನಲ್ಲಿ 37,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಪ್ರದರ್ಶನ ನೀಡಿದವರು. ಈ ವೈರಲ್ ಆಗಿರುವ ವಿಡಿಯೊದಲ್ಲಿ, ತನುಮಿತಾ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ನಡೆದಿದ್ದು ಕಂಡು ಬಂದಿದೆ. ಇದನ್ನು ನೋಡಿದವರಿಗೆ ಆಕೆ ಬಾತ್‍ರೂಂನಿಂದ ಹೊರಬಂದಂತೆ ಕಾಣಿಸುತ್ತದೆ. ಆದರೆ ಅಸಲಿ ಕತೆ ಬೇರೆಯೇ ಇದೆ!

VISTARANEWS.COM


on

Viral Video
Koo


ಮುಂಬೈ : ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ವಿವಿಧ ರೀತಿಯ ರೀಲ್ಸ್ ಗಳನ್ನು ಮಾಡಲು ಹೋಗಿ ಕೋಲಾಹಲವನ್ನು ಸೃಷ್ಟಿಸುತ್ತಿದ್ದಾರೆ. ಸಾಮಾನ್ಯವಾಗಿ ಯುವತಿಯರು ಸ್ನಾನ ಮಾಡಿ ಬಾತ್‍ರೂಂನಿಂದ ಹೊರಗೆ ಬರುವಾಗ ದೇಹಕ್ಕೆ ಟವೆಲ್ ಸುತ್ತಿಕೊಂಡು ಮನೆಯೊಳಗೆ ಓಡಾಡುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಯುವತಿ ತನ್ನ ದೇಹವನ್ನು ಟವೆಲ್‍ನಿಂದ ಸುತ್ತಿಕೊಂಡು ರಸ್ತೆಗೆ ಬಂದಿದ್ದಾಳೆ. ಇವಳನ್ನು ನೋಡಿ ದಾರಿಹೋಕರು ದಿಗ್ಭ್ರಮೆಗೊಂಡಿದ್ದಾರೆ. ಈ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ.

ಮಿಂತ್ರಾ ಫ್ಯಾಷನ್ ಸೂಪರ್ ಸ್ಟಾರ್ ವಿಜೇತೆ ಮತ್ತು ಇನ್ಸ್ಟಾಗ್ರಾಂನಲ್ಲಿ 37,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ತನುಮಿತಾ ಘೋಷ್ ಇತ್ತೀಚೆಗೆ ಮುಂಬೈನ ಜನರು ಓಡಾಡುತ್ತಿದ್ದ ಬೀದಿಗಳಲ್ಲಿ ದೇಹಕ್ಕೆ ಟವೆಲ್ ಸುತ್ತಿಕೊಂಡು ಪ್ರದರ್ಶನ ನೀಡಿದವರು. ಈ ವೈರಲ್ ಆಗಿರುವ ವಿಡಿಯೊದಲ್ಲಿ, ತನುಮಿತಾ ಟವೆಲ್ ಸುತ್ತಿಕೊಂಡು ಯಾವುದೇ ಮುಜುಗರವಿಲ್ಲದೇ ನಡೆಯುತ್ತಿದ್ದಾರೆ. ಇದನ್ನು ನೋಡಿದವರಿಗೆ ಆಕೆ ಬಾತ್‍ರೂಂನಿಂದ ಹೊರಬಂದಂತೆ ಕಾಣಿಸುತ್ತದೆ. ವಿಡಿಯೊದಲ್ಲಿ ‘ತೌಬಾ-ತೌಬಾ’ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಈ ವಿಡಿಯೊ ಶೀರ್ಷಿಕೆಯಲ್ಲಿ, ಮುಂಬೈನ ಪ್ರೇಕ್ಷಕರು ತನ್ನ ನೋಟವನ್ನು ನೋಡಿ ‘ತೌಬಾ-ತೌಬಾ’ ಎಂದು ಉದ್ಗರಿಸುತ್ತಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಬರೆದಿದ್ದಾರೆ.

ಈ ಅಸಾಮಾನ್ಯ ಉಡುಗೆಯ ಜೊತೆಗೆ ಕಿವಿಯೋಲೆಗಳನ್ನು ಧರಿಸಿದ್ದರು ಮತ್ತು ಸ್ಟೈಲಿಶ್ ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದರು. ಅವರು ಈ ವೇಷದಲ್ಲಿ ಬಸ್ ನಿಲ್ದಾಣದಿಂದ ಅಂಗಡಿಯ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ದಾರಿಹೋಕರು ಇವರನ್ನು ದಿಟ್ಟಿಸಿ ನೋಡುತ್ತಿದ್ದಾರೆ. ಈ ವಿಡಿಯೊದ ಕೊನೆಯಲ್ಲಿ ತನುಮಿತಾ ತನ್ನ ಕೂದಲಿಗೆ ಹಾಗೂ ದೇಹಕ್ಕೆ ಸುತ್ತಿದ್ದ ಟವೆಲ್ ಅನ್ನು ತೆಗೆದಿದ್ದಾರೆ. ಆದರೆ ಅದರೊಳಗೆ ಅವರು ಬಟ್ಟೆ ಧರಿಸಿದರು. ಈ ವಿಡಿಯೊ ಪ್ರೇಕ್ಷಕರಿಗೆ ಹಾಗೂ ದಾರಿಹೋಕರಿಗೆ ಆಶ್ಚರ್ಯ ಮತ್ತು ಕುತೂಹಲವನ್ನುಂಟು ಮಾಡಿದಂತು ನಿಜ.

ಈ ವಿಡಿಯೊ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಾರು ಲೈಕ್‍ಗಳು ಮತ್ತು ಶೇರ್ ಗಳನ್ನು ಗಳಿಸಿದೆ. ಇದಕ್ಕೆ ಹಲವಾರು ಕಾಮೆಂಟ್‍ಗಳು ಸಹ ಬಂದಿವೆ, ಹೆಚ್ಚಿನವರು ಅವರ ಈ ಕಾರ್ಯದ ಉದ್ದೇಶ ಮತ್ತು ಪರಿಣಾಮವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಪ್ಯಾರಿಸ್‌ಗೆ ಹೋದರೂ ಅಂಬಾನಿ ಸೊಸೆ ಕರಿಮಣಿ ಮರೆಯಲಿಲ್ಲ! ಸೋಷಿಯಲ್‌ ಮೀಡಿಯಾದಲ್ಲೀಗ ಇದೇ ಚರ್ಚೆ!

ಆದರೆ ತನುಮಿತಾ ಅವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಮತ್ತು ಸೋನಾಕ್ಷಿ ಸಿನ್ಹಾ, ಶಲೀನಾ ನಥಾನಿ, ಮನೀಶ್ ಮಲ್ಹೋತ್ರಾ ಮತ್ತು ಡಿನೋ ಮೋರಿಯಾ ಅವರಂತಹ ಸೆಲೆಬ್ರಿಟಿಗಳಂತೆ ತಾನು ಮನರಂಜನೆಗಾಗಿ ಮಾಡಿರುವುದಾಗಿ ತಿಳಿಸಿದ್ದಾರೆ.ಅವರ ವಿವರಣೆಯ ಹೊರತಾಗಿಯೂ, ಕೆಲವು ಬಳಕೆದಾರರು ನಿರಾಶೆಯನ್ನು ವ್ಯಕ್ತಪಡಿಸುತ್ತಲೇ ಇದ್ದರು, ಇದು ಸಂಪ್ರದಾಯಸ್ಥ ಕುಟುಂಬದವರಿಗೆ ಮುಜುಗರವನ್ನುಂಟು ಮಾಡುವಂತಿದೆ ಎಂದು ಹೇಳಿದ್ದಾರೆ.

Continue Reading

Latest

Wayanad Tragedy : ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!

Wayanad Tragedy: ಮನುಷ್ಯ ಪ್ರಕೃತಿಯ ಮೇಲೆ ನಿರಂತರವಾಗಿ ಹಾನಿ ಮಾಡುತ್ತಾ ಬಂದಿದ್ದಾನೆ. ಅದಕ್ಕೆ ಸಾಕ್ಷಿಯೆಂಬಂತೆ ಈಗ ವಯನಾಡ್‌ನಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಹಲವರ ಮನೆ ನೆಲಸಮವಾಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ಈಗ ಒಬ್ಬರನ್ನು ಒಬ್ಬರು ನಂಬದ ಕಾಲದಲ್ಲಿ ನಾವಿದ್ದೇವೆ. ಅಂತಥದರಲ್ಲಿ ಕಾಡುಪ್ರಾಣಿಗಳು ಮನುಷ್ಯನ ಕಷ್ಟಕ್ಕೆ ಸ್ಪಂದಿಸಿದ ಘಟನೆಯೊಂದು ಸಾಕಷ್ಟು ವೈರಲ್ ಆಗಿದೆ. ವಯನಾಡಿನ ಚೂರಲ್ಮಾಲಾದಲ್ಲಿ ಭೂಕುಸಿತದಲ್ಲಿ ಸುಜಾತಾ ಅನಿನಂಚಿರಾ ಮತ್ತು ಅವರ ಕುಟುಂಬವು ಮಾರಣಾಂತಿಕ ಪರಿಸ್ಥಿತಿಯಲ್ಲಿ ಸಿಲುಕಿದೆ.ಆ ಸಂದರ್ಭದಲ್ಲಿ ಆನೆಗಳೆರಡು ಅವರಿಗೆ ಸಹಾಯ ಮಾಡಿದ ಘಟನೆ ನಿಜಕ್ಕೂ ಎಲ್ಲರ ಕಣ್ಣಂಚನ್ನು ಒದ್ದೆ ಮಾಡುತ್ತೆ.

VISTARANEWS.COM


on

Wayanad Tragedy
Koo


ಭಾರೀ ಮಳೆಯಿಂದಾಗಿ ವಯನಾಡ್‍ನಲ್ಲಿ (Wayanad Tragedy )ಉಂಟಾದ ಭೂಕುಸಿತಕ್ಕೆ ಹಲವರ ಮನೆ ನೆಲಸಮವಾಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ವಯನಾಡಿನ ಚೂರಲ್ಮಾಲಾದಲ್ಲಿ ಭೂಕುಸಿತದಲ್ಲಿ ಅದೃಷ್ಟವಶಾತ್ ಕೆಲವರು ಬದುಕುಳಿದಿದ್ದಾರೆ. ಅವರಲ್ಲಿ ಒಬ್ಬರು ಅಂದು ತಮ್ಮ ಹಾಗೂ ತಮ್ಮ ಕುಟುಂಬದವರ ಜೀವ ಉಳಿಸಿಕೊಳ್ಳಲು ಎಷ್ಟು ಪರಿದಾಡಿದರು. ಹಾಗೇ ಕಾಡು ಸೇರಿ ಅಲ್ಲಿ ತಾವು ಎದುರಿಸಿದ ಸಂದಿಗ್ಧ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ವರದಿ ಪ್ರಕಾರ ಚೂರಲ್ಮಾಲಾದಲ್ಲಿ ಭಾರಿ ಭೂಕುಸಿತದಿಂದಾಗಿ ಸುಜಾತಾ ಅನಿನಂಚಿರಾ ಮತ್ತು ಅವರ ಕುಟುಂಬವು ಮಾರಣಾಂತಿಕ ಪರಿಸ್ಥಿತಿಯಲ್ಲಿ ಸಿಲುಕಿತ್ತು. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಸುಜಾತಾ, ಅವರ ಮಗಳು ಸುಜಿತಾ, ಪತಿ ಕುಟ್ಟನ್ ಮತ್ತು ಮೊಮ್ಮಕ್ಕಳಾದ ಸೂರಜ್ (18) ಮತ್ತು ಮೃದುಲಾ (12) ಅವರು ಅತ್ಯಂತ ಧೈರ್ಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

18 ವರ್ಷಗಳಿಂದ ಮುಂಡಕ್ಕೈನ ಹ್ಯಾರಿಸನ್ ಮಲಯಾಳಂ ಟೀ ಎಸ್ಟೇಟ್‍ನಲ್ಲಿ ಚಹಾದ ಎಲೆಗಳನ್ನು ಕೀಳುವ ಕೆಲಸ ಮಾಡುತ್ತಿದ್ದ ಸುಜಾತಾ ಅಂದು ಭೂಕುಸಿತದ ವೇಳೆ ತಮಗೆ ಎದುರಾದ ಭಯಾನಕ ಅಗ್ನಿಪರೀಕ್ಷೆಯನ್ನು ನೆನಪಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ 4 ಗಂಟೆಯಿಂದ ಭಾರಿ ಮಳೆ ಸುರಿಯುತ್ತಿದ್ದರಿಂದ ಮುಂಜಾನೆ ಬೇಗನೆ ಎದ್ದ ಸುಜಾತ ಅವರಿಗೆ ದೊಡ್ಡ ಶಬ್ದವನ್ನು ಕೇಳಿದೆ, ಆಗ ನೋಡಿದರೆ ನೀರು ಅವರ ಮನೆಗೆ ನುಗ್ಗಿ ಮನೆಯ ಚಾವಣಿ ಕುಸಿದು ಅವರ ಮಗಳು ಗಂಭೀರವಾಗಿ ಗಾಯಗೊಂಡಳು. ಕುಸಿದ ಗೋಡೆಯ ಅವಶೇಷಗಳನ್ನು ತೆಗೆದು ಹಾಕಿ ಅವರು ತಮ್ಮ ಮಗಳು ಹಾಗೂ ಮೊಮ್ಮಕ್ಕಳನ್ನು ಕಾಪಾಡಿದ್ದಾರೆ. ನಂತರ ಕುಟುಂಬದ ಉಳಿದವರು ಸಹ ತಮ್ಮನ್ನು ತಾವು ರಕ್ಷಿಸಿಕೊಂಡು ಉಕ್ಕಿ ಹರಿಯುವ ನೀರಿನ ಮೂಲಕ ನಡೆದು ಅಂತಿಮವಾಗಿ ಹತ್ತಿರದ ಗುಡ್ಡಕ್ಕೆ ಏರಿದ್ದಾರಂತೆ.

ಆದರೆ ಒಂದು ಸಂಕಷ್ಟದಿಂದ ಪಾರಾದ ಸುಜಾತ ಅವರಿಗೆ ಎದುರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆಯಂತೆ. ಅದೇನೆಂದರೆ ಗುಡ್ಡ ಏರಿದ ಅವರ ಎದುರಿಗೆ ಎರಡು ಹೆಣ್ಣು ಆನೆಗಳು ನಿಂತಿದ್ದವಂತೆ. ಆಗ ಹೆದರಿದ ಸುಜಾತ ಅವರು ಆನೆಗಳಲ್ಲಿ ರಾತ್ರಿ ಇಲ್ಲಿ ಮಲಗಲು ಅವಕಾಶ ನೀಡಿ ಎಂದು ಬೇಡಿಕೊಂಡಿದ್ದಾರಂತೆ. ಆಗ ಅವರ ಕಷ್ಟ ಅರ್ಥಮಾಡಿಕೊಂಡ ಆನೆಗಳು ಅವರಿಗೆ ಯಾವುದೇ ಹಾನಿ ಮಾಡದೆ ಅಲ್ಲೇ ನಿಂತಿದ್ದವಂತೆ. ಮರುದಿನ ಬೆಳಿಗ್ಗೆ ಕೆಲವು ಜನರು ಅವರನ್ನು ರಕ್ಷಿಸುವವರೆಗೂ ಆನೆಗಳು ಸಹ ಅಲ್ಲಿಯೇ ನಿಂತಿದ್ದವು. ಆದರೆ ಆ ವೇಳೆ ಅವುಗಳ ಕಣ್ಣಿನಲ್ಲಿ ನೀರು ಸುರಿಯುತ್ತಿರುವುದನ್ನು ಅವರು ಗಮನಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

ಇದರಿಂದ ತಿಳಿಯುದೇನೆಂದರೆ ಪ್ರಾಣಿಗಳಿಗೂ ಮನುಷ್ಯರ ಭಾವನೆ ಅರ್ಥವಾಗುತ್ತದೆ. ಅವುಗಳು ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ ಎಂಬುದು. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, “ಮನೆಯಿಲ್ಲದ ಭೂಕುಸಿತ ಸಂತ್ರಸ್ಥರು ತಮ್ಮ ದುಃಖವನ್ನು ಆನೆಗೆ ತಿಳಿಸಿದರು, ಅದು ಅವರಿಗಾಗಿ ಕಣ್ಣೀರು ಹಾಕಿದೆ ಮತ್ತು ರಾತ್ರಿಯಿಡೀ ಅವರಿಗೆ ಆಶ್ರಯ ನೀಡಿದೆ ಎಂದು ತಿಳಿಸಿದ್ದಾರೆ.

Continue Reading
Advertisement
MS Dhoni
ಪ್ರಮುಖ ಸುದ್ದಿ11 mins ago

MS Dhoni : ವಿರಾಟ್ ಕೊಹ್ಲಿ ಜತೆಗಿನದ ಸಂಬಂಧವನ್ನು ವಿವರಿಸಿದ ಕೂಲ್ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ

KCET 2024
ಬೆಂಗಳೂರು29 mins ago

KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

Shiradi ghat landslide
ಕರ್ನಾಟಕ29 mins ago

Shiradi ghat landslide: ಶಿರಾಡಿ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಸಿಎಂ‌ ಶಾಕ್; 90 ಡಿಗ್ರಿ ನೇರವಾಗಿ ಗುಡ್ಡ ಸೀಳಿದ್ದಕ್ಕೆ ಅಧಿಕಾರಿಗೆ ತರಾಟೆ

Paris Olympics 2024
ಪ್ರಮುಖ ಸುದ್ದಿ33 mins ago

Paris Olympics 2024 : ಪುರುಷ ಸ್ಪರ್ಧಿಯಿಂದ ಏಟು ತಿಂದ ಇಟಲಿಯ ಮಹಿಳಾ ಬಾಕ್ಸರ್​ಗೆ 41 ಲಕ್ಷ ಬಹುಮಾನ ಘೋಷಿಸಿದ ಬಾಕ್ಸಿಂಗ್​ ಸಂಸ್ಥೆ

ದೇಶ40 mins ago

Accident: ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ; ಮಹಿಳೆ ಬಲಿ; ಭೀಕರ ದೃಶ್ಯ ವೈರಲ್‌

Wayanad Landslide
ದೇಶ43 mins ago

Wayanad Landslide: ವಯನಾಡು ಭೂಕುಸಿತ; ಎಲ್‌ಐಸಿ ಸೇರಿ ವಿಮಾ ಕಂಪನಿಗಳಿಗೆ ಕೇಂದ್ರ ಪ್ರಮುಖ ಸೂಚನೆ!

Manu Bhaker
ಕ್ರೀಡೆ44 mins ago

Manu Bhaker: 20 ಲಕ್ಷದಿಂದ 1.5 ಕೋಟಿಗೆ ಏರಿಕೆ ಕಂಡ ಮನು ಭಾಕರ್ ಜಾಹೀರಾತು ಮೌಲ್ಯ; 40ಕ್ಕೂ ಹೆಚ್ಚು ಕಂಪನಿಗಳಿಂದ ಆಫರ್​

Raayan Movie crosses Rs 100 crore
ಕಾಲಿವುಡ್46 mins ago

Raayan Movie: ಎಂಟೇ ದಿನಕ್ಕೆ ‘100 ಕೋಟಿ ಕ್ಲಬ್‌’ ಸೇರಿದ ಧನುಷ್ ನಟನೆಯ’ರಾಯನ್‌’ ಸಿನಿಮಾ!

Paris Olympics 2024
ಪ್ರಮುಖ ಸುದ್ದಿ56 mins ago

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Cloudburst
ದೇಶ1 hour ago

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ5 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌