ನಾಗಾಲ್ಯಾಂಡ್: ಇಲ್ಲಿನ ಹೆದ್ದಾರಿಯೊಂದರಲ್ಲಿ ಬೆಟ್ಟದ ಮೇಲಿನಿಂದ ಉರುಳಿಬಂದ ಬಂಡೆಗಳು ಕಾರುಗಳನ್ನು ಒಂದೇ ಏಟಿಗೆ ಪುಡಿಪುಡಿ ಮಾಡಿವೆ. ಕಾರುಗಳಲ್ಲಿದ್ದ ಇಬ್ಬರು ಸತ್ತಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ. ಇದರ ವಿಡಿಯೋ ವೈರಲ್ (Viral video) ಆಗಿದೆ.
ಮಂಗಳವಾರ ಮುಂಜಾನೆ ಸಂಭವಿಸಿದ ಘಟನೆ ಇದು. ನಾಗಾಲ್ಯಾಂಡ್‌ನ ಚುಮುಕೆಡಿಮಾ ಚೆಕ್‌ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 29ರಲ್ಲಿ ಇದು ನಡೆದಿದೆ. ಹಿಂದಿದ್ದ ಕಾರುಗಳ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಇದು ದಾಖಲಾಗಿದೆ.
#WATCH | A massive rock smashed a car leaving two people dead and three seriously injured in Dimapur's Chumoukedima, Nagaland, earlier today
— ANI (@ANI) July 4, 2023
(Viral video confirmed by police) pic.twitter.com/0rVUYZLZFN
ರಸ್ತೆ ಪಕ್ಕದ ಗುಡ್ಡದ ಮೇಲಿನಿಂದ ಮೂರು ನಾಲ್ಕು ಬಂಡೆಗಳು ಉರುಳಿಬಂದದ್ದು, ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ನಿಂತಿದ್ದ ಮೂರು- ನಾಲ್ಕು ಕಾರುಗಳು ಕ್ಷಣಾರ್ಧದಲ್ಲಿ ಪುಡಿಪುಡಿಯಾದವು. ಒಳಗಿದ್ದ ಇಬ್ಬರು ಸ್ಥಳದಲ್ಲೇ ಸತ್ತುಹೋದರು. ಹಲವಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಪ್ರಾಂತ್ಯದಲ್ಲಿ ಜೋರಾಗಿ ಮಳೆಯಾಗುತ್ತಿದೆ. ಕೆಲವೆಡೆ ಭೂಕುಸಿತ ಕೂಡ ಸಂಭವಿಸುತ್ತಿದೆ. ಪೊಲೀಸರು ಗುಡ್ಡಗಾಡು ಪ್ರದೇಶಗಳಿಗೆ ತೆರಳುವವರಿಗೆ ಎಚ್ಚರಿಕೆ ಸೂಚನೆ ನೀಡುತ್ತಿದ್ದಾರೆ. ಏಪ್ರಿಲ್‌ನಲ್ಲಿ, ಜಮ್ಮು- ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಹೆದ್ದಾರಿಯಲ್ಲಿ ಇದೇ ರೀತಿ ಒಂದು ಬಂಡೆ ಉರುಳಿ ಟ್ರಕ್ ಜಜ್ಜಿಹೋಗಿ ಅದರ ಚಾಲಕ ಕೂಡ ಸಾವಿಗೀಡಾಗಿದ್ದ.