Site icon Vistara News

Viral Video: ಪಕ್ಷದ ಕಾರ್ಯಕರ್ತನಿಗೆ ರಪ್‌ ಅಂತಾ ಕೆನ್ನೆಗೆ ಬಾರಿಸಿದ ಟಿಎಂಸಿ ನಾಯಕಿ; ವಿಡಿಯೋ ಇದೆ

Viral Video

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ (TMC)ನ ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ಪಕ್ಷ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಮಾತಿಗೆ ಮಾತು ಬೆಳೆದು ಪಕ್ಷದ ಯುವ ಮೋರ್ಚಾದ ಅಧ್ಯಕ್ಷನ ಮೇಲೆ ಪಾಲಿಕೆ ಸದಸ್ಯೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದೆ.

ಕೋಲ್ಕತ್ತಾ ಮಹಾನಗರ ಪಾಲಿಕೆಯ ವಾರ್ಡ್‌ ನಂ 18ರ ಕೌನ್ಸಿಲರ್‌ ಸುನಂದಾ ಸರ್ಕಾರ್‌, ವಾರ್ಡ್‌ನ ಯುವ ಮೋರ್ಛಾ ಅಧ್ಯಕ್ಷ ಕೇದಾರ್‌ ದಾಸ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೇ ಆತನನ್ನು ಥಳಿಸಿ ಹಲ್ಲೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸುನಂದಾ ಹಲವಾರು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೇದಾರ್‌ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಸುನಂದಾ ಕೇದರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಟಿಎಂಸಿ ವಕ್ತಾರ ಕುನಾಲ್ ಘೋಷ್ ಘಟನೆಯನ್ನು ದುರದೃಷ್ಟಕರ ಎಂದು ಕರೆದಿದ್ದಾರೆ ಮತ್ತು ಹಿರಿಯ ನಾಯಕರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಹೆಚ್ಚು ಜಾಗರೂಕರಾಗಿರಬೇಕು, ಇದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಈ ಘಟನೆಯನ್ನು ಖಂಡಿಸಿದ್ದು, ಟಿಎಂಸಿ ಕೆಟ್ಟ ರಾಜಕೀಯ ಸ್ಥಿತಿಗೆ ಇದು ಉದಾಹರಣೆ ಎಂದು ಟೀಕಿಸಿದೆ.

ಕೆಲವು ದಿನಗಳ ಹಿಂದೆ ಬಿಹಾರಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಒಡಿಶಾ ರಾಜ್ಯಪಾಲರ ಪುತ್ರನ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ರಾಜಭವನದಲ್ಲೇ ಕರ್ತವ್ಯನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲ ರಘುಬರ್‌ ದಾಸ್‌ ಅವರ ಪುತ್ರ ಲಲಿತ್‌ ದಾಸ್‌ ವಿರುದ್ಧ ರಾಜಭವನದಲ್ಲಿ ನಿಯೋಜನೆಗೊಂಡಿರುವ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿ ಭೈಕುಂಠದಾಸ್‌ ಪ್ರಧಾನ್‌ ಹಲ್ಲೆ ಆರೋಪ ಮಾಡಿದ್ದಾರೆ. ಪುರಿ ಜಗನ್ನಾಥ ದೇಗುಲದಲ್ಲಿ ರಥಯಾತ್ರೆ ಪ್ರಯುಕ್ತ ಜು.7 ಮತ್ತು 8ರಂದು ರಾಷ್ಟ್ರಪತಿ ದ್ರೌಪದಿಮುರ್ಮು ಅವರು ಪುರಿಗೆ ಭೇಟಿ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ಅವರು ರಾಜಭವನಕ್ಕೆ ಭೇಟಿ ನೀಡುವ ಕಾರಣ ಎಲ್ಲಾ ಸಿದ್ದತೆಗಳ ಮೇಲುಸ್ತುವಾರಿಯನ್ನು ಪ್ರಧಾನ್‌ ನೋಡಿಕೊಳ್ಳುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಲಲಿತ್‌ ದಾಸ್‌ ಪ್ರಧಾನ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ! ಬಂಗಾರ ದರ ಇಳಿಕೆ?

Exit mobile version