ಕಲ್ಪನೆ ಮತ್ತು ವಾಸ್ತವವನ್ನು ಸೇರಿಸಿ ಮಾಡುವ ಆಕರ್ಷಕ ವಿಡಿಯೋಗಳಿಗೆ (video) ಹೆಸರುವಾಸಿಯಾಗಿರುವ ಪ್ರತಿಭಾವಂತ 3ಡಿ ಕಲಾವಿದ (3D artist) ಮಜಿದ್ ಮೌಸವಿ (Majid Mousavi) ಇದೀಗ ಮತ್ತೊಂದು ವಿಡಿಯೋವೊಂದನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ (social media) ಹಾಕಿದ್ದು, ಇದು ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ಅವರ ಇತ್ತೀಚಿನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಜಾಗೃತಗೊಳಿಸುವಂತೆ ಮಾಡಿದೆ ಮಾತ್ರವಲ್ಲದೇ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ.
ವಿಡಿಯೋದಲ್ಲಿ ಏನಿದೆ?
ಈ ವಿಡಿಯೋ ನೆಟ್ಟಿಗರನ್ನು ಚಿಂತೆಗೀಡು ಮಾಡುವಂತೆ ಮಾಡಿರುವುದು ಮಾತ್ರವಲ್ಲ ಜಾಗೃತಿಯನ್ನೂ ಮೂಡಿಸಿದೆ. ವಾಹನ ಚಾಲನೆ ಮಾಡುವಾಗ ವೇಗದ ಮಿತಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಅವರು ಈ ವಿಡಿಯೋ ಮೂಲಕ ಹೇಳಿದ್ದಾರೆ.
ಅಜಾಗರೂಕ ಚಾಲನೆಯ ಪರಿಣಾಮಗಳ ಕುರಿತು ಹೇಳುವ ಈ ವಿಡಿಯೋದಲ್ಲಿ ಖಾಲಿ ರಸ್ತೆಯಲ್ಲಿ ಬೈಕರ್ ವೇಗವಾಗಿ ವಾಹನ ಚಲಾಯಿಸುವುದನ್ನು ತೋರಿಸುತ್ತದೆ.
ಒಬ್ಬ ಬೈಕ್ ಸವಾರ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಾನೆ. ಆಗ ಅವನು ರಸ್ತೆಯ ಇನ್ನೊಂದು ಬದಿಗೆ ಚಲಿಸುತ್ತಾನೆ ಮತ್ತು ವೇಗವಾಗಿ ಬರುವ ಟ್ರಕ್ ಗೆ ಡಿಕ್ಕಿಯಾಗುತ್ತಾನೆ. ಅಲ್ಲಿಗೆ ಒಂದು ವಿಡಿಯೋ ಕ್ಲಿಪ್ ನಿಲ್ಲುತ್ತದೆ.
ಮುಂದಿನ ಶಾಟ್‌ನಲ್ಲಿ ರಸ್ತೆ ಬದಿಯಲ್ಲಿ ನಿಂತಿರುವ ಭೂತದ ಆಕೃತಿಯನ್ನು ಕಾಣಬಹುದು. ವಿಡಿಯೋದಲ್ಲಿ ಬೈಕರ್ ಮತ್ತು ಟ್ರಕ್ ಡ್ರೈವರ್ ನಡುವಿನ ಅಪಘಾತವನ್ನು ತೋರಿಸಲಾಗಿದೆ.
ಈ ಪೋಸ್ಟ್ ಅನ್ನು ಒಂದು ವಾರದ ಹಿಂದೆ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಬಳಿಕ ಇದು 156 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಪೋಸ್ಟ್ 11 ಮಿಲಿಯನ್ ಲೈಕ್‌ಗಳನ್ನು ಪಡೆದಿದ್ದು, ಇದರ ಸಂಖ್ಯೆಗಳು ಹೆಚ್ಚುತ್ತಿವೆ. ಕೆಲವರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Rahul Dravid: ಸುದ್ದಿಗೋಷ್ಠಿಯಲ್ಲಿ ಉರ್ದು ಮಾತನಾಡಿದ ರಾಹುಲ್ ದ್ರಾವಿಡ್; ವಿಡಿಯೊ ವೈರಲ್
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿ, ಓ ದೇವರೇ. ನಾನು ತುಂಬಾ ಹೆದರುತ್ತಿದ್ದೆ. ನಾನು ಬೈಕ್ ಓಡಿಸುತ್ತಿದ್ದೇನೆ ಎಂದು ಭಾವಿಸಿದೆ ಮತ್ತು ಸಣ್ಣ ಹೃದಯಾಘಾತವಾದಂತಾಯಿತು ಎಂದು ಹೇಳಿದ್ದಾನೆ.
ಇನ್ನೊಬ್ಬ, ನನ್ನ ಆತ್ಮವು ನನ್ನ ದೇಹವನ್ನು ತೊರೆದಿದೆ! ಅದ್ಭುತ ಎಡಿಟಿಂಗ್ ಎಂದು ಹೇಳಿದ್ದಾರೆ.
ಮತ್ತೊಬ್ಬ, ಹಾಗಾಗಿಯೇ ರಸ್ತೆಗಳಲ್ಲಿ ಜಾಗರೂಕರಾಗಿರಬೇಕು. ಅದು ಖಾಲಿಯಾಗಿರುವುದರಿಂದ ಅಜಾಗರೂಕರಾಗಿರಬೇಕೆಂದು ಅರ್ಥವಲ್ಲ ಎಂದು ತಿಳಿಸಿದ್ದಾರೆ. ಇನ್ನೊಬ್ಬರು ಇದು ಆಟ ಎಂದು ಹೇಳುವವರಿಗೆ ಇದು ನಿಜ ಜೀವನದಲ್ಲಿಯೂ ನಡೆಯುತ್ತದೆ. ಜಾಗರೂಕರಾಗಿರಿ ಎಂದು ತಿಳಿಸಿದ್ದಾರೆ. ಮತ್ತೊಬ್ಬರು ಇದು ನನಗೆ ಹೃದಯಾಘಾತವನ್ನು ನೀಡಿತು ಎಂದು ಹೇಳಿದ್ದಾರೆ.