Site icon Vistara News

Viral Video: ಏಳನೇ ಮಹಡಿಯಿಂದ ಬೀದಿ ನಾಯಿಯನ್ನು ಎಸೆದು ಕ್ರೌರ್ಯ-ವಿಡಿಯೋ ಇದೆ

Viral video

ಉತ್ತರಪ್ರದೇಶ: ಇತ್ತೀಚೆಗಷ್ಟೇ ಸತ್ತ ಬೀದಿನಾಯಿಯೊಂದನ್ನು ಕಾರಿನ ಹಿಂಬದಿಗೆ ಕಟ್ಟಿ ಎಳೆದಾಡಿ ಕ್ರೌರ್ಯ ಮೆರೆದಿದ್ದ. ಈ ಘಟನೆ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಬೀದಿ ನಾಯಿಯೊಂದನ್ನು ಅಪಾರ್ಟ್‌ಮೆಂಟ್‌ನ ಮೇಲಿನಿಂದ ಎಸೆದಿರುವ ಅಮಾನುಷ ಘಟನೆ ಉತ್ತರಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಗ್ರೇಟರ್‌ ನೋಯ್ಡಾದ ವಿಹಾನ್‌ ಹೆರಿಟೇಜ್‌ ಸೊಸೈಟ್‌ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ನಾಯಿಯನ್ನು ಯಾರೋ ಎಸೆದಿದ್ದಾರೆ. ನೆಲಕ್ಕೆ ಬಿದ್ದ ತಕ್ಷಣ ನಾಯಿ ದಾರುಣವಾಗಿ ಸಾವನ್ನಪ್ಪಿದೆ. ಈ ಘಟನೆ ವಿಡಿಯೋವನ್ನು ಗಾಜಿಯಾಬಾದ್‌ ಪ್ರಾಣಿ ದಯಾ ಸಂಘದ ಅಧ್ಯಕ್ಷ ಸುರಭಿ ರಾವತ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಿಡಿ ಕಾರಿದ್ದಾರೆ.

ಇನ್ನೂ ಪತ್ತೆಯಾಗದ ಆರೋಪಿ

ಇನ್ನು ಈ ದುಷ್ಕೃತ್ಯ ಎಸೆದವರು ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅದೂ ಅಲ್ಲದೇ ಘಟನೆ ಬಗ್ಗೆ ಯಾವುದೇ ಕೇಸ್‌ ದಾಖಲಾಗಿಲ್ಲ. ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಸ್ಟೇಶನ್‌ ಹೌಸ್‌ ಅಧಿಕಾರಿ ಅರವಿಂದ ಕುಮಾರ್‌ ತನಿಖೆ ನಡೆಸಿದ್ದಾರೆ. ಆರೋಪಿಗಾಗಿ ಬಲೆ ಬೀಸಿದ್ದಾರೆ.

ಕೆಲವು ದಿನಗಳ ಹಿಂದೆ ಸತ್ತ ಬೀದಿನಾಯಿಯೊಂದನ್ನು ಕಾರಿನ ಹಿಂಬದಿಗೆ ಕಟ್ಟಿ ಎಳೆದಾಡಿ ಕ್ರೌರ್ಯ ಮೆರೆದಿದ್ದ. ಟೊಯೋಟಾ ಇನೋವಾ ಕಾರಿಗೆ ಸತ್ತ ನಾಯಿಯನ್ನು ಕಟ್ಟಿ ಅಹಮಾದಾಬಾದ್‌ ಹೆದ್ದಾರಿಯಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಘಟನೆ ಬಗ್ಗೆ ಇದುವರೆಗೆ ಯಾವುದೇ ಪೊಲೀಸ್‌ ಕೇಸ್‌ ದಾಖಲಾಗಿಲ್ಲ. ಅದೂ ಅಲ್ಲದೇ ಇದು ನಿಖರವಾಗಿ ಯಾವ ಸ್ಥಳದಲ್ಲಿ ನಡೆದಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ

ಇನ್ನು ಘಟನೆಗೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದು, ಪ್ರಾಣಿಗಳ ವಿರುದ್ಧ ಕ್ರೌರ್ಯ ಮೆರೆಯುವ ಕ್ರೂರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. “ನಿಜವಾಗಿಯೂ ಮಾನವೀಯತೆ ಎಷ್ಟು ಕ್ರೂರವಾಗಿ ಮಾರ್ಪಟ್ಟಿದೆ…! ಶವವಾದರೂ ಹೀಗೆ ಎಳೆದುಕೊಂಡು ಹೋಗಬೇಕೇ, ಕಟ್ಟಿಹಾಕಬೇಕೇ? ಡ್ರೈವರ್ ತನ್ನ ಆತ್ಮೀಯರ ಶವವನ್ನು ಹೀಗೆ ತೆಗೆದುಕೊಂಡು ಹೋಗುತ್ತಾನೆಯೇ?” ಎಂದು ಒಬ್ಬ ನೆಟ್ಟಿಗ ಕಿಡಿ ಕಾರಿದ್ದಾರೆ. ಅಹಮದಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಮಾನವೀಯತೆ ಮರೆತಿದ್ದಾನೆ. ಸತ್ತ ನಾಯಿಯನ್ನು ಗಾಡಿಗೆ ಕಟ್ಟಿ ಈ ರೀತಿ ಎಳೆದುಕೊಂಡು ಹೋಗುವುದು ಎಷ್ಟು ಸೂಕ್ತ? ನಾಚಿಕೆಗೇಡಿನ ಸಂಗತಿ ಇದು ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದರು.

ಇದನ್ನೂ ಓದಿ: Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

Exit mobile version