Site icon Vistara News

Viral Video: ಥೂ ! ಅಸಹ್ಯ !; ನಡುರಸ್ತೆಯಲ್ಲಿಯೇ ಹಸ್ತ ಮೈಥುನ ಮಾಡಿ ಮಾರಾಟದ ಐಸ್‌ಕ್ರೀಂಗೆ ವೀರ್ಯ ಬೆರೆಸಿದ !

ice creame

ice creame

ಹೈದರಾಬಾದ್‌: ಬೀದಿ ಬದಿಯ ಆಹಾರ ಸೇವನೆ ಅಷ್ಟೊಂದು ಉತ್ತಮವಲ್ಲ ಎನ್ನುವ ಮಾತು ಆಗಾಗ ಕೇಳಿ ಬರುತ್ತದೆ. ಅದಕ್ಕೆ ಮುಖ್ಯ ಕಾರಣ ಎಂದರೆ ಕೆಲವು ಬೀದಿ ಬದಿ ವ್ಯಾಪಾರಿಗಳು ಶುಚಿತ್ವ ಪಾಲಿಸುವುದಿಲ್ಲ ಎನ್ನುವುದು. ಕೆಲವೊಮ್ಮೆ ಬೀದಿ ಬದಿ ವ್ಯಾಪಾರಿಗಳು ಆಹಾರಕ್ಕೆ ಕಲುಷಿತ ನೀರು ಸೇರಿಸುವುದು, ತರಕಾರಿಯನ್ನು ತೊಳೆಯದೆ ಬಳಸುವುದು ಮುಂತಾದ ವಿಡಿಯೊ ನೋಡಿದ್ದೇವೆ. ಆದರೆ ಈ ವಿಡಿಯೊ ಮಾತ್ರ ಭಯಾನಕವಾಗಿದೆ. ನೀವು ಕನಸಿನಲ್ಲಿಯೂ ಊಹಿಸದ ವಿಚಾರವೊಂದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ನೋಡಿದವರು ಬೀದಿ ಬದಿ ಆಹಾರ ಸೇವಿಸಲು ಒಂದಲ್ಲ ಹತ್ತಾರು ಬಾರಿ ಯೋಚಿಸುವುದರಲ್ಲಿ ಸಂದೇಹವೇ ಇಲ್ಲ. ಅಷ್ಟಕ್ಕೂ ಈ ವೈರಲ್‌ ವಿಡಿಯೊ (Viral Video)ದಲ್ಲಿ ಏನಿದೆ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಛೀ ! ಹೀಗೂ ಮಾಡುತ್ತಾರಾ?

ತಳ್ಳುವ ಗಾಡಿಯಲ್ಲಿ ಐಸ್‌ಕ್ರೀಮ್‌ ಮಾರಾಟ ಮಾಡುವ ವ್ಯಾಪಾರಿಯೊಬ್ಬ ಹಸ್ತಮೈಥುನ ಮಾಡಿ ವೀರ್ಯವನ್ನು ಫಾಲೂದಾ ಐಸ್‌ಕ್ರೀಮ್‌ಗೆ ಮಿಕ್ಸ್‌ ಮಾಡಿದ್ದಾನೆ ! ಸದ್ಯ ಈ ಆಘಾತಕಾರಿ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮರೆಯಲ್ಲಿ ನಿಂತು ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಗ್ರಾಹಕರಿಲ್ಲದೆ ವೇಳೆಯಲ್ಲಿ, ರಸ್ತೆ ಬದಿಯಲ್ಲೇ ಇರುವ ವ್ಯಾಪಾರಿ ಹಸ್ತಮೈಥುನ ಮಾಡಿ ವೀರ್ಯವನ್ನು ಐಸ್‌ಕ್ರೀಮ್‌ಗೆ ಮಿಕ್ಸ್‌ ಮಾಡುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಸದ್ಯ ಈ ದೃಶ್ಯ ನೋಡಿದವರು ಒಂದು ಕ್ಷಣ ದಂಗಾಗಿದ್ದಾರೆ. ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಎಲ್ಲಿ?

ತೆಲಂಗಾಣದ ವಾರಂಗಲ್‌ ಜಿಲ್ಲೆಯ ನೆಕ್ಕೊಂಡಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಅಸಹ್ಯಕರ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ವಿರೋಧ ಕಂಡು ಬರುತ್ತಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಭರವಸೆ ನೀಡಿದ್ದಾರೆ. ಅಲ್ಲದೆ ಇನ್ನು ಮುಂದೆ ಇಂತಹ ಕೃತ್ಯ ನಡೆಯದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಾಗಿ ಭರವಸೆ ಒದಗಿಸಿದ್ದಾರೆ.

ಐಸ್‌ಕ್ರೀಮ್‌ ಮಾರಾಟಗಾರನ ಕುರಿತು ಈಗಾಗಲೇ ದೂರು ದಾಖಲಾಗಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ಬಾಲಾಜಿ ಹೆಸರಿನ ಐಸ್‌ಕ್ರೀಮ್ ಸ್ಟಾಲ್ ಮೇಲೆ ದಾಳಿ ನಡೆಸಿದ್ದಾರೆ. ಮಾರಾಟಗಾರನ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಕಲುಷಿತ ಐಸ್‌ಕ್ರೀಮ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿರುವ ಹಲವರನ್ನು ಬಂಧಿಸಲಾಗಿದೆ. ಅಧಿಕಾರಿಗಳು ಅವರ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಆರೋಪಿ ರಾಜಸ್ಥಾನ ಮೂಲದವನು ಎಂದು ತಿಳಿದು ಬಂದಿದೆ. ಆತನ ಬಳಿಯಿದ್ದ ಎಲ್ಲ ಐಸ್​ಕ್ರೀಮ್​ ಅನ್ನು ಸುರಿಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆಯಿಂದ ವಾರಂಗಲ್ ಪೊಲೀಸರು ಎಚ್ಚೆತ್ತಿದ್ದು, ಬೇಸಿಗೆ ಹಿನ್ನೆಲೆಯಲ್ಲಿ ಐಸ್ ಕ್ರೀಂ, ಹಾಲಿನ ಉತ್ಪನ್ನಗಳು, ಜ್ಯೂಸ್, ತಂಪು ಪಾನೀಯ ಅಂಗಡಿಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಮಲಗಿದ್ದ ಯುವತಿ ಮುಖದ ಎದುರೇ ಹಸ್ತಮೈಥುನ! ವಿಕೃತನ ಅರೆಸ್ಟ್

ಸದ್ಯ ಈ ವಿಡಿಯೊವನ್ನು 2 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದು, ಐಸ್‌ಕ್ರೀಮ್‌ ಮಾರಾಟಗಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Exit mobile version