Site icon Vistara News

Viral Video: ವಿವಾಹ ಮಂಟಪದಲ್ಲಿ ನಾಗವಲ್ಲಿ ಅವತಾರ ತಾಳಿದ ವಧು; ವರ ಈಗ ಕೋಮಾದಲ್ಲಿದ್ದಾನೆ ಎಂದ ನೆಟ್ಟಿಗರು

Viral Video

Viral Video

ಬೆಂಗಳೂರು: ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆ. ಜತೆಗೆ ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಶಾಸ್ತ್ರೋಕ್ತವಾಗಿ ವಧು-ವರರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಈ ಅಪರೂಪದ ಘಳಿಗೆಯನ್ನು ಸ್ಮರಣೀಯವಾಗಿಸಲು ಮೊದಲೇ ಸಾಕಷ್ಟು ಸಿದ್ಧತೆ ನಡೆಸಲಾಗುತ್ತದೆ. ಆದರೆ ಕೆಲವೊಮ್ಮೆ ಮದುವೆ ಮನೆಯಲ್ಲಿ ನಡೆಯುವ ಎಡವಟ್ಟುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ವೈರಲ್‌ ಆಗುತ್ತವೆ. ಸದ್ಯ ಅಂತಹದ್ದೇ ವಿಡಿಯೊವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ (Viral Video).

ಅದ್ಧೂರಿ ಮದುವೆಯೊಂದನ್ನು ಆಯೋಜಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ವಧು ವಿಚಿತ್ರವಾಗಿ ಆಡಲು ಶುರು ಮಾಡುತ್ತಾಳೆ. ಅದುವರೆಗೆ ಸಂತೋಷದಿಂದ ಕೂಡಿದ್ದ ಮದುವೆ ಹಾಲ್‌ ಗೊಂದಲದ ಗೂಡಾಗುತ್ತದೆ. ಈ ವಿಡಿಯೊದ ಮೂಲ ಎಲ್ಲಿ ಎನ್ನುವುದು ಪತ್ತೆಯಾಗಿಲ್ಲ. ಸದ್ಯ ವೈರಲ್‌ ಆಗಿರುವ ಈ ವಿಡಿಯೊವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಅ‍ದ್ಧೂರಿ ವಿವಾಹ ಮಂಟಪ. ಬಲ್ಪ್‌, ಹೂಗಳಿಂದ ಅಲಂಕರಿಸಿರುವ ಈ ಮಂಟಪದ ಆಸನದಲ್ಲಿ ಚೆನ್ನಾಗಿ ಮೇಕಪ್‌ ಮಾಡಿಕೊಂಡ ವಧು ಕೂತಿರುತ್ತಾಳೆ. ಆಕೆಯ ಎದುರು ವರ ನಿಂತಿದ್ದರೆ ಸುತ್ತ ನೆಂಟರಿಷ್ಟರು ನೆರೆದಿದ್ದಾರೆ. ಇದ್ದಕ್ಕಿದ್ದಂತೆ ವದು ಮೈಮೇಲೆ ದೆವ್ವ ಬಂದಂತೆ ಆಡಲು ಶುರು ಮಾಡುತ್ತಾಳೆ. ಕಣ್ಣನ್ನು ವಿಚಿತ್ರವಾಗಿ ತಿರುಗಿಸಿ ಅಕ್ಷರಶಃ ʼಆಪ್ತಮಿತ್ರʼ ಸಿನಿಮಾದಲ್ಲಿ ಬರುವ ನಾಗವಲ್ಲಿ ಅವತಾರ ತಾಳುತ್ತಾಳೆ. ಕೂದಲನ್ನು ಬಿಚ್ಚಿ ಹಾಕಿ ದೆವ್ವ ಮೈಮೇಲೆ ಬಂದವರು ಆಡುತ್ತಾರೆ ಎನ್ನುತ್ತಾರ ಹಾಗೆ ವರ್ತಿಸುತ್ತಾಳೆ. ಜತೆಗೆ ಜೋರಾಗಿ ನಗುತ್ತಾಳೆ. ಇದರಿಂದ ಬೆಚ್ಚಿಬೀಳುವ ವರ ಹಾರಿ ಬೀಳುತ್ತಾನೆ. ಸುತ್ತಲಿದ್ದವರು ಭಯ, ಗೊಂದಲದಲ್ಲಿ ಏನು ಮಾಡಬೇಕೆಂದು ತೋಚದೆ ದಿಗ್ಭ್ರಾಂತರಾಗಿ ನಿಲ್ಲುತ್ತಾರೆ. ಆಗ ಆಕೆಯ ಸಂಬಂಧಿಕರಿಬ್ಬರು ಧೈರ್ಯದಿಂದ ಮುಂದೆ ಬಂದು ಆಕೆಯನ್ನು ಹಿಡಿದುಕೊಳ್ಳುತ್ತಾರೆ. ಇವಿಷ್ಟು ವಿಡಿಯೊದಲ್ಲಿ ಕಂಡು ಬಂದಿದೆ.

ನೆಟ್ಟಿಗರು ಏನಂದ್ರು?

ಕೇವಲ 17 ಸೆಕೆಂಡ್‌ಗಳ ಈ ವಿಡಿಯೊದ ಬಗ್ಗೆಯೇ ಚರ್ಚೆ ಆರಂಭವಾಗಿದೆ. ಹಲವರು ವಿಡಿಯೊ ನೋಡಿ ಅಲ್ಲಿದ್ದವರಂತೆ ಶಾಕ್‌ಗೆ ಒಳಗಾಗಿದ್ದಾರೆ. ಪಾಪದ ವರ ಇದನ್ನು ನೋಡಿ ಕೋಮಾಕ್ಕೆ ಜಾರಿರಬೇಕು ಎನ್ನುವ ಕ್ಯಾಪ್ಶನ್‌ ನೀಡಿ ವಿಡಿಯೊ ಹಂಚಿಕೊಳ್ಳಲಾಗಿದೆ. ಕೆಲವರು ಇದನ್ನು ಪೂರ್ವ ನಿಯೋಜಿತ ಎಂದು ಕರೆದಿದ್ದಾರೆ. ಹೆಚ್ಚು ವ್ಯೂವ್ಸ್‌ ಪಡೆದುಕೊಳ್ಳಲು ಬೇಕಂತಲೇ ನಾಟಕ ಮಾಡಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೊ ನೋಡಿದ ಕೆಲವರು ನಾಗವಲ್ಲಿ ಪಾತ್ರವನ್ನು ನೆಪಿಸಿಕೊಂಡಿದ್ದಾರೆ. ಇನ್ನು ಕೆಲವರು ಇದು ನಿಜವೆ? ಎಲ್ಲಿ ನಡೆದಿರುವುದು? ಮುಂತಾಗಿ ಪ್ರಶ್ನಿಸಿದ್ದಾರೆ.

ಇನ್ನೊಂದು ವಿಡಿಯೊ

ಇದೇ ರೀತಿಯ ಇನ್ನೊಂದು ಘಟನೆಯ ವಿಡಿಯೊ ಕೂಡ ಇದೀಗ ಸದ್ದು ಮಾಡುತ್ತಿದೆ. ಇದರಲ್ಲಿ ಈ ವಧು-ವರರಿಬ್ಬರು ವೇದಿಕೆ ಮೇಲೆ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ವರ ಚಪ್ಪಲಿ ಕೈಯಲ್ಲಿ ಹಿಡಿದು ಹಲ್ಲೆಗೆ ಮುಂದಾದರೆ ತಾನು ಯಾವುದರಲ್ಲಿಯೂ ಕಡಿಮೆ ಇಲ್ಲ ಎನ್ನುವಂತೆ ವಧು ಕೂಡ ಪ್ರತಿ ದಾಳಿ ನಡೆಸುತ್ತಾಳೆ. ಪಕ್ಕದಲ್ಲಿದ್ದವರು ತಡೆಯಲು ಪ್ರಯತ್ನಿಸಿದಷ್ಟೂ ಇಬ್ಬರ ಜಗಳ ತಾರಕಕ್ಕೆ ಏರುತ್ತದೆ. ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದ.

ಇದನ್ನೂ ಓದಿ: Viral Video: ಮದುವೆಗೆ ಬಂದ ಮಾಜಿ ಪ್ರಿಯಕರ; ಆಮೇಲೆ ನಡೆದಿದ್ದೇ ಬೇರೆ- ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್‌ ಎಂದ ನೆಟ್ಟಿಗರು

Exit mobile version