Site icon Vistara News

Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

Viral Video

ಗುಜರಾತ್‌: ಮೋಜಿಗೆಂದು ವೇಗವಾಗಿ ವಾಹನ ಚಲಾಯಿಸಿ(Rash Driving) ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಬಗ್ಗೆ ದಿನಾ ಒಂದಿಲ್ಲೊಂದು ಘಟನೆ ವರದಿ ಆಗುತ್ತಲೇ ಇರುತ್ತದೆ. ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌(Gujarat Accident)ನಲ್ಲಿ ನಡೆದಿದ್ದು, ಐವರು ಯುವಕರು ಇನ್‌ಸ್ಟಾ ಗ್ರಾಂ ಲೈವ್‌(Viral Video) ಹೋಗುತ್ತಾ ಕಾರನ್ನು ಪ್ರತಿ ಗಂಟೆಗೆ 160 ಕಿಲೋಮೀಟರ್‌ ವೇಗದಲ್ಲಿ ಚಲಾಯಿಸಿ ಕೊನೆಗೆ ಭೀಕರ ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಅಸುನೀಗಿದರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ:

ಗುಜರಾತ್‌ನ ಕಛ್‌ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಹ್ಮದಾಬಾದ್‌ನಿಂದ ಮುಂಬೈಗೆ SUV ಕಾರಿನಲ್ಲಿ ರೋಡ್‌ ಟ್ರಿಪ್‌ ಹೊರಟಿದ್ದ ಐವರು ಯುವಕರು ಕಾರು ಚಲಾಯಿಸುತ್ತಲೇ ಇನ್‌ಸ್ಟಾಗ್ರಾಂ ಲೈವ್‌ ಹೋಗಿದ್ದಾರೆ. ಒಂದು ಅತೀ ವೇಗದ ಕಾರು ಚಾಲನೆ ಅದರ ಜೊತೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಹೀಗೆ ಎದುರಿಗೆ ಬರುತ್ತಿದ್ದ ಒಂದೊಂದೆ ವಾಹಗಳನ್ನು ಓವರ್‌ಟೇಕ್‌ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಫುಲ್‌ ಎಂಜಾಯ್‌ ಮೂಡ್‌ನಲ್ಲಿದ್ದ ಯುವಕರ ಹುಚ್ಚಾಟದಿಂದ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಬಲಿಯಾಗಿದ್ದಾರೆ. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುವುದಕ್ಕೂ ಮುನ್ನ ನಡೆದ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೋರಾಗಿ ಮ್ಯೂಸಿಕ್‌ ಹಾಕಿಕೊಂಡು ಯುವಕನೋರ್ವ “ನೋಡಿ ನಮ್ಮ ಕಾರು ಎಷ್ಟು ವೇಗವಾಗಿ ಹೋಗುತ್ತಿದೆ” ಎಂದು ಹೇಳುತ್ತಾ ಸ್ಪೀಡೋ ಮೀಟರ್‌ ಅನ್ನು ತೋರಿಸುತ್ತಾನೆ. ಅದು ಪ್ರತಿಗಂಟೆಗೆ 160 ಕಿ.ಮೀ ವೇಗ ತೋರಿಸುತ್ತಿತ್ತು. ಅಷ್ಟು ಹೊತ್ತಿಗೆ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿ ಒಂದೊಂದೆ ವಾಹನಗಳನ್ನು ಹಿಂದಿಕ್ಕಲು ಶುರು ಮಾಡುತ್ತಾರೆ. ಆಗ ಮತ್ತೊರ್ವ ಯುವಕ ಯೆಸ್‌…ಒನ್‌ ಮೋರ್‌ ಎಂದು ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

ಈ ಘಟನೆ ಮೇ 2ರಂದು ಅದಾಸ್‌ ಪ್ರದೇಶದಲ್ಲಿ ಬೆಳಗ್ಗಿನ ಜಾವ 3.30 ಮತ್ತು 4.30ರ ನಡುವೆ ನಡೆದಿದ್ದು, ಮೃತರನ್ನು ಅಮನ್‌ ಮೆಹಬೂಬ್‌ ಭಾಯ್‌ ಶೇಖ್‌ ಮತ್ತು ಚಿರಾಗ್‌ ಕುಮಾರ್‌ ಕೆ ಪಟೇಲ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾರು ಚಲಾಯಿಸುತ್ತಿದ್ದ ಮುಸ್ತಾಫಾ ಅಲಿಯಾಸ್‌ ಶಹಬಾದ್‌ ಖಾನ್‌ ಪಠಾಣ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version