Site icon Vistara News

Viral Video: ಈಜುಕೊಳದಲ್ಲಿ ಭೀಕರ ದುರಂತ; ಸ್ಟಂಟ್‌ ಮಾಡಲು ಹೋಗಿ ಯುವಕನ ಪ್ರಾಣಕ್ಕೆ ಕುತ್ತು-ವಿಡಿಯೋ ನೋಡಿ

Viral Video

ಮಧ್ಯಪ್ರದೇಶ: ಕೆಲವೊಮ್ಮೆ ಅತಿಯಾದ ಮೋಜು ಪ್ರಾಣಕ್ಕೆ ಸಂಚು ತಂದು ಬಿಡುತ್ತದೆ. ಮೋಜಿಗೆಂದು ಮಾಡಿದ ಕಾರ್ಯದಿಂದ ಎದುರಿಗಿರುವವರ ಪ್ರಾಣವನ್ನೇ ಬಲಿ ಪಡೆದಂತಹ ಘಟನೆಗಳು ಆಗಾಗ ಕಣ್ಣ ಮುಂದೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಮಧ್ಯಪ್ರದೇಶ(Madya Pradesh)ದ ರತ್ಲಮ್‌ನಲ್ಲಿ ನಡೆದಿದೆ. ಈಜುಕೊಳ(Swimming pool) ದಲ್ಲಿ ಯುವಕನೊರ್ವ ಸ್ಟಂಟ್‌ ಮಾಡಲು ಹೋಗಿ ಮತ್ತೊರ್ವ ಯುವಕನ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video)ಆಗಿದೆ.

ಘಟನೆ ವಿವರ:

ರತ್ಲಮ್‌ನಲ್ಲಿರುವ ಡಾಲ್ಫಿನ್‌ ಈಜುಕೊಳದಲ್ಲಿ ಈ ಘಟನೆ ನಡೆದಿದ್ದು, ಅನೇಕ ಯುವಕರು ಸ್ವಿಮ್ಮಿಂಗ್‌ ಮಾಡುತ್ತಿರುತ್ತಾರೆ. ಇನ್ನೇ ಒಬ್ಬ ಯುವಕ ಮೇಲೆ ಹತ್ತಲು ಮುದಾಗುತ್ತಿದ್ದಾಗ ಮತ್ತೊರ್ವ ಯುವಕ ಸ್ವಿಮ್ಮಿಂಗ್‌ಪೂಲ್‌ಗೆ ಸ್ಟಂಟ್‌ ಮಾಡಿ ಜಂಪ್‌ ಹೊಡೆಯುತ್ತಾನೆ. ಆಗ ಇದ್ದ ಮೇಲೆ ಹತ್ತುತ್ತಿದ್ದ ಯುವಕನ ತಲೆಗೆ ಅವನ ಕಾಲಿನಿಂದ ಗಂಭೀರವಾಗಿ ಏಟಾಗುತ್ತದೆ. ಇದ್ದಕ್ಕಿದ್ದಂತೆ ಆ ಯುವಕ ಸ್ವಿಮ್ಮಿಂಗ್‌ಪೂಲ್‌ ಒಳಗೆ ಬೀಳುತ್ತಾನೆ. ತಕ್ಷಣ ಪ್ರಜ್ಞೆ ತಪ್ಪುತ್ತಾನೆ. ಅನೇಕರು ಅಲ್ಲೇ ಇದ್ದರೂ ತಕ್ಷಣ ಅವರ ಸಹಾಯಕ್ಕೆ ಯಾದೂ ಧಾವಿಸಲಿಲ್ಲ. ಅದಾದ ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ.

ಮೃತ ಯುವಕನನ್ನು ಅನಿಕೇತ್‌ ಎಂದು ಗುರುತಿಸಲಾಗಿದೆ. ಇಂತಹದ್ದೇ ಒಂದು ಘಟನೆ ಈ ಹಿಂದೆಯೂ ನಡೆದಿತ್ತು. ಇದಾದ ಬಳಿಕ ಸ್ವಿಮ್ಮಿಂಗ್‌ ಪೂಲ್‌ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಇಂತಹದ್ದೇ ಮತ್ತೊಂದು ಘಟನೆ ನಡೆದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈಜುಕೊಳವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕಳೆದ ವರ್ಷ ಬೆಂಗಳೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಜೆಪಿ ನಗರ 7 ನೇ ಹಂತದಲ್ಲಿರುವ ಖಾಸಗಿ ಈಜುಕೊಳದಲ್ಲಿ 13 ವರ್ಷದ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿದ್ದರು. ಮೃತ ವಿದ್ಯಾರ್ಥಿಗಳನ್ನು ಜರಗನಹಳ್ಳಿ ನಿವಾಸಿಗಳಾದ ಮೋಹನ್ ಮತ್ತು ಜಯಂತ್ ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ತಮ್ಮ ಶಾಲೆಯಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಬಳಿಕ ಇಬ್ಬರ ಮೃತದೇಹಗಳು ಈಜುಕೊಳದಲ್ಲಿ ಕಂಡುಬಂದಿದ್ದವು.

ಇದನ್ನೂ ಓದಿ:ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

ಈಜುಕೊಳದ ತರಬೇತುದಾರ ಬಾಲಕರನ್ನು ಈಜುಕೊಳಕ್ಕೆ ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ., ಆದರೆ ದುರಂತ ನಡೆದ ಸಮಯದಲ್ಲಿ ಅವರು ಇರಲಿಲ್ಲ ಎಂಬುದು ಆನಂತರ ಬಯಲಾಗಿತ್ತು. ಪೊಲೀಸರ ಪ್ರಕಾರ, ಇಬ್ಬರು ಬಾಲಕರು ತರಗತಿಗಳನ್ನು ಬಿಟ್ಟು ಜೆಪಿ ನಗರದಲ್ಲಿರುವ ಎಂಎನ್‌ಸಿ ಸ್ಪೋರ್ಟ್ಸ್ ಅಕಾಡೆಮಿಗೆ ಭೇಟಿ ನೀಡಿ, ಈಜುಕೊಳದಲ್ಲಿ ಆಟವಾಡಿದ್ದಾರೆ. ಈಜುಕೊಳದ ಸರಿಯಾದ ಬಳಕೆಯ ಬಗ್ಗೆ ಬಾಲಕರಿಗೆ ಸೂಚನೆಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version