Site icon Vistara News

Viral Video: ಪಬ್ಲಿಕ್‌ನಲ್ಲೇ ಲಂಚದ ಹಣ ಹಂಚಿಕೊಂಡ ಟ್ರಾಫಿಕ್‌ ಪೊಲೀಸರು; ಖಾಕಿಯ ಲಂಚಾವತಾರ ಸಿಸಿಟಿವಿಯಲ್ಲಿ ಸೆರೆ

Viral Video

ನವದೆಹಲಿ: ಟ್ರಾಫಿಕ್‌ ಪೊಲೀಸ(Traffic Police)ರ ವಿರುದ್ಧ ಲಂಚ(Bribe)ದ ಆರೋಪ ಕೇಳಿ ಬರುವುದು ಸರ್ವೇ ಸಾಮಾನ್ಯ. ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರಿಂದ ಹಣ ಪೀಕಿಸಿ ತಮ್ಮ ಜೇಬ ತುಂಬಿಸಿಕೊಂಡು ಕೆಲವೊಮ್ಮೆ ಸಿಕ್ಕಿಹಾಕಿಕೊಂಡಿರುವ ಘಟನೆಗಳೂ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ವಾಹನ ತಪಾಸಣೆ ನೆಪದಲ್ಲಿ ವಾಹನ ಸವಾರರಿಂದ ಪಡೆದ ಲಂಚದ ಹಣವನ್ನು ಮೂವರು ಟ್ರಾಫಿಕ್ ಪೊಲೀಸರು ಹಂಚಿಕೊಳ್ಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.

ಗಾಜಿಪುರ ಪೊಲೀಸ್ ಠಾಣೆಯಾ ಎದುರು ಕಲ್ಯಾಣಪುರಿ ವೃತ್ತದಲ್ಲಿ ಈ ಘಟನೆ ನಡೆದಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರು ಅಲ್ಲೇ ಒಂದು ಸಣ್ಣ ಶೆಡ್ ಮಾಡಿಕೊಂಡು ಅಲ್ಲಿ ವಾಹನ ಸವಾರರನ್ನು ದಾಖಲೆ ಪರಿಶೀಲನೆ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬಂದಿತ್ತು. ಈ ವಿಡಿಯೋದಲ್ಲಿ ರೆಡ್‌ ಹ್ಯಾಂಡಾಗಿ ಸಿಕ್ಕಿಕೊಂಡಿರುವ ಲಂಚಕೋರ ಮೂವರು ಸಂಚಾರಿ ಪೊಲೀಸರು ಬಂದ ಹಣವನ್ನು ಹಂಚಿಕೊಳ್ಳುತ್ತಿರುವುದು ಬಯಲಾಗಿದೆ. ಅಲ್ಲದೆ ಇದಕ್ಕೆ ಪೂರಕ ಎಂಬಂತೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಈ ಮೂವರು ಸಂಚಾರಿ ಪೊಲೀಸರು ಹಣ ಹಂಚಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಮತ್ತೊಂದು ವಿಡಿಯೋದಲ್ಲಿ ವಾಹನ ಚಾಲಕನೊಬ್ಬ ಚೌಕಿಯ ಬಳಿ ಬಂದು ಪೊಲೀಸರ ಜೊತೆ ಮಾತನಾಡುವ ದೃಶ್ಯವಿದೆ. ಕೆಲ ಹೊತ್ತಿನ ಮಾತುಕತೆ ಬಳಿಕ ಟ್ರಾಫಿಕ್ ಪೊಲೀಸ್ ಆತನಿಂದ ಲಂಚವಾಗಿ ಹಣ ಪಡೆದಿದ್ದಾರೆ. ಆದರೆ ನೇರವಾಗಿ ಹಣ ಪಡೆಯದೇ, ಕುಳಿತಿಕೊಂಡ ಬಳಿ ಇಡುವಂತೆ ಸೂಚಿದ್ದಾನೆ. ಲಂಚದ ರೂಪದಲ್ಲಿ ಹಣ ಇಟ್ಟು ವಾಹನ ಚಾಲಕ ತೆರಳಿದ್ದಾನೆ.

ಮೂವರೂ ಸಸ್ಪೆಂಡ್‌

ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದರ ಹಿನ್ನೆಲೆಯಲ್ಲಿ ಅಪರಾಧವೆಸಗಿದ ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ

ಇದನ್ನೂ ಓದಿ: Viral News: 5 ಕೆಜಿ ಆಲೂಗಡ್ಡೆ ಲಂಚ ಕೇಳಿ ಅಮಾನತುಗೊಂಡ ಸಬ್‌ ಇನ್ಸ್‌ಪೆಕ್ಟರ್ !

Exit mobile version