ಭೋಪಾಲ್: ಹರಿದ ಧೋತಿ ತೊಟ್ಟು, ದಯಮಾಡಿ ಪರಿಹಾರ ನೀಡಿ ಎಂದು ಬೇಡುತ್ತಾ ವೃದ್ಧನೋರ್ವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉರುಳಾಡುತ್ತಾ ಗೋಳಾಡುತ್ತಿರುವ ದೃಶ್ಯ ಎಂಥವರ ಮನಸ್ಸು ಕರಗುವಂತೆ ಮಾಡಿತ್ತು. ಈ ದೃಶ್ಯ ಕಂಡು ಬಂದಿದ್ದು ಮಧ್ಯಪ್ರದೇಶ(Madhya Pradesh)ದ ಮಂಡ್‌ಸೌರ್‌ನಲ್ಲಿ. ಸ್ಥಳೀಯ ಭೂ ಮಾಫಿಯಾಗೆ ಬಳಿಯಾಗಿ ಭೂಮಿ ಕಳೆದುಕೊಂಡು ರೈತ ಗೋಳಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ(Viral Video).
ಈ ಕುರಿತು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರೈತ ಶಂಕರಲಾಲ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ತೆರಳಿ ಗಮನ ಸೆಳೆದರು. ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ ಶಂಕರಲಾಲ್, ”ಭೂಮಾಫಿಯಾದಿಂದ ನನಗೆ ತೊಂದರೆಯಾಗಿದೆ, ತಹಸೀಲ್ದಾರ್ ತಪ್ಪು ಮಾಡುತ್ತಾರೆ, ರೈತರು ಅನುಭವಿಸುತ್ತಾರೆ, ಅವರು ತಪ್ಪು ಮಾಡುತ್ತಾರೆ, ಅದರ ಪರಿಣಾಮವನ್ನು ನಾನು ಅನುಭವಿಸುತ್ತೇನೆ, ನನಗೆ ಸರ್ಕಾರ ಮತ್ತು ಆಡಳಿತದ ಬಗ್ಗೆ ಅಸಮಾಧಾನವಿದೆ. ಇಲ್ಲಿ ನಾವು ಭ್ರಷ್ಟರಾಗಿದ್ದೇವೆ… ರೈತರಿಗೆ ವಂಚನೆಯಾಗುತ್ತಿದೆ ಎಂದು ಕೈ ಮುಗಿದು ನೆಲದಲ್ಲಿ ಹೊರಳಾಡಿದ್ದಾನೆ.
मंदसौर के बुजुर्ग किसान हैं, कहते हैं कहीं सुनवाई नहीं हो रही आरोप है कि ज़मीन फर्जी दस्तावेजों के जरिये कुछ लोगों ने हड़प ली है … कलेक्टर दफ्तर से यूं निराश होकर लौटे … pic.twitter.com/bpAHfHp2NH
— Anurag Dwary (@Anurag_Dwary) July 17, 2024
ಘಟನೆ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ದಿಲೀಪ್ ಯಾದವ್, ‘ಸಾರ್ವಜನಿಕ ವಿಚಾರಣೆಯಲ್ಲಿ ಬರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಪರಿಹರಿಸಲಾಗುತ್ತದೆ. ಮಂಗಳವಾರ ನಡೆದ ವಿಚಾರಣೆಗೆ ಹಲವು ಮಂದಿ ಹಾಜರಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಪರಿಹರಿಸಲಾಗಿದೆ ಎಂದ ಅವರು, ಹಿಂದಿನ ಸಾರ್ವಜನಿಕ ವಿಚಾರಣೆಗಳ ಪ್ರಕರಣಗಳನ್ನೂ ಪರಿಶೀಲಿಸಲಾಗಿದೆ ಎಂದರು.
ದೂರುದಾರರು ವಿವಾದಿತ ಭೂಮಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ. ಸದ್ಯ ಶಂಕರ್ ಮತ್ತು ಅವರ ಕುಟುಂಬದವರು ಜಮೀನು ಹೊಂದಿದ್ದಾರೆ. ಈ ಹಿಂದೆ ಷೇರುದಾರರು ಮಾರಾಟ ಮಾಡಿದ ಅರ್ಧದಷ್ಟು ಭೂಮಿಯನ್ನು ಖರೀದಿದಾರರು ಸ್ವಾಧೀನಪಡಿಸಿಕೊಂಡಿಲ್ಲ. ಸ್ಥಳೀಯ ಆಡಳಿತ ನೀಡಿದ ದಾಖಲೆಗಳ ಆಧಾರದ ಮೇಲೆ ತಹಸೀಲ್ದಾರ್ ಸಲ್ಲಿಸಿದ ತನಿಖಾ ವರದಿ ಪ್ರಕಾರ, ಸುಖದ್ ಗ್ರಾಮದಲ್ಲಿ ವಿಸ್ತೀರ್ಣ ಸಂಖ್ಯೆ 604 ರಲ್ಲಿ 2.5 ಹೆಕ್ಟೇರ್ ಜಮೀನು ಇದ್ದು, ಸರ್ವೆ ಸಂಖ್ಯೆ 625 ರಲ್ಲಿ 1.01 ಹೆಕ್ಟೇರ್ ಇದೆ.
2010 ರ ಡಿಸೆಂಬರ್ 31 ರಂದು ಮಾರಾಟ ಪತ್ರದ ಪ್ರಕಾರ ಈ ಭೂಮಿಯನ್ನು ಮಂದಸೌರ್ ನಿವಾಸಿ ನಾರಾಯಣ ರಾವ್ ಅವರ ಮಗ ಅಶ್ವಿನ್ ಎಂಬುವವರಿಗೆ ಮಾರಾಟ ಮಾಡಲಾಗಿದೆ. ಈ ಭೂಮಿಯನ್ನು ಹಸ್ತಾಂತರಿಸಲು ಅಂದಿನ ತಹಸೀಲ್ದಾರ್ ಸೀತಾಮೌ ಅವರು 2010 ರಲ್ಲಿ ಅನುಮೋದನೆ ನೀಡಿದರು. ಆದಾಗ್ಯೂ, ಮಾರಾಟವಾದ ಭೂಮಿ ಕರು ಲಾಲ್, ರಾಮಲಾಲ್, ಪ್ರಭು ಲಾಲ್, ಮಂಗಿ ಬಾಯಿ ಮತ್ತು ಪಾರ್ವತಿ ಬಾಯಿ ಅವರ ಸ್ವಾಧೀನದಲ್ಲಿ ಉಳಿದಿದೆ, ಅವರು ಅದನ್ನು ಅಶ್ವಿನ್‌ಗೆ ಹಸ್ತಾಂತರಿಸಲು ಸಿದ್ಧರಿಲ್ಲ.
ಇದನ್ನೂ ಓದಿ: Muharram 2024: ಏಕತೆಯ ಸಂದೇಶ ಸಾರುವ ಮುಹರ್ರಮ್ ಆಚರಣೆ