ಜೈಪುರ: ಉತ್ತರಪ್ರದೇಶ(Uttara Pradesh)ದಲ್ಲಿ ಯೋಗಿ ಆದಿತ್ಯನಾಥ್(Yogi Adityanath) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬುಲ್ಡೋಜರ್‌ಗಳು ಭಾರೀ ಸದ್ದು ಮಾಡುತ್ತಿವೆ. ಅತ್ಯಾಚಾರ, ಕೊಲೆ, ಸುಲಿಗೆ ಹೀಗೆ ಕುಕೃತ್ಯಗಳಲ್ಲಿ ಭಾಗಿಯಾಗುವ ಅಪರಾಧಿಗಳ ಮನೆಗೆ ಬುಲ್ಡೋಜರ್ ನುಗ್ಗಿಸಿ ಪಾಠ ಕಲಿಸುವ ಪರಿಪಾಠವನ್ನು ಯೋಗಿ ಹುಟ್ಟು ಹಾಕಿದ್ದರು. ಇದೇ ಮುಂದೆ ರಾಜಸ್ಥಾನದಲ್ಲೂ ಮುಂದುವರೆಯವಂತಾಯಿತು. ಇದೇ ನಡೆಯನ್ನು ರಾಜಸ್ಥಾನ ಸರ್ಕಾರ(Rajasthan Government) ಕೂಡ ಅಳವಡಿಸಿಕೊಂಡು ಸುದ್ದಿಯಾಗಿತ್ತು. ಇದೀಗ ರಾಜಸ್ಥಾನದಲ್ಲಿ ಬುಲ್ಡೋಜರ್ ಒಂದು ಭಾರೀ ಸದ್ದು ಮಾಡುತ್ತಿದೆ. ಆದರೆ ಇದು ಸರ್ಕಾರದ ಕ್ರಮ ಅಲ್ಲ. ವಾಟರ್ ಪಾರ್ಕ್ ವಿರುದ್ಧ ರೊಚ್ಚಿಗೆದ್ದ ಜನರೇ ಕೈಗೆತ್ತಿಗೊಂಡ ಕ್ರಮ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್(Viral Video) ಆಗುತ್ತಿದೆ.
ಏನಿದು ವೈರಲ್ ವಿಡಿಯೋ?
ರಾಜಸ್ಥಾನದ ಚಿತ್ತೋರ್‌ಗಡದಲ್ಲಿರುವ ವಾಟರ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಉದ್ರಿಕ್ತ ಜನರ ಗುಂಪೊಂದು ಬುಲ್ಡೋಜರ್ ಸಮೇತ ವಾಟರ್ ಪಾರ್ಕ್‌ಗೆ ನುಗ್ಗಿ ಪುಡಿಗಟ್ಟಿದ್ದಾರೆ. ವಾಟರ್ ಪಾರ್ಕ್ ಆಡಳಿತಾಧಿಕಾರಿಗಳು ಏಕಾಏಕಿ ಭಾರೀ ಮೊತ್ತ ಪ್ರವೇಶ ಶುಲ್ಕವನ್ನು ವಿಧಿಸಿದ್ದರು. ಇದರಿಂದ ಕೋಪಗೊಂಡಿದ್ದ ಸ್ಥಳೀಯರು ಪಾರ್ಕ್‌ಗೆ ಉಚಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಆಡಳಿತಾಧಿಕಾರಿಗಳು ಒಪ್ಪದೇ ಇದ್ದಾಗ ಜನ ಉದ್ರಿಕ್ತಗೊಂಡು ಪಾರ್ಕ್ ಧ್ವಂಸಕ್ಕೆ ಮುಂದಾಗಿದ್ದಾರೆ.
The Kalesh between two groups at Kings Water Park in Gangarar, Chittorgarh escalated to such an extent that one group came to the water park with a JCB.
— Ghar Ke Kalesh (@gharkekalesh) June 7, 2024
pic.twitter.com/ZpK3zJOFgo
ಸುಮಾರು ನೂರು ಉದ್ರಿಕ್ತ ಜನರು ಪಾರ್ಕ್ ಒಳಗೆ ಬುಲ್ಡೋಜರ್ ನುಗ್ಗಿಸಿದ್ದಾರೆ. ಪಾರ್ಕ್ ಒಳಗೆ ನುಗ್ಗಿದ ಬುಲ್ಡೋಜರ್ ಅಲ್ಲಿದ್ದ ಆಟದ ವಸ್ತುಗಳನ್ನು ಜಖಂಗೊಳಿಸಿದೆ. ಅಲ್ಲದೇ ಈಜುಕೊಳವನ್ನು ಸಂಪೂರ್ಣವಾಗಿ ನಾಶ ಮಾಡಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ಜನರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಲ್ಡೋಜರ್ ನುಗ್ಗುತ್ತಿದ್ದಂತೆ ಗಾಬರಿಗೊಂಡ ಜನ ಅಲ್ಲಿಂದ ಅಡ್ಡಾದಿಡ್ಡಿ ಓಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಬೇಜವಾಬ್ದಾರಿಯುತ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.