Site icon Vistara News

Viral Video: ಅಂಗಡಿಯಲ್ಲಿ ಮೊಟ್ಟೆ ಕದ್ದು ಸಿಕ್ಕಿಬಿದ್ದ ಕಳ್ಳಿ, ವೈರಲ್ ಆದ ವಿಡಿಯೊ

Viral Video

ಮುಂಬೈ: ಇತ್ತೀಚಿನ ದಿನಗಳಲ್ಲಿ ಗೃಹಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಅದರಲ್ಲಿ ಕೋಳಿ ಮೊಟ್ಟೆ ಕೂಡ ಒಂದು. ಈ ಹಿಂದೆ 5 ರೂಪಾಯಿಗಳಿಗೆ ಸಿಗುತ್ತಿದ್ದ ಕೋಳಿ ಮೊಟ್ಟೆಯ ಬೆಲೆ ಈಗ 7 ರೂಪಾಯಿ ಆಗಿದೆ. ಹಾಗಾಗಿ ಕೋಳಿ ಮೊಟ್ಟೆ ಪ್ರಿಯರು ಮೊಟ್ಟೆಗಳಿಗಾಗಿ ಪರದಾಡುವಂತಾಗಿದೆ. ದುಡ್ಡು ಕೊಟ್ಟು ಮೊಟ್ಟೆ (Egg) ತೆಗೆದುಕೊಳ್ಳುವುದಕ್ಕೆ ಆಗದವರು ಈಗ ಮೊಟ್ಟೆಯನ್ನು ಕದಿಯುವ ಪರಿಸ್ಥಿತಿ ಬಂದಿರುವುದು ಮಾತ್ರ ಖೇದಕರ ಸಂಗತಿ. ಇಂತಹದೊಂದು ಘಟನೆ ಮುಂಬೈನ ಕೋಳಿ ಅಂಗಡಿಯೊಂದರಲ್ಲಿ ನಡೆದಿದೆ. ಮಹಿಳೆಯೊಬ್ಬಳು ಕೋಳಿ ಅಂಗಡಿಯಲ್ಲಿ ಮೊಟ್ಟೆ ಕದಿಯುತ್ತಿರುವ ದೃಶ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಇಬ್ಬರು ಮಹಿಳೆಯರು ಕೋಳಿ ಅಂಗಡಿಯೊಳಗೆ ನಿಂತಿರುವುದನ್ನು ಕಾಣಬಹುದು. ಅಂಗಡಿ ಮಾಲೀಕನು ಇನ್ನೊಂದು ಕಡೆ ಮುಖ ಮಾಡಿ ಕೋಳಿ ಕತ್ತರಿಸುವುದರಲ್ಲಿ ನಿರತರಾಗಿದ್ದಾಗ ಆತನಿಗೆ ತಿಳಿಯದಂತೆ ಆತನ ಬೆನ್ನ ಹಿಂದೆ ಮಹಿಳೆ ಮೊಟ್ಟೆಗೆ ಕನ್ನ ಹಾಕಿದ್ದಾಳೆ.

ಮಹಿಳೆಯ ವರ್ತನೆ ಅನುಮಾನಾಸ್ಪಾದವಾಗಿ ಕಂಡುಬಂದ ಹಿನ್ನಲೆಯಲ್ಲಿ ಮಾಲೀಕ ಅವಳ ಬ್ಯಾಗ್ ಅನ್ನು ಪರಿಶಿಲಿಸಿದ್ದಾನೆ. ಆಗ ಆಕೆಯ ಬ್ಯಾಗ್ ನಲ್ಲಿ ಮೊಟ್ಟೆಗಳು ಕಂಡುಬಂದಿವೆ. ಆದರೆ ಮಹಿಳೆಯರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರೂ ಕೂಡ ತಾವು ಮೊಟ್ಟೆ ಕದ್ದಿಲ್ಲ ಎಂದೇ ವಾದಿಸುತ್ತಿದ್ದರು. ಇದರಿಂದ ರೊಚ್ಚಿಗೆದ್ದ ವ್ಯಕ್ತಿ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವನ್ನು ನೋಡಿ ನಂತರ ಅಂಗಡಿಯ ಬಳಿ ನಿಂತಿದ್ದವರನ್ನು ಕರೆದಿದ್ದಾನೆ.

ಈ ವಿಡಿಯೊ ಕಂಡು ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವಳು ಮೊಟ್ಟೆಗಳನ್ನು ಕದ್ದರು ನಂತರ ಕದ್ದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾಳೆ. ಇದು ನಾಚಿಕೆಗೇಡಿನ ಸಂಗತಿ ಎಂದು ಒಬ್ಬರು ತಿಳಿಸಿದರೆ, ಇನ್ನೊಬ್ಬರು ಕ್ಯಾಮರಾ ಇಲ್ಲದಿದ್ದರೆ ಅಂಗಡಿಯವನಿಗೆ ಹೊಡೆತ ಬೀಳುತ್ತಿತ್ತು ಎಂದು ಬರೆದಿದ್ದಾರೆ.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಅಂಗಡಿ, ಶಾಪಿಂಗ್ ಮಾಲ್ ಗಳಲ್ಲಿ ಅಳವಡಿಸಲಾದ ಸಿಸಿಟಿವಿಗಳು ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ಯಾವುದೇ ಘಟನೆಗಳನ್ನು ಮರುಪರಿಶೀಲನೆ ಮಾಡಬಹುದು. ಈ ಸಿಸಿಟಿವಿಗಳಿಂದ ಹಲವು ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತಿದೆ.

Exit mobile version