ಬೆಂಗಳೂರು: ಇತ್ತೀಚೆಗೆ ಏನೇ ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಕು ಎನ್ನುವ ಹಪಹಪಿಯವರೇ ಹೆಚ್ಚು. ಊಟ ಮಾಡಿದ್ದು, ತಿರುಗಾಡಿದ್ದು ಕೊನೆಗೆ ಹೊಡೆದಾಡಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅಲ್ಲಿ ಬರುವ ಲೈಕ್ಸ್, ಕಾಮೆಂಟ್ ಗಳನ್ನೇ ಚಾತಕಪಕ್ಷಿಯಂತೆ ಕಾಯುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಮಾತ್ರ ತೀರಾ ಅತಿರೇಕಕ್ಕೆ ಹೋಗಿದ್ದಾಳೆ. ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮೇಲೆ ಹಿಗ್ಗಾಮುಗ್ಗಾ ಕುಣಿದು ಅದರ ವಿಂಡ್ ಶೀಲ್ಡ್ ಅನ್ನೇ ಒಡೆದುಹಾಕಿದ್ದಾಳೆ. ಈ ವಿಡಿಯೊ ಈಗ ಸಖತ್ ವೈರಲ್ (Viral Video) ಆಗಿದೆ.
ಕಾರೆಂದರೆ ಜೀವಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ಅದರಲ್ಲೂ ದುಬಾರಿ ಬೆಲೆಯ ಕಾರನ್ನು ಮುಟ್ಟುವುದಕ್ಕೂ ಬಿಡುವುದಿಲ್ಲ ಕೆಲವರು. ಆದರೆ ಈ ಮಹಿಳೆ ಮಾತ್ರ ವೀವ್ಸ್ ಹಾಗೂ ಲೈಕ್ಸ್ ಪಡೆಯಲು ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿ ಅದರ ವಿಂಡ್ ಶೀಲ್ಡ್ ಒಡೆದು ಹಾಕಿದ್ದಾಳೆ.ಈ ವಿಡಿಯೋ ಈಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಜನ ಹಿಗ್ಗಾಮುಗ್ಗಾ ಬೈದಿದ್ದಾರೆ.
ವಿಂಡ್ ಶಿಲ್ಡ್ ಒಡೆದರೂ ಡಾನ್ಸ್ ಬಿಡದ ಮಹಿಳೆ!
ಈ ವಿಡಿಯೊದಲ್ಲಿ ಗುಲಾಬಿ ಬಣ್ಣದ ಟ್ಯೂಬ್ ಟಾಪ್ ಮತ್ತು ಬಿಳಿ ಬಣ್ಣದ ಶಾರ್ಟ್ ಸ್ಕರ್ಟ್ ಧರಿಸಿದ ಮಹಿಳೆಯೊಬ್ಬಳು ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಾರ್ ನ ಮೇಲೆ ಡ್ಯಾನ್ಸ್ ಮಾಡುತ್ತಿದ್ದಳು. ಕುಣಿದ ಸ್ಪೀಡಿಗೆ ಕಾರಿನ ವಿಂಡ್ ಶಿಲ್ಡ್ ಒಡೆದು ಬಿರುಕು ಬಿಟ್ಟಿದೆ. ಕಾರಿನ ವಿಂಡ್ ಶಿಲ್ಡ್ ಒಡೆದಿದ್ದು ನೋಡಿಯೂ ಮಹಿಳೆ ಡ್ಯಾನ್ಸ್ ಮಾಡುವುದನ್ನು ಬಿಟ್ಟಿಲ್ಲ. ಈ ವಿಡಿಯೋವನ್ನು ರೆಡ್ಡಿಟ್ ಪೋಸ್ಟ್ ಮಾಡಿದ್ದು, ‘ಕೇವಲ ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜನರು ಇದನ್ನೆಲ್ಲಾ ಯಾಕೆ ಮಾಡುತ್ತಾರೆ’? ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಿದೆ. ಇನ್ನು ಈ ಘಟನೆ ನಡೆದ ಸ್ಥಳ ಮತ್ತು ದಿನ ತಿಳಿದುಬಂದಿಲ್ಲ.
ಸಿಕ್ಕಾಪಟ್ಟೆ ದುಬಾರಿಯಾಗಿರುವ ಲ್ಯಾಂಬೋರ್ಗಿನಿ ಕಾರು ಇರುವವರು ಅದನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಅಂತಹದರಲ್ಲಿ ಈ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀವ್ಸ್ ಪಡೆಯಲು ಅಂತಹ ದುಬಾರಿ ಕಾರನ್ನೇ ಹಾಳುಮಾಡಿಕೊಳ್ಳುತ್ತಿರುವುದು ಜನರಿಗೆ ಬಹಳ ಅಚ್ಚರಿಯನ್ನುಂಟು ಮಾಡಿದೆ.
MC dances on top of car and breaks the windshield 🤦♂️
byu/EthanthegamerGD inImTheMainCharacter
ಈ ಹಿಂದೆಯೂ ಟಿಕ್ ಟಾಕ್ ನಲ್ಲಿ ಮಹಿಳೆಯರು ಇಂತಹ ವಿಡಿಯೊಗಳನ್ನು ಮಾಡಿದ್ದರು. ಕಾರುಗಳ ಮೇಲೆ ಕೆಸರನ್ನು ಎರಚುವುದು, ಕಾರಿನ ಮೇಲೆ ಹತ್ತಿ ಅದರ ಗ್ಲಾಸ್ ಅನ್ನು ಒಡೆಯುವಂತಹ ಹಲವಾರು ವಿಡಿಯೋಗಳು ಟಿಕ್ ಟಾಕ್ ನಲ್ಲಿ ಕಂಡುಬಂದಿವೆ.
ಈ ವಿಡಿಯೊ ವೈರಲ್ ಆಗಿದ್ದು, ಇದಕ್ಕೆ ವೀಕ್ಷಕರಿಂದ ಹಲವಾರು ಪ್ರತಿಕ್ರಿಯೆ ಬಂದಿದೆ. ಕೆಲವರು ಈ ವಿಡಿಯೊ ನೋಡಿ ಕೋಪವನ್ನು ವ್ಯಕ್ತಪಡಿಸಿದ್ದರೆ, ಕೆಲವರು ದುಬಾರಿ ಕಾರನ್ನು ಹಾಳುಮಾಡುತ್ತಿರುವುದನ್ನು ಕಂಡು ನೊಂದುಕೊಂಡಿದ್ದಾರೆ. ಕೆಲವರು ಕಾರಿನ ಗ್ಲಾಸ್ ಬಿರುಕು ಬಿಟ್ಟಿರುವುದನ್ನು ನೋಡಿಯೂ ಮತ್ತೆ ಡ್ಯಾನ್ಸ್ ಮುಂದುವರಿಸಿದ ಮಹಿಳೆಯ ಮೇಲೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: Honour Killing: ರಸ್ತೆ ಬದಿಯಲ್ಲೇ ಮಹಿಳೆಯನ್ನು ದರದರನೆ ಎಳೆದು, ತಲೆಗೆ ಹೊಡೆದು ಕೊಲೆ ಮಾಡಿದ್ರು; ಇದೇನು ಮರ್ಯಾದೆ ಹತ್ಯೆಯಾ?
ಒಟ್ಟಾರೆ ಯುವಕ, ಯುವತಿಯರು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು, ವೀವ್ಸ್ ಮತ್ತು ಲೈಕ್ಸ್ ಅನ್ನು ಪಡೆಯಲು ಮಾಡುತ್ತಿರುವ ಹುಚ್ಚಾಟಗಳನ್ನು ನೋಡಿದರೆ ಮುಂದೆ ಅವರ ಜೀವಕ್ಕೆ ಅಪಾಯ ತಂದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅನಿಸುತ್ತದೆ.