Site icon Vistara News

Viral Video: ರೀಲ್ಸ್‌ಗಾಗಿ ಸಿಗರೇಟ್‌ ದಂ ಹೊಡೆದ ಯುವತಿ; ಮನೇಲಿ ಹಿಗ್ಗಾಮುಗ್ಗಾ ಹೊಡೆದ ಅಪ್ಪ!

Viral Video

ರೀಲ್ಸ್ (reels) ಹುಚ್ಚು ನಮ್ಮಿಂದ ಯಾವ ಕೆಲಸವನ್ನು ಬೇಕಾದರೂ ಮಾಡಿಸುತ್ತದೆ ಎನ್ನುವುದಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದಾಹರಣೆಗಳು ಲಭ್ಯವಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದ (west bengal) ಯುವತಿಯೊಬ್ಬಳು ರೀಲ್ಸ್ ಮಾಡಿ ತಂದೆಯ ಕೈಯಿಂದ ಸರಿಯಾಗಿ ಹೊಡೆತ ತಿಂದಿರುವ ಘಟನೆ ನಡೆದಿದೆ. ಇದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral Video) ಆಗಿದೆ.

ರೀಲ್ಸ್ ಗಾಗಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಿರುವ ವಿಡಿಯೋ ಮಾಡಿ ತಂದೆಯಿಂದ ಸರಿಯಾಗಿ ಏಟು ಕೂಡ ತಿಂದಿದ್ದಾಳೆ. ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಶೋನಿ ಕಪೂರ್ ಹಂಚಿಕೊಂಡ ವೈರಲ್ ವಿಡಿಯೋದಲ್ಲಿ ಅಪ್ರಾಪ್ತ ಯುವತಿಯೊಬ್ಬಳು ರೀಲ್ಸ್ ಗಾಗಿ ಬೀದಿಯಲ್ಲಿ ಧೂಮಪಾನ ಮಾಡುತ್ತಿರುವ ವಿಡಿಯೋ ಮಾಡಿದ್ದಾಳೆ. ಬಳಿಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಇದು ಮನೆಯವರಿಗೆ ತಿಳಿದು ತಂದೆಯಿಂದ ಸಾಕಷ್ಟು ಏಟು ಕೂಡ ತಿಂದಳು.

ವೈರಲ್ ಆಗಿರುವ ವಿಡಿಯೋದ ಇನ್ನೊಂದು ಭಾಗದಲ್ಲಿ ಬೀದಿಯಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಅವಳ ತಂದೆ ಹೇಗೆ ಅವಳಿಗೆ ಬೆಲ್ಟ್‌ನಿಂದ ಹೊಡೆಯುತ್ತಿದ್ದಾರೆ ಎಂಬುದನ್ನು ನೋಡಬಹುದು. ಈ ಸಂಪೂರ್ಣ ಘಟನೆಯು ಯುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಒಂದು ಎಚ್ಚರಿಕೆಯ ಕಥೆಯಾಗಿದೆ. ರೀಲ್ಸ್ ಗಾಗಿ ನಾವು ಮಾಡುವ ಸ್ಟಂಟ್ ಗಳು ಮನೆಯವರಿಗೆ ಕೆಟ್ಟ ಹೆಸರು ತರಬಹುದು ಅಥವಾ ಅವರಿಗೆ ಮುಜುಗರ ಉಂಟು ಮಾಡಬಹುದು ಎನ್ನುವ ಯೋಚನೆ ನಮ್ಮಲ್ಲಿ ಇರಬೇಕು. ಆನ್ ಲೈನ್ ನಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ತೋರಿಸುವುದು ಕೂಡ ಬಹು ಮುಖ್ಯವಾಗಿದೆ. ಮಕ್ಕಳು ಈ ಬಗ್ಗೆ ಪೋಷಕರೊಂದಿಗೆ ಮುಕ್ತವಾಗಿ ಮಾತನಾಡಬೇಕು ಎನ್ನುವುದನ್ನು ಈ ವಿಡಿಯೋದಲ್ಲಿ ಹೇಳಲಾಗಿದೆ.

ಈ ವಿಡಿಯೋ ಗೆ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬರು ನನ್ನ ತಂದೆ ಖಂಡಿತಾ ನನ್ನ ತಲೆ ಬೋಳಿಸುತ್ತಿದ್ದರು ಎಂದು ಹೇಳಿದ್ದರೆ, ಇನ್ನೊಬ್ಬರು ಅವಳ ತಂದೆ ಜೈಲಿಗೆ ಹೋಗುವುದು ಖಚಿತ. ಅವರು ಅದನ್ನು ಚಿತ್ರೀಕರಿಸಬಾರದು ಎಂದು ತಿಳಿಸಿದ್ದಾರೆ.


ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚಿನ ದಿನಗಳಲ್ಲಿ ತಮ್ಮ ಅನುಯಾಯಿಗಳನ್ನು ಹೆಚ್ಚಿಸಲು, ಹೆಚ್ಚು ಲೈಕ್ ಗಳನ್ನು ಪಡೆಯಲು ಮಾಡುವ ಕೆಲವೊಂದು ರೀಲ್ಸ್ ಗಳು ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ಹೀಗಾಗಿ ಈ ವೈರಲ್ ವೀಡಿಯೊ ಆನ್‌ಲೈನ್ ಜವಾಬ್ದಾರಿಯ ಪ್ರಾಮುಖ್ಯತೆ ಮತ್ತು ಸಾಮಾಜಿಕ ಮಾಧ್ಯಮದ ಸಂಭಾವ್ಯ ಅಪಾಯಗಳನ್ನು ಎತ್ತಿ ತೋರಿಸುತ್ತದೆ. ಇದರಿಂದ ಪ್ರತಿಯೊಬ್ಬರೂ ಕಲಿಯಬೇಕಾದ ಕೆಲವು ಸಂಗತಿಗಳಿವೆ.

ಇದನ್ನೂ ಓದಿ: Viral Video: ಮೊಬೈಲ್ ಕದ್ದ ಕಳ್ಳನಿಗೆ ದೇವರು ಕೊಟ್ಟ ಶಿಕ್ಷೆ ಮಾತ್ರ ಘೋರ! ವಿಡಿಯೊ ನೋಡಿ

ಆನ್ ಲೈನ್ ನಲ್ಲಿ ಏನಾದರೂ ಪೋಸ್ಟ್ ಮಾಡುವ ಮೊದಲು ಯೋಚಿಸಿ. ಒಮ್ಮೆ ಏನನ್ನಾದರೂ ಆನ್‌ಲೈನ್‌ನಲ್ಲಿ ಹಂಚಿಕೊಂಡರೆ ಬಳಿಕ ಅದನ್ನು ಸಂಪೂರ್ಣವಾಗಿ ಅಳಿಸಲು ಕಷ್ಟವಾಗಬಹುದು ಅಥವಾ ಅಸಾಧ್ಯವಾಗಬಹುದು. ಅನುಯಾಯಿಗಳ ಬಗ್ಗೆ ಗಮನವಿರಲಿ. ನಿಮಗೆ ಹಾಸ್ಯವಾಗಿ ಕಾಣುವ ಕೆಲವು ಸಂಗತಿಗಳು ಕೆಲವರಿಗೆ ಗ್ರಹಿಸಲು ಕಷ್ಟವಾಗಬಹುದು. ಇದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.

ಅದೇ ರೀತಿ ಮುಕ್ತ ಸಂವಹನವು ಮುಖ್ಯ. ಆನ್‌ಲೈನ್ ಸುರಕ್ಷತೆ ಮತ್ತು ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಬಳಕೆಯ ಕುರಿತು ಪೋಷಕರು ತಮ್ಮ ಮಕ್ಕಳೊಂದಿಗೆ ಮುಕ್ತ ಸಂಭಾಷಣೆಗಳನ್ನು ನಡೆಸುವುದು ಕೂಡ ಬಹು ಮುಖ್ಯವಾಗಿದೆ.

Exit mobile version