ಇಂದೋರ್: ಸರ್ಕಾರ ಏರ್ಪಡಿಸಿದ ಸಾಮೂಹಿಕ ವಿವಾಹ (mass wedding) ಕಾರ್ಯಕ್ರಮದಲ್ಲಿ ಏನು ಗಿಫ್ಟ್ ಕೊಡಬಹುದು? ನೀವು ಊಹಿಸಲಾರಿರಿ. ಅಲ್ಲಿನ ಸಮಾಜ ಕಲ್ಯಾಣ ಇಲಾಖೆ ಹೊಸ ಮದುಮಕ್ಕಳಿಗೆ ಕಾಂಡೋಮ್ (condom), ಬರ್ತ್ ಕಂಟ್ರೋಲ್ ಗುಳಿಗೆ ನೀಡಿ ವಧುವವರು ನಾಚಿಕೊಳ್ಳುವಂತೆ ಮಾಡಿದೆ. ಆದರೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದು ನಡೆದಿರುವುದು ಜಾರ್ಖಂಡ್‌ನ ಬುಡಕಟ್ಟು ಸಮುದಾಯದವರೇ ಹೆಚ್ಚಾಗಿರುವ ಝಬುವಾ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ. ಇದನ್ನು ಜಿಲ್ಲಾಡಳಿತ ʼಕುಟುಂಬ ಕಲ್ಯಾಣ ಜಾಗೃತಿʼʼ ಎಂದು ಹೇಳಿಕೊಂಡಿದೆ. ಆದರೆ ವಿಪಕ್ಷಗಳ ಕೈಗೆ ಇದು ಟೀಕೆಗೆ ಆಯುಧವಾಗಿ ಸಿಕ್ಕಿದೆ. ʼʼವಧುವರರನ್ನು ಮುಜುಗರಕ್ಕೊಳಪಡಿಸಲಾಗುತ್ತಿದೆʼʼ ಎಂದು ಅವು ಟೀಕಿಸಿವೆ.
ಝಬುವಾ ಜಿಲ್ಲಾಡಳಿತ ʼಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನಾʼ ಅಡಿ 292 ಜೋಡಿಯ ಸಾಮೂಹಿಕ ಮದುವೆ ಏರ್ಪಡಿಸಿತ್ತು. ಅಲ್ಲಿ ನೀಡಲಾದ ಮೇಕಪ್ ಬಾಕ್ಸ್‌ಗಳಲ್ಲಿ ಇವುಗಳನ್ನು ಕೊಡಲಾಗಿತ್ತು. ಮದುವೆಯಾದ ಜೋಡಿಗಳು ಈ ಮೇಕಪ್ ಕಿಟ್ ತೆರೆದು ನೋಡಿ ಮುಜುಗರಕ್ಕೀಡಾದರು. ʼʼಇವು ಕುಟುಂಬ ಕಲ್ಯಾಣ ಜಾಗೃತಿಗಾಗಿ ಆರೋಗ್ಯ ಇಲಾಖೆಯಿಂದ ಸರಬರಾಜು ಆದಂಥವುʼʼ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಯಾರೂ ದೂರು ನೀಡಿಲ್ಲ.
ಇದನ್ನೂ ಓದಿ: Samantha Ruth Prabhu; ಹೊಸ ಫೋಟೊಶೂಟ್‌ನಲ್ಲಿ ಹಾಟ್ ಆಗಿ ಕಂಡ ಸಮಂತಾ; ಅವರ ಕನಸು ಏನಂತೆ?