ಹೊಸದಿಲ್ಲಿ: ಇತ್ತೀಚೆಗೆ ʼಪ್ಯೂರ್ ವೆಜ್ ಫುಡ್ ಫ್ಲೀಟ್ʼ (Pure ve food fleet) ಆರಂಭಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಆಹಾರ ಡೆಲಿವರಿ ಸಂಸ್ಥೆ ಜೊಮ್ಯಾಟೊ ಸಂಸ್ಥಾಪಕ (Zomato CEO) ದೀಪಿಂದರ್ ಗೋಯಲ್ (Deepinder Goyal) ಅವರು ಮೆಕ್ಸಿಕನ್ ಉದ್ಯಮಿ, ಮಾಡೆಲ್ ಒಬ್ಬಾಕೆಯನ್ನು ಮದುವೆಯಾಗಿದ್ದಾರೆ.
ಈಕೆಯ ಹೆಸರು ಗ್ರೀಸಿಯಾ ಮುನೋಜ್. ಇಬ್ಬರೂ ಒಂದೆರಡು ತಿಂಗಳ ಹಿಂದೆಯೇ ಎಂಗೇಜ್ ಆಗಿದ್ದಾರೆ ಎಂಬ ವರದಿಗಳು ಓಡಾಡುತ್ತಿವೆ. ನವವಿವಾಹಿತರು ಫೆಬ್ರವರಿಯಲ್ಲಿ ಹನಿಮೂನ್ ನಡೆಸಿಕೊಂಡಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ಗೋಯಲ್ ಅವರು ಮೆಕ್ಸಿಕನ್ ಮಾಡೆಲ್ ಕಂ ಉದ್ಯಮಿಯೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿಂದೀಚೆಗೆ ಈಕೆ ಯಾರು ಎಂಬ ಕುತೂಹಲ ಸೋಶಿಯಲ್ ಮೀಡಿಯಾದಲ್ಲಿ ಮೂಡಿದೆ.
ಗ್ರೀಸಿಯಾ ಮುನೋಜ್ ಯಾರು?
ಮೆಕ್ಸಿಕೋದಿಂದ ಬಂದಿರುವ ಗ್ರೀಸಿಯಾ ಮುನೋಜ್, ಆರಂಭದಲ್ಲಿ ತಮ್ಮ ಐಷಾರಾಮಿ ಗ್ರಾಹಕ ಉತ್ಪನ್ನಗಳನ್ನು ಲಾಂಚ್ ಮಾಡಿದರು. ತಾವೇ ಮಾಡೆಲ್ ಆಗಿ ಅವುಗಳನ್ನು ಮುನ್ನಡೆಸಿದರು. ಆಕೆಯ ಫ್ಯಾಶನ್ ಪ್ರಭಾವದಿಂದಾಗಿ 2022ರಲ್ಲಿ ಅಮೆರಿಕದಲ್ಲಿ ಮೆಟ್ರೋಪಾಲಿಟನ್ ಫ್ಯಾಶನ್ ವೀಕ್ ಪ್ರಶಸ್ತಿ ಪಡೆದರು. ತನ್ನ ಮಾಡೆಲಿಂಗ್ ಯಶಸ್ಸಿನ ಜೊತೆಗೆ ಗ್ರೀಸಿಯಾ ತನ್ನ Instagram ಬಯೋದಲ್ಲಿ ಉಲ್ಲೇಖಿಸಿರುವಂತೆ ಟಿವಿ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವಲ್ಲಿಯೂ ತೊಡಗಿದ್ದಾರೆ.
ಗೋಯಲ್ ಅವರೊಂದಿಗಿನ ವಿವಾಹದ ನಂತರ ಗ್ರೀಸಿಯಾ ಭಾರತಕ್ಕೆ ಬಂದಿದ್ದಾರೆ. ಆಕೆಯ ಇನ್‌ಸ್ಟಾಗ್ರಾಮ್ ಫೀಡ್‌ಗಳು ದೆಹಲಿಯ ಸ್ಮಾರಕಗಳಾದ ಕೆಂಪು ಕೋಟೆ, ಕುತುಬ್ ಮಿನಾರ್‌ಗಳಿಂದ ತುಂಬಿವೆ. ಜೊತೆಗೆ ʼಹೊಸ ಮನೆʼಯ ಒಂದು ನೋಟವನ್ನೂ ನೀಡಿದ್ದಾರೆ.
ತಮ್ಮ ವೃತ್ತಿಪರ ಕೆಲಸಗಳನ್ನು ಮೀರಿ ಗ್ರೀಸಿಯಾ ಸಕ್ರಿಯವಾಗಿ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ವಿವಿಧ ದತ್ತಿಗಳನ್ನು ಬೆಂಬಲಿಸಿದ್ದಾರೆ. ಗ್ರೀಸಿಯಾ ಮತ್ತು ಗೋಯಲ್ ಇಬ್ಬರೂ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ದೀಪಿಂದರ್ ಗೋಯಲ್ ಮದುವೆ
ಗ್ರೀಸಿಯಾ ಮುನೋಜ್, ಗೋಯಲ್ ಅವರ ಎರಡನೇ ಪತ್ನಿ. ಈ ಮೊದಲು ಗೋಯಲ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿಯಲ್ಲಿ ಭೇಟಿಯಾದ ಕಾಂಚನ್ ಜೋಶಿ ಅವರನ್ನು ಮದುವೆಯಾಗಿದ್ದರು.
ಫೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ ಜೊಮ್ಯಾಮಾಟೊ ಸಿಇಒ ಅವರು ಕಾಂಚನ್ ಜೋಶಿ ಅವರೊಂದಿಗಿನ ಒಡನಾಟದ ಘಟನೆಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ದೆಹಲಿ ಐಟಿ-ದೆಹಲಿಯಲ್ಲಿ ಗಣಿತ ಮತ್ತು ಕಂಪ್ಯೂಟಿಂಗ್ ವಿಭಾಗದ ಭಾಗವಾಗಿದ್ದರು. ಅಲ್ಲಿ ಗೋಯಲ್ ಮೆಚ್ಚಿಕೊಂಡಿದ್ದರು. ನಂತರ ಇಬ್ಬರೂ ಸ್ನೇಹಿತರಾಗಿ ಮತ್ತು ಒಟ್ಟಿಗೇ ಸುತ್ತಾಡಿದರು.
ಈಗ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಗಣಿತ ಪ್ರಾಧ್ಯಾಪಕಿಯಾಗಿರುವ ಜೋಶಿ ಅವರು ಗೋಯಲ್‌ನಿಂದ ಡೈವೋರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇಬ್ಬರಿಗೂ ಸಿಯಾರಾ ಎಂಬ ಮಗಳು ಇದ್ದಾಳೆ.
ಇದನ್ನೂ ಓದಿ: Zomato Pure Veg: ʼಜೊಮ್ಯಾಟೋ ಪ್ಯೂರ್ ವೆಜ್ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!