Zomato: ಮೆಕ್ಸಿಕೋದ ಹಾಟ್‌ ಮಾಡೆಲ್‌ ಜೊತೆಗೆ ಜೊಮ್ಯಾಟೋ ಸಿಇಒ ವಿವಾಹ; ಯಾರೀಕೆ? - Vistara News

ವೈರಲ್ ನ್ಯೂಸ್

Zomato: ಮೆಕ್ಸಿಕೋದ ಹಾಟ್‌ ಮಾಡೆಲ್‌ ಜೊತೆಗೆ ಜೊಮ್ಯಾಟೋ ಸಿಇಒ ವಿವಾಹ; ಯಾರೀಕೆ?

Zomato CEO: ಗೋಯಲ್ ಅವರು ಮೆಕ್ಸಿಕನ್ ಮಾಡೆಲ್ ಕಂ ಉದ್ಯಮಿಯೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿಂದೀಚೆಗೆ ಈಕೆ ಯಾರು ಎಂಬ ಕುತೂಹಲ ಸೋಶಿಯಲ್‌ ಮೀಡಿಯಾದಲ್ಲಿ ಮೂಡಿದೆ.

VISTARANEWS.COM


on

zomato ceo grecia munoz
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಇತ್ತೀಚೆಗೆ ʼಪ್ಯೂರ್‌ ವೆಜ್‌ ಫುಡ್‌ ಫ್ಲೀಟ್‌ʼ (Pure ve food fleet) ಆರಂಭಿಸುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ್ದ ಆಹಾರ ಡೆಲಿವರಿ ಸಂಸ್ಥೆ ಜೊಮ್ಯಾಟೊ ಸಂಸ್ಥಾಪಕ (Zomato CEO) ದೀಪಿಂದರ್ ಗೋಯಲ್ (Deepinder Goyal) ಅವರು ಮೆಕ್ಸಿಕನ್ ಉದ್ಯಮಿ, ಮಾಡೆಲ್‌ ಒಬ್ಬಾಕೆಯನ್ನು ಮದುವೆಯಾಗಿದ್ದಾರೆ.

ಈಕೆಯ ಹೆಸರು ಗ್ರೀಸಿಯಾ ಮುನೋಜ್. ಇಬ್ಬರೂ ಒಂದೆರಡು ತಿಂಗಳ ಹಿಂದೆಯೇ ಎಂಗೇಜ್‌ ಆಗಿದ್ದಾರೆ ಎಂಬ ವರದಿಗಳು ಓಡಾಡುತ್ತಿವೆ. ನವವಿವಾಹಿತರು ಫೆಬ್ರವರಿಯಲ್ಲಿ ಹನಿಮೂನ್‌ ನಡೆಸಿಕೊಂಡಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ಗೋಯಲ್ ಅವರು ಮೆಕ್ಸಿಕನ್ ಮಾಡೆಲ್ ಕಂ ಉದ್ಯಮಿಯೊಂದಿಗೆ ಇರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲಿಂದೀಚೆಗೆ ಈಕೆ ಯಾರು ಎಂಬ ಕುತೂಹಲ ಸೋಶಿಯಲ್‌ ಮೀಡಿಯಾದಲ್ಲಿ ಮೂಡಿದೆ.

ಗ್ರೀಸಿಯಾ ಮುನೋಜ್ ಯಾರು?

ಮೆಕ್ಸಿಕೋದಿಂದ ಬಂದಿರುವ ಗ್ರೀಸಿಯಾ ಮುನೋಜ್, ಆರಂಭದಲ್ಲಿ ತಮ್ಮ ಐಷಾರಾಮಿ ಗ್ರಾಹಕ ಉತ್ಪನ್ನಗಳನ್ನು ಲಾಂಚ್‌ ಮಾಡಿದರು. ತಾವೇ ಮಾಡೆಲ್ ಆಗಿ ಅವುಗಳನ್ನು ಮುನ್ನಡೆಸಿದರು. ಆಕೆಯ ಫ್ಯಾಶನ್ ಪ್ರಭಾವದಿಂದಾಗಿ 2022ರಲ್ಲಿ ಅಮೆರಿಕದಲ್ಲಿ ಮೆಟ್ರೋಪಾಲಿಟನ್ ಫ್ಯಾಶನ್ ವೀಕ್ ಪ್ರಶಸ್ತಿ ಪಡೆದರು. ತನ್ನ ಮಾಡೆಲಿಂಗ್ ಯಶಸ್ಸಿನ ಜೊತೆಗೆ ಗ್ರೀಸಿಯಾ ತನ್ನ Instagram ಬಯೋದಲ್ಲಿ ಉಲ್ಲೇಖಿಸಿರುವಂತೆ ಟಿವಿ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡುವಲ್ಲಿಯೂ ತೊಡಗಿದ್ದಾರೆ.

ಗೋಯಲ್ ಅವರೊಂದಿಗಿನ ವಿವಾಹದ ನಂತರ ಗ್ರೀಸಿಯಾ ಭಾರತಕ್ಕೆ ಬಂದಿದ್ದಾರೆ. ಆಕೆಯ ಇನ್‌ಸ್ಟಾಗ್ರಾಮ್ ಫೀಡ್‌ಗಳು ದೆಹಲಿಯ ಸ್ಮಾರಕಗಳಾದ ಕೆಂಪು ಕೋಟೆ, ಕುತುಬ್ ಮಿನಾರ್‌ಗಳಿಂದ ತುಂಬಿವೆ. ಜೊತೆಗೆ ʼಹೊಸ ಮನೆʼಯ ಒಂದು ನೋಟವನ್ನೂ ನೀಡಿದ್ದಾರೆ.

ತಮ್ಮ ವೃತ್ತಿಪರ ಕೆಲಸಗಳನ್ನು ಮೀರಿ ಗ್ರೀಸಿಯಾ ಸಕ್ರಿಯವಾಗಿ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ವಿವಿಧ ದತ್ತಿಗಳನ್ನು ಬೆಂಬಲಿಸಿದ್ದಾರೆ. ಗ್ರೀಸಿಯಾ ಮತ್ತು ಗೋಯಲ್ ಇಬ್ಬರೂ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ದೀಪಿಂದರ್ ಗೋಯಲ್ ಮದುವೆ

ಗ್ರೀಸಿಯಾ ಮುನೋಜ್‌, ಗೋಯಲ್‌ ಅವರ ಎರಡನೇ ಪತ್ನಿ. ಈ ಮೊದಲು ಗೋಯಲ್‌, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿಯಲ್ಲಿ ಭೇಟಿಯಾದ ಕಾಂಚನ್ ಜೋಶಿ ಅವರನ್ನು ಮದುವೆಯಾಗಿದ್ದರು.

ಫೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ ಜೊಮ್ಯಾಮಾಟೊ ಸಿಇಒ ಅವರು ಕಾಂಚನ್ ಜೋಶಿ ಅವರೊಂದಿಗಿನ ಒಡನಾಟದ ಘಟನೆಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ದೆಹಲಿ ಐಟಿ-ದೆಹಲಿಯಲ್ಲಿ ಗಣಿತ ಮತ್ತು ಕಂಪ್ಯೂಟಿಂಗ್ ವಿಭಾಗದ ಭಾಗವಾಗಿದ್ದರು. ಅಲ್ಲಿ ಗೋಯಲ್ ಮೆಚ್ಚಿಕೊಂಡಿದ್ದರು. ನಂತರ ಇಬ್ಬರೂ ಸ್ನೇಹಿತರಾಗಿ ಮತ್ತು ಒಟ್ಟಿಗೇ ಸುತ್ತಾಡಿದರು.

ಈಗ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಗಣಿತ ಪ್ರಾಧ್ಯಾಪಕಿಯಾಗಿರುವ ಜೋಶಿ ಅವರು ಗೋಯಲ್‌ನಿಂದ ಡೈವೋರ್ಸ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇಬ್ಬರಿಗೂ ಸಿಯಾರಾ ಎಂಬ ಮಗಳು ಇದ್ದಾಳೆ.

ಇದನ್ನೂ ಓದಿ: Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Road Accident: ಅಮೆರಿಕದಲ್ಲಿ ಭೀಕರ ಅಪಘಾತ, 20 ಅಡಿ ಎತ್ತರ ಜಿಗಿದ ಕಾರು; 3 ಭಾರತೀಯ ಮಹಿಳೆಯರ ಸಾವು

Road Accident: ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

VISTARANEWS.COM


on

car accident USA
Koo

ನ್ಯೂಯಾರ್ಕ್‌: ಅಮೇರಿಕಾದಲ್ಲಿ (US) ನಡೆದ ಭೀಕರ ಕಾರು ಅಪಘಾತ ಒಂದರಲ್ಲಿ (Road Accident) ಗುಜರಾತ್‌ನ ಮೂವರು ಮಹಿಳೆಯರು (Women killed) ಸಾವನ್ನಪ್ಪಿದ್ದಾರೆ. ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಅವರು ದಕ್ಷಿಣ ಕೆರೊಲಿನಾದ ಗ್ರೀನ್‌ವಿಲ್ಲೆ ಕೌಂಟಿಯಲ್ಲಿ ನಡೆದ ಅಪಘಾತದಲ್ಲಿ (Car accident) ಮೃತಪಟ್ಟವರು.

ಕೌಂಟಿಯ ಹೆದ್ದಾರಿಯ ಸೇತುವೆಯೊಂದರ ಮೇಲೆ ಅವರು ವೇಗವಾಗಿ ಎಸ್‌ಯುವಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಗ್ರೀನ್‌ವಿಲ್ಲೆ ಕೌಂಟಿ ಕರೋನರ್ ಆಫೀಸ್‌ನ ಪ್ರಕಾರ, ಹೆದ್ದಾರಿಯಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ SUV, ಎಲ್ಲಾ ಲೇನ್‌ಗಳನ್ನು ದಾಟಿ, ಒಡ್ಡುಗಳನ್ನು ಏರಿತು ಮತ್ತು ಗಾಳಿಯಲ್ಲಿ ಕನಿಷ್ಠ 20 ಅಡಿಗಳಷ್ಟು ಮೇಲೆ ಹಾರಿ ಸೇತುವೆಯ ಎದುರು ಭಾಗದಲ್ಲಿರುವ ಮರಗಳಿಗೆ ಅಪ್ಪಳಿಸಿತು.

“ಅವರು ನಿಗದಿಪಡಿಸಲಾದ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ” ಎಂದು ಮುಖ್ಯ ಉಪ ಕರೋನರ್ ಮೈಕ್ ಎಲ್ಲಿಸ್ ತಿಳಿಸಿದರು. ಬೇರೆ ಯಾವುದೇ ಕಾರುಗಳು ಅಪಘಾತದಲ್ಲಿ ಭಾಗಿಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೂರುಗಳು ಚೆಲ್ಲಿದ್ದು, ಡಿಕ್ಕಿ ಹೊಡೆದ ವೇಗಕ್ಕೆ ಸಾಕ್ಷಿಯಾಗಿದೆ.

“ರಸ್ತೆಮಾರ್ಗವನ್ನು ಅತಿ ವೇಗದಲ್ಲಿ ಬಿಟ್ಟು ಜಿಗಿಯುವ ವಾಹನಗಳು ವಿರಳ. ಇದು 4-6 ಲೇನ್ ಟ್ರಾಫಿಕ್ ಅನ್ನು ದಾಟಿದೆ ಮತ್ತು ಸುಮಾರು 20 ಅಡಿ ಎತ್ತರದ ಮರಗಳ ಮೇಲೆ ಕೂತಿದೆ. ವಾಹನವು ಹಲವು ಲೇನ್ ಟ್ರಾಫಿಕ್ ಅನ್ನು ಹಾರಿದಾಗ, ಅದು ಬಹುಶಃ ನೆಲದಿಂದ ಕನಿಷ್ಠ 20 ಅಡಿಗಳಷ್ಟು ಎತ್ತರದಲ್ಲಿ ಮರಗಳಿಗೆ ಡಿಕ್ಕಿ ಹೊಡೆದಿದೆ” ಎಂದು ಎಲ್ಲಿಸ್‌ ತಿಳಿಸಿದರು.

ದಕ್ಷಿಣ ಕೆರೊಲಿನಾ ಹೈವೇ ಪೆಟ್ರೋಲ್, ಗ್ಯಾಂಟ್ ಫೈರ್ ಮತ್ತು ಪಾರುಗಾಣಿಕಾ ತಂಡಗಳು ಮತ್ತು ಗ್ರೀನ್‌ವಿಲ್ಲೆ ಕೌಂಟಿ ಇಎಂಎಸ್ ಘಟಕಗಳು ಸೇರಿದಂತೆ ತುರ್ತು ಪ್ರತಿಕ್ರಿಯೆ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಅನಿಶ್ಚಿತವಾಗಿದೆ. ವಾಹನದ ಪತ್ತೆ ವ್ಯವಸ್ಥೆಯು ಅಪಘಾತದ ಬಗ್ಗೆ ಕೆಲವು ಕುಟುಂಬ ಸದಸ್ಯರಿಗೆ ಅಲಾರ್ಮ್‌ ನೀಡಿತು. ನಂತರ ಅವರು ದಕ್ಷಿಣ ಕೆರೊಲಿನಾದ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

Continue Reading

ವೈರಲ್ ನ್ಯೂಸ್

Viral Video: ಅರೇ..! ಇವ್ರು ನಮ್ಮ ಪ್ರಧಾನಿ ಮೋದಿ ಅಲ್ಲ; ಪಾನಿಪುರಿ ಮಾರೋ ಈ ಮೋದಿ ಫುಲ್‌ ಫೇಮಸ್‌

Viral Video ಗುಜರಾತ್‌ನಲ್ಲೊಬ್ಬ ಮೋದಿ ಪಾನಿಪುರಿ ಮಾರುತ್ತಾ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಒಂದು ಕ್ಷಣ ನೋಡೋರಿಗೆ ಪ್ರಧಾನಿ ಮೋದಿಯೇ ಪಾನಿಪುರಿ ಮಾರುತ್ತಿದ್ದಾರೋ ಅಂತ ಅನಿಸೋದು ಪಕ್ಕಾ!

VISTARANEWS.COM


on

By

Koo

ಗುಜರಾತ್‌: ದೇಶಾದ್ಯಂತ ಲೋಕಸಭೆ ಚುನಾವಣೆ ರಂಗೇರಿದೆ. ಅಬ್ಬರದ ಪ್ರಚಾರ, ಪ್ರತಿಪಕ್ಷಗಳಿಗೆ ಟಾಂಗ್‌ ಕೊಡುತ್ತಾ ಒಂದೆಡೆ ಪ್ರಧಾನಿ ಮೋದಿ ಬ್ಯುಸಿ ಆಗಿದ್ದರೆ, ಮತ್ತೊಂದೆಡೆ ಗುಜರಾತ್‌ನಲ್ಲೊಬ್ಬ ಮೋದಿ ಪಾನಿಪುರಿ(Viral video) ಮಾರುತ್ತಾ ಎಲ್ಲರನ್ನು ತನ್ನತ್ತ ಸೆಳೆಯುತ್ತಿದ್ದಾನೆ. ಒಂದು ಕ್ಷಣ ನೋಡೋರಿಗೆ ಪ್ರಧಾನಿ ಮೋದಿಯೇ ಪಾನಿಪುರಿ ಮಾರುತ್ತಿದ್ದಾರೋ ಅಂತ ಅನಿಸೋದು ಪಕ್ಕಾ! ಗುಜರಾತ್‌ನ ಆನಂದ್‌ನಲ್ಲಿ ಪಾನಿಪುರಿ ಅಂಗಡಿ(Pani puri seller) ನಡೆಸುತ್ತಿರುವ ಅನಿಲ್‌ ಭಾಯಿ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿ(Narendra Modi) ಯಂತೆ ಉಡುಪು ತೊಟ್ಟು, ಕನ್ನಡಕ ಧರಿಸಿ, ಹೇರ್‌ಸ್ಟೈಲ್‌ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಮೋದಿ ಎಂದೇ ಫುಲ್‌ ಫೇಮಸ್‌ ಆಗಿದ್ದಾರೆ.

ಬಿಳಿ ಗಡ್ಡ, ಕೇಶ ವಿನ್ಯಾಸ ಆತನ ಹಾವಭಾವ ಪ್ರಧಾನಿ ಮೋದಿಗೆ ಹೋಲುತ್ತಿರುವ ಠಕ್ಕರ್‌, ಮೂಲತಃ ಜುನಾಗಢ್‌ ನಿವಾಸಿ. ಅವರು ತಮ್ಮ 18ನೇ ವಯಸ್ಸಿನಿಂದಲೂ ತುಳಸಿ ಪಾನಿ ಪುರಿ ಎಂಬ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಅಂಗಡಿಯನ್ನು ಅವರ ತಾತ ಶುರು ಮಾಡಿದ್ದರು ಎಂಬುದು ವಿಶೇಷ. ಇನ್ನು ಮೋದಿಯಂತೆ ಕಾಣುತ್ತಿರುವ ಠಕ್ಕರ್‌ ಅವರ ವಿಶೇಷ ಲುಕ್‌ಗೆ ಮನಸೋತಿರುವ ಗ್ರಾಹಕರು ಅವರ ಬಳಿ ಬಂದು ಪಾನಿಪುರಿ ತಿಂದು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.

ಸುಮಾರು 71 ವರ್ಷದ ಠಕ್ಕರ್‌ ಪ್ರಧಾನಿ ನರೇಂದ್ರ ಮೋದಿಯ ಅಪ್ಪಟ ಅಭಿಮಾನಿ. ಅವರ ಸ್ವಚ್ಛ ಭಾರತ ಅಭಿಯಾನದಿಂದ ಬಹಳಷ್ಟು ಸ್ಫೂರ್ತಿಗೊಂಡಿರುವ ಠಕ್ಕರ್‌ ತಮ್ಮ ಅಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ವಿಶೇಷ ಲುಕ್‌ ಬಗ್ಗೆ ಪ್ರತಿಕ್ರಿಯಿಸಿರುವ ಠಕ್ಕರ್‌, ನನ್ನ ಪ್ರಧಾನಿ ಮೋದಿಯ ಲುಕ್‌ ಬಗ್ಗೆ ಜನ ಅತ್ಯಂತ ಪ್ರೀತಿ ತೋರುತ್ತಿದ್ದಾರೆ. ಸ್ಥಳೀಯರು ಮತ್ತು ಪ್ರವಾಸಿಗರು ನನ್ನ ಬಳಿ ಬಂದು ಸೆಲ್ಫಿ ತೆಗೆದುಕೊಂಡು ಹೋಗುವುದು ಬಹಳ ಸಂತೋಷ ಕೊಡುತ್ತಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mamata Banerjee: ಹೆಲಿಕಾಪ್ಟರ್‌ ಏರುವಾಗ ಬಿದ್ದ ಮಮತಾ ಬ್ಯಾನರ್ಜಿ, ಗಾಯ

ಇನ್ನು ಠಕ್ಕರ್‌ ಮಾತ್ರವಲ್ಲ ಮುಂಬೈನಲ್ಲೂ ಮತ್ತೋರ್ವ ವ್ಯಕ್ತಿಯೂ ಪ್ರಧಾನಿ ಮೋದಿಯಂತೆ ತನ್ನ ಸ್ಟೈಲ್‌ ಅನ್ನು ಬದಲಿಸಿಕೊಂಡು ಫುಲ್‌ ಫೇಮಸ್‌ ಆಗಿದ್ದಾನೆ. ಮುಂಬೈನ ವಿಕಾಸ್‌ ಮಹಂತೆ ಎಂಬಾತ ಗರ್ಬಾ ಡಾನ್ಸ್‌ ಮಾಡುತ್ತಿರುವ ವಿಡಿಯೋ ಫೇಮಸ್‌ ಆಗಿತ್ತು. ಇದು ಪ್ರಧಾನಿ ಮೋದಿಯ ಡೀಪ್‌ ಫೇಕ್‌ ವಿಡಿಯೋ ಎನ್ನಲಾಗಿತ್ತು. ಆದಾದ ಬಳಿಕ ಸ್ವತಃ ವಿಕಾಸ್‌ ಮಹಾಂತೆ ವಿಡಿಯೋದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ತಾವೊಬ್ಬ ಪ್ರಧಾನಿ ಮೋದಿಯ ಅಭಿಯಾನಿ. ಆ ವಿಡಿಯೋ ಸ್ವತಃ ತನ್ನದೇ ಎಂದು ಹೇಳಿದ್ದರು. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಆಗಾಗ ಜೂನಿಯರ್‌ ಮೋದಿಗಳು ಗಮನ ಸೆಳೆಯುತ್ತಿರುತ್ತಾರೆ. ಆದರೆ ಇದೀಗ ಪಾನಿಪುರಿ ಮಾರುತ್ತಿರುವ ಮೋದಿಯನ್ನು ಕಂಡು ಜನಕ್ಕೆ ಖುಷಿಯೋ ಖುಷಿ.

Continue Reading

ದೇಶ

Self harming: ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ಆತ್ಮಹತ್ಯೆ

Self harming:ಮದುವೆ ಕಾರ್ಯಕ್ರಮದಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ಪತಿ ರೈಲ್ವೇ ಹಳಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಬಿಹಾರದಲ್ಲಿ ನಡೆಸಿದೆ.

VISTARANEWS.COM


on

By

Koo

ಬಿಹಾರ: ಬಾವನ ಮದುವೆಯಲ್ಲಿ ಪತ್ನಿ ಡಾನ್ಸ್‌ ಮಾಡಿದಳೆಂದು ಬೇಸರಗೊಂಡ ವ್ಯಕ್ತಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ (Self harming)ಗೆ ಶರಣಾಗಿರುವ ಘಟನೆ ಬಿಹಾರ(Bihar)ದ ಬದಾರಿಯಾದಲ್ಲಿ ನಡೆದಿದೆ. ಬಹುಲಾ ಗ್ರಾಮದ ನಿವಾಸಿ 35 ವರ್ಷದ ಗೋಪಾಲ್‌ ಸಿಂಗ್‌ ರಸೂಲ್‌ಪುರ ಪೊಲೀಸ್‌ ಠಾಣೆ(Rasulpur police Station) ವ್ಯಾಪ್ತಿಯಲ್ಲಿ ಬರುವ ಮಹೇಂದ್ರ ನಾಥ್‌ ಹಾಲ್ಟರ್‌ ರೈಲು ನಿಲ್ದಾಣ(Mahendra Nath Halter Railway station)ದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೋಪಾಲ್‌ ಸಿಂಗ್‌ ಬೇನತ್‌ ಗ್ರಾಮದಲ್ಲಿ ತನ್ನ ಪತ್ನಿಯ ಸಹೋದರನ ಮದುವೆ ಸಮಾರಂಭಕ್ಕೆ ತೆರಳಿದ್ದ. ಈ ವೇಳೆ ಸಂಭ್ರಮದಲ್ಲಿ ಡಾನ್ಸ್‌ ಮಾಡುತ್ತಿದ್ದ ಪತ್ನಿಯನ್ನು ನೋಡಿ ಅಸಮಾಧಾನಗೊಂಡಿದ್ದ ಗೋಪಾಲ್‌ ಆಕೆಯನ್ನು ತಡೆದಿದ್ದಾನೆ.

ಕುಟುಂಬಸ್ಥರ ಮಾಹಿತಿ ಪ್ರಕಾರ ಗೋಪಾಲ್‌ ಡಾನ್ಸ್‌ ಮಾಡುತ್ತಿದ್ದ ತನ್ನ ಪತ್ನಿಯನ್ನು ಸುಮ್ಮನಿರುವಂತೆ ಸೂಚಿಸಿದ್ದ. ಆದರೆ ಆಕೆ ಮಾತ್ರ ಆತನ ಮಾತಿಗೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಸಣ್ಣ ಜಗಳ ಆಗಿತ್ತು. ಅಷ್ಟೇ ಅಲ್ಲದೇ ಪತಿ ಪತ್ನಿಯರ ಜಗಳಕ್ಕೆ ಗೋಪಾಲ್‌ ಬಾವ ಕೂಡ ಎಂಟ್ರಿ ಕೊಟ್ಟಿದ್ದ. ಆಗ ಬಾವ-ಬಾಮೈದರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿತ್ತು. ಇದರಿಂದ ತೀರ ಬೇಸರಗೊಂಡಿದ್ದ ಗೋಪಾಲ್‌, ರೈಲು ಬರುತ್ತಿದ್ದ ಸಮಯ ನೋಡಿಕೊಂಡು ಹಳಿಗೆ ಹಾರಿಗೆ ಪ್ರಾಣ ಬಿಟ್ಟಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿ ಗೋಪಾಲ್‌ ಮೃತದೇಹವನ್ನು ರೈಲಿನಡಿಯಿಂದ ಹೊರ ತೆಗೆದು ಕುಟುಂಬಸ್ಥರಿಗೆ ಮಾಹಿತಿ ನೀಡಿದರು.

ಮೃತನ ಕುಟುಂಬಸ್ಥರು ಹೇಳೋದೇನು?

ಗೋಪಾಲ ಸಿಂಗ್‌ ಕುಟುಂಬಸ್ಥರು ಹೇಳುವ ಪ್ರಕಾರ ಆತನಿಗೆ ಮೊದಲಿನಿಂದಲೂ ಮಾನಸಿಕ ಸಮಸ್ಯೆ ಇತ್ತು. ಇದಕ್ಕೂ ಮುನ್ನ ದಿಲ್ಲಿ ಸಾರಿಗೆ ಮತ್ತು ಎಲ್‌ಐಸಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ, 10 ವರ್ಷದ ಮಗಳು ಹಾಗೂ ಅಣ್ಣನ ಜೊತೆ ಬದುಕುತ್ತಿದ್ದ ಎನ್ನಲಾಗಿದೆ. ಒಟ್ಟಿನಲ್ಲಿ ಕುಳಿತು ಬಗೆಹರಿಸಬಹುದಾಗಿದ್ದ ಸಮಸ್ಯೆ ಒಬ್ಬ ವ್ಯಕ್ತಿ ಸಾವಿಯಲ್ಲಿ ಅಂತ್ಯವಾಗಿರುವ ಬಗ್ಗೆ ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mobile Blast: ಬೈಕ್‌ ಚಲಾಯಿಸುತ್ತಿದ್ದಾಗ ಮೊಬೈಲ್‌ ಸ್ಫೋಟ, ಡಿವೈಡರ್‌ಗೆ ಗುದ್ದಿ ಮಹಿಳೆ ಸಾವು

ಕೆಲವು ದಿನಗಳ ಹಿಂದೆಯಷ್ಟೇ ಆಂಧ್ರಪ್ರದೇಶದ ಮೂವರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟಿದ್ದರು. ಬಳಿಕ ಅದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿತ್ತು. ಮೃತರನ್ನು ಆಂಧ್ರಪ್ರದೇಶದ ಚಿತ್ತೂರು ಮೂಲದಶಶಿಕುಮಾರ್ (23), ಲೋಕೇಶ್ (25) ಎಂದು ಗುರುತಿಸಲಾಗಿತ್ತು. ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ರೈಲ್ವೆ ಟ್ರ್ಯಾಕ್‌ ಇರುವ ಕಾರಣ ರಾತ್ರಿಯಲ್ಲಿ ಯುವಕರು ಮೊಬೈಲ್ ಹಾಗೂ ಹೆಡ್‌ಫೋನ್‌ ಹಾಕಿಕೊಂಡು ಟ್ರ್ಯಾಕ್ ಮೇಲೆ ಕುಳಿತುಕೊಳ್ಳುತ್ತಾರೆ. ಪೊಲೀಸರು ಬಂದಾಗ ಇಲ್ಲಿಂದ ತೆರಳುತ್ತಾರೆ, ನಂತರ ಮತ್ತೆ ವಾಪಸ್ ಬಂದು ಇಲ್ಲೇ ಕೂರುತ್ತಾರೆ. ಹೀಗಾಗಿ ಆಕಸ್ಮಿಕವಾಗಿ ರೈಲು ಅವರ ಮೇಲೆ ಹರಿದಿರಬಹುದು ಎಂದು ತಿಳಿಸಿದ್ದರು.

Continue Reading

ವಿದೇಶ

Miss Universe Buenos Aires: ಈಕೆ ಬ್ಯೂನಸ್‌ ಐರಿಸ್‌ ವಿಶ್ವ ಸುಂದರಿ; ಇವಳ ವಯಸ್ಸು ನೀವೇ ಊಹಿಸಿ!

Miss Universe Buenos Aires: ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಿಂದ ಬಂದ ರೋಡ್ರಿಗಸ್ ಕೇವಲ ಸೌಂದರ್ಯ ರಾಣಿಯಲ್ಲ. ಅವರು ಅನುಭವಿ ವಕೀಲರು ಮತ್ತು ಪತ್ರಕರ್ತರು. ಸಮಕಾಲೀನ ಸೌಂದರ್ಯದ ಬಹುಮುಖಿ ಸ್ವಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಗೆಲುವು ಸೌಂದರ್ಯದ ಹಾಗೂ ವಯಸ್ಸಿನ ವಯಸ್ಸಿನ ಸಾಂಪ್ರದಾಯಿಕ ಮಾನದಂಡಗಳನ್ನು ಮರು ವ್ಯಾಖ್ಯಾನಿಸುವಂತೆ ಮಾಡಿದೆ.

VISTARANEWS.COM


on

miss universe Buenos Aires
Koo

ಹೊಸದಿಲ್ಲಿ: ಅರ್ಜೆಂಟೀನಾದ (Argentina) ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ (Alejandra Marisa Rodriguez) ಅವರು `ಬ್ಯೂನಸ್ ಐರಿಸ್ ವಿಶ್ವ ಸುಂದರಿ’ (Miss Universe Buenos Aires) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಈ ಸೌಂದರ್ಯ ಸ್ಪರ್ಧೆ (Beauty Pageant) ಗೆಲ್ಲಲು ಅಗತ್ಯವಾದ ಯವ್ವನದ ಬಗೆಗಿನ ಸ್ಟಿರಿಯೋಟೈಪ್‌ಗಳನ್ನು ಮುರಿದಿದ್ದಾರೆ. ಅಂದ ಹಾಗೆ ಈಕೆಯ ವಯಸ್ಸು 60 ವರ್ಷ!

ಈ ಮೂಲಕ ಈ ಆಂಟಿ ಇತಿಹಾಸ ಬರೆದಿದ್ದಾರೆ. ಬುಧವಾರ ನಡೆದ ಸ್ಪರ್ಧೆಯಲ್ಲಿ ಈಕೆಯ ಗೆಲುವು ಘೋಷಿಸಲಾಯಿತು. ವಿಶ್ವ ಸುಂದರಿ ಸೌಂದರ್ಯ ಸ್ಪರ್ಧೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುತ್ತಿರುವುದರತ್ತವೂ ಇದು ಗಮನ ಸೆಳೆದಿದೆ.

ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಿಂದ ಬಂದ ರೋಡ್ರಿಗಸ್ ಕೇವಲ ಸೌಂದರ್ಯ ರಾಣಿಯಲ್ಲ. ಅವರು ಅನುಭವಿ ವಕೀಲರು ಮತ್ತು ಪತ್ರಕರ್ತರು. ಸಮಕಾಲೀನ ಸೌಂದರ್ಯದ ಬಹುಮುಖಿ ಸ್ವಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಗೆಲುವು ಸೌಂದರ್ಯದ ಹಾಗೂ ವಯಸ್ಸಿನ ವಯಸ್ಸಿನ ಸಾಂಪ್ರದಾಯಿಕ ಮಾನದಂಡಗಳನ್ನು ಮರು ವ್ಯಾಖ್ಯಾನಿಸುವಂತೆ ಮಾಡಿದೆ.

ಇಂತಹ ಪ್ರತಿಷ್ಠಿತ ಸೌಂದರ್ಯ ಪ್ರಶಸ್ತಿಯನ್ನು ಪಡೆದ ಈ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕೆಯ ಸೊಬಗು, ಚರಿಷ್ಮಾ ಮತ್ತು ಸಾಂಕ್ರಾಮಿಕ ನಗು ನ್ಯಾಯಾಧೀಶರು ಮತ್ತು ಪ್ರೇಕ್ಷಕರನ್ನು ಸಮಾನವಾಗಿ ಆಕರ್ಷಿಸಿತು.

ಮೇ 2024ರಂದು ನಡೆಯಲಿರುವ ʼಮಿಸ್ ಯೂನಿವರ್ಸ್ ಅರ್ಜೆಂಟೀನಾʼಗೆ ಮುಂಬರುವ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸಲು ಈಕೆ ತಯಾರಿ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ಆಕೆಯ ನಿರ್ಣಯವನ್ನು ಬಹಿರಂಗಪಡಿಸಿವೆ. ಅವರು ಅಲ್ಲಿ ವಿಜಯಶಾಲಿಯಾದರೆ, ʼಮಿಸ್ ಯೂನಿವರ್ಸ್ ವರ್ಲ್ಡ್‌ʼನ ಜಾಗತಿಕ ವೇದಿಕೆಯಲ್ಲಿ ರೋಡ್ರಿಗಸ್ ಅರ್ಜೆಂಟೀನಾದ ಧ್ವಜವನ್ನು ಹಾರಿಸಲಿದ್ದಾರೆ. ಸ್ಪರ್ಧೆಯನ್ನು ಸೆಪ್ಟೆಂಬರ್ 28, 2024ರಂದು ಮೆಕ್ಸಿಕೋದಲ್ಲಿ ನಿಗದಿಪಡಿಸಲಾಗಿದೆ.

“ಸೌಂದರ್ಯ ಸ್ಪರ್ಧೆಗಳಲ್ಲಿ ಈ ಹೊಸ ಮಾದರಿ ರೂಪಿಸುವುದರ ಮೂಲಕ ನಾನು ರೋಮಾಂಚನಗೊಂಡಿದ್ದೇನೆ. ನಾವು ಹೊಸ ಹಂತವನ್ನು ಉದ್ಘಾಟಿಸುತ್ತಿದ್ದೇವೆ. ಇದರಲ್ಲಿ ಮಹಿಳೆಯರು ಕೇವಲ ದೈಹಿಕ ಸೌಂದರ್ಯವಲ್ಲ. ಮೌಲ್ಯಗಳ ಮತ್ತೊಂದು ಮಾದರಿ” ಎಂದು ಅವರು ಗೆದ್ದ ನಂತರ ಮಾಧ್ಯಮಗಳಿಗೆ ಹೇಳಿದರು.

“ಮಿಸ್ ಯೂನಿವರ್ಸ್ ಸ್ಪರ್ಧೆಯು ಇನ್ನು ಮುಂದೆ ಸ್ಪರ್ಧಿಗಳಿಗೆ ವಯಸ್ಸಿನ ಮಿತಿಗಳನ್ನು ಹೊಂದಿರುವುದಿಲ್ಲ” ಎಂದು ಕಳೆದ ವರ್ಷ ಘೋಷಿಸಲಾಗಿತ್ತು. ಈ ವರ್ಷದಿಂದ 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಹಿಂದೆ, 18-28 ವರ್ಷ ವಯಸ್ಸಿನ ಮಹಿಳೆಯರು ಮಾತ್ರ ಸ್ಪರ್ಧೆಯನ್ನು ಪ್ರವೇಶಿಸಬಹುದಾಗಿತ್ತು. ಮಿಸ್ ಯೂನಿವರ್ಸ್ 2024ರಲ್ಲಿ ಡೊಮಿನಿಕನ್ ರಿಪಬ್ಲಿಕ್ ಅನ್ನು ಪ್ರತಿನಿಧಿಸುವ 47 ವರ್ಷದ ಹೈಡಿ ಕ್ರೂಜ್, ಈ ರೀತಿ ವಯಸ್ಸಿನ ಅಡೆತಡೆ ಮೀರಿದ ಇನ್ನೊಬ್ಬ ಸೌಂದರ್ಯ ಸ್ಪರ್ಧಿ.

ಇದನ್ನೂ ಓದಿ: Harnaaz Sandhu | ಮಿಸ್‌ ಯುನಿವರ್ಸ್‌ ವೇದಿಕೆ ಮೇಲೆ ಎಡವಿದ ಮಾಜಿ ಭುವನ ಸುಂದರಿ ಹರ್ನಾಜ್‌ ಸಂಧು, ವಿಡಿಯೊ ವೈರಲ್

Continue Reading
Advertisement
WhatsApp color
ತಂತ್ರಜ್ಞಾನ2 mins ago

WhatsApp colour: ವಾಟ್ಸ್ಆ್ಯಪ್​ನ ಬಣ್ಣ ಬದಲಾಗಿದ್ದು ಯಾಕೆ? ಏನಿದರ ಗುಟ್ಟು?

Traffic Restrictions
ಬೆಂಗಳೂರು18 mins ago

Traffic Restrictions: ಟಿಸಿಎಸ್‌ ವರ್ಲ್ಡ್ 10ಕೆ ಮ್ಯಾರಥಾನ್; ನಾಳೆ ಬೆಳಗ್ಗೆ ರಾಜಧಾನಿಯ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

karnataka weather Forecast
ಮಳೆ32 mins ago

karnataka Weather : ದೂರ ಸರಿದ ಮಳೆ; ಬೆಂಗಳೂರಲ್ಲಿ 39ರ ಗಡಿದಾಟಲಿದೆ ಗರಿಷ್ಠ ಉಷ್ಣಾಂಶ! 15 ಜಿಲ್ಲೆಗಳಿಗೆ ಅಲರ್ಟ್‌

Home Remedy For Cracked Heels
ಆರೋಗ್ಯ44 mins ago

Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

IPL 2024
ಕ್ರೀಡೆ52 mins ago

IPL 2024 : ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಸಿಎಸ್​ಕೆ?

Ujjwal Nikam
ದೇಶ53 mins ago

Ujjwal Nikam: ಪ್ರಮೋದ್‌ ಮಹಾಜನ್‌ ಪುತ್ರಿಗೆ ಕೊಕ್‌, ಮುಂಬೈ ದಾಳಿ ವಕೀಲನಿಗೆ ಬಿಜೆಪಿ ಟಿಕೆಟ್!

Money Guide
ಮನಿ-ಗೈಡ್60 mins ago

Money Guide: ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಜಮೆ ಯಾವಾಗ?

Murder case in Belgavi
ಬೆಳಗಾವಿ1 hour ago

Murder Case : ದೊಡ್ಡವರ ಹಣಕಾಸು ವಿಷ್ಯಕ್ಕೆ 3 ವರ್ಷದ ಮಗು ಬಲಿ; ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ

IPL 2024
ಪ್ರಮುಖ ಸುದ್ದಿ1 hour ago

IPL 2024 : ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಕೊಡುವುದೇ ಆರ್​ಸಿಬಿ?

Chamarajanagar
ಪ್ರಮುಖ ಸುದ್ದಿ2 hours ago

ಇವಿಎಂ ಧ್ವಂಸ; ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್‌ 29ರಂದು ಮರು ಮತದಾನ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20242 hours ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ7 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ14 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌