Site icon Vistara News

ಮಹಿಳೆಯ ಪಕ್ಕೆಲುಬು ಮುರಿಯಲು ಕಾರಣ ಸ್ಪೈಸಿ ಫುಡ್​; ಕೆಮ್ಮುತ್ತಿದ್ದಾಗಲೇ ಎದೆ ಭಾಗದಿಂದ ಕೇಳಿತ್ತು ಶಬ್ದ!

Woman fractured four ribs After Eat Spicy Food

ಬಿದ್ದಾಗ ಅಥವಾ ಇನ್ಯಾವುದೇ ರೀತಿಯ ಬಲವಾದ ಏಟುಗಳು ಬಿದ್ದಾಗ ಪಕ್ಕೆಲುಬು ಮುರಿತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದರೆ ಚೀನಾದಲ್ಲಿ ಒಬ್ಬರು ಮಹಿಳೆ ಕೆಮ್ಮಿ-ಕೆಮ್ಮಿ ಎದೆ ಭಾಗದ 4 ಪಕ್ಕೆಲುಬು ಮುರಿದುಕೊಂಡಿದ್ದಾರೆ. ಅಂದಹಾಗೇ, ಈ ಪರಿಯ ಕೆಮ್ಮಿಗೆ ಕಾರಣವಾಗಿದ್ದು ಸ್ಪೈಸಿ ತಿಂಡಿ (ಮಸಾಲೆಯುಕ್ತ ಘಾಟಿನ ಆಹಾರ).

ಚೀನಾದ ಹುವಾಂಗ್ (ಇದು ಸರ್​ನೇಮ್​) ಎಂಬ ಮಹಿಳೆಯೊಬ್ಬಳು ಅತಿಯಾದ ಮಸಾಲೆಯುಕ್ತ ತಿಂದಿದ್ದಳು. ಆ ಘಾಟಿಗೆ ಸಿಕ್ಕಾಪಟೆ ಕೆಮ್ಮು ಬಂದಿತ್ತು. ಆಕೆ ದೊಡ್ಡದಾಗಿ, ಗಟ್ಟಿಯಾಗಿ ಕೆಮ್ಮುವ ವೇಳೆ ಎದೆ ಭಾಗದಲ್ಲಿ ಏನೋ ಮುರಿದ ಶಬ್ದ ಕೇಳಿದೆ. ಆದರೆ ಶಬ್ದವನ್ನು ಹುವಾಂಗ್​ ಗಂಭೀರವಾಗಿ ಪರಿಗಣಿಸಿರಿಲಿಲ್ಲ. ಆದರೆ ಬರುಬರುತ್ತ ಆಕೆಗೆ ಮಾತನಾಡುವಾಗ, ಉಸಿರಾಡುವಾಗ ಎದೆನೋವು ಬರಲು ಪ್ರಾರಂಭವಾಯಿತು. ಹೀಗಾಗಿ ವೈದ್ಯರ ಬಳಿ ಹೋದರು.

ಸಂಪೂರ್ಣವಾಗಿ ತಪಾಸಣೆ ಮಾಡಿ, ಸಿಟಿ ಸ್ಕ್ಯಾನ್​ ಮಾಡಿದ ಬಳಿಕ ಬಂದ ವರದಿಯಲ್ಲಿ ಅಚ್ಚರಿಯ ವಿಷಯ ಇತ್ತು. ಆಕೆಯ ಪಕ್ಕೆಲುಬುಗಳು ಮುರಿದಿದ್ದವು. ಹುವಾಂಗ್​ 57 ಕೆಜಿ ಇದ್ದರೂ, ಆಕೆಯ ಸೊಂಟಕ್ಕಿಂತ ಮೇಲ್ಭಾಗ ತುಂಬ ಸಪೂರ ಇದೆ. ಚರ್ಮದ ಕೆಳಗೆ ಮಾಂಸಖಂಡಗಳು ಇದ್ದು, ಅದರಡಿಯಲ್ಲಿ ಎಲುಬುಗಳು ಸಂರಕ್ಷಿಸಲ್ಪಡಬೇಕು. ಆದರೆ ಹುವಾಂಗ್​ ದೇಹದಲ್ಲಿ ಮಾಂಸಖಂಡಗಳು ಬಲವಾಗಿ ಇಲ್ಲದ ಕಾರಣ ನೇರವಾಗಿ ಪಕ್ಕೆಲುಬುಗಳಿಗೆ ಹೊಡೆತ ಬೀಳುತ್ತದೆ. ಗಟ್ಟಿಯಾಗಿ ಕೆಮ್ಮುವಾಗ ಇಡೀ ದೇಹದ ಮೇಲೆ ಬಲಪ್ರಯೋಗ ಆಗುತ್ತದೆ. ಅದೇ ವೇಳೆ ಮುರಿತಕ್ಕೆ ಒಳಗಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Viral Video| ಹಳೇ ಬಜಾಜ್​ ಸ್ಕೂಟರ್​​ನ್ನು ಹೀಗೂ ಬಳಸಿಕೊಳ್ಳಬಹುದಾ? ಕಟ್ಟಡ ನಿರ್ಮಾಣ ಕಾರ್ಮಿಕರ ಭರ್ಜರಿ ಐಡಿಯಾ ನೋಡಿ!

Exit mobile version