ಮಹಿಳೆಯ ಪಕ್ಕೆಲುಬು ಮುರಿಯಲು ಕಾರಣ ಸ್ಪೈಸಿ ಫುಡ್​; ಕೆಮ್ಮುತ್ತಿದ್ದಾಗಲೇ ಎದೆ ಭಾಗದಿಂದ ಕೇಳಿತ್ತು ಶಬ್ದ! - Vistara News

ವೈರಲ್ ನ್ಯೂಸ್

ಮಹಿಳೆಯ ಪಕ್ಕೆಲುಬು ಮುರಿಯಲು ಕಾರಣ ಸ್ಪೈಸಿ ಫುಡ್​; ಕೆಮ್ಮುತ್ತಿದ್ದಾಗಲೇ ಎದೆ ಭಾಗದಿಂದ ಕೇಳಿತ್ತು ಶಬ್ದ!

ಹುವಾಂಗ್​ 57 ಕೆಜಿ ಇದ್ದರೂ, ಆಕೆಯ ಸೊಂಟಕ್ಕಿಂತ ಮೇಲ್ಭಾಗ ತುಂಬ ಸಪೂರ ಇದೆ. ಚರ್ಮದ ಕೆಳಗೆ ಮಾಂಸಖಂಡಗಳು ಇದ್ದು, ಅದರಡಿಯಲ್ಲಿ ಎಲುಬುಗಳು ಸಂರಕ್ಷಿಸಲ್ಪಡಬೇಕು. ಆದರೆ ಹುವಾಂಗ್​​ಗೆ ಮಾಂಸಖಂಡಗಳು ಬಲವಾಗಿ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

VISTARANEWS.COM


on

Woman fractured four ribs After Eat Spicy Food
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಿದ್ದಾಗ ಅಥವಾ ಇನ್ಯಾವುದೇ ರೀತಿಯ ಬಲವಾದ ಏಟುಗಳು ಬಿದ್ದಾಗ ಪಕ್ಕೆಲುಬು ಮುರಿತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದರೆ ಚೀನಾದಲ್ಲಿ ಒಬ್ಬರು ಮಹಿಳೆ ಕೆಮ್ಮಿ-ಕೆಮ್ಮಿ ಎದೆ ಭಾಗದ 4 ಪಕ್ಕೆಲುಬು ಮುರಿದುಕೊಂಡಿದ್ದಾರೆ. ಅಂದಹಾಗೇ, ಈ ಪರಿಯ ಕೆಮ್ಮಿಗೆ ಕಾರಣವಾಗಿದ್ದು ಸ್ಪೈಸಿ ತಿಂಡಿ (ಮಸಾಲೆಯುಕ್ತ ಘಾಟಿನ ಆಹಾರ).

ಚೀನಾದ ಹುವಾಂಗ್ (ಇದು ಸರ್​ನೇಮ್​) ಎಂಬ ಮಹಿಳೆಯೊಬ್ಬಳು ಅತಿಯಾದ ಮಸಾಲೆಯುಕ್ತ ತಿಂದಿದ್ದಳು. ಆ ಘಾಟಿಗೆ ಸಿಕ್ಕಾಪಟೆ ಕೆಮ್ಮು ಬಂದಿತ್ತು. ಆಕೆ ದೊಡ್ಡದಾಗಿ, ಗಟ್ಟಿಯಾಗಿ ಕೆಮ್ಮುವ ವೇಳೆ ಎದೆ ಭಾಗದಲ್ಲಿ ಏನೋ ಮುರಿದ ಶಬ್ದ ಕೇಳಿದೆ. ಆದರೆ ಶಬ್ದವನ್ನು ಹುವಾಂಗ್​ ಗಂಭೀರವಾಗಿ ಪರಿಗಣಿಸಿರಿಲಿಲ್ಲ. ಆದರೆ ಬರುಬರುತ್ತ ಆಕೆಗೆ ಮಾತನಾಡುವಾಗ, ಉಸಿರಾಡುವಾಗ ಎದೆನೋವು ಬರಲು ಪ್ರಾರಂಭವಾಯಿತು. ಹೀಗಾಗಿ ವೈದ್ಯರ ಬಳಿ ಹೋದರು.

ಸಂಪೂರ್ಣವಾಗಿ ತಪಾಸಣೆ ಮಾಡಿ, ಸಿಟಿ ಸ್ಕ್ಯಾನ್​ ಮಾಡಿದ ಬಳಿಕ ಬಂದ ವರದಿಯಲ್ಲಿ ಅಚ್ಚರಿಯ ವಿಷಯ ಇತ್ತು. ಆಕೆಯ ಪಕ್ಕೆಲುಬುಗಳು ಮುರಿದಿದ್ದವು. ಹುವಾಂಗ್​ 57 ಕೆಜಿ ಇದ್ದರೂ, ಆಕೆಯ ಸೊಂಟಕ್ಕಿಂತ ಮೇಲ್ಭಾಗ ತುಂಬ ಸಪೂರ ಇದೆ. ಚರ್ಮದ ಕೆಳಗೆ ಮಾಂಸಖಂಡಗಳು ಇದ್ದು, ಅದರಡಿಯಲ್ಲಿ ಎಲುಬುಗಳು ಸಂರಕ್ಷಿಸಲ್ಪಡಬೇಕು. ಆದರೆ ಹುವಾಂಗ್​ ದೇಹದಲ್ಲಿ ಮಾಂಸಖಂಡಗಳು ಬಲವಾಗಿ ಇಲ್ಲದ ಕಾರಣ ನೇರವಾಗಿ ಪಕ್ಕೆಲುಬುಗಳಿಗೆ ಹೊಡೆತ ಬೀಳುತ್ತದೆ. ಗಟ್ಟಿಯಾಗಿ ಕೆಮ್ಮುವಾಗ ಇಡೀ ದೇಹದ ಮೇಲೆ ಬಲಪ್ರಯೋಗ ಆಗುತ್ತದೆ. ಅದೇ ವೇಳೆ ಮುರಿತಕ್ಕೆ ಒಳಗಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Viral Video| ಹಳೇ ಬಜಾಜ್​ ಸ್ಕೂಟರ್​​ನ್ನು ಹೀಗೂ ಬಳಸಿಕೊಳ್ಳಬಹುದಾ? ಕಟ್ಟಡ ನಿರ್ಮಾಣ ಕಾರ್ಮಿಕರ ಭರ್ಜರಿ ಐಡಿಯಾ ನೋಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: ಸರ್ಕಾರಿ ಕಚೇರಿಯಲ್ಲಿ ಡ್ಯಾನ್ಸ್‌ ಮಾಡಿ ರೀಲ್ಸ್; 8 ನೌಕರರಿಗೆ ನೋಟಿಸ್‌ ಬಿಸಿ!

ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ತಿರುವಲ್ಲಾ ಪುರಸಭೆ ಪಾಲಿಕೆ ಕಚೇರಿಯಲ್ಲಿ ರೀಲ್ಸ್ ಮಾಡಿರುವ ನೌಕರರು ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಭಾರೀ ವೈರಲ್ (Viral Video) ಆಗಿತ್ತು. ರೀಲ್ಸ್ ನಲ್ಲಿ ಕಾಣಿಸಿಕೊಂಡಿರುವ ಎಲ್ಲ ನೌಕರರಿಗೆ ಮೂರು ದಿನಗಳ ಬಳಿಕ ನೋಟಿಸ್‌ ಜಾರಿಗೊಳಿಸಲಾಗಿದೆ.

VISTARANEWS.COM


on

By

Viral Video
Koo

ತಿರುವನಂತಪುರಂ: ನೌಕರರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಮಾಡಿದ ಬಳಿಕ ಹಿರಿಯ ಅಧಿಕಾರಿಯ ಕೆಂಗಣ್ಣಿಗೆ ಗುರಿಯಾದ ಘಟನೆ ಕೇರಳದಲ್ಲಿ (kerala) ನಡೆದಿದೆ. ಪಟ್ಟನಂತಿಟ್ಟ ಜಿಲ್ಲೆಯ (Pathanamthitta district) ತಿರುವಲ್ಲಾ ಪುರಸಭೆ ಪಾಲಿಕೆ ಕಾರ್ಯದರ್ಶಿ ಅವರು ಇದೀಗ ಎಂಟು ಮಂದಿ ನೌಕರರಿಗೆ ಶೋಕಾಸ್ ನೋಟಿಸ್‌ (notice) ಜಾರಿಗೊಳಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ರೀಲ್ಸ್ ಮಾಡಿರುವ ನೌಕರರು ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ವೈರಲ್ ಆಗಿದ್ದು, ಮೂರು ದಿನಗಳ ಬಳಿಕ ರೀಲ್ಸ್ ನಲ್ಲಿ ಕಾಣಿಸಿಕೊಂಡಿರುವ ಎಲ್ಲ ನೌಕರರಿಗೆ ನೊಟೀಸ್ ಜಾರಿ ಗೊಳಿಸಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೌಕರರು ಕಚೇರಿಯಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದು ಸೆರೆಯಾಗಿದೆ. ಪುರಸಭೆ ಉದ್ಯೋಗಿಗಳು ರೀಲ್ಸ್ ಗಾಗಿ ಮೊದಲು ಸ್ಕ್ರಿಪ್ಟ್ ಸಿದ್ಧಪಡಿಸಿ ಬಳಿಕ ಅದನ್ನು ಕಚೇರಿಯಲ್ಲಿ ವಿಡಿಯೋ ಮಾಡಿದ್ದಾರೆ. ಹಾಡು ಮತ್ತು ನೃತ್ಯದ ಸಂಯೋಜನೆ ಇದರಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕೂಡಲೇ ರೀಲ್ಸ್ ಭಾರೀ ವೈರಲ್ ಆಗಿದೆ.


ಇದನ್ನೂ ಓದಿ: Viral Video: ಸಾವು ಹೇಗೆಲ್ಲ ಹೊಂಚು ಹಾಕುತ್ತದೆ! ಈ ವಿಡಿಯೊ ನೋಡಿ

ಈ ಕುರಿತು ನಗರಸಭೆ ಕಾರ್ಯದರ್ಶಿ ಗಮನಕ್ಕೆ ಬಂದಿದ್ದು, ಅವರು ಕೂಡಲೇ ಎಂಟು ನೌಕರರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿ ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಈ ಕುರಿತು ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯದರ್ಶಿ, ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇದು ನಿರುಪದ್ರವಿ ಕೃತ್ಯವಾಗಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ನಿರೀಕ್ಷಿಸಿದ್ದರು. ಆದರೆ, ನೋಟಿಸ್‌ ಜಾರಿ ಮಾಡಿದ ಅನಂತರ ಕಚೇರಿ ಕೆಲಸದ ಬಿಡುವಿನ ಸಮಯದಲ್ಲಿ ರೀಲ್ ಮಾಡಿರುವುದು, ಕೆಲಸ ಮಾಡಲು ಅಥವಾ ತಮ್ಮ ಅಗತ್ಯಗಳಿಗಾಗಿ ಬಂದವರಿಗೆ ಯಾವುದೇ ಅಡ್ಡಿ ಉಂಟುಮಾಡಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

Continue Reading

Latest

Viral Video: ಸಾವು ಹೇಗೆಲ್ಲ ಹೊಂಚು ಹಾಕುತ್ತದೆ! ಈ ವಿಡಿಯೊ ನೋಡಿ

ಉತ್ತರ ಪ್ರದೇಶದ ಮಹೋಬಾದಲ್ಲಿ ಸಂಬಂಧಿಕರ ಮನೆಯಲ್ಲಿ ಧಾರ್ಮಿಕ ಸಮಾರಂಭ ನಡೆಯುತ್ತಿದ್ದ ಹಿನ್ನಲೆಯಲ್ಲಿ ಸಮಾರಂಭಕ್ಕೆ ಆಗಮಿಸಿದ್ದ ದೇವೇಂದ್ರ ಎಂಬ ವ್ಯಕ್ತಿ ಆಚರಣೆಯ ಅಂಗವಾಗಿ ಧ್ವಜವನ್ನು ಕಟ್ಟಲು ಬಿದಿರಿನ ಕೋಲನ್ನು ತೆಗೆದುಕೊಂಡು ಬಂದಿದ್ದಾರೆ. ಆಗ ಮನೆಯ ಮೇಲಿದ್ದ ವಿದ್ಯುತ್ ತಂತಿಗೆ ಕೋಲು ತಗುಲಿ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo

ಹೈ ವೋಲ್ಟೇಜ್ ವಿದ್ಯುತ್ ತಂತಿ ಹಾದುಹೋಗಿರುವ ಕೆಲವೊಂದು ಸ್ಥಳಗಳಲ್ಲಿ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಆ ಸ್ಥಳದಲ್ಲಿ ಕೆಲಸ ಮಾಡುವಾಗ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಂಡು ಕೆಲಸ ಮಾಡಬೇಕು. ಇಲ್ಲವಾದರೆ ಇದರಿಂದ ಜೀವಕ್ಕೇ ಅಪಾಯವಾಗಬಹುದು. ಇದೀಗ ಅಂಹತದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಬಂಧಿಕರ ಮನೆಯಲ್ಲಿ ಧಾರ್ಮಿಕ ಸಮಾರಂಭ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸಮಾರಂಭಕ್ಕೆ ಬೇಕಾದ ತಯಾರಿ ಮಾಡಲು ಬಿದಿರಿನ ಕೋಲನ್ನು ಸಾಗಿಸುತ್ತಿದ್ದ ವ್ಯಕ್ತಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದ್ದು, ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.

ಮೃತ ವ್ಯಕ್ತಿ ಚಂದೋನ್ ಗ್ರಾಮದ ನಿವಾಸಿ 35 ವರ್ಷದ ದೇವೇಂದ್ರ ಎಂದು ಗುರುತಿಸಲಾಗಿದ್ದು, ವರದಿ ಪ್ರಕಾರ ದೇವೇಂದ್ರ ತನ್ನ ಸೋದರ ಸಂಬಂಧಿ ಸುವೇಂದ್ರ ಸಿಂಗ್ ಅವರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಸೋಡಾ ನಗರಕ್ಕೆ ಬಂದಿದ್ದರು. ಘಟನೆಯ ಸಮಯದಲ್ಲಿ, ಅವರ ಕುಟುಂಬ ಸದಸ್ಯರು ದೇವಾಲಯಕ್ಕೆ ಹೋಗಲು ತಯಾರಿ ನಡೆಸುತ್ತಿದ್ದರು. ಕೆಲವರು ಪ್ರಸಾದ ತಯಾರಿಸುತ್ತಿದ್ದರೆ, ಇತರರು ದೇವಾಲಯದಲ್ಲಿ ಆಚರಣೆಗಳಿಗೆ ಬೇಕಾದ ತಯಾರಿ ನಡೆಸುತ್ತಿದ್ದರು. ಈ ನಡುವೆ, ದೇವೇಂದ್ರ ಆಚರಣೆಯ ಅಂಗವಾಗಿ ಧ್ವಜವನ್ನು ಕಟ್ಟಲು ಬಿದಿರಿನ ಕೋಲನ್ನು ತೆಗೆದುಕೊಂಡು ಬಂದಿದ್ದಾರೆ. ಆಗ ಮನೆಯ ಮೇಲಿದ್ದ ವಿದ್ಯುತ್ ತಂತಿಗೆ ಕೋಲು ತಗುಲಿ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ವಿಡಿಯೊದಲ್ಲಿ ದೇವೆಂದ್ರ ಅವರು ತಮ್ಮ ಸಂಬಂಧಿಕರ ಸಮ್ಮುಖದಲ್ಲಿ ಬಿದಿರಿನ ಕೋಲನ್ನು ಹಿಡಿದುಕೊಂಡು ಮನೆಯೊಳಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಂತರ ದೇವೇಂದ್ರ ಬಲವಾದ ಆಘಾತದಿಂದ ಬಿದ್ದಾಗ ಅವರ ತಲೆ ಕಬ್ಬಿಣದ ಗೇಟ್‍ಗೆ ತಗುಲಿದೆ.. ಆಗ ಅವರ ಕುಟುಂಬ ಸದಸ್ಯರು ದೇವೇಂದ್ರ ಅವರ ಕೈ ಮತ್ತು ಕಾಲುಗಳನ್ನು ಮಸಾಜ್ ಮಾಡುವ ಮೂಲಕ ಸಹಾಯ ಮಾಡಿದರು. ಆದರೆ ಕೆಲವೇ ಸೆಕೆಂಡುಗಳಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರ ಕುಟುಂಬ ಸದಸ್ಯರು ತಿಳಿಸಿದ ಪ್ರಕಾರ, ಈ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ, ಬಿದಿರಿನ ಕೋಲು ಒದ್ದೆಯಾಗಿತ್ತು. ಹಾಗಾಗಿ ದೇವೆಂದ್ರ ಅವರಿಗೆ ಕರೆಂಟ್ ಶಾಕ್ ತಗುಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!

ದೇವೇಂದ್ರ ಅವರ ಸಂಬಂಧಿಕರು ತಮ್ಮ ಮನೆಯ ಮೇಲೆ ಹೈ ವೋಲ್ಟೇಜ್ ವಿದ್ಯುತ್ ತಂತಿ ಹಾದುಹೋಗಿರುವ ಬಗ್ಗೆ ದೂರು ನೀಡಿದ್ದರೂ ಪ್ರಾಧಿಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. ಇಲಾಖೆ ಕ್ರಮ ಕೈಗೊಂಡಿದ್ದರೆ, ತಮ್ಮ ಪ್ರೀತಿಯ ದೇವೇಂದ್ರ ಜೀವಂತವಾಗಿರುತ್ತಿದ್ದರು ಎಂದು ಕುಟುಂಬ ಸದಸ್ಯರು ದುಃಖಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ವಿಮಾನದಲ್ಲಿ ದಢೂತಿ ಹೆಂಗಸಿನ ಡ್ಯಾನ್ಸ್‌! ನಗಲಾರದೆ ಅಳಲಾರದೆ ತೊಳಲಾಡಿದ ಪ್ರಯಾಣಿಕರು!

ಹಾರುತ್ತಿರುವ ವಿಮಾನದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡುವ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Viral Video) ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದ್ದು, ಮಹಿಳೆ ವಿರುದ್ಧ ಕ್ರಮಕ್ಕೆ ಸಾಕಷ್ಟು ಮಂದಿ ಆಗ್ರಹಿಸಿದ್ದಾರೆ. ವಿಮಾನದಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ನಡೆಯುವ ಇಂಥ ರೀಲ್ಸ್‌ ಹುಚ್ಚಾಟಗಳಿಗೆ ತಡೆ ಹಾಕಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

VISTARANEWS.COM


on

By

Viral Video
Koo

ನವದೆಹಲಿ: ಸಾರ್ವಜನಿಕ ಪ್ರದೇಶಗಳಲ್ಲಿ ರೀಲ್ಸ್ (reels) ಮಾಡುವವರ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪವೂ ಕೇಳಿ ಬರುತ್ತಿದೆ. ಆದರೂ ಇದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚಿಗೆ ವಿಮಾನ ನಿಲ್ದಾಣದಲ್ಲಿ (airport) ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿ ನೆಟ್ಟಿಗರಿಂದ ಆಕ್ರೋಶಕ್ಕೆ ಕೆಲವರು ಗುರಿಯಾಗಿದ್ದರು. ಈಗ ಮಹಿಳೆಯೊಬ್ಬರು ವಿಮಾನದ (Flight) ಒಳಗೆ ರೀಲ್ಸ್ ಮಾಡಿ ಹಂಚಿಕೊಂಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಾರ್ವಜನಿಕ ಸಾರಿಗೆ, ಬೀದಿಗಳು, ವಿಮಾನ ನಿಲ್ದಾಣದ ಹೊರಭಾಗ ಮತ್ತು ವಿಮಾನಯಾನದ ವೇಳೆ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಲೇ ಇದೆ. ಇದೀಗ ಇಂತಹ ಮತ್ತೊಂದು ಘಟನೆ ವರದಿಯಾಗಿದೆ. ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ನೃತ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಲ್ಮಾ ಶೇಕ್ ಎಂಬ ಮಹಿಳೆ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಕ್ಲಿಪ್ ನಲ್ಲಿ ಮಹಿಳೆ ಕಪ್ಪು ಬಣ್ಣದ ಸೀರೆಯನ್ನು ಧರಿಸಿದ್ದು, ಇತರ ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತಿದ್ದಾರೆ. ಫ್ಲೈಟ್ ಅಟೆಂಡೆಂಟ್‌ಗಳು ಓವರ್‌ಹೆಡ್ ಬಿನ್ ಅನ್ನು ಮುಚ್ಚುತ್ತಿದ್ದಂತೆ, ಶೇಕ್ ಎ.ಆರ್. ರೆಹಮಾನ್ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸ್ಟೈಲ್ ಸ್ಟೈಲ್ ಥಾನ್ ಹಾಡಿಗೆ ನೃತ್ಯ ಮಾಡಿದ್ದಾರೆ. ಅವರ ಹಿಂದಿದ್ದ ಇತರ ಪ್ರಯಾಣಿಕರು ಆಕೆಯನ್ನು ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ಪೋಸ್ಟ್ ಅನ್ನು ಕೆಲವು ಗಂಟೆಗಳ ಹಿಂದೆಯಷ್ಟೇ ಸಾಮಾಜಿಕ ಮಾಧ್ಯಮವಾದ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಅನಂತರ ಇದು ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಕೆಲವರು ಹಂಚಿಕೊಂಡಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯೆಯನ್ನು ಮಾಡಿದ್ದಾರೆ.


ಒಬ್ಬರು, ಇತರರಿಗೆ ಯಾಕೆ ತೊಂದರೆ ಕೊಡುತ್ತೀರಿ ಏನು ಕೇಳಿದ್ದರೆ, ಇನ್ನೊಬ್ಬರು, ಇದು ಯಾವ ರೀತಿಯ ಏರ್‌ಲೈನ್? ಅಂತಹ ಅಸಂಬದ್ಧ ಮತ್ತು ಭಯಭೀತ ವ್ಯಕ್ತಿಯನ್ನು ವಿಮಾನದಲ್ಲಿ ರೀಲ್ ಮಾಡಲು ಅವರು ಹೇಗೆ ಅನುಮತಿಸುತ್ತಿದ್ದಾರೆ? ವಿಮಾನಯಾನ ಸಂಸ್ಥೆಯು ಈ ಮಹಿಳೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ. ಇದರಿಂದ ಇನ್ಯಾರೂ ಮತ್ತೆ ಎಂದಿಗೂ ಹೀಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ತಡೆಯಲು ಇಂಡಿಗೋ ವಿಮಾನ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ರಜೆಯಲ್ಲೂ ಮಗುವಿನ ಹೋಮ್‌ ವರ್ಕ್ ನೋಡಿ ಸಿಟ್ಟಾದ ತಾಯಿ ಮಾಡಿದ್ದೇನು? ವಿಡಿಯೊ ನೋಡಿ!

ಮತ್ತೊಬ್ಬರು ಕಾಮೆಂಟ್ ನಲ್ಲಿ ಗಗನಸಖಿ ಆಕೆಗೆ ರೀಲ್‌ಗಳನ್ನು ಮಾಡಲು ಹೇಗೆ ಅವಕಾಶ ನೀಡಿದರು? ವಿಮಾನ ಹಾರಾಟ ಸಂದರ್ಭದಲ್ಲಿ ಗಗನಸಖಿಯೂ ಸಹ ಭಯಭೀತರಾಗುತ್ತಾರೆ ಎಂದು ತಿಳಿಸಿದ್ದಾರೆ. ಈ ರೀತಿಯ ಜನರು ವಿಮಾನಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Samrat Choudhary: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!

Samrat Choudhary: ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಮೈತ್ರಿಕೂಟವನ್ನು ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಬಿಹಾರ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಸಾಮ್ರಾಟ್ ಚೌಧರಿ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ್ದಾರೆ. ನಿತೀಶ್ ಕುಮಾರ್ ಅವರು ಇಂಡಿ-ಮೈತ್ರಿಕೂಟಕ್ಕೆ ರಾಜೀನಾಮೆ ನೀಡಿ ಎನ್‌ಡಿಎಗೆ ಮರಳಿದ್ದಾರೆ. ಹಾಗಾಗಿ ಸಾಮ್ರಾಟ್ ಚೌಧರಿ ಅವರು ಈಗ ಅಯೋಧ್ಯೆಯಲ್ಲಿ ಭಗವಾನ್ ರಾಮನಿಗೆ ತಮ್ಮ ಮುಡಿಯನ್ನು ಅರ್ಪಿಸಿ ತಮ್ಮ ಪೇಟವನ್ನು ರಾಮನ ಪಾದಗಳಿಗೆ ಅರ್ಪಿಸುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ್ದಾರೆ.

VISTARANEWS.COM


on

Samrat Choudhary
Koo

ಈ ಹಿಂದೆ ಜೆಡಿಯು ಮುಖ್ಯಸ್ಥರಾದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಮೈತ್ರಿಕೂಟವನ್ನು ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಬಿಹಾರ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಸಾಮ್ರಾಟ್ ಚೌಧರಿ (Samrat Choudhary) ಅವರು ಇದೀಗ ತಮ್ಮ ಪ್ರತಿಜ್ಞೆಯನ್ನು ನೆನಪಿಸಿಕೊಂಡಿದ್ದು ಅದನ್ನು ಪೂರೈಸಿದ್ದಾರೆ.

ಇದೀಗ ಇಂಡಿ-ಮೈತ್ರಿಕೂಟಕ್ಕೆ ರಾಜೀನಾಮೆ ನೀಡಿದ ನಂತರ ನಿತೀಶ್ ಕುಮಾರ್ ಅವರು ಎನ್‍ಡಿಎಗೆ ಮರಳಿದ್ದಾರೆ. ಹಾಗಾಗಿ ಸಾಮ್ರಾಟ್ ಚೌಧರಿ ಅವರು ಈಗ ಅಯೋಧ್ಯೆಯಲ್ಲಿ ಭಗವಾನ್ ರಾಮನಿಗೆ ತಮ್ಮ ಮುಡಿಯನ್ನು ಅರ್ಪಿಸಿ ತಮ್ಮ ಪೇಟವನ್ನು ರಾಮನ ಪಾದಗಳಿಗೆ ಅರ್ಪಿಸುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ್ದಾರೆ.

ಈ ಕುರಿತು ಮಾತನಾಡಿದ ಸಾಮ್ರಾಟ್ ಚೌಧರಿ “ನಿತೀಶ್ ಕುಮಾರ್ ಅವರು ಇಂಡಿ- ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‍ಡಿಎಗೆ ಮರಳಿದ ದಿನ, ನಾನು ನನ್ನ ಪೇಟವನ್ನು ಭಗವಾನ್ ರಾಮನಿಗೆ ಅರ್ಪಿಸುತ್ತೇನೆ ಎಂದು ಘೋಷಿಸಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದೆ ಎಂಬುದು ನಿಜ. ಆದರೆ ಈಗ ಅವರು ಇಂಡಿ-ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‍ಡಿಎ) ಮರಳಿದ್ದಾರೆ, ಹಾಗಾಗಿ ನನ್ನ ಪೇಟವನ್ನು ಭಗವಾನ್ ರಾಮನ ಪಾದಗಳಿಗೆ ಅರ್ಪಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ನಿತೀಶ್ ಕುಮಾರ್ ಎನ್‍ಡಿಎಗೆ ಮರಳಿದ್ದು ಕಳೆದ ದಶಕದಲ್ಲಿ ಮೈತ್ರಿಗಳಲ್ಲಿ ಐದನೇ ಬದಲಾವಣೆಯನ್ನು ಸೂಚಿಸುತ್ತದೆ, ಇದರ ಪರಿಣಾಮವಾಗಿ ಮಹಾಘಟಬಂಧನ್ ಸರ್ಕಾರದ ಪತನವಾಯಿತು ಮತ್ತು ಬಿಹಾರದಲ್ಲಿ ಹೊಸ ಎನ್‍ಡಿಎ ನೇತೃತ್ವದ ಸರ್ಕಾರ ರಚನೆಯಾಯಿತು. ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ಈ ನಡುವೆ ತಮ್ಮ ಪ್ರತಿಜ್ಞೆಯನ್ನು ನೆನೆಪಿಸಿಕೊಂಡ ಚೌಧರಿ ಜೂನ್ 2ರಂದು ಅಯೋಧ್ಯೆಗೆ ತೆರಳಿ ತಲೆ ಬೋಳಿಸಿಕೊಂಡ ನಂತರ ಅವರು ಇಂದು ರಾಮ ಮಂದಿರದಲ್ಲಿ ತಮ್ಮ ಪೇಟವನ್ನು ಅರ್ಪಿಸಿದ್ದಾರಂತೆ.

Continue Reading
Advertisement
Viral Video
ವೈರಲ್ ನ್ಯೂಸ್7 mins ago

Viral Video: ಸರ್ಕಾರಿ ಕಚೇರಿಯಲ್ಲಿ ಡ್ಯಾನ್ಸ್‌ ಮಾಡಿ ರೀಲ್ಸ್; 8 ನೌಕರರಿಗೆ ನೋಟಿಸ್‌ ಬಿಸಿ!

Pradhan Mantri Awas Yojana CM Siddaramaiah instructs to complete work on incomplete houses on priority
ಪ್ರಮುಖ ಸುದ್ದಿ25 mins ago

CM Siddaramaiah: ಪ್ರಧಾನಮಂತ್ರಿ ಆವಾಸ್‌ ಯೋಜನೆ; ಅಪೂರ್ಣ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ

Toyota Kirloskar Motor has joined hands with the IISC to support the establishment of a Mobility Engineering Laboratory
ಬೆಂಗಳೂರು29 mins ago

Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

BJP Muslim Candidate
ಪ್ರಮುಖ ಸುದ್ದಿ50 mins ago

BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Uttar pradesh Politics
ದೇಶ51 mins ago

Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು; ಟಾಸ್ಕ್‌ಫೋರ್ಸ್‌ ವರದಿಯಲ್ಲಿ ಗಂಭೀರ ಅಂಶಗಳು ಬಯಲು

Mangalore News
ಕರ್ನಾಟಕ1 hour ago

Mangalore News: ಫಲಿಸದ ಸತತ 6-7 ಗಂಟೆ ಕಾರ್ಯಾಚರಣೆ; ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಸಾವು

Positive woman drinking water
ಆರೋಗ್ಯ2 hours ago

Drinking Water Tips: ನೀರು ಕುಡಿಯುವುದೇ ನಿಮ್ಮ ಸಮಸ್ಯೆಯೇ? ಇಲ್ಲಿವೆ ಸರಳ ಉಪಾಯಗಳು!

Poverty In India
ದೇಶ2 hours ago

Poverty In India: ಭಾರತದಲ್ಲಿ ಒಂದು ದಶಕದಲ್ಲೇ ಬಡತನ ಪ್ರಮಾಣ 21.2%ರಿಂದ 8.5%ಕ್ಕೆ ಇಳಿಕೆ

Monsoon Jacket Styling Tips
ಫ್ಯಾಷನ್2 hours ago

Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

Dengue fever
ಕರ್ನಾಟಕ2 hours ago

Dengue fever: ಡೆಂಗ್ಯೂ ಪರೀಕ್ಷೆಗೆ ದರ ನಿಗದಿ ಮಾಡಿದ ರಾಜ್ಯ ಸರ್ಕಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌