ನವದೆಹಲಿ: 75 ವರ್ಷದ ಅಜ್ಜಿಯೊಬ್ಬಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆಂದು ಘೋಷಿಸಲಾಗಿದೆ. ಆಗ ಸಂಬಂಧಿಕರು ಆಕೆಯ ಶವಸಂಸ್ಕಾರಕ್ಕೆ ಮುಂದಾಗಿದ್ದಾರೆ. ಅಷ್ಟರಲ್ಲಿ ಪವಾಡವೊಂದು ನಡೆದಿದೆ. ಇನ್ನೇನು ಸಮಾಧಿಯೊಳಗೆ ಕಫಿನ್ ಬಾಕ್ಸ್ (Coffin Box – ಶವಪೆಟ್ಟಿಗೆ) ಇಳಿಸಬೇಕು ಎನ್ನುವಷ್ಟರಲ್ಲಿ ಶವಪೆಟ್ಟಿಗೆಯನ್ನು ಜೋರಾಗಿ ಬಡಿದಿದ್ದಾಳೆ ಮುದುಕಿ! ಆಗಲೇ ಎಲ್ಲರಿಗೂ ಗೊತ್ತಾಗಿದ್ದು, ಸತ್ತಿದ್ದಾಳೆಂದ ಭಾವಿಸಲಾಗಿದ್ದ ಅಜ್ಜಿ ಇನ್ನೂ ಬದುಕಿದ್ದಾಳೆಂದು. ಅಂದ ಹಾಗೆ ಈ ಘಟನೆ ಈಕ್ವೆಡಾರ್‌ನ (Ecuador) ಬಾಬಾಹೋಯೊ ನಗರ (City of Babahoyo). ಸತ್ತೂ ಬದುಕಿದ ಅಜ್ಜಿಯ ಹೆಸರು ಬೆಲ್ಲಾ ಮೊಂಟೊಯಾ (Bella Montoya). ಈ ಸುದ್ದಿ ವೈರಲ್ ಆಗಿದೆ(Viral News)
ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿದ್ದ ಬೆಲ್ಲಾ ಮೊಂಟೊಯಾ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಸತ್ತಿದ್ದಾಳೆಂದ ಘೋಷಿಸಿದ ಬಳಿಕ, ಮತ್ತೆ ಆಕೆ ಜೀವಂತವಾಗಿದ್ದಾಳೆ. ಈ ಘಟನೆಯಲ್ಲಿ ಎಲ್ಲಿ ತಪ್ಪು ಸಂಭವಿಸಿದೆ ಎಂದು ಪತ್ತೆ ಹಚ್ಚಲು ಈಕ್ವೆಡಾರ್‌ನ ಆರೋಗ್ಯ ಸಚಿವಾಲಯವು ಸಮಿತಿಯನ್ನು ರಚಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
ಚಿಕಿತ್ಸೆ ವೇಳೆ ಮಹಿಳೆಯು ಕಾರ್ಡಿಯೋಸ್ಪಿರೇಟರಿ ಸ್ತಂಭನಕ್ಕೆ ಒಳಗಾಗಿದ್ದಾಳೆ. ಉಸಿರಾಟ ಮತ್ತು ಹೃದಯ ತಮ್ಮ ಕೆಲಸವನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಆಕೆ ಯಾವುದೇ ವೈದ್ಯಕೀಯ ಪ್ರಯತ್ನಕ್ಕೆ ಪ್ರತಿಕ್ರಿಯಿಸಲಿಲ್ಲ. ಆಗ ಕರ್ತವ್ಯದಲ್ಲಿದ್ದ ವೈದ್ಯರು ಆಕೆ ಸತ್ತಿದ್ದಾಳೆಂದು ಖಚಿತಪಡಿಸಿದ್ದಾರೆ ಎಂದು ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಮ್ಮ ತಾಯಿಯನ್ನು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದೆವು. ಮಧ್ಯಾಹ್ನ ವೈದ್ಯರು ಆಕೆ ಸತ್ತಿದ್ದಾಳೆಂದು ಘೋಷಣೆ ಮಾಡಿದರು ಎಂದು ಮೊಂಟೊಯ ಅವರ ಪುತ್ರ ಗಿಲ್ಬರ್ ರೊಡಾಲ್ಪೊ ಬಲ್ಬೆರನ್ ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಇವುಗಳಲ್ಲಿ ಯಾವ ಲೋಟದಲ್ಲಿ ಹೆಚ್ಚು ನೀರಿದೆ? ಸರಿ ಉತ್ತರ ಕೊಟ್ಟವರೇ ಜಾಣರು!
ವೈದ್ಯರು ಮೊಂಟೊಯ ಸತ್ತಿದ್ದಾಳೆಂದು ಘೋಷಿಸದ ಬಳಿಕ ಶವವನ್ನು ಶವಪೆಟ್ಟಿಗೆಯಲ್ಲಿ ಗಂಟೆಗಳ ಕಾಲ ಇಡಲಾಗಿತ್ತು. ಆದರೆ ತೆರೆದ ಕ್ಯಾಸ್ಕೆಟ್‌ನಲ್ಲಿ ಮಲಗಿ ಹೆಚ್ಚು ಉಸಿರಾಡುತ್ತಿರುವುದನ್ನು ತೋರಿಸುವ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಮಹಿಳೆಯು ಬದುಕಿರುವುದು ಗೊತ್ತಾಗುತ್ತಿದ್ದಂತೆ ಆಕೆಯನ್ನು ಮತ್ತೆ ಆದೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನಷ್ಟು ಕುತೂಹಲಕರ ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.