Site icon Vistara News

Viral News : ವೃಂದಾವನದ ಲಡ್ಡು ಕೃಷ್ಣ ಈಕೆಯ ಮಗನಂತೆ! ಕೃಷ್ಣನ ಮೂರ್ತಿಗ ಟಿ ಶರ್ಟ್‌, ಜೀನ್ಸ್‌ ತೊಡಿಸುವವರಿವರು!

women loves krishna as son

ವೃಂದಾವನ: ಉತ್ತರ ಪ್ರದೇಶದ ವೃಂದಾವನದಲ್ಲಿರುವ ಕೃಷ್ಣನ ದೇವಸ್ಥಾನವನ್ನು ನೋಡಲು ಪ್ರತಿ ದಿನ ಸಾವಿರಾರು ಭಕ್ತರು ಬರುತ್ತಾರೆ. ಕೃಷ್ಣನಿಗೆ ಕೈ ಮುಗಿದು ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಆದರೆ ಈ ಮಹಿಳೆ ಹಾಗಲ್ಲ. ಈಕೆ ಕೃಷ್ಣನನ್ನು ದೇವರಾಗಿ ನೋಡುತ್ತಿಲ್ಲ. ವೃಂದಾವನದ ಬಾಲ ಕೃಷ್ಣನಾದ ಲಡ್ಡು ಕೃಷ್ಣನನ್ನು ತನ್ನ ಮಗನಾಗಿಯೇ ನೋಡುತ್ತಿದ್ದಾರೆ. ಪ್ರತಿನಿತ್ಯ ಆ ಮಗನ ಸೇವೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ವಿಶೇಷ ಬಾಂಧವ್ಯದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್‌ (Viral News) ಆಗಿದೆ.

ಸಂಧ್ಯಾ ಮಿಶ್ರಾ ಮೂಲತಃ ಮಧ್ಯಪ್ರದೇಶದ ಸಾತ್ನಾದವರು. ಮದುವೆಯಾದ ನಂತರ ಅವರು ಪತಿಯೊಂದಿಗೆ ವೃಂದಾವನಕ್ಕೆ ಸ್ಥಳಾಂತರಗೊಂಡಿದ್ದಾರೆ. ಒಂದೂವರೆ ವರ್ಷ ಮೊದಲಿನ ತನಕವೂ ಅವರು ಕೃಷ್ಣನನ್ನು ದೇವರ ರೀತಿಯಲ್ಲೇ ಪೂಜಿಸಿಕೊಂಡಿದ್ದರಂತೆ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಅವರಿಗೆ ಲಡ್ಡು ಕೃಷ್ಣನ ಮೂರ್ತಿ ನೋಡಿದಾಗ ಮಗನಂತೆ ಕಂಡುಬಿಟ್ಟಿದೆ. ಯಾವುದೋ ಒಂದು ಬಂಧ ಅದರತ್ತ ಸೆಳೆದಂತೆ ಆಗಿದೆ.

ಇದನ್ನೂ ಓದಿ: Viral News : ಒಂದು ಕನ್ನಡಕದ ಬಾಕ್ಸ್‌ನಿಂದ ಬಯಲಾಯ್ತು ಎರಡೆರೆಡು ಕೊಲೆ ಪ್ರಕರಣ!
ಹಾಗಾಗಿ ಒಂದೂವರೆ ವರ್ಷದಿಂದ ಅವರು ಮನೆಯಲ್ಲಿ ಲಡ್ಡು ಕೃಷ್ಣನ ಮೂರ್ತಿಯೊಂದನ್ನು ಇಟ್ಟುಕೊಂಡು ಸ್ವಂತ ಮಗನಂತೆ ಸಾಕುತ್ತಿದ್ದಾರೆ. ಕೃಷ್ಣನ ಮೂರ್ತಿಗೆ ಸ್ಟೈಲಿಷ್‌ ಟಿ ಶರ್ಟ್‌ಗಳನ್ನು ಹಾಕುವುದು ಹಾಗೆಯೇ ಅದಕ್ಕೆ ಮ್ಯಾಚ್‌ ಆಗುವಂತಹ ಜೀನ್ಸ್‌ ಪ್ಯಾಂಟ್‌ಗಳನ್ನು ಹಾಕುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೃಷ್ಣನ ಕೈಗೆ ಸ್ಮಾರ್ಟ್‌ವಾಚ್‌ ಅನ್ನೂ ಕಟ್ಟಿದ್ದಾರೆ. ಸಂಧ್ಯಾ ಅವರಿಗೆ ಇಬ್ಬರು ಮಕ್ಕಳಿದ್ದಾರಾದರೂ ಅವರಿಗೆ ಈ ಲಡ್ಡು ಕೃಷ್ಣನ ಮೇಲಿನ ಮಗನ ಬಾಂಧವ್ಯವೇ ಹೆಚ್ಚಂತೆ.

ಪ್ರತಿದಿನ ಬೆಳಗ್ಗೆ ಸಂಧ್ಯಾ ಅವರು ಕೃಷ್ಣನನ್ನು ಪ್ರೀತಿಯಿಂದ ಎಬ್ಬಿಸುತ್ತಾರೆ. ಕೃಷ್ಣನಿಗೆ ಸ್ನಾನ ಮಾಡಿಸಿ ನಂತರ ಅವನಿಗೆ ತಿಂಡಿಯಾಗಿ ಒಂದು ಕಪ್‌ ಚಹಾ ಅಥವಾ ಹಾಲನ್ನು ಕೊಡುತ್ತಾರೆ. ಮನೆಯಲ್ಲಿ ಅಡುಗೆ ಮಾಡುವಾಗಲೂ ಕೃಷ್ಣನಿಗೆಂದು ವಿಶೇಷ ಆದ್ಯತೆ ನೀಡಿ ಅಡುಗೆ ಮಾಡಲಾಗುತ್ತದೆ. ಮನೆಯಲ್ಲಿ ಮಾಡುವ ಅಡುಗೆಯನ್ನು ಮೊದಲು ಕೃಷ್ಣನಿಗೇ ಸಮರ್ಪಿಸಲಾಗುತ್ತದೆ. ಅದಾದ ನಂತರ ಮನೆಯವರೆಲ್ಲರು ಅದನ್ನು ಪ್ರಸಾದದ ರೀತಿಯಲ್ಲಿ ಸೇವಿಸುತ್ತಾರೆ. ಈ ವಿಚಾರ ತಿಳಿದಿರುವ ಅಕ್ಕ ಪಕ್ಕದ ಮನೆಯವರೆಲ್ಲರೂ ಆಗಾಗ ಬಂದು ಕೃಷ್ಣನ ದರ್ಶನ ಪಡೆದು, ಆಶೀರ್ವಾದವನ್ನೂ ಪಡೆದು ಹೋಗುತ್ತಿರುತ್ತಾರಂತೆ.

ಇದನ್ನೂ ಓದಿ: Viral Video : ಎಲ್ಲರ ಎದುರೇ ಯುವತಿಯ ಕೆನ್ನೆಗೆ ಬಾರಿಸಿದ ಸರ್ಕಾರಿ ಅಧಿಕಾರಿ!
ಈ ವಿಶೇಷ ಬಾಂಧವ್ಯದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮಹಿಳೆಗೆ ಕೃಷ್ಣನ ಕುರಿತಾಗಿ ಇರುವ ಪ್ರೀತಿಯ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ನೀವು ದೇವರ ತಾಯಿ ಎಂದು ಜನರು ಅವರನ್ನು ಪ್ರಶಂಸಿಸುತ್ತಿದ್ದಾರೆ. ಇನ್ನು ಕೆಲವರು ಈ ವಿಚಾರದಲ್ಲಿ ಋಣಾತ್ಮಕವಾಗಿಯೂ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದು ಭಕ್ತಿಯಲ್ಲ, ಮನೋರೋಗದಂತಿದೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Exit mobile version