ನವ ದೆಹಲಿ: 1000 ರೂಪಾಯಿ ಟೀ ಶರ್ಟ್ ವಿಚಾರವಾಗಿ ಮೆಟ್ರೊ ರೈಲಿನಲ್ಲೇ ಯುವಕ-ಯುವತಿ ಹೊಡೆದಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೆಹಲಿಯ ಮೆಟ್ರೊದಲ್ಲಿ ಯುವಕ-ಯುವತಿ ಪ್ರಯಾಣ ಮಾಡುತ್ತಿದ್ದ ವೇಳೆ ಯುವತಿ ಝರಾ ಕಂಪನಿಯಲ್ಲಿ 1000 ರೂಪಾಯಿಯ ಟಿ- ಶರ್ಟ್ ಸಿಕ್ಕಿತು ಎಂದು ಯುವಕನ ಬಳಿ ಖುಷಿಯಿಂದ ಹೇಳಿಕೊಂಡಿದ್ದಾಳೆ. ಈ ವೇಳೆ ಯುವಕ ಆಕೆಯನ್ನು ಕಿಚಾಯಿಸುವುದಕ್ಕಾಗಿ ಇದು 150 ರೂಪಾಯಿಗಿಂತ ಜಾಸ್ತಿಯಿಲ್ಲ ಎಂದು ರೇಗಿಸಿದ್ದಾನೆ. ಇದರಿಂದ ಕೋಪಗೊಂಡ ಯುವತಿ ಮೆಟ್ರೋ ರೈಲಿನಲ್ಲೇ ಎಲ್ಲರ ಮುಂದೆ ಯುವಕನಿಗೆ ಕಪಾಳಕ್ಕೆ ಹೊಡೆದಿದ್ದಾಳೆ.
ಇದನ್ನು ಓದಿ| ನಾಗಿನ್ ಹಾರ್ನ್ ಸದ್ದಿಗೆ ರಸ್ತೆಯಲ್ಲೇ ಕುಣಿದ ಯುವಕರು, ವಿಡಿಯೋ ವೈರಲ್
ಬಳಿಕ ಇಬ್ಬರ ನಡುವೆಯೂ ಜೋರಾಗಿ ಗಲಾಟೆ ನಡೆದಿದೆ, ಯುವತಿ ಹಲವು ಬಾರಿ ಯುವಕನಿಗೆ ಹೊಡೆದಿದ್ದಾಳೆ. ಈ ವೇಳೆ ಯುವಕ ಕೂಡ ಇದು ಸಾರ್ವಜನಿಕ ಸ್ಥಳ ಸುಮ್ಮನೆ ಇರು ಎಂದು ಎಚ್ಚರಿಸಿದ್ದಾನೆ. ಆದರೂ ಯುವತಿ ನಿಲ್ಲಿಸದೇ ಮತ್ತೆ ಹೊಡೆದು, ಗಲಾಟೆ ಮಾಡಿದ್ದಾಳೆ. ಈ ವೇಳೆ ಮೆಟ್ರೋದಲ್ಲಿದ್ದ ಕೆಲ ಪ್ರಯಾಣಿಕರು ಇವರ ಜಗಳ ನೋಡಿ ನಗುತ್ತಿದ್ದರೆ, ಮತ್ತು ಕೆಲವರು ಈ ರೀತಿ ಮೆಟ್ರೋದಲ್ಲೆಲ್ಲಾ ಗಲಾಟೆ ಮಾಡಿ ಬೇರೆಯವರಿಗೂ ತೊಂದರೆ ಇಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.
ಯುವಕ ಯುವತಿಯ ಗಲಾಟೆ ವಿಡಿಯೊವನ್ನು ಮೆಟ್ರೋದಲ್ಲಿದ್ದ ಹಲವರು ವಿಡಿಯೊ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ನೋಡಿದ ನೆಟ್ಟಿಗರು ಬಗೆ ಬಗೆಯ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನು ಓದಿ| ಸಲಿಂಗಿ ಪುರುಷರ ಅದ್ಧೂರಿ ಮದುವೆ; ಸಂಭ್ರಮದ ಕ್ಷಣದ ಫೋಟೊ, ವಿಡಿಯೊ ವೈರಲ್