Site icon Vistara News

VISTARA TOP 10 NEWS : ದಾಖಲೆ ಬರೆದ ಸಿಎಂ ಜನಸ್ಪಂದನೆ, ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಶಾಕ್‌?

Vistara Top 10 News 08022024

1. ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ
ಇಂದಿನ ಜನ ಸ್ಪಂದನೆಯಲ್ಲಿ (CM Janaspandana) 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. ಒಟ್ಟು 20 ಸಾವಿರ ಮಂದಿ ಭಾಗಿಯಾಗಿದ್ದಾರೆ. ಆಯಾ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಸಮಯ ಮಿತಿಯೊಳಗೆ ಬಗೆಹರಿಸುತ್ತಾರೆ. ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಆರೋಗ್ಯ ಚಿಕಿತ್ಸೆಗೆ ಸಹಾಯ ಕೋರಿ ಬಂದವರಿಗೆ ಪರಿಹಾರ ನೀಡಿದ ಸಿಎಂ ಸಿದ್ದರಾಮಯ್ಯ
ಈ ಸುದ್ದಿಯನ್ನೂ ಓದಿ: ಜನತಾ ದರ್ಶನಕ್ಕೆ ಹೋಗಲು ಆಗುತ್ತಿಲ್ಲವೆ? ಈ ನಂಬರ್‌ಗೆ ಕರೆ ಮಾಡಿ ಸಿಎಂಗೆ ದೂರು ನೀಡಿ!

2.ಯುಪಿಎ ದುರಾಡಳಿತದ ಶ್ವೇತಪತ್ರ ಮಂಡಿಸಿದ ವಿತ್ತ ಸಚಿವೆ; ಕಾಂಗ್ರೆಸ್‌ನಿಂದ ಕಪ್ಪು ಪತ್ರ!
ಯುಪಿಎಆಡಳಿತಾವಧಿಯ ಆರ್ಥಿಕ ಅವ್ಯವಸ್ಥೆಯ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಗುರುವಾರ ಶ್ವೇತ ಪತ್ರ (White Paper) ಮಂಡಿಸಿದರು. ಈ ಶ್ವೇತಪತ್ರದಲ್ಲಿ ಯುಪಿಎ ಆಡಳಿತದ 10 ವರ್ಷಗಳು ಮತ್ತು ಎನ್‌ಡಿಎ (NDA) ಆಡಳಿತದ 10 ವರ್ಷಗಳನ್ನು ತುಲನೆ ಮಾಡಲಾಗಿದೆ. ಇನ್ನು ಕೇಂದ್ರ ಸರ್ಕಾರದ ಶ್ವೇತ ಪತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ಬ್ಲ್ಯಾಕ್ ಪೇಪರ್(ಕಪ್ಪು ಪತ್ರ) ಮಂಡಿಸಿದೆ. ಇದರಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ: ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕಾದಿದೆ ಶಾಕ್‌
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕೂಟ 23 ಅಥವಾ 24 ಸ್ಥಾನಗಳಲ್ಲಿ ಜಯ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅಂದರೆ ಕಾಂಗ್ರೆಸ್‌ಗೆ ನಾಲ್ಕು ಅಥವಾ ಐದು ಸ್ಥಾನಗಳು ಮಾತ್ರ ದೊರೆಯುವ ಸಾಧ್ಯತೆ ಇದೆ ಎನ್ನುವುದು ಅದರ ಅಭಿಪ್ರಾಯ. ಇದು ಕಾಂಗ್ರೆಸ್‌ಗೆ ಬಿಗ್‌ ಶಾಕ್‌ ಆಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4.ಪ್ರಧಾನಿ ಮೋದಿ ಹಿಂದುಳಿದ ಜಾತಿಯಲ್ಲಿ ಹುಟ್ಟಿಲ್ಲ ಎಂದ ರಾಹುಲ್‌ ಗಾಂಧಿಗೆ ದಾಖಲೆ ಕೊಟ್ಟ ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇತರ ಹಿಂದುಳಿದ ವರ್ಗದಲ್ಲಿ ಹುಟ್ಟಿದವರಲ್ಲ. ಅವರು ಮೇಲ್ಜಾತಿಯಲ್ಲಿ ಹುಟ್ಟಿದವರು. ಹೀಗಾಗಿಯೇ ಅವರು ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ವಿವಾದಾತ್ಮಕ ಹೇಳಿಕೆಯನ್ನು (Modi Caste Politics) ಬಿಜೆಪಿ ತೀವ್ರವಾಗಿ ಆಕ್ಷೇಪಿಸಿದೆ. ರಾಹುಲ್‌ ಗಾಂಧಿ‌ ಹೇಳಿದ್ದು ಹಸಿ ಹಸಿ ಸುಳ್ಳು ಎಂದು ಬಿಜೆಪಿ ದಾಖಲೆ ಸಹಿತ ಮಾಹಿತಿ ನೀಡಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.ಕಾಂಗ್ರೆಸ್‌ ಸರ್ಕಾರದಲ್ಲೂ 40 ಶೇ. ಕಮಿಷನ್‌; ಆಗ ಶಾಸಕರು ಈಗ ಅಧಿಕಾರಿಗಳಿಂದ ವಸೂಲಿ!
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್‌ (40% Commission) ಬಾಂಬ್ ಸಿಡಿಸಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (Karnataka State Contractors Association) ಅಧ್ಯಕ್ಷ ಕೆಂಪಣ್ಣ, (Contractor Kempanna) ಇದೀಗ ಕಾಂಗ್ರೆಸ್‌ ಸರ್ಕಾರದ ಮೇಲೂ ಅದನ್ನೇ ಪ್ರಯೋಗ ಮಾಡಿದ್ದಾರೆ. ಸರ್ಕಾರ ಬದಲಾದರೂ ಕಮಿಷನ್‌ ಪದ್ಧತಿ ಮಾತ್ರ ಬದಲಾಗಿಲ್ಲ. ಹಿಂದೆ ನೇರವಾಗಿ ಶಾಸಕರು ಕೇಳುತ್ತಿದ್ದರೆ, ಈಗ ಅಧಿಕಾರಿಗಳೇ ವಸೂಲಿಗೆ ಇಳಿದಿದ್ದಾರೆ ಎಂದು ಆರೋಪಿಸಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6.ಎಚ್‌ಡಿಕೆ ಅಲ್ಲ ಖರ್ಗೆ ಸಿಎಂ ಆಗಬೇಕು ಅನ್ನೋದು ನನ್ನ ಬಯಕೆಯಾಗಿತ್ತು: ರಾಜ್ಯಸಭೆಯಲ್ಲಿ ದೇವೇಗೌಡ
ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Deve Gowda) ಅವರು ರಾಜ್ಯಸಭೆಯಲ್ಲಿ ಮಾತನಾಡಿದ್ದು, “ಮಲ್ಲಿಕಾರ್ಜುನ ಖರ್ಗೆ ಅವರೇ ಕರ್ನಾಟಕದ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಒತ್ತಾಯವಾಗಿತ್ತು” ಎಂದು ಹೇಳಿದರು. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಇದಕ್ಕೆ ಅವಕಾಶ ಕೊಡಲಿಲ್ಲ” ಎಂದು ಹೇಳಿದರು. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ದೇವೇಗೌಡರಿಗೆ ಈ ವಯಸ್ಸಲ್ಲಿ ಬಿಜೆಪಿ, ಮೋದಿ ಸಹವಾಸ ಏಕೆ ಬೇಕಿತ್ತು? ರಾಜ್ಯಸಭೆಯಲ್ಲಿ ಖರ್ಗೆ ಪ್ರಶ್ನೆ

7. ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಸಿಐಡಿ ತನಿಖೆಗೆ; ಸಿಎಂ ಆದೇಶ
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ (Parashurama Theme Park) ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ಕಳಪೆ ಹಾಗೂ ಅವ್ಯವಹಾರದ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿಗೆ ಒಪ್ಪಿಸಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಸಾಲಗಾರರಿಗೆ ಆರ್‌ಬಿಐ ಗುಡ್‌ ನ್ಯೂಸ್‌; ರೆಪೋ ದರ ಯಥಾಸ್ಥಿತಿ
ಗೃಹ, ವಾಹನ ಸಾಲ ಸೇರಿ ಹಲವು ರೀತಿಯ ಸಾಲಗಾರರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಸಿಹಿ ಸುದ್ದಿ ನೀಡಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (Shaktikanta Das) ಅವರು ಹಣಕಾಸು ನೀತಿ ಸಭೆಯ (RBI Monetary Policy) ತೀರ್ಮಾನಗಳನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ (Repo Rate) ಯಾವುದೇ ಬದಲಾವಣೆ ಮಾಡದಿರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಫ್ರೀ ಬಸ್‌ ಬಳಿಕ ಇನ್ನೊಂದು ಆಫರ್‌; ಬರಲಿದೆ ಲೇಡಿಸ್‌ ಓನ್ಲಿ ಪಿಂಕ್‌ ಬಸ್‌
ಕಾಂಗ್ರೆಸ್‌ ಸರ್ಕಾರ ) ಶಕ್ತಿ ಯೋಜನೆ (Shakti Scheme) ಎಲ್ಲ ಹೆಣ್ಮಕ್ಕಳಿಗೆ ಸಖತ್‌ ಪ್ರಿಯವಾಗಿದೆ. ಇದನ್ನು ಬಳಸಿಕೊಂಡು ಅವರು ಎಲ್ಲೆಡೆ ಸುತ್ತಾಡುವುದರ ಜತೆಗೆ, ನಿತ್ಯ ಪ್ರಯಾಣದ ಖರ್ಚಿನಲ್ಲಿ ಸಾಕಷ್ಟು ಹಣ ಉಳಿತಾಯ ಮಾಡುತ್ತಿದ್ದಾರೆ. ಇದರ ನಡುವೆಯೇ ರಾಜ್ಯ ಸರ್ಕಾರ ಮಹಿಳೆಯರಿಗೆ ವಿಶೇಷವಾದ ಇನ್ನೊಂದು ಕೊಡುಗೆ ನೀಡಲು ಮುಂದಾಗಿದೆ. ಅದುವೇ ಸ್ಪೆಷಲ್‌ ಮಹಿಳಾ ಬಸ್‌ (Special women Bus). ಅಂದರೆ ಸ್ಪೆಷಲ್‌ ಪಿಂಕ್‌ ಬಸ್‌ (Pink Bus for Women). ಅಂದರೆ ಮಹಿಳೆಯರು ಮಾತ್ರ ಪ್ರಯಾಣಿಸಲು ಅನುಕೂಲ ಇರುವ ವಿಶೇಷ ಬಸ್‌ಗಳನ್ನು ಸರ್ಕಾರ ರಸ್ತೆಗೆ ಇಳಿಸಲು ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಊರೋರಿಗೆಲ್ಲ ಮೈಕೈ ನೋವು; ದೇವಸ್ಥಾನವೇ ಈಗ ಆಸ್ಪತ್ರೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದ ಜನರು ಹೈರಾಣಾಗಿದ್ದಾರೆ. ಸಾಂಕ್ರಾಮಿಕ ಜ್ವರದಿಂದ (Viral fever‌) ತತ್ತರಿಸಿರುವ ಗ್ರಾಮಸ್ಥರಿಗೆ, ಗ್ರಾಮದ ದೇವಸ್ಥಾನ ಸೇರಿದಂತೆ ಎಲ್ಲಿ ಬೇಕೆಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version