Site icon Vistara News

VISTARA TOP 10 NEWS : ಜ್ಞಾನದೇಗುಲ ವಿವಾದಕ್ಕೆ ಕೈ ಇಟ್ಟ ಸರ್ಕಾರ, ಕಲ್ಕಿ ದೇಗುಲಕ್ಕೆ ಅಡಿಗಲ್ಲಿಟ್ಟ ಮೋದಿ, ಇತರ ಸುದ್ದಿ

Vistara Top 10 News 19022024

1.ಜ್ಞಾನದೇಗುಲ ರಾಜಕೀಯ: ಕೈಮುಗಿದು ಒಳಗೆ ಬಾ ಘೋಷ ವಾಕ್ಯ ಬದಲಿಸಿ ಬಳಿಕ ಯು ಟರ್ನ್‌ !
ವಸತಿ ಶಾಲೆಗಳ (Residential School) ಪ್ರವೇಶ ದ್ವಾರದಲ್ಲಿ ಬರೆಯಲಾಗಿರುವ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಘೋಷವಾಕ್ಯವನ್ನು ʻಜ್ಞಾನದೇಗುಲವಿದು, ಧೈರ್ಯವಾಗಿ ಪ್ರಶ್ನೆ ಮಾಡುʼ ಎಂದು ಬದಲಿಸಿದ್ದು ಭಾರಿ ಸದ್ದು ಮಾಡಿದೆ. ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕೆ. ಮಣಿವಣ್ಣನ್‌ ಅವರು ಟೆಲಿಗ್ರಾಂ ಮೂಲಕ ಈ ಆದೇಶ ನೀಡಿದ್ದರು. ಆದರೆ, ಸರ್ಕಾರ ಇದು ತನಗೆ ಗೊತ್ತೇ ಇಲ್ಲ ಎಂದು ಹೇಳಿದ್ದಲ್ಲದೆ, ಹಿಂದಿನ ಘೋಷಣೆಯನ್ನೇ ಉಳಿಸಿಕೊಳ್ಳಲು ಸೂಚನೆ ನೀಡಿದೆ. ಈ ಬೆಳವಣಿಗೆ ಪ್ರತಿಪಕ್ಷಗಳ ಕೈಗೆ ಒಳ್ಳೆಯ ಆಯುಧವಾಗಿದೆ.

ಪೂರ್ಣ ವರದಿ : Residential Schools: ಶಾಲೆಯಲ್ಲಿ ಕುವೆಂಪು ಸಾಲನ್ನೇ ಬದಲಿಸಿದ ಸರ್ಕಾರ! ವಿಪಕ್ಷ ಕೆಂಡ
ಇನ್ನೊಂದು ವರದಿ : ಮತ್ತೆ ಬದಲಾಯಿತು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ! ಆಕ್ರೋಶಕ್ಕೆ ಮಣಿದ ಸರ್ಕಾರ
ಇನ್ನೊಂದು ವರದಿ: ಮಣಿವಣ್ಣನ್‌ ಹುಚ್ಚು ಆದೇಶ. ಅಧಿಕಾರಿಗಳು ಸರ್ಕಾರದ ಮಾತು ಕೇಳ್ತಿಲ್ಲ: ಆರ್‌. ಅಶೋಕ್‌

2. ದೇಶದ ಮೊದಲ ಕಲ್ಕಿ ದೇವಾಲಯ ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ಸ್ಥಾಪನೆ
ದೇಶದ ಮೊದಲ ಕಲ್ಕಿ ದೇವಾಲಯ ನಿರ್ಮಾಣಕ್ಕೆ (Kalki Dham Temple) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ (Sambhal District) ಕಲ್ಕಿ ದೇವಾಲಯ ನಿರ್ಮಾಣ ಮಾಡುತ್ತಿದ್ದು, ಐದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಶಂಕುಸ್ಥಾಪನೆ ಬಳಿಕ ಮಾತನಾಡಿದ ಮೋದಿ, “ದೇಶದ ಜನರು, ಉತ್ತರ ಪ್ರದೇಶದ ಭಕ್ತಿಯ ಅಸ್ಮಿತೆಯಾಗಿ ಕಲ್ಕಿ ಧಾಮ ಮಂದಿರವು ತಲೆ ಎತ್ತಲಿದೆ” ಎಂದು ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇದನ್ನೂ ಓದಿ: Kalki Dham Temple: ಕಲ್ಕಿ ಧಾಮ ದೇಗುಲಕ್ಕೆ ಮೋದಿ ಶಂಕುಸ್ಥಾಪನೆ; ಜಗತ್ತಲ್ಲೇ ಇದೇಕೆ ವಿಶಿಷ್ಟ?

3. ಎಸ್ಟಿ ಸೋಮಶೇಖರ್‌-ಡಿ.ಕೆ. ಶಿವಕುಮಾರ್‌ ಇನ್ನೂ ಹತ್ತಿರ, ಗೋಪಾಲಯ್ಯ ಕೂಡಾ ಒಳ್ಳೆ‌ ಫ್ರೆಂಡ್‌!
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಈ ನಡುವೆ, ಬಿಜೆಪಿ ಶಾಸಕರಾದ ಎಸ್‌ಟಿ ಸೋಮಶೇಖರ್‌ ಮತ್ತು ಗೋಪಾಲಯ್ಯ ಅವರು ತನ್ನ ಬೆಸ್ಟ್‌ ಫ್ರೆಂಡ್ಸ್‌ ಎಂದು ಹೇಳಿಕೊಂಡಿದ್ದಾರೆ ಡಿ.ಕೆ. ಶಿವಕುಮಾರ್‌. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4.Arvind Kejriwal: 6ನೇ ಬಾರಿಗೂ ಇ.ಡಿ ಸಮನ್ಸ್‌ಗೆ ಕ್ಯಾರೇ ಎನ್ನದ ಕೇಜ್ರಿವಾಲ್;‌ ಈ ಸಲ ಅರೆಸ್ಟ್?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ (Excise Policy Case) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರು ಇ.ಡಿ ಅಧಿಕಾರಿಗಳು ನೀಡಿದ ಆರನೇ ಸಮನ್ಸ್‌ಗೂ ಕ್ಯಾರೇ ಎಂದಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.Janaspandana 2.0 : ಇನ್ನು ಮುಂದೆ ವಿಭಾಗ ಮಟ್ಟದಲ್ಲೂ ಸಿಎಂ ಜನಸ್ಪಂದನ, ಮೊದಲು ಕಲಬುರಗಿ
ಇತ್ತೀಚೆಗೆ ವಿಧಾನಸೌಧ ಮುಂಭಾಗ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಜನಸ್ಪಂದನ ಕಾರ್ಯಕ್ರಮವು (Janaspandana 2.0) ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ವಿಭಾಗೀಯ ಮಟ್ಟದಲ್ಲೂ (Janaspandana in Division level) ಸಿಎಂ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದು ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ (LK Atiq) ತಿಳಿಸಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6.Farmers Protest: ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ದಿಢೀರ್‌ ಸ್ಥಗಿತ; ಕೇಂದ್ರದ ಆಫರ್‌ ಏನು?
ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಹಾಗೂ ಕೇಂದ್ರ ಸರ್ಕಾರ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆಯು ಆರಂಭಿಕವಾಗಿ ಯಶಸ್ಸು ಕಂಡಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ (Minimum Support Price) ನೀಡುವ ಕುರಿತು ಕೇಂದ್ರ ಸರ್ಕಾರ ಹೊಸ ಯೋಜನೆ ರೂಪಿಸಿದ್ದು, ಇದರ ಕುರಿತು ಅಧ್ಯಯನ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಹಾಗಾಗಿ, ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ (Farmers Protest) ಎರಡು ದಿನಗಳವರೆಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. Tipu Cutout: ಮತ್ತೆ ಧರ್ಮ ದಂಗಲ್;‌ ಮಂಗಳೂರಿನಲ್ಲಿ ಟಿಪ್ಪು ಕಟೌಟ್‌ ವಿವಾದ
ಜೆರೋಸಾ ಶಾಲೆಯ (Saint Zerosa school) ಪ್ರಕರಣ ಮರೆಗೆ ಸರಿಯುವ ಮುನ್ನವೇ ಮಂಗಳೂರಿನಲ್ಲಿ ಇನ್ನೊಂದು ಮತೀಯ ವಿವಾದ ಶುರುವಾಗಿದೆ. ಇದೀಗ ಟಿಪ್ಪು ಕಟೌಟ್‌ (Tipu Cutout) ವಿವಾದ ಎಬ್ಬಿಸಿದೆ. ಡಿವೈಎಫ್ಐ ಕಾರ್ಯಕರ್ತರು ಅಳವಡಿಸಿರುವ ಟಿಪ್ಪು ಸುಲ್ತಾನನ ಕಟೌಟ್ ತೆರವಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹರೇಕಳದಲ್ಲಿ ಟಿಪ್ಪು ಕಟೌಟ್ ಹಾಕಲಾಗಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.IT Salary Package: ಐಟಿ ಉದ್ಯೋಗಿಗಳಿಗೆ ಭಾರೀ ವೇತನ ಕಡಿತ! 1 ವರ್ಷದಲ್ಲಿ ಎಷ್ಟು ಕತ್ತರಿ ಬಿತ್ತು ನೋಡಿ
ಮಾಹಿತಿ ತಂತ್ರಜ್ಞಾನ (Information Technology) ಕ್ಷೇತ್ರದಲ್ಲಿ ಭಾರತದ ಐಟಿ ವೃತ್ತಿಪರರ (IT Jobs) ವೇತನ ಪ್ಯಾಕೇಜ್‌ಗಳು (IT Salary Package) ಶೇಕಡಾ 30-40 ರಷ್ಟು ಕಡಿಮೆಯಾಗಿದೆ. ಒಂದು ವರ್ಷದ ಹಿಂದೆ ವಾರ್ಷಿಕ ಸುಮಾರು 1 ಕೋಟಿ ರೂಪಾಯಿಯ ಪ್ಯಾಕೇಜ್‌ ಪಡೆಯುತ್ತಿದ್ದವರು ಈಗ ಅದರ ಅರ್ಧದಷ್ಟು ಮಾತ್ರ ಪಡೆಯುತ್ತಿ ದ್ದಾರೆ ಎಂದು ಪ್ರಮುಖ ವಾಣಿಜ್ಯ ಮಾಧ್ಯಮವೊಂದು ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. Nithyananda Swamy: ನಿತ್ಯಾನಂದನ ಆಶ್ರಮದಲ್ಲಿ ಭಕ್ತ ಒತ್ತೆಯಾಳು! ಕರ್ನಾಟಕ ಹೈಕೋರ್ಟ್‌ ನೋಟಿಸ್
ಸ್ವಘೋಷಿತ ದೇವ ಮಾನವಹಾಗೂ ಅತ್ಯಾಚಾರ ಸೇರಿದಂತೆ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿಗೆ (Nithyananda Swamy) ಕರ್ನಾಟಕ ಹೈಕೋರ್ಟ್ನೋ ಟಿಸ್ ಕಳುಹಿಸಿದೆ. ಜಾರ್ಖಂಡ್‌ನ ಇನ್ಫೋಸಿಸ್‌ನ ಮಾಜಿ ಸಾಫ್ಟ್‌ವೇರ್ ಎಂಜಿನಿಯರ್ ಕೃಷ್ಣಕುಮಾರ್ ಪಾಲ್ ಅವರನ್ನು ನಿತ್ಯಾನಂದ ಆಶ್ರಮದಲ್ಲಿ ಬಂಧಿಸಿಡಲಾಗಿದೆ ಎಂಬ ದೂರಿನ ಆಧಾರದಲ್ಲಿ ನೋಟಿಸ್‌ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10.‘ಕರಿಮಣಿ ಮಾಲೀಕ’ನಾಗಲು ಹುಡುಗಿ ಸಿಗದೆ ರಿಕ್ಷಾಗೆ ಬಯೋಡೇಟಾ ಅಂಟಿಸಿದ ‘ಆಟೋ ರಾಜ’!
ಮದುವೆಗೆ ಹುಡುಗಿ ಸಿಗದೆ ಬೇಸತ್ತ ಆಟೋ ಚಾಲಕನೊಬ್ಬ, ತನ್ನ ಇ-ರಿಕ್ಷಾಗೆ (E-Rikshaw) ಫೋಟೊ ಹಾಗೂ ಸ್ವವಿವರವುಳ್ಳ ಬಯೋಡೇಟಾ ಅಂಟಿಸಿದ್ದಾನೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ (Viral News) ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version