Site icon Vistara News

VISTARA TOP 10 NEWS : ಮುಸ್ಲಿಂ ದೇಶದಲ್ಲಿ ಹಿಂದೂ ದೇಗುಲ‌ ಉದ್ಘಾಟನೆ, ಮಾಕೆನ್‌ ರಾಜ್ಯದಿಂದ ಟಿಕೆಟ್‌, ಇತರ ಸುದ್ದಿ

vistara-top-10-news-hindu-temple-in-muslim-country-unveiled-ajay-maken-gets-rajyasabha-ticket-from-karnataka-and-other-news

1.ಮುಸ್ಲಿಂ ದೇಶದಲ್ಲಿ ವೇದಘೋಷಗಳೊಂದಿಗೆ ಹಿಂದೂ ದೇಗುಲ ಉದ್ಘಾಟಿಸಿದ ಮೋದಿ
ಯುಎಇ ( ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಬುಧಾಬಿಯಲ್ಲಿ (Abu Dhabi Hindu Temple) ನಿರ್ಮಾಣ ಮಾಡಲಾಗಿರುವ ಬಿಎಪಿಎಸ್ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು. ಇದು ಯುಎಇಯ ಮೊದಲ ಹಿಂದೂ ದೇಗುಲವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಉಗ್ರವಾದ ವಿರುದ್ಧ ಹೋರಾಡೋಣ; ದುಬೈನಲ್ಲಿ ಮೋದಿ ಗುಡುಗು

2.ಅಜಯ್‌ ಮಾಕೆನ್‌ಗೆ ರಾಜ್ಯದಿಂದ ಟಿಕೆಟ್‌; ನಾಸೀರ್‌ ಹುಸೇನ್‌, ಜೆಸಿಗೆ ಮತ್ತೆ ಅದೃಷ್ಟ
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ (Rajyasabha Election) ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಿಂದ ‌ ಡಾ. ಸಯ್ಯದ್‌ ನಾಸಿರ್‌ ಹುಸೇನ್‌ ಜಿ.ಸಿ ಚಂದ್ರಶೇಖರ್‌ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಅಜಯ್‌ ಮಾಕೆನ್‌ (Ajay Maken) ಅವರಿಗೆ ಟಿಕೆಟ್‌ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಜೆ ಪಿ ನಡ್ಡಾ, ಅಶೋಕ್‌ ಚೌಹಾಣ್‌ಗೆ ರಾಜ್ಯಸಭೆ ಬಿಜೆಪಿ ಟಿಕೆಟ್‌ ಘೋಷಣೆ
ಈ ಸುದ್ದಿಯನ್ನೂ ಓದಿ: ರಾಜಸ್ಥಾನದಿಂದ ರಾಜ್ಯಸಭೆ ಕಣಕ್ಕಿಳಿದ ಸೋನಿಯಾ ಗಾಂಧಿ; ರಾಯ್‌ಬರೇಲಿ ಯಾರಿಗೆ?

3. ಸೀರಿಯಲ್‌, ರಿಯಾಲಿಟಿ ಶೋದಲ್ಲಿ ಮಕ್ಕಳ ಅಭಿನಯ; ಡಿಸಿ ಅನುಮತಿ ಸಹಿತ ಹಲವು ಕಂಡಿಷನ್ಸ್‌
ಮನರಂಜನಾ ಕ್ಷೇತ್ರದಲ್ಲಿ ಮಕ್ಕಳನ್ನು ಬಳಕೆ ಮಾಡುವ ವಿಚಾರದಲ್ಲಿ ಕಾರ್ಮಿಕ ಇಲಾಖೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಶೂಟಿಂಗ್ ನಲ್ಲಿ 5 ಗಂಟೆಗಿಂತ ಹೆಚ್ಚು ಅವಧಿ ಮಕ್ಕಳನ್ನು ಬಳಸುವಂತಿಲ್ಲ. ಶಿಕ್ಷಣಕ್ಕೆ ತೊಂದರೆಯಾಗದಂತೆ ಮಕ್ಕಳನ್ನು ನಿರಂತರವಾಗಿ 27 ದಿನಕ್ಕಿಂತ ಹೆಚ್ಚು ದಿನಗಳನ್ನು ಈ ಕೆಲಸಗಳಲ್ಲಿ ತೊಡಗಿಸಬಾರದು ಎಂದು ಸೂಚಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ರಾಜ್ಯಕ್ಕೆ 1 ರೂ. ಜಿಎಸ್‌ಟಿ ಸಹ ಬಾಕಿ ಇಲ್ಲ;‌ ಸುಳ್ಳುರಾಮಯ್ಯರಿಂದ ಆರ್ಥಿಕ ದುಸ್ಥಿತಿ: ಪ್ರಲ್ಹಾದ್‌ ಜೋಶಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ. ಕೇಂದ್ರದಿಂದ ನಾವು ಹೆಚ್ಚುವರಿ ಮಾತ್ರವಲ್ಲ ಅಡ್ವಾನ್ಸ್ ಹಣ ಕೊಡುತ್ತಿದ್ದೇವೆ. ಇನ್ನು ಒಂದೇ ಒಂದು ರೂಪಾಯಿ ಜಿಎಸ್‌ಟಿ ಹಣ ಕೂಡ ಬಾಕಿ ಇಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.ರೈತರಿಗೆ ಬೆಂಬಲ ಗ್ಯಾರಂಟಿ ನೀಡುತ್ತಿರುವ ಕಾಂಗ್ರೆಸ್‌ 2007ರಲ್ಲಿ ಏನು ಹೇಳಿತ್ತು ನೋಡಿ!
ಇದೀಗ ರಾಜಧಾನಿಗೆ ಬಂದಿರುವ ರೈತರ ಮುಷ್ಕರವನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ (Congress) ಪಕ್ಷ, ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆ (Maximum support price) ನೀಡಬೇಕೆಂಬ ರೈತರ ಬೇಡಿಕೆಗೆ ಪೂರಕವಾಗಿ ಮಾತನಾಡಿದೆ. 2024ರಲ್ಲಿ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ (MSP) ನೀಡುವುದಾಗಿ ರೈತರಿಗೆ ಭರವಸೆ ನೀಡಿದೆ. ಆದರೆ 2007ರಲ್ಲಿ ಸ್ವಾಮಿನಾಥನ್ ಆಯೋಗ (MS Swaminathan Commission) ಎಂಎಸ್‌ಪಿ ಸೂತ್ರ ನೀಡಿದಾಗ ಆಗಿನ ಯುಪಿಎ ಸರ್ಕಾರ (UPA Govt) ಏನು ಹೇಳಿತ್ತು ಗೊತ್ತೆ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಗಗನಸಖಿ ಅಯ್ನಾಜ್‌ ಕುಟುಂಬದ ಸಾಮೂಹಿಕ ಹತ್ಯೆಯ ನೈಜ ಕಾರಣ ಬಯಲು; ಇದು chargesheet
ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ (Udupi Murder) ಮಾಡಿದ ಘಟನೆಯ ಹಿಂದಿನ ನಿಜವಾದ ಕಾರಣ ಏನು ಎನ್ನುವುದು ಈಗ ಬಯಲಾಗಿದೆ. ಅದುವೇ ಗಗನಸಖಿ ಅಯ್ನಾಜ್‌ ಮದುವೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7.ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅವಧಿ ಮತ್ತೆ 3 ತಿಂಗಳು ವಿಸ್ತರಣೆ; ವಿಧಾನ ಪರಿಷತ್‌ನಲ್ಲಿ ಸರ್ಕಾರ ಘೋಷಣೆ
ರಾಜ್ಯದಲ್ಲಿ ಎಲ್ಲ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್‌ ನಂಬರ್‌ ಪ್ಲೇಟ್‌ – High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಲು ರಾಜ್ಯ ಸರ್ಕಾರ‌ ನೀಡಿದ ಗಡುವು ಮೂರು ತಿಂಗಳು ಅವಧಿಯನ್ನು ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.ಭಾರತದಲ್ಲೇ ಐಪಿಎಲ್‌; ಖಚಿತಪಡಿಸಿದ ಅಧ್ಯಕ್ಷ ಅರುಣ್‌ ಧುಮಾಲ್‌
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌(IPL 2024) ಭಾರತದಲ್ಲಿಯೇ ಆಯೋಜನೆಗೊಳ್ಳಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ಖ ಚಿತಪಡಿಸಿದ್ದಾರೆ. ಈ ಹಿಂದೆ, ಲೋಕಸಭೆ ಚುನಾವಣೆಯ ಕಾರಣ ಈ ಬಾರಿಯ ಟೂರ್ನಿ(Indian Premier League) ವಿದೇಶದಲ್ಲಿ ನಡೆಯಲಿದೆ ಎಂದು ಊಹಾಪೋಹಗಳು ಇದ್ದವು. ಇದೀಗ ಅರುಣ್ ಧುಮಾಲ್ ಭಾರತದಲ್ಲಿಯೇ ಟೂರ್ನಿ ನಡೆಯಲಿದೆ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.ಪೂನಂ ಪಾಂಡೆಗೆ ಕಾನೂನು ಸಂಕಷ್ಟ; 100 ಕೋಟಿ ರೂ. ಮಾನನಷ್ಟ ಕೇಸ್‌
ʼಸರ್ವಿಕಲ್‌ ಕ್ಯಾನ್ಸರ್‌ (cervical cancer) ಬಗ್ಗೆ ಅರಿವು ಮೂಡಿಸುವʼ ಹಿನ್ನೆಲೆಯಲ್ಲಿ ತನ್ನ ಫೇಕ್‌ ಸಾವಿನ (Fake death) ಮೂಲಕ ಪ್ರಚಾರ ಪಡೆದ ಪೂನಂ ಪಾಂಡೆಗೆ (Poonam Pandey) ಈಗ ಕಾನೂನು ಸಂಕಷ್ಟ ಎದುರಾಗಿದೆ. ನಟಿ ಮತ್ತು ಆಕೆಯ ಮಾಜಿ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ (defamation case) ದಾಖಲಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ರಾಕ್‌ಲೈನ್‌ಗೆ ಬಿಬಿಎಂಪಿ ಶಾಕ್‌; ಬೆಂಗಳೂರಿನ ಮಾಲ್‌ಗೆ ಬೀಗ; ನಿಜ ಸಂಗತಿ ಏನು?
ಇತ್ತೀಚಿನ ಕಾಟೇರ ಸೇರಿದಂತೆ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿರುವ ಸಿನಿಮಾ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಒಡೆತನದ ರಾಕ್‌ಲೈನ್‌ ಮಾಲ್‌ಗೆ (Rockline Mall) ಬಿಬಿಎಂಪಿ ಅಧಿಕಾರಿಗಳು (BBMP officials) ಬೀಗ ಜಡಿದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಮೇಯರ್‌ ಮಾಡ್ತೀನಿ ಅಂತ ಅಶೋಕ್‌ 1 ಕೋಟಿ ಪಡೆದಿದ್ದರು; ಪದ್ಮರಾಜ್‌ ಸ್ಫೋಟಕ ಹೇಳಿಕೆ

Exit mobile version