1.ಜನಸ್ಪಂದನ ಸಭೆ ವೇದಿಕೆಯಲ್ಲೇ IAS ಅಧಿಕಾರಿಯ ಮೊಬೈಲ್ ಆಟ: ಭುಗಿಲೆದ್ದ ಜನಾಕ್ರೋಶ
ಜನರ ಸಂಕಷ್ಟ ಕೇಳಲು ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ (Janaspandana meeting) ರಾಮನಗರದ ಜಿಪಂ ಸಿಇಒ ಸಿಇಒ ದಿಗ್ವಿಜಯ್ ಬೋಡ್ಕೆ ಅವರು ಕಾಲ ಮೇಲೆ ಕಾಲು ಹಾಕಿಕೊಂಡು ಮೊಬೈಲ್‌ನಲ್ಲಿ ಆಟವಾಡುತ್ತಾ ಕುಳಿತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ನೀತಿ ರೂಪಿಸಬೇಕು ಎಂದು ಬಿಜೆಪಿ ಸೇರಿದಂತೆ ರಾಜಕೀಯ ನಾಯಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ರಾಜ್ಯದ ನಾಲ್ಕು ದಿಕ್ಕುಗಳಲ್ಲೂ ಶುರುವಾಯ್ತೇ ಆಪರೇಷನ್ ಕಮಲ?; 50 ಕೋಟಿ ಆಮಿಷ!
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ (Operation Kamala) ಸೌಂಡ್ ಮಾಡುತ್ತಿದೆ. ಒಂದು ಕಡೆಯಲ್ಲಿ ಮಾಜಿ ಶಾಸಕರು, ಬಿಜೆಪಿಯ ಹಿರಿಯ ನಾಯಕರನ್ನು ಕಾಂಗ್ರೆಸ್ ಹೈಜಾಕ್ ಮಾಡುತ್ತಿದ್ದರೆ, ಇತ್ತ ಬಿಜೆಪಿ ಸೈಲೆಂಟಾಗಿ ಶಾಸಕರನ್ನು ಟಾರ್ಗೆಟ್ ಆಗಿ ಇಟ್ಟುಕೊಂಡ ಆಪರೇಷನ್ ಕಮಲ ನಡೆಸಲು ಸಜ್ಜಾಗುತ್ತಿದೆ. ಹೀಗೆಂದು ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿ ಹೇಳಿಕೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕರ್ನಾಟಕಕ್ಕೆ ತೆಲಂಗಾಣ ಶಾಕ್: ಕೈ ತಪ್ಪಿತು 2800 ಕೋಟಿ ಮೌಲ್ಯದ ಸೆಮಿಕಂಡಕ್ಟರ್ ಯೋಜನೆ
ಮೈಸೂರಿನಲ್ಲಿ ಆರಂಭವಾಗಲಿದೆ ಎಂದು ಹೇಳಲಾಗಿದ್ದ ಕೇಯ್ನ್ಸ್ ಟೆಕ್ನಾಲಜೀಸ್ (Kaynes Technology) ಇಂಡಿಯಾ ಲಿಮಿಟೆಡ್ ಕಂಪನಿಯ ಸೆಮಿ ಕಂಡಕ್ಟರ್ ಘಟಕ (Semi conductor Unit) ಈಗ ತೆಲಂಗಾಣಕ್ಕೆ ಶಿಫ್ಟ್ ಆಗಿದೆ. ಈ ವಿಚಾರದಲ್ಲಿ ಈಗ ಉದ್ಯಮಿ ಮೋಹನ್‌ದಾಸ್ ಪೈ (Mohandas pai) ಮತ್ತು ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ನಡುವೆ ಸಣ್ಣಮಟ್ಟದ ಜಟಾಪಟಿ ನಡೆದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಅಭಿಯಾನ; ಕೇಂದ್ರ – ಮೋದಿ ವಿರುದ್ಧ ಸಿದ್ದರಾಮಯ್ಯ ವಾರ್!
ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾ ಮೂಲಕ ವಾರ್ ಶುರು ಮಾಡಿದ್ದಾರೆ. ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಹೆಸರಲ್ಲಿ ಅಭಿಯಾನವನ್ನು ಶುರು ಮಾಡಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ, ತಮ್ಮ ಪ್ರಶ್ನೆಗಳಿಗೆ ಉತ್ತರಿಸಿ (AnswerMadiModi) ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಪ್ಲ್ಯಾನ್ ಹಿಂದಿದೆ ಬಿಬಿಎಂಪಿ ವಿಭಜನೆ ತಂತ್ರ
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಚಿಂತನೆಯಲ್ಲಿದ್ದಾರಾ ಡಿ.ಕೆ. ಶಿವಕುಮಾರ್ ಎಂಬ ಪ್ರಶ್ನೆ ಮೂಡಿದೆ. ಕನಕಪುರವನ್ನು ಬೆಂಗಳೂರಿಗೆ ಸೇರಿಸಿ, ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಚಿಂತನೆಯಲ್ಲಿದ್ದಾರೆ. ಈ ಮೂಲಕ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವುದು ಸಹ ಈ ಯೋಜನೆಯ ಹಿಂದೆ ಅಡಗಿದೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಕಾಂಗ್ರೆಸ್ ನಾಯಕರ ಬೆನ್ನತ್ತಿದ ಹುಲಿ ಉಗುರು ಸಂಕಷ್ಟ, ವರ್ತೂರು ಸಂತೋಷ್ ರಿಲೀಸ್
ಹುಲಿಯುಗುರು ಸಂಕಷ್ಟ ಈ ರಾಜ್ಯದ ಕಾಂಗ್ರೆಸ್ ನಾಯಕರ ಬೆನ್ನುಹತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮತ್ತು ಅಳಿಯ ಹಾಗೂ ಲಕ್ಷ್ಮಣ ಸವದಿ ಅವರ ಸೋದರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇತ್ತ ಹುಲಿಯುಗುರು ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಕೋರ್ಟ್ ಜಾಮೀನು ನೀಡಿದ್ದು, ಅವರು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಸುದ್ದಿ 1: Varthur Santhosh : ವರ್ತೂರು ಸಂತೋಷ್ ಜೈಲಿನಿಂದ ಬಿಡುಗಡೆ; ಮತ್ತೆ ಬಿಗ್ ಬಾಸ್ ಮನೆಗೆ?
ಸುದ್ದಿ 2: Tiger Nail : ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೂ ಅಧಿಕಾರಿಗಳ ಲಗ್ಗೆ; ಮಗ ಮೃಣಾಲ್ ಪೆಂಡೆಂಟ್ ವಶಕ್ಕೆ
ಸುದ್ದಿ 3: Tiger Nail: ನನ್ನ ಸಹೋದರನ ಬಳಿ ಇರೋದು ಪ್ಲಾಸ್ಟಿಕ್ ಹುಲಿ ಉಗುರು: ಚಿದಾನಂದ ಸವದಿ
ಸುದ್ದಿ 4: ನವಿಲು ಗರಿ ಬಳಸಬಹುದು ಎಂದ ಈಶ್ವರ ಖಂಡ್ರೆ; ದರ್ಗಾ, ಮಸೀದಿಗಳಿಗಿಲ್ಲ ಕಾನೂನು ತೊಡಕು
7. ಅಸ್ಸಾಂನಲ್ಲಿ 2ನೇ ಮದುವೆ ನಿಷೇಧಿಸಿದ ಹಿಮಂತ ಬಿಸ್ವಾ ಸರ್ಕಾರ; ಮುಸ್ಲಿಮರಿಗೂ ಅನ್ವಯ!
ಅಸ್ಸಾಂನಲ್ಲಿ ಸರ್ಕಾರಿ ನೌಕರರು 2ನೇ ಮದುವೆಯಾಗುವಂತಿಲ್ಲ. ಆಯಾ ಧರ್ಮದಲ್ಲಿ ಎರಡನೇ ಮದುವೆಯಾಗಲು ಅನುಮತಿ ಇದ್ದರೂ, ಸರ್ಕಾರಿ ನೌಕರರು (Government Employees) ಎರಡನೇ (Second Marriage) ಮದುವೆಯಾಗುವಂತಿಲ್ಲ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ. ಇದು ಸಮಾನ ನಾಗರಿಕ ಸಂಹಿತೆ ಜಾರಿಯ ಮುನ್ಸೂಚನೆಯೇ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಹಳೇ ಪಿಂಚಣಿ ಜಾರಿ, 2 ರೂ.ಗೆ ಗೋವಿನ ಸಗಣಿ; ರಾಜಸ್ಥಾನದಲ್ಲಿ 5 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್!
ಕರ್ನಾಟಕದಲ್ಲಿ ಘೋಷಿಸಿದ ಉಚಿತ ಗ್ಯಾರಂಟಿ ಯೋಜನೆಗಳನ್ನು ರಾಜಸ್ಥಾನದಲ್ಲೂ ಕಾಂಗ್ರೆಸ್ ಪ್ರಕಟಿಸಿದೆ “ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆ ಜಾರಿ, 2 ರೂ.ಗೆ ಗೋವಿನ ಸಗಣಿ ಸೇರಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ” ಎಂದು ಘೋಷಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ
ಧಾರಾವಾಹಿಗಳ (Kannada Serials TRP) ಹೊರತಾಗಿ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಅತಿದೊಡ್ಡ ರಿಯಾಲಿಟಿ ಶೋ ಎಂದು ಖ್ಯಾತಿ ಪಡೆದಿರುವ ಬಿಗ್ ಬಾಸ್ (Bigg Boss)ಕಳೆದ ವರ್ಷಕ್ಕಿಂತ ಈ ವರ್ಷ ಬಿಗ್ ಬಾಸ್ ನೋಡುವವರ ಸಂಖ್ಯೆ ಹೆಚ್ಚಿದೆ. ಒಳ್ಳೆಯ ಟಿಆರ್‌ಪಿ ಪಡೆದು ಈ ರಿಯಾಲಿಟಿ ಶೋ ಮುನ್ನುಗ್ಗುತ್ತಿದೆ. ಈ ವಾರದ ಟಿಆರ್‌ಪಿ ಲಿಸ್ಟ್ ಇಲ್ಲಿದೆ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10 ನಾಳೆ ವರ್ಷದ ಕೊನೆಯ ಚಂದ್ರಗ್ರಹಣ: ಯಾವ ರಾಶಿಗೆ ಪರಿಣಾಮ? ನೀವೇನು ಮಾಡಬೇಕು?
ಭಾರತದಲ್ಲಿ ಶನಿವಾರ (ಅಕ್ಟೋಬರ್ 28) ಮಧ್ಯರಾತ್ರಿ ಚಂದ್ರ ಗ್ರಹಣ (Lunar eclipse) ಸಂಭವಿಸಲಿದೆ. ಇದರ ಪರಿಣಾಮಗಳ ಸಂಪೂರ್ಣ ವಿವರ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ