Operation Kamala : ಮತ್ತೆ ಆಪರೇಷನ್‌ ಕಮಲ; ಸಂತೋಷ್‌ ಟೀಮ್‌ನಿಂದ 50 ಕೋಟಿ ರೂ. ಆಫರ್? - Vistara News

ಕರ್ನಾಟಕ

Operation Kamala : ಮತ್ತೆ ಆಪರೇಷನ್‌ ಕಮಲ; ಸಂತೋಷ್‌ ಟೀಮ್‌ನಿಂದ 50 ಕೋಟಿ ರೂ. ಆಫರ್?

Operation Kamala : ಬಿಎಸ್‌ವೈ ಆಪ್ತ ಎನ್‌.ಆರ್‌. ಸಂತೋಷ್‌ ಮತ್ತೆ ಸಕ್ತಿಯರಾಗಿದ್ದಾರೆ. ಕಾಂಗ್ರೆಸ್‌ ಶಾಸಕರ ಮನೆಗಳಿಗೆ ಓಡಾಡುತ್ತಿದ್ದಾರೆ. 50 ಕೋಟಿ ಆಮಿಷ ಒಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ರವಿ ಗಣಿಗ ಆರೋಪಿಸಿದ್ದಾರೆ.

VISTARANEWS.COM


on

Ravi Ganiga Operation Kamala
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಾವಣಗೆರೆ: ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲ (Operation Kamala) ಸೌಂಡ್‌ ಮಾಡುತ್ತಿದೆ. ಒಂದು ಕಡೆಯಲ್ಲಿ ಮಾಜಿ ಶಾಸಕರು, ಬಿಜೆಪಿಯ ಹಿರಿಯ ನಾಯಕರನ್ನು ಕಾಂಗ್ರೆಸ್‌ ಹೈಜಾಕ್‌ ಮಾಡುತ್ತಿದ್ದರೆ, ಇತ್ತ ಬಿಜೆಪಿ ಸೈಲೆಂಟಾಗಿ ಶಾಸಕರನ್ನು ಟಾರ್ಗೆಟ್‌ ಆಗಿ ಇಟ್ಟುಕೊಂಡ ಆಪರೇಷನ್‌ ಕಮಲ ನಡೆಸಲು ಸಜ್ಜಾಗುತ್ತಿದೆ. ಹೀಗೆಂದು ಮಂಡ್ಯದ ಕಾಂಗ್ರೆಸ್‌ ಶಾಸಕ ಗಣಿಗ ರವಿ (Congress MLA Ganiga Ravi) ಅವರು ದಾವಣಗೆರೆಯಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ʻʻಬಿಜೆಪಿ ಮತ್ತೊಮ್ಮೆ ಅಪರೇಷನ್ ಕಮಲ ಆರಂಭಿಸಿದೆ. ಯಾವ ಟೀಮ್‌ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಳಿಸಿತ್ತೋ ಅದೇ ಟೀಂ ಈಗ ಆ್ಯಕ್ಟಿವ್ ಆಗಿದೆ. ಅಂದು ಸಕ್ರಿಯವಾಗಿದ್ದ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ಆಪ್ತ ಸಹಾಯಕ ಎನ್‌.ಆರ್‌. ಸಂತೋಷ್‌ (NR Santhosh) ಈ ಹೊಸ ಆಪರೇಷನ್‌ ಪ್ಲ್ಯಾನ್‌ನಲ್ಲೂ ಸಕ್ರಿಯವಾಗಿದ್ದಾರೆʼʼ ಎಂದು ರವಿ ಗಣಿಗ ಹೇಳಿದ್ದಾರೆ.

ʻʻಆ ಟೀಂ ಬೆಳಗ್ಗೆ ಬೆಳಗ್ಗೆ ರೆಡಿಯಾಗಿ ಕಾಂಗ್ರೆಸ್ ಶಾಸಕರ ಮನೆಗೆ ಹೋಗುತ್ತದೆ. ಸ್ಪೇಷಲ್ ಫ್ಲೈಟ್ ಮಾಡ್ತಿವಿ, ಅಮಿತ್ ಷಾ ಅವರನ್ನು ಮೀಟ್ ಮಾಡಿಸ್ತೀವಿ. 50 ಕೋಟಿ ರೂ. ಅಮೌಂಟ್ ಕೊಡ್ತೀವಿ ಎಂದು ಆಮಿಷ ಒಡ್ಡಲಾಗುತ್ತಿದೆʼʼ ಎಂದು ರವಿ ಗಣಿಗ ನೇರವಾಗಿ ಆರೋಪ ಮಾಡಿದ್ದಾರೆ.

ʻʻಅ ಗ್ಯಾಂಗ್‌ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪಿಎ ಆಗಿದ್ದ ಸಂತೋಷ್ ಕೂಡ ಇದಾರೆ. ಅವರು ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ನಮ್ಮ ಶಾಸಕರನ್ನು ಮೀಟ್ ಆಗಿದ್ದಾರೆ. ಯಾರೆಲ್ಲ ಓಡಾಡುತ್ತಿದ್ದಾರೋ ಅವರ ವಿಡಿಯೊ ಕೂಡಾ ಇದೆ. ಕೆಲವೇ ದಿನಗಳಲ್ಲಿ ಕಾಲ್ ರೆಕಾರ್ಡ್, ವಿಡಿಯೋ ಬಿಡುಗಡೆ ಮಾಡುತ್ತೀವಿʼʼ ಎಂದು ರವಿ ಗಣಿಗ ಹೇಳಿದ್ದಾರೆ.

ಕಾಂಗ್ರೆಸ್‌ನ ಹಲವಾರು ಶಾಸಕರಿಗೆ ಈ ರೀತಿ ಆಮಿಷ ಒಡ್ಡಲಾಗುತ್ತಿದೆ. ನಾಲ್ಕೂ ದಿಕ್ಕುಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದೆ. ನಮ್ಮವರು ಯಾರೂ ಆಮಿಷಕ್ಕೆ ಬಲಿಯಾಗಿಲ್ಲ. ಕೆಲವು ಪ್ರಾಮಾಣಿಕ ಶಾಸಕರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ರವಿ ಗಣಿಗ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷವೂ ಆಪರೇಷನ್‌ ಹಸ್ತ ನಡೆಸುತ್ತಿರುವ ಬಗ್ಗೆ ಕೇಳಿದಾಗ, ʻʻಬಿಜೆಪಿ ನಾಯಕರು ಅವರಾಗಿಯೇ ಬರುತ್ತಿದ್ದಾರೆ. ನಾವ್ಯಾರು ಕರೆದಿಲ್ಲ. ನಮಗೆ ಬೇರೆ ಶಾಸಕರ ಅವಶ್ಯಕತೆ ಇಲ್ಲʼʼ ಎಂದು ಹೇಳಿದರು.

ಬೆಳಗಾವಿಯಿಂದಲೇ ಕಾಂಗ್ರೆಸ್ ಪತನವಾಗುತ್ತದೆ ಎಂಬ ಶಾಸಕ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, ʻʻಮುನಿರತ್ನ ಅವರು ಫಿಲ್ಮ್ ತೆಗೀತಾರಲ್ಲ. ಹಾಗಾಗಿ ಆವಾಗಾವಾಗ ಆ ಡೈಲಾಗ್ ಹೊಡೀತಾರೆʼʼ ಎಂದರು ಗವಿ ಗಣಿಗ.

ಇದನ್ನೂ ಓದಿ: Operation Hasta: ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಸೇರಿ 750ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್‌ ಸೇರ್ಪಡೆ

ಸೆಲೆಬ್ರಿಟಿಗಳನ್ನೂ ಅರೆಸ್ಟ್‌ ಮಾಡಿ ಎಂದ ಶಾಸಕ ರವಿ ಗಣಿಗ

ಇದೇ ವೇಳೆ ಹುಲಿಯುಗುರು ಹೊಂದಿರುವ ಪ್ರಕರಣಗಳ ಬಗ್ಗೆ ಕೂಡಾ ರವಿ ಗಣಿಗ ಪ್ರತಿಕ್ರಿಯಿಸಿದರು.

ʻʻಹುಲಿ ಉಗುರು ಹಾಕಿಕೊಂಡಿದ್ದಾನೆ ಎಂದು ಅಮಾಯಕ ರೈತನನ್ನು ಬಂಧನ ಮಾಡಲಾಗಿದೆ. ಅದೇ ರೀತಿ ಯಾರು ಯಾರು ಹಾಕಿಕೊಂಡಿದ್ದಾರೋ ಅವರನ್ನು ಕೂಡ ಬಂಧನ ಮಾಡಿ. ಒಬ್ಬರಿಗೆ ಒಂದು ಕಾನೂನು ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದು ಬೇಡʼʼ ಎಂದು ಅವರು ಹೇಳಿದರು.

ʻʻಸಂತೋಷ್ ಶೋಕಿಗಾಗಿ ಹಾಕಿಕೊಳ್ತಾ ಇದ್ದ. ಪಾಪದ ರೈತ ಅವನು. ಆತನನ್ನು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿದ್ರಿ. ಅದೇ ರೀತಿ ಎಲ್ಲರನ್ನು ಅರೆಸ್ಟ್ ಮಾಡಿ ನೋಡೋಣʼʼ ಎಂದು ತಮ್ಮದೇ ಸರ್ಕಾರಕ್ಕೆ ಅವರು ಸವಾಲು ಹಾಕಿದರು. ʻʻನಮ್ಮದೇ ಸರ್ಕಾರ ಇದೆ, ಅದಕ್ಕೆ ಹೇಳ್ತಾ ಇರೋದುʼʼ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿದರು. ಎಲ್ಲರಿಗೂ ನೋಟೀಸ್ ಕೊಡುವ ಬದಲು ಅರೆಸ್ಟ್ ಮಾಡಿ ಎಂದ ಶಾಸಕ ರವಿ ಗಣಿಗ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Rahul Gandhi: ರಾಹುಲ್ ಗಾಂಧಿಗೆ ರಿಲೀಫ್; ಜೂನ್‌ 7ಕ್ಕೆ ವಿಚಾರಣೆಗೆ ಹಾಜರಾಗಲು ಕೋರ್ಟ್‌ ಸೂಚನೆ

Rahul Gandhi: ಬಿಜೆಪಿಗೆ ಮಾನನಷ್ಟ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿಗೆ ಜಾಮೀನು ರಹಿತ ವಾರಂಟ್‌ ಭೀತಿ ಎದುರಾಗಿತ್ತು. ಆದರೆ, ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌, ಜೂನ್‌ 7ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

VISTARANEWS.COM


on

Rahul Gandhi
Koo

ಬೆಂಗಳೂರು: ಬಿಜೆಪಿಗೆ ಮಾನನಷ್ಟ ಪ್ರಕರಣದಲ್ಲಿ (Defamation Case) ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ರಾಹುಲ್ ಗಾಂಧಿಗೆ ರಿಲೀಫ್ ಸಿಕ್ಕಿದೆ. ಪ್ರಕರಣದ 4ನೇ ಆರೋಪಿ ರಾಹುಲ್ ಗಾಂಧಿ (Rahul Gandhi) ಅವರು ಶನಿವಾರ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ವಾರಂಟ್ ಜಾರಿ ಮಾಡುವಂತೆ ದೂರುದಾರರ ಪರ ವಕೀಲ ಮನವಿ ಮಾಡಿದ್ದರು. ಆದರೆ, ವಾರಂಟ್‌ ನೀಡದೆ, ಜೂನ್ 7 ರಂದು ಖುದ್ದು ಹಾಜರಾಗಲು 42ನೇ ಎಸಿಎಂಎಂ ಕೋರ್ಟ್‌ ಸೂಚನೆ ನೀಡಿದೆ.

ಸಿಆರ್‌ಪಿಸಿ 205 ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಲಾಗಿದ್ದು, ಜೂನ್ 7 ರಂದು ಖುದ್ದು ಹಾಜರಾಗಲು ರಾಹುಲ್‌ ಗಾಂಧಿಗೆ ಸೂಚನೆ ನೀಡಲಾಗಿದೆ. ಬಿಜೆಪಿ ಮಾನನಷ್ಟ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ಖಾಸಗಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಇಂದು ಕೋರ್ಟ್‌ಗೆ ಹಾಜರಾಗಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ನೀಡಲಾಗಿತ್ತು. ರಾಹುಲ್ ಗಾಂಧಿ ಹಾಜರಾಗದ ಹಿನ್ನಲೆ ವಾರಂಟ್ ಜಾರಿ ಮಾಡುವಂತೆ ದೂರುದಾರ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಕೋರ್ಟ್‌ ವಿಚಾರಣೆಗೆ ಹಾಜರಾಗಲು ರಾಹುಲ್‌ ಗಾಂಧಿಗೆ ಸೂಚಿಸಿದೆ.

ಸಿಎಂ, ಡಿಸಿಎಂಗೆ ಶರತ್ತುಬದ್ಧ ಜಾಮೀನು

ಬಿಜೆಪಿಗೆ ಮಾನನಷ್ಟ ಪ್ರಕರಣದಲ್ಲಿ (Defamation Case) 42ನೇ ಎಸಿಎಂಎಂ ಕೋರ್ಟ್‌ (ACMM court) ಮುಂದೆ ಇಂದು ಹಾಜರಾದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರಿಗೆ ಶರತ್ತುಬದ್ಧ ಜಾಮೀನು (Bail) ನೀಡಲಾಗಿತ್ತು. ಪ್ರಕರಣದ ಇನ್ನೊಬ್ಬ ಆರೋಪಿ ರಾಹುಲ್‌ ಗಾಂಧಿ (Rahul Gandhi) ಗೈರು ಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಗರಂ ಆಗಿದ್ದರು.

ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಕೋರ್ಟ್‌ ವಿಚಾರಣೆ ನಡೆಸಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಕೈ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ A4 ಆರೋಪಿಯಾಗಿದ್ದಾರೆ.

ವಿಚಾರಣೆಗೆ ಮುನ್ನ ಆಗಮಿಸಿದ ಸಿಎಂ ಹಾಗೂ ಡಿಸಿಎಂ, ಕೋರ್ಟ್ ಹಾಲ್ ಮುಂದೆ ಸಾಮಾನ್ಯರಂತೆ, ಜೊತೆಯಾಗಿ ಕುಳಿದಿದ್ದರು. ನಂತರ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ಮುಂದೆ ಇಬ್ಬರೂ ಹಾಜರಾದರು. ಪಾರ್ಟಿ ಪ್ರೆಸಿಡೆಂಟ್ ಹಾಗೂ ಎರಡನೇ ಆರೋಪಿ ಒಂದೇ ಎಂದು ವಕೀಲರು ತಿಳಿಸಿದರು. ಇಬ್ಬರನ್ನೂ ಹೊರ ಹೋಗಬಹುದೆಂದು ಜಡ್ಜ್‌ ಸೂಚಿಸಿದರು. ಇಬ್ಬರಿಗೂ ಶರತ್ತುಬದ್ಧ ಜಾಮೀನು ಮಂಜೂರು ಮಾಡಲಾಯಿತು. ಡಿಸಿಎಂ ಪರ ಎಎಜಿ ಎಸ್.ಎ ಅಹಮದ್ ವಾದಿಸಿದ್ದರು.

ನಾಲ್ಕನೇ ಆರೋಪಿ ರಾಹುಲ್ ಗಾಂದಿ ದೆಹಲಿಯಲ್ಲಿದ್ದಾರೆ. ಇಂದು ಇಂಡಿಯಾ ಕೂಟದ ಮೀಟಿಂಗ್ ಇದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಾಗಲಾಗುತ್ತಿಲ್ಲ. ನಾಲ್ಕನೇ ತಾರೀಕು ಚುನಾವಣೆ ರಿಸಲ್ಟ್ ಇದೆ. ಹೀಗಾಗಿ ಕಾಲಾವಕಾಶ ನೀಡುವಂತೆ ವಿನಂತಿಸಿದ್ದರು. ಹಾಗಿದ್ದರೆ ಇಂದೇ ಬಂದು ಮುಗಿಸಿಕೊಂಡು ಹೋಗಬಹುದಿತ್ತಲ್ಲ, ದೆಹಲಿಗೆ ಹೋಗೋದಕ್ಕೆ ಐದು ದಿನ ಬೇಕಾಗಿಲ್ಲವಲ್ಲ ಎಂದು ಜಡ್ಜ್ ಪ್ರಶ್ನಿಸಿದ್ದರು.

ದೂರುದಾರರ ಪರ ಹಾಜರಾದ ವಕೀಲ ವಿನೋದ್ ಕುಮಾರ್, “ನ್ಯಾಯಾಲಯದಿಂದ ಸಮನ್ಸ್ ಜಾರಿ ಆದಾಗ ಬರಬೇಕು. ಪದೇ ಪದೆ ಕಾರಣ ನೀಡಿದ್ರೆ ಹೇಗೆ? ಎರಡು ಮೂರು ಸಲ ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಮುಂದೆಯೂ ಬೇರೆ ಬೇರೆ ಸಭೆ ಇದೆ ಅಂತ ಹಾಜರಾಗದೇ ಇರಬಹುದು. ಇವತ್ತಿಗೆ ಎಲೆಕ್ಷನ್ ಮುಗಿಯುತ್ತೆ. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ. ಹೀಗಾಗಿ ರಾಹುಲ್ ಗಾಂಧಿಗೆ ವಾರಂಟ್ ಜಾರಿ ಮಾಡಿ” ಎಂದು ಮನವಿ ಮಾಡಿದ್ದರು.

ಏನಿದು ಪ್ರಕರಣ?

2023ರ ಮೇ 8ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಇದನ್ನೂ ಓದಿ | Prajwal Revanna Case: ವಿಚಾರಣೆಯಲ್ಲಿ ಬಾಯಿಬಿಡದ ಪ್ರಜ್ವಲ್‌; ಸ್ಥಳ ಮಹಜರಿಗಾಗಿ ಹೊಳೆನರಸೀಪುರಕ್ಕೆ ಕರೆದೊಯ್ಯಲು ಸಿದ್ಧತೆ

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

Continue Reading

ಮಳೆ

Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು

Rain News : ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯು ಅಬ್ಬರಿಸುತ್ತಿದ್ದು, ಅವಾಂತರವೇ ಸೃಷ್ಟಿಯಾಗಿದೆ. ಮುಂದಿನ ಐದು ದಿನಗಳು ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ವೀಕೆಂಡ್‌ ಮೂಡ್‌ನಲ್ಲಿದ್ದ ಜನರಿಗೆ ಮಳೆರಾಯನ (Rain News) ಎಂಟ್ರಿ ಕೊಂಚ ಕಿರಿಕಿರಿಯನ್ನುಂಟು ಮಾಡಿದೆ. ಬೆಳಗ್ಗೆ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಧ್ಯಾಹ್ನ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ಇತ್ತು. ನೋಡನೋಡುತ್ತಿದ್ದಂತೆ ಗುಡುಗು ಸಹಿತ ಧಾರಾಕಾರ ಮಳೆ (Karnataka Weather Forecast) ಸುರಿದಿತ್ತು. ರಾಜಧಾನಿ ಬೆಂಗಳೂರಲ್ಲಿ ಬಿಡುವು ನೀಡಿದ್ದ ವರುಣ ವಾರದ ನಂತರ ಅಬ್ಬರಿಸಿದ್ದ. ಜಸ್ಟ್‌ ಒಂದೂವರೆ ಗಂಟೆಯ ಮಳೆಗೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಬೇಕಾಯಿತು.

ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ ಸೇರಿದಂತೆ ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿನಗರ, ಕೋರಮಂಗಲ ಹಾಗೂ ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿತ್ತು.

ಮುಳುಗಡೆಯಾದ ಸಹಕಾರ

ಮಹಾದೇವಪುರ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆ ಸುರಿದಿದೆ. ಮಳೆಗೆ ಸಹಕಾರ ನಗರದ ಜಿ ಬ್ಲಾಕ್‌ನ ರಸ್ತೆಗಳಲ್ಲಿ ನೀರು ತುಂಬಿ ಹರಿದಿತ್ತು. ಇದರಿಂದಾಗಿ ಅಂಗಡಿ ಮುಂಗಟ್ಟುಗಳಲ್ಲಿ ನೀರು ನಿಂತಿದ್ದರಿಂದ ಜನರು ಪರದಾಡಬೇಕಾಯಿತು. ಪಾದಚಾರಿಗಳು ಮತ್ತು ವಾಹನ ಸವಾರರು ರಸ್ತೆ ದಾಟಲು ಪರದಾಡಬೇಕಾಯಿತು. ಇನ್ನೂ ದಿಢೀರ್‌ ಮಳೆಗೆ ವಾಹನ ಸವಾರರು ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದರು.

Karnataka weather Forecast

ಆನೇಕಲ್‌ನಲ್ಲೂ ಮಳೆ ಅಬ್ಬರ

ಆನೇಕಲ್ ತಾಲೂಕಿನಾದ್ಯಂತ ಮಳೆಯು ಅಬ್ಬರಿಸಿತ್ತು. ಆನೇಕಲ್, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಳೆಯಾಗಿದೆ. ಚಂದಾಪುರದ ಬಳಿ ಸರ್ವೀಸ್ ರಸ್ತೆ ಜಲಾವೃತಗೊಂಡಿತ್ತು. ಇದರಿಂದಾಗಿ ಬೈಕ್ ಸವಾರರು, ಪಾದಚಾರಿಗಳು ಹಾಗೂ ವಾಹನ ಸವಾರ ಪರದಾಡಬೇಕಾಯಿತು. ಮಳೆ ನೀರು ಹೊರ ಹೋಗಲು ಜಾಗವಿಲ್ಲದೆ ರಸ್ತೆಯು ಕೆರೆಯಂತಾಗಿತ್ತು.

ಇದನ್ನೂ ಓದಿ: Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

ಚಿಕ್ಕಮಗಳೂರಿನಲ್ಲೂ ಮಳೆಯ ಸಿಂಚನ

ಶನಿವಾರದಂದು ಚಿಕ್ಕಮಗಳೂರು ಜಿಲ್ಲೆಯ ಹಲವಡೆ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು ನಗರ, ಬೆಳವಾಡಿ, ಕಳಸಾಪುರ, ಮಾಗಡಿ, ಅಂಬಳೆ, ತೇಗೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಡೂರು ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ಭಾರಿ ಬಿರುಗಾಳಿ ಮಳೆಗೆ ಚಿಕ್ಕಮಗಳೂರು ಗ್ರಾಮಾಂತರ ತತ್ತರಿಸಿತ್ತು. ಮಳೆಯಿಂದಾಗಿ ಚಿಕ್ಕಮಗಳೂರು ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು. ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಹಳ್ಳ ಕೊಳ್ಳಗಳು ಉಕ್ಕಿ ಹರಿದಿದೆ.

ಮೇಲ್ಮೈ ಸುಳಿಗಾಳಿ ಹಿನ್ನೆಲೆ ಇನ್ನೈದು ದಿನ ಭಾರಿ ಮಳೆ

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ‌ ಮುಂದಿನ ಐದು ದಿನಗಳ‌ ಕಾಲ ಭಾರಿ‌ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಸದ್ಯ ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಿದ್ದು, ನಂತರ ಕರ್ನಾಟಕವನ್ನು ಆವರಿಸಲಿದೆ.

ಈ ಭಾರಿ ಅವಧಿಗೂ ಮೊದಲೇ ಮುಂಗಾರು ಪ್ರವೇಶವಾಗುತ್ತಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಜೂನ್ 15ಕ್ಕೆ ಮುಂಗಾರು ಪ್ರವೇಶವಾಗಿತ್ತು. ಆದರೆ ಈ ವರ್ಷ 15 ದಿನಗಳಿಗೂ ಮೊದಲೇ ಮುಂಗಾರು ಪ್ರವೇಶವಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗುವ ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಲಿಂಕ್‌ ಇಲ್ಲಿದೆ

KCET Result 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ 2024 ಫಲಿತಾಂಶ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

VISTARANEWS.COM


on

KCET Result 2024
Koo

ಬೆಂಗಳೂರು: 2024ನೇ ಸಾಲಿನ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್‌, ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ನಡೆಸಿದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET Result 2024) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸಿಇಟಿ ಪರೀಕ್ಷೆಯನ್ನು (KCET Exam) ಏಪ್ರಿಲ್ 18, 19 ಹಾಗೂ 20ರಂದು ನಡೆಸಿತ್ತು. ಇದರಲ್ಲಿ ಸುಮಾರು 3.28 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೊಂದಾಯಿಸಿ ಕೊಂಡಿದ್ದರು. ಜೂನ್‌ ಮೊದಲ ವಾರದಲ್ಲಿ (KCET Result 2024) ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಇದೀಗ ಅಧಿಕೃತವಾಗಿ ಕೆಇಎ ಫಲಿತಾಂಶ ಬಿಡುಗಡೆ ಮಾಡಿದೆ.

ಸಿಇಟಿ ಫಲಿತಾಂಶವನ್ನು ಲೋಕಸಭಾ ಚುನಾವಣೆಯ ರಿಸಲ್ಟ್‌ ಬಳಿಕವೇ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ದ್ವಿತೀಯ ಪಿಯುಸಿ 2ರ ಪರೀಕ್ಷೆ ಫಲಿತಾಂಶ ನಂತರವೇ ಸಿಇಟಿ ಫಲಿತಾಂಶವನ್ನು ಪ್ರಕಟ ಮಾಡಲಾಗುವುದು ಎಂದು ಹೇಳಿದ್ದರು. ಕಳೆದ ಮೇ 21ರಂದು ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವು ಪ್ರಕಟಗೊಂಡಿತ್ತು.

ಇದನ್ನೂ ಓದಿ | Spoken English Classes : ಶಿಕ್ಷಣ ಇಲಾಖೆಯಿಂದ ಸಿಹಿ ಸುದ್ದಿ; ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿ ಶನಿವಾರ ಇಂಗ್ಲಿಷ್‌ ಕ್ಲಾಸ್‌!

ಪಿಯುಸಿ ಪರೀಕ್ಷೆಯ ಯಾವ ಅಂಕ ಪರಿಗಣನೆ?

ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮೊದಲ ಎರಡು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೊ ಅವುಗಳನ್ನೇ ಸಿಇಟಿ ರ‍್ಯಾಂಕ್‌ಗೆ ಪರಿಗಣನೆ ಮಾಡಲಾಗುತ್ತದೆ.

ರಿಸಲ್ಟ್‌ ಚೆಕ್‌ ಮಾಡುವ ವಿಧಾನ ಹೇಗೆ?

ರಿಸಲ್ಟ್‌ ಪ್ರಕಟವಾದ ಬಳಿಕ ಚೆಕ್‌ ಮಾಡುವ ವಿಧಾನದ ಹಂತ ಹಂತದ ಮಾಹಿತಿ ಇಲ್ಲಿದೆ. ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿ ಅಫೀಶಿಯಲ್ ವೆಬ್‌ಸೈಟ್‌ https://cetonline.karnataka.gov.in/kea/ಗೆ ಭೇಟಿ ನೀಡಿ.

ಓಪನ್‌ ಆದ ಪುಟದ ಮೇಲ್ಭಾಗದಲ್ಲಿರುವ ʼಪ್ರವೇಶʼ ಆಯ್ಕೆಯನ್ನು ಕ್ಲಿಕ್‌ ಮಾಡಿ ಬಳಿಕ ʼಯುಜಿಸಿಇಟಿ 2024′ ಆಪ್ಶನ್‌ ಸೆಲೆಕ್ಟ್‌ ಮಾಡಿ.

ಇತ್ತೀಚಿನ ಪ್ರಕಟಣೆಗಳು ಎಂದಿರುವ ಕೆಳಗಡೆ ‘ಯುಜಿಸಿಇಟಿ 2024’ ಫಲಿತಾಂಶದ ಲಿಂಕ್ ನೀಡಲಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿ.

ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ, ‘Submit’ ಬಟನ್‌ ಕ್ಲಿಕ್‌ ಮಾಡಿದರೆ ಫಲಿತಾಂಶ ಕಾಣಿಸುತ್ತದೆ. ಇದರ ಹೊರತಾಗಿಯೂ ವಿದ್ಯಾರ್ಥಿಗಳ ಫೋನ್‌ ನಂಬರ್‌ಗೆ ಫಲಿತಾಂಶದ ಮಸೇಜ್‌ ಬರಲಿದೆ.

ನಾರಾಯಣ ಒಲಿಂಪಿಯಾಡ್‌ ಶಾಲೆಯ ಹರ್ಷ ಪ್ರಥಮ

ಸಿಇಟಿ 2024ರಲ್ಲಿ ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್‌ ಶಾಲೆಯ ವಿದ್ಯಾರ್ಥಿ ಹರ್ಷ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಮಾರತ್‌ಹಳ್ಳಿಯ ಚೈತನ್ಯ ಟೆಕ್ನೋ ಶಾಲೆಯ ಮನೋಜ್ ದ್ವಿತೀಯ ಸ್ಥಾನ, ಜಯನಗರ ನೆಹರು ಸ್ಮಾರಕ ವಿದ್ಯಾಲಯದ ಅಭಿನವ್ ತೃತೀಯ ಸ್ಥಾನ ಪಡೆದಿದ್ದಾರೆ.

Continue Reading

ಬೆಂಗಳೂರು

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Liquor Ban : ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಡ್ರೈ ಡೇ ಹಿನ್ನೆಲೆಯಲ್ಲಿ ಜೂನ್‌ 1ರ ಸಂಜೆ 4 ಗಂಟೆಯಿಂದಲೇ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

VISTARANEWS.COM


on

By

Liquor ban
Koo

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ (MLC Election) ಮತ್ತು ಲೋಕಸಭಾ ಚುನಾವಣೆಯ (lok sabha election 2024) ಫಲಿತಾಂಶ ಹೊರಬೀಳಲಿರುವ ಕಾರಣ ಬೆಂಗಳೂರು ಜಿಲ್ಲಾಡಳಿತ ಜೂನ್ ಮೊದಲ ವಾರದಲ್ಲಿ ಮದ್ಯ ಮಾರಾಟವನ್ನು (Liquor Ban) ನಿಷೇಧಿಸಿದೆ. ಅದರಂತೆ ಜೂನ್‌ 1ರ ಸಂಜೆ 4ಕ್ಕೆ ಎಲ್ಲ ಲಿಕ್ಕರ್‌ ಶಾಪ್‌, ವೈನ್‌ ಶಾಪ್‌, ಬಾರ್‌ಗಳು ಬಂದ್‌ ಆಗಿರಲಿದೆ. ಇನ್ನೂ ಹೋಟೆಲ್‌ ರೆಸ್ಟೋರೆಂಟ್‌ಗಳಲ್ಲಿ ಆಹಾರ ಸೇವನೆಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಈ ಸಂಬಂಧ ಮಾಹಿತಿ ನೀಡಿರುವ ಬೆಂಗಳೂರು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಬಾರ್‌ಗಳು ಒಂದು ವಾರ ಪೂರ್ತಿ ಕ್ಲೋಸ್‌ ಆಗುವುದಿಲ್ಲ. ಒಟ್ಟು ನಾಲ್ಕುವರೆ ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ. 5 ದಿನಗಳ ಕಾಲ ಲಿಕ್ಕರ್ ಬ್ಯಾನ್ ಎಂಬ ವಿಚಾರ ಮುಂದಿಟ್ಟುಕೊಂಡು ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಉಚ್ಚ ನ್ಯಾಯಾಲಯವು ನಮ್ಮ ಆದೇಶವನ್ನು ಎತ್ತಿ‌ಹಿಡಿದೆ. ಎಂಎಲ್‌ಸಿ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯ ಮತ ಎಣಿಕೆ ಎರಡು ಒಟ್ಟಿಗೆ ಬಂದಿದೆ.

ಜೂನ್ 3ರ ಸಂಜೆ 4 ಗಂಟೆ ವರೆಗೂ ಪರಿಷತ್ ಚುನಾವಣೆ ನಡೆಯುತ್ತದೆ. ಪ್ರತಿ ಚುನಾವಣೆಯ ಸಂದರ್ಭದಲ್ಲಿ 48 ಗಂಟೆಗಳ ಮದ್ಯ ಮಾರಾಟ ನಿಷೇಧ ಆಗುತ್ತದೆ. ಹೀಗಾಗಿ ಶನಿವಾರ ಸಂಜೆಯಿಂದಲೇ (ಜೂನ್‌ 1) ಮದ್ಯ ಮಾರಾಟ ನಿಷೇಧಸಲಾಗಿದೆ. ಆದರೆ ಜೂನ್ 3ರಂದು ಸಂಜೆ 4 ಗಂಟೆಯಿಂದ ರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಇದೆ. ಬಾರ್‌ ಮತ್ತು ರೆಸ್ಟೋರಂಟ್‌ಗಳಲ್ಲಿ ಲಿಕ್ಕರ್ ಸೇಲ್ ಬ್ಯಾನ್ ಇದೆ ಹೊರತು, ಆಹಾರಕ್ಕೆ ಯಾವುದೇ ನಿಷೇಧ ಇಲ್ಲ ಎಂದರು.

Liquor ban

ಇನ್ನೂ ಲೋಕಸಭಾ ಮತ ಎಣಿಕೆ ಕಾರ್ಯ ಇರುವುದರಿಂದ ಜೂನ್ 3ರ ಮಧ್ಯರಾತ್ರಿ 12ರಿಂದ ಜೂನ್ 4ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೂನ್ 5 ರಂದು ಲಿಕ್ಕರ್ ಬ್ಯಾನ್ ಇರುವುದಿಲ್ಲ. ನಂತರ ಜೂನ್‌ 6 ರಂದು ಮತ ಎಣಿಕೆ ಕಾರ್ಯ ಇದೆ. ಹೀಗಾಗಿ ಒಟ್ಟಾರೆ ನಾಲ್ಕುವರೆ ದಿನಗಳು ಮಾತ್ರ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ದಯಾನಂದ ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Exit Poll 2024
Lok Sabha Election 202412 mins ago

Exit Poll 2024: ಮೋದಿ ಹ್ಯಾಟ್ರಿಕ್‌ ಖಚಿತ, ಇಂಡಿಯಾ ಒಕ್ಕೂಟಕ್ಕೆ ಸೋಲು ನಿಶ್ಚಿತ; ಇಲ್ಲಿದೆ ಎಕ್ಸಿಟ್‌ ಪೋಲ್‌ ವರದಿ

Exit Poll 2024
ದೇಶ41 mins ago

Exit Poll 2024 Live: ಮೋದಿನಾ? ರಾಹುಲ್‌ ಗಾಂಧಿನಾ? ಮತಗಟ್ಟೆ ಸಮೀಕ್ಷೆಯ ಲೈವ್‌ ಇಲ್ಲಿ ವೀಕ್ಷಿಸಿ

Rahul Gandhi
ಕರ್ನಾಟಕ51 mins ago

Rahul Gandhi: ರಾಹುಲ್ ಗಾಂಧಿಗೆ ರಿಲೀಫ್; ಜೂನ್‌ 7ಕ್ಕೆ ವಿಚಾರಣೆಗೆ ಹಾಜರಾಗಲು ಕೋರ್ಟ್‌ ಸೂಚನೆ

Karnataka Weather Forecast
ಮಳೆ1 hour ago

Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು

Star Saree Fashion
ಫ್ಯಾಷನ್1 hour ago

Star Saree Fashion: ಡಿಸೈನರ್‌ ಸೀರೆಯಲ್ಲಿ ನಟಿ ತಾನ್ಯಾ ಹೋಪ್‌ರಂತೆ ಕಾಣಲು ಈ 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ!

Arvind Kejriwal
ಪ್ರಮುಖ ಸುದ್ದಿ1 hour ago

Arvind Kejriwal : ಅರವಿಂದ್​ ಕೇಜ್ರಿವಾಲ್​ ಮತ್ತೆ ಜೈಲಿಗೆ ಹೋಗುವುದು ಫಿಕ್ಸ್​

World Milk Day
ಆರೋಗ್ಯ2 hours ago

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

Narendra Modi
ಪ್ರಮುಖ ಸುದ್ದಿ2 hours ago

Narendra Modi : 45 ಗಂಟೆಗಳ ಸುದೀರ್ಘ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

KCET Result 2024
ಕರ್ನಾಟಕ2 hours ago

KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಲಿಂಕ್‌ ಇಲ್ಲಿದೆ

Exit Poll Live 2024
Live News2 hours ago

Exit Poll 2024 Live: ಮೋದಿ ಹ್ಯಾಟ್ರಿಕ್‌ ಖಚಿತ ಎಂದ ವಿಸ್ತಾರ ನ್ಯೂಸ್-COPS ಸಮೀಕ್ಷೆ; ಎಲ್ಲ ಸಮೀಕ್ಷೆಗಳ ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು2 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌