Site icon Vistara News

VISTARA TOP 10 NEWS : ಸೆ. 2ರಿಂದ ಸೂರ್ಯ ಶಿಕಾರಿ, ಜಾವೆಲಿನ್‌ನಲ್ಲಿ ನೀರಜ್‌ಗೆ ಚಿನ್ನದ ಗರಿ; ಹೀಗೆ ಮಹತ್ವದ ಸುದ್ದಿಗಳ ಸಂಪುಟ

Vistara Top 10 News

1.ಚಂದ್ರನ ಬೆನ್ನಲ್ಲೇ ಸೂರ್ಯ ಶಿಕಾರಿಗೆ ಇಸ್ರೊ ಸಜ್ಜು; ಸೆ.2ಕ್ಕೆ ಆದಿತ್ಯ ಎಲ್‌ 1 ಆದಿತ್ಯ ಎಲ್‌ 1 ಉಡಾವಣೆ
ಚಂದ್ರಯಾನ 3 (Chandrayaan 3) ಯಶಸ್ಸಿನ ಬೆನ್ನಲ್ಲೇ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಗೆ ಸಜ್ಜಾಗಿದೆ. ಹೌದು, ಸೂರ್ಯನ ಅಧ್ಯಯನಕ್ಕಾಗಿ ಕೈಗೊಳ್ಳುತ್ತಿರುವ ಆದಿತ್ಯ ಎಲ್‌ 1 ಮಿಷನ್‌ಅನ್ನು (Aditya L1 Mission) ಸೆಪ್ಟೆಂಬರ್‌ 2ರಂದು ಉಡಾವಣೆ ಮಾಡಲು ಇಸ್ರೋ ತೀರ್ಮಾನಿಸಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಚಂದ್ರಯಾನದಿಂದ ಕೊನೇ ಕ್ಷಣದಲ್ಲಿ ಹಿಂದೆ ಸರಿದ ಜಪಾನ್‌; ಕಾರಣ ಏನು?
ಈ ಸುದ್ದಿಯನ್ನೂ ಓದಿ: ನಾಲ್ಕು ಮೀಟರ್‌ ದೊಡ್ಡ ಕುಳಿಯೊಳಗೇ ಬೀಳುತ್ತಿತ್ತು ಪ್ರಜ್ಞಾನ್‌ ರೋವರ್‌! ಆದರೆ…

2.ತ.ನಾಡಿಗೆ ನಿತ್ಯ 5000 ಕ್ಯೂಸೆಕ್‌ ನೀರು ಹರಿಸಲು cwrc ಆದೇಶ; dont worry. ಬಿಡಬೇಕೆಂದೇನೂ ಇಲ್ಲ!
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶವಾಗಿದೆ. ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸೋಮವಾರ ಈ ಸೂಚನೆಯನ್ನು ನೀಡಿದೆ. ಆದರೆ, ಇದೊಂದು ಮಧ್ಯಂತರ ಆದೇಶವಾಗಿದ್ದು, ಆಗಸ್ಟ್‌ 29ರಂದು (ಮಂಗಳವಾರ) ದಿಲ್ಲಿಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನಡೆಯಲಿದ್ದು, ಅದರಲ್ಲಿ ನೀರು ಬಿಡುಗಡೆ ವಿಚಾರದ ಅಂತಿಮ ತೀರ್ಮಾನವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3.ಭಾರತಕ್ಕೆ ಐತಿಹಾಸಿಕ ಚಿನ್ನ ಗೆದ್ದು ಕೊಟ್ಟ ನೀರಜ್‌ ಚೋಪ್ರಾ; ಕನ್ನಡಿಗ ಮನುಗೆ 6ನೇ ಸ್ಥಾನ
ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ(World Athletics Championships) ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ಚಿನ್ನದ ಪದಕ್ಕೆ ಗುರಿ ಇಟ್ಟಿದ್ದಾರೆ. 88.17 ಮೀ. ದೂರ ಜಾವೆಲಿನ್​ ಎಸೆದು(Javelin Throw) ಚೊಚ್ಚಲ ಮತ್ತು ಐತಿಹಾಸಿಕ ಚಿನ್ನ ಗೆದ್ದ ಸಾಧನೆ ಮಾಡಿದರು. ಇದುವರೆಗೆ ದೇಶದ ಇತರ ಸ್ಪರ್ಧಿಗಳ ನಿರಾಶಾದಾಯಕ ಪ್ರದರ್ಶನದಿಂದ ಮಂಕು ಕವಿದಿದ್ದ ಭಾರತೀಯ ಪಾಳೆಯದಲ್ಲಿ ನೀರಜ್​ ಅವರ ಸಾಧನೆ ನವೋಲ್ಲಾಸ ಮೂಡಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮಿಂಚಿದ ಕನ್ನಡಿಗ ಮನು; ಯಾರಿವರು? ಇವರ ಹಿನ್ನೆಲೆ, ಸಾಧನೆ ಏನೇನು?

4.ಉಪ ಸಮಿತಿ ಸಭೆ ಬಳಿಕ ಬರ ಘೋಷಣೆ ಬಗ್ಗೆ ತೀರ್ಮಾನ ಎಂದ ಸಿದ್ದರಾಮಯ್ಯ, ಮೋಡ ಬಿತ್ತನೆ ಇಲ್ಲ
ʻರಾಜ್ಯದಲ್ಲಿ ಬರದ ಛಾಯೆಯಿರುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯ (Cabinet Sub committee) ಸಭೆ ಇಂದು ಅಥವಾ ನಾಳೆ ನಡೆಯಲಿದ್ದು, ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಿ, ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಜತೆಗೆ ಮೋಡ ಬಿತ್ತನೆ ಇಲ್ಲ ಎಂದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸಿದ್ಧಾಂತ ಒಪ್ಪಿದವರು ಸೇರಬಹುದು ಎಂದ ಸಿಎಂ ಸಿದ್ದರಾಮಯ್ಯ; ಆಪರೇಷನ್‌ ಹಸ್ತಕ್ಕೆ ಗ್ರೀನ್‌ ಸಿಗ್ನಲ್‌
ನಮ್ಮ ಪಕ್ಷದ ಸಿದ್ಧಾಂತವನ್ನು (Ideology of Congress party) ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕ ಅವರು ಬಿಜೆಪಿಯಿಂದ ಕೆಲವು ನಾಯಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಆಪರೇಷನ್‌ ಹಸ್ತಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂಬ ಮಾತುಕೇಳಿಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ರೋಜ್‌ಗಾರ್‌ ಮೇಳದಲ್ಲಿ 51,106 ನೇಮಕಾತಿ ಪತ್ರ ವಿತರಣೆ; ಯುವಕರಿಗೆ ಹೊಸ ಮಾರ್ಗ ತೆರೆದ ಮೋದಿ
ಅರೆ ಸೇನಾ ಪಡೆ (paramilitary forces) ಸೇರಿದಂತೆ ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿರುವ 51 ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ನೇಮಕಾತಿ ಪತ್ರಗಳ ವಿತರಣೆಗೆ ವರ್ಚುವಲ್ ಆಗಿ ಚಾಲನೆ ನೀಡಿದರು. ಅರೆ ಸೇನಾ ಪಡೆ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಯುವಕರಿಗೆ ಹೊಸ ಮಾರ್ಗ ತೆರೆದಿದೆ ಎಂದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಕಾಂಗ್ರೆಸ್‌ ಸರ್ಕಾರ ಇಸ್ರೊಗೆ ಹಣ ಕೊಟ್ಟಿರಲಿಲ್ಲ, ಕಾರ್‌ ಕೂಡ ಇರಲಿಲ್ಲ; ನಂಬಿ ನಾರಾಯಣನ್‌ ಆರೋಪ
ಚಂದ್ರಯಾನ 3 ಮಿಷನ್‌ (Chandrayaan 3) ಯಶಸ್ಸು ಸಾಧಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಇಸ್ರೋಗೆ ತೆರಳಿ ವಿಜ್ಞಾನಿಗಳಿಗೆ ಅಭಿನಂದಿಸಿದ್ದಾರೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಇಸ್ರೋಗೆ ಸಾಕಷ್ಟು ಅನುದಾನ ನೀಡುತ್ತಿರಲಿಲ್ಲ ಎಂದು ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ (Nambi Narayanan) ದೂರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಕಾಲೇಜು ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಚೂರಿ; ಕಾರಿನಲ್ಲಿ ಬಂದ ಪಾಗಲ್‌ ಪ್ರೇಮಿ ದುಷ್ಕೃತ್ಯ, ಯುವತಿ ಗಂಭೀರ
ಸೋಮವಾರ ಮುಂಜಾನೆ ತನ್ನ ಪಾಡಿಗೆ ತಾನು ಕಾಲೇಜಿಗೆ ಹೋಗುತ್ತಿದ್ದ ಯುವತಿಯೊಬ್ಬಳನ್ನು ಕಾಲೇಜಿನ ಆವರಣದಲ್ಲೇ ದುಷ್ಕರ್ಮಿಯೊಬ್ಬ ಚೂರಿಯಿಂದ ಇರಿದು (Girl student attacked) ಬಳಿಕ ಆಕೆಯನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಸಿನಿಮೀಯ ಘಟನೆ ರಾಮನಗರದಲ್ಲಿ ನಡೆದಿದೆ. ಡಿ.ಎನ್‌ ಚೇತನ್‌ ಎಂಬ ಕಾರು ಚಾಲಕನೇ ಪಾಗಲ್‌ ಪ್ರೇಮಿಯಾಗಿ ಈ ಕೃತ್ಯ ಎಸಗಿದ್ದಾನೆ. ಆತನನ್ನು ಬಂಧಿಸಲಾಗಿದ್ದು, ಯುವತಿ ಸ್ಥಿತಿ ಗಂಭೀರವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಪಾಕಿಸ್ತಾನ ವಿರುದ್ಧ ಗರ್ಜಿಸಲು ಸಜ್ಜಾದ ಕನ್ನಡಿಗ ಕೆ ಎಲ್‌ ರಾಹುಲ್
ಏಷ್ಯಾಕಪ್​ ಟೂರ್ನಿ(Asia Cup) ಆರಂಭಕ್ಕೆ 2 ದಿನಗಳು ಮಾತ್ರ ಬಾಕಿ ಉಳಿದಿದೆ. ಬುಧವಾರದಿಂದ(ಆಗಸ್ಟ್​ 30) ಟೂರ್ನಿಗೆ ಅಧಿಕೃತ ಚಾಲನೆ ದೊರೆಯಲಿದೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾದ(Team India) ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ತಂಡದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul) ಅವರು ಸಂಪೂರ್ಣ ಫಿಟ್​ ಆಗಿದ್ದು ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ‌. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10.ತಮ್ಮ ಕುಡಿತದ ಚಟದಿಂದಾಗಿ ಮಗಳು ದೂರ ಹೋಗುವಂತಾಯಿತು ಎಂದ ನಟಿ ಊರ್ವಶಿ
ಹು
ಭಾಷಾ ನಟಿ ಊರ್ವಶಿ (Actress Urvashi) ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. 23 ವರ್ಷಗಳ ಹಿಂದೆ ಊರ್ವಶಿ ಅವರು ಮಲಯಾಳಂ ನಟ ಮನೋಜ್ ಕೆ. ಜಯನ್ (Manoj K Jayan) ಅವರ ಕೈ ಹಿಡಿದಿದ್ದರು. ಆದರೆ 8 ವರ್ಷದ ಬಳಿಕ ಈ ಜೋಡಿ ಡಿವೋರ್ಸ್ ಪಡೆದಿತ್ತು. “ಅದಕ್ಕೆ ಕಾರಣ ನನ್ನ ಕುಡಿತ” ಎಂದು ಊರ್ವಶಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version