1.ಕಗ್ಗತ್ತಲ್ಲಿ ಕರುನಾಡು: ರಾಜ್ಯದ ಜನರಿಗೆ ವಿದ್ಯುತ್ ಕಡಿತದ ಶಾಕ್!
ನವರಾತ್ರಿ ಸಮಯದಲ್ಲಿ ರಾಜ್ಯದ ಜನರಿಗೆ ಇಂಧನ ಇಲಾಖೆ ವಿದ್ಯುತ್ ಕಡಿತದ (Power Cuts) ಶಾಕ್ ನೀಡಿದೆ. ರಾಜ್ಯದಲ್ಲಿ ಸದ್ಯ ತೀವ್ರ ವಿದ್ಯುತ್ ಕೊರತೆ ಬಗ್ಗೆ ಬಹಿರಂಗವಾಗಿ ಇಂಧನ ಇಲಾಖೆ ಒಪ್ಪಿಕೊಂಡಿದ್ದು, ಇದರಿಂದ ಕರುನಾಡು ಕಗ್ಗತ್ತಲಲ್ಲಿ ಮುಳಗಿದೆಯಾ ಎಂಬ ಆತಂಕ ಸೃಷ್ಟಿಯಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ರೈತರಿಗೆ 7 ಗಂಟೆ ಕರೆಂಟ್ ಕೊಡದಿದ್ದರೆ ವಿದ್ಯುತ್ ಕಚೇರಿಗಳಿಗೆ ಬೀಗ: ಬೊಮ್ಮಾಯಿ
2.ತಮಿಳುನಾಡಿಗೆ ಇನ್ನೂ 15 ದಿನ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ
ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಅಕ್ಟೋಬರ್ 16ರಿಂದ 15 ದಿನಗಳ ಕಾಲ ನೀರು ಬಿಡುವಂತೆ ಸಿಡಬ್ಲ್ಯುಆರ್‌ಸಿ ಸೂಚನೆ ನೀಡಿದೆ. ಪ್ರತಿ ದಿನ 3000 ಕ್ಯೂಸೆಕ್ ನೀರು ಬಿಡುವಂತೆ ಶಿಫಾರಸಿನಲ್ಲಿ ತಿಳಿಸಿದೆ.
ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಅನುದಾನ ಕಟ್ ಜಗಳ ತಾರಕಕ್ಕೆ; ಶಾಸಕರು ಮಾತ್ರವಲ್ಲ ಮತದಾರರನ್ನೂ ಬಿಡಲ್ವಾ ಕಾಂಗ್ರೆಸ್?
ರಾಜ್ಯದಲ್ಲಿ ಬಿಜೆಪಿ ಶಾಸಕರ ಅನುದಾನ ಕಟ್ ಮಾಡಿ ಕಾಂಗ್ರೆಸ್ ಶಾಸಕರಿಗೆ ನೀಡುವ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದನ್ನು ಪ್ರತಿಭಟಿಸಿ ಆರ್‌ಆರ್ ನಗರ ಶಾಸಕ ಮುನಿರತ್ನ ಅವರು ಪ್ರತಿಭಟನೆಗೆ ಇಳಿದು ಕೊನೆಗೆ ಡಿ.ಕೆ. ಶಿವಕುಮಾರ್ ಅವರ ಕಾಲಿಗೆ ಬಿದ್ದು ಬೇಡಿಕೊಂಡರು. ಈ ನಡುವೆ ಇನ್ನೊಬ್ಬ ಕಾಂಗ್ರೆಸ್ ಶಾಸಕ ಕಾಂಗ್ರೆಸ್‌ಗೆ ಮತ ನೀಡದ ಬೂತ್‌ಗಳಿಗೆ ಅನುದಾನ ಕೊಡಲ್ಲ ಅಂದಿದ್ದಾರೆ.
ವರದಿ 1. ಅನುದಾನ ವಾಪಸ್ ಪಡೆದ ಸರ್ಕಾರದ ವಿರುದ್ಧ ಮುನಿರತ್ನ ಧರಣಿ; ಬಿಎಸ್‌ವೈ ಸಾಥ್
ವರದಿ 2. ಡಿಕೆಶಿ ಕಾಲಿಗೆ ಬಿದ್ದಿದ್ದೇನೆ; ಅನುದಾನ ಕೊಡದಿದ್ದರೆ ಉಗ್ರ ಪ್ರತಿಭಟನೆ ಎಂದ ಮುನಿರತ್ನ
ವರದಿ 3 ಕಾಂಗ್ರೆಸ್‌ಗೆ ಮತ ಹಾಕದ ಬೂತ್ ಅಭಿವೃದ್ಧಿ ಮಾಡಲ್ಲ; ಕೈ ಶಾಸಕನ ದ್ವೇಷ ರಾಜಕಾರಣ
4. ಕದನದೋಳ್ ಇಸ್ರೇಲ್ ಕೆಣಕಿ ಉಳಿದವರಿಲ್ಲ; ಹಮಾಸ್ ಕಮಾಂಡರ್‌ನ ಕುಟುಂಬವೇ ಸರ್ವನಾಶ
ಹಮಾಸ್ ಉಗ್ರ ಸಂಘಟನೆಯ ಕಮಾಂಡರ್ ಮೊಹಮ್ಮದ್ ಡೈಫ್ ನಿವಾಸದ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ಉಗ್ರನ ತಂದೆ, ಸಹೋದರ ಸೇರಿ ಹಲವರು ಮೃತಪಟ್ಟಿದ್ದಾರೆ. ಯಾರನ್ನೂ ಬಿಡುವುದಿಲ್ಲ ಎಂಬ ಇಸ್ರೇಲ್ ಶಪಥ ಒಂದೊಂದಾಗಿ ಈಡೇರುತ್ತಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಹಮಾಸ್ ಉಗ್ರರ ಅಟ್ಟಹಾಸ; ಇಸ್ರೇಲ್‌ನಲ್ಲಿ 1,200 ಜನರ ದುರ್ಮರಣ
5. ರೋಹಿತ್ ದಾಖಲೆ ಶತಕದ ಮುಂದೆ ಅಫಘಾನಿಸ್ತಾನ ನಿರುತ್ತರ; ಭಾರತಕ್ಕೆ 8 ವಿಕೆಟ್ ಜಯ
ಐಸಿಸಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಅಫಘಾನಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದೆ. ವಿಶ್ವಕಪ್‌ನಲ್ಲಿ ಏಳನೇ ಶತಕದ ದಾಖಲೆ, ಸಿಕ್ಸರ್‌ಗಳಲ್ಲೇ ಹಳೆ ದಾಖಲೆಗಳನ್ನು ಉಡೀಸ್ ಮಾಡಿದ ರೋಹಿತ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ಮುಂದೆ ಅಫ್ಘಾನಿಸ್ತಾನ ನಿರುತ್ತರವಾಯಿತು. ಅಫಘಾನಿಸ್ತಾನ ಒಡ್ಡಿದ 272 ರನ್‌ಗಳ ಸವಾಲನ್ನು ಭಾರತ ಕೇವಲ ಎರಡು ವಿಕೆಟ್ ಕಳೆದುಕೊಂಡು 35 ಓವರ್‌ನಲ್ಲಿ ತಲುಪಿತು. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ1: Rohit Sharma : ಒಂದು ಪಂದ್ಯದಲ್ಲಿ ನಾಲ್ಕು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ
ಪೂರಕ ವರದಿ2: Virat vs Navin : ಮೈದಾನದಲ್ಲೇ ರಾಜಿ ಮಾಡಿಕೊಂಡ ಕೊಹ್ಲಿ- ನವಿನ್ ಉಲ್ ಹಕ್
6. ಪಠಾಣ್‌ಕೋಟ್ ದಾಳಿಯ ಸೂತ್ರಧಾರ, ಜೈಶ್ ಉಗ್ರ ಶಹೀದ್ ಲತೀಫ್ ಗುಂಡಿಕ್ಕಿ ಹತ್ಯೆ
ಭಾರತದ ಏಜೆನ್ಸಿಗಳಿಗೆ ಮೋಸ್ಟ್ ವಾಂಟೆಡ್ (most wanted terrorist) ಭಯೋತ್ಪಾದಕನಾದ, 2016ರ ಪಠಾಣ್‌ಕೋಟ್ ಉಗ್ರ ದಾಳಿಯ ಮಾಸ್ಟರ್‌ಮೈಂಡ್ ಶಾಹಿದ್ ಲತೀಫ್‌ನನ್ನು (Shahid Latif) ಬುಧವಾರ ಗುಂಡಿಕ್ಕಿ (terrorist killed) ಕೊಲ್ಲಲಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ರಾಜಸ್ಥಾನದಲ್ಲಿ ರಾಜೆಗೆ ಬಿಎಸ್‌ವೈ ಸ್ಥಿತಿ? ಮಧ್ಯಪ್ರದೇಶದಲ್ಲೂ ಬಿಜೆಪಿ ಪ್ರಯೋಗ!
ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಆಪ್ತರಿಗೆ ಟಿಕೆಟ್ ನೀಡಿಲ್ಲ. ಇದು ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮರೆಗೆ ಸರಿಸಿದಂತೆ ಕಾಣುತ್ತಿದೆ. ಮಧ್ಯ ಪ್ರದೇಶದಲ್ಲೂ ಶಿವರಾಜ್ ಸಿಂಗ್ ಚೌಹಾಣ್‌ಗೆ ಅದೇ ಗತಿಯಾಗಿದೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಬರ್ತಿದೆ ನಂಬರೇ ಇಲ್ಲದ ಕ್ರೆಡಿಟ್ ಕಾರ್ಡ್!
ಯಾವುದೇ ನಂಬರ್ ಇಲ್ಲದ ಕ್ರೆಡಿಟ್ ಕಾರ್ಡ್ (Numberless Credit Card) ಸದ್ಯದಲ್ಲೇ ಬಳಕೆಯಲ್ಲಿ ಬರಲಿದೆ. ಇದು ಭಾರತದ ಮೊದಲ ಸಂಖ್ಯಾರಹಿತ ಕ್ರೆಡಿಟ್ ಕಾರ್ಡ್ ಎನಿಸಲಿದೆ. ಆಕ್ಸಿಸ್ ಬ್ಯಾಂಕ್ (Axis Bank) ಹಾಗೂ ಫಿನ್‌ಟೆಕ್ ಸಂಸ್ಥೆ ಫೈಬ್ (Fibe fintech) ಜತೆಯಾಗಿ ಇದನ್ನು ಹೊರತರುತ್ತಿವೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಎಫ್‌ಡಿ ಬಡ್ಡಿ ಹೆಚ್ಚಿಸಿದ ಬ್ಯಾಂಕ್ ಆಫ್ ಬರೋಡಾ; 5 ಲಕ್ಷ ರೂ. ಇಟ್ಟರೆ ಇಷ್ಟು ಲಾಭ!
9. ಬಿಗ್ ಬಾಸ್: ಡ್ರೋನ್ ಪ್ರತಾಪ್ ಢೋಂಗಿ ಅಂದ್ರು ಸ್ಪರ್ಧಿಗಳು; ತಾರಕಕ್ಕೇರಿದ ಜಗಳ!
ಹೊರಗೆ ದೊಡ್ಡ ಪ್ರಮಾಣದಲ್ಲಿ ಟ್ರೋಲ್‌ಗೆ ಒಳಗಾಗಿದ್ದ ಡ್ರೋನ್ ಪ್ರತಾಪ್ ಬಿಗ್ ಬಾಸ್ ಶೋನಲ್ಲಿ ಕೂಡಾ ಸಹಸದಸ್ಯರ ಮಾತಿನ ಬಾಣಗಳಿಗೆ ಆಹಾರವಾಗುತ್ತಿದ್ದಾರೆ. ತಾನು ಏನು ಎಂಬುದನ್ನು ತಿಳಿಸುವ ಉದ್ದೇಶದಿಂದಲೇ ಬಿಗ್ ಬಾಸ್ ಶೋ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿರುವ ಅವರು ಈಗ ಇತರರ ಮುಂದೆ ಹಲವು ಪ್ರಶ್ನೆ ಇಟ್ಟಿದ್ದಾರೆ. ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್ ಆಡಿದ ಛತ್ತೀಸ್‌ಗಢ ಮುಖ್ಯಮಂತ್ರಿ
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಅವರು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಕ್ಯಾಂಡಿ ಕ್ರಶ್ (Candy Crush) ಆಡಿದ ಫೋಟೊ ವೈರಲ್ ಆಗಿದೆ. ಬಿಜೆಪಿ ಇದನ್ನು ವೈರಲ್ ಮಾಡುತ್ತಿದ್ದಂ ತೆಯೇ ಬಘೇಲ್ ಅದನ್ನು ಸಮರ್ಥಿಸಿದ್ದಾರೆ. ಅವರು ಹೇಳಿದ್ದೇನು? ಪೂರ್ಣ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ