Israel Palestine War: ಹಮಾಸ್‌ ಉಗ್ರರ ಅಟ್ಟಹಾಸ; ಇಸ್ರೇಲ್‌ನಲ್ಲಿ 1,200 ಜನರ ದುರ್ಮರಣ! - Vistara News

ವಿದೇಶ

Israel Palestine War: ಹಮಾಸ್‌ ಉಗ್ರರ ಅಟ್ಟಹಾಸ; ಇಸ್ರೇಲ್‌ನಲ್ಲಿ 1,200 ಜನರ ದುರ್ಮರಣ!

Israel Palestine War: ಇಸ್ರೇಲ್‌ ಹಾಗೂ ಗಾಜಾ ಉಗ್ರರ ನಡುವಿನ ಸಮರವು ದಿನೇದಿನೆ ದುಪ್ಪಟ್ಟಾಗುತ್ತಿದೆ. ಇಸ್ರೇಲ್‌ ಮೇಲೆ ಗಾಜಾ ಉಗ್ರರು, ಗಾಜಾ ಉಗ್ರರ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯ ಪರಿಣಾಮದಿಂದ ನಾಗರಿಕರ ಸಾವು ಮಿತಿಮೀರಿದೆ.

VISTARANEWS.COM


on

Israel Palestine War
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೆರುಸಲೇಂ: ಗಾಜಾಪಟ್ಟಿ ಮೇಲೆ ಇಸ್ರೇಲ್‌ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದ್ದರೂ, ಇಡೀ ಗಾಜಾಪಟ್ಟಿಯೇ ಮಸಣದಂತಾದರೂ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸುತ್ತಿರುವ ದಾಳಿಯನ್ನು (Israel Palestine War) ಮಾತ್ರ ಕಡಿಮೆ ಮಾಡಿಲ್ಲ. ಗಾಜಾಪಟ್ಟಿಯ ಹಮಾಸ್‌ ಉಗ್ರರು ನಡೆಸುತ್ತಿರುವ ನಿರಂತರ ದಾಳಿಯಿಂದಾಗಿ ಇದುವರೆಗೆ ಇಸ್ರೇಲ್‌ನಲ್ಲಿ 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ ಎಂಬುದಾಗಿ ಇಸ್ರೇಲ್‌ ಸೇನೆ (Israel Army) ಮಾಹಿತಿ ನೀಡಿದೆ.

ಇಸ್ರೇಲ್‌ ನಡೆಸುತ್ತಿರುವ ದಾಳಿಯ ಬಳಿಕ ಗಾಜಾಪಟ್ಟಿಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದನ್ನೂ ಗಾಜಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ 900 ಮಂದಿ ಮೃತಪಟ್ಟರೆ, 4,600 ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ. ಆದರೆ, ಮೂಲಗಳ ಪ್ರಕಾರ, ಎರಡೂ ದೇಶದಲ್ಲಿ ಇದಕ್ಕಿಂತ ಹೆಚ್ಚಿನ ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, ಮಂಗಳವಾರ (ಅಕ್ಟೋಬರ್‌ 11) ತಡರಾತ್ರಿ ಇಸ್ರೇಲ್‌ ಮಾಡಿದ ವಾಯುದಾಳಿಗೆ ಗಾಜಾ ತತ್ತರಿಸಿ ಹೋಗಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎನ್ನಲಾಗುತ್ತಿದೆ.

3 ಸಾವಿರ ದಾಟಿದ ಸಾವಿನ ಸಂಖ್ಯೆ

ಎರಡೂ ದೇಶಗಳಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 3 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾರಣ ಸಾವಿನ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ ಎನ್ನಲಾಗಿದೆ. ಇಸ್ರೇಲ್‌ನಲ್ಲೂ ಸಾವಿರಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. “ನಾವು ಯುದ್ಧ ಆರಂಭಿಸಿಲ್ಲ. ಆದರೆ ಮುಗಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈಗಾಗಲೇ ಘೋಷಿಸಿದ್ದಾರೆ.

ಇದನ್ನೂ ಓದಿ: Israel Palestine War: ಭಾರತದ ಬೆನ್ನಲ್ಲೇ ಬ್ರಿಟನ್‌ ಬೆಂಬಲ; ಸಂಸತ್‌ ಮೇಲೆ ಇಸ್ರೇಲ್‌ ಧ್ವಜ!

ಇಸ್ರೇಲ್‌ಗೆ ಹಲವು ದೇಶಗಳ ಬೆಂಬಲ

ಬ್ರಿಟನ್‌ ಸಂಸತ್ತು, ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತ ಭವನ, ನ್ಯೂಯಾರ್ಕ್‌ ನಗರದಲ್ಲಿರುವ ಎಂಪೈರ್‌ ಸ್ಟೇಡ್‌ ಕಟ್ಟಡ, ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ ಸೇರ ಹಲವು ಕಟ್ಟಡಗಳು ಇಸ್ರೇಲ್‌ ಧ್ವಜದ ನೀಲಿ ಹಾಗೂ ಬಿಳಿ ಬಣ್ಣಗಳಿಂದ ಕಂಗೊಳಿಸುವ ಮೂಲಕ ಬೆಂಬಲ ಸೂಚಿಸಲಾಗಿದೆ. ಹಾಗೆಯೇ, ಐಫೆಲ್‌ ಟವರ್‌ ಮೇಲೆ ನೀಲಿ ಹಾಗೂ ಬಿಳಿ ಬಣ್ಣಗಳ ಲೈಟ್‌ ಉರಿಸುವ ಜತೆಗೆ ಇಸ್ರೇಲ್‌ ರಾಷ್ಟ್ರಗೀತೆಯನ್ನೂ ಮೊಳಗಿಸಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಇಸ್ರೇಲ್‌ಗೆ ಭಾರತ, ಅಮೆರಿಕ, ಇಟಲಿ, ಜರ್ಮನಿ, ಬ್ರಿಟನ್‌ ಸೇರಿ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ISIS Terrorists: ಐಪಿಎಲ್‌ ಪಂದ್ಯಕ್ಕೂ ಮೊದಲೇ ಗುಜರಾತ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರ ಬಂಧನ; ಇವರ ಸಂಚೇನು?

ISIS Terrorists: ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ನ ಎಲಿಮಿನೇಟರ್‌ ಹಾಗೂ ಕ್ವಾಲಿಫೈಯರ್‌ ಪಂದ್ಯಗಳು ನಡೆಯುವ ಕೆಲವೇ ಗಂಟೆಗಳ ಮೊದಲೇ ಉಗ್ರರನ್ನು ಬಂಧಿಸಿರುವುದು ಪ್ರಾಮುಖ್ಯತೆ ಪಡೆದಿದೆ.

VISTARANEWS.COM


on

ISIS Terrorists
Koo

ಅಹಮದಾಬಾದ್: ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳವು (ATS) ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರನ್ನು (ISIS Terrorists) ಬಂಧಿಸಿದ್ದಾರೆ. ಸರ್ದಾರ್‌ ವಲ್ಲಭಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Ahmedabad Airport) ಎಟಿಸ್‌ ಸಿಬ್ಬಂದಿಯು ಶ್ರೀಲಂಕಾದ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ತಮ್ಮ ಹ್ಯಾಂಡ್ಲರ್‌ಗಾಗಿ ಕಾಯುತ್ತಿರುವಾಗಲೇ ಅವರನ್ನು ಬಲೆಗೆ ಹಾಕಿದ್ದಾರೆ. ನಾಲ್ವರನ್ನೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ವರನ್ನೂ ಬಂಧಿಸುತ್ತಲೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಎಟಿಎಸ್‌ ಸಿಬ್ಬಂದಿಯು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ಏನು ಮಾಡುತ್ತಿದ್ದರು? ಅವರು ರೂಪಿಸಿದ ಸಂಚೇನು? ಎಲ್ಲಿಗೆ ಹೋಗುವವರಿದ್ದರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ನ ಎಲಿಮಿನೇಟರ್‌ ಹಾಗೂ ಕ್ವಾಲಿಫೈಯರ್‌ ಪಂದ್ಯಗಳು ನಡೆಯುವ ಕೆಲವೇ ಗಂಟೆಗಳ ಮೊದಲೇ ಉಗ್ರರನ್ನು ಬಂಧಿಸಿರುವುದು ಪ್ರಾಮುಖ್ಯತೆ ಪಡೆದಿದೆ.

ಮೊದಲ ಕ್ವಾಲಿಫೈಯರ್​ ಪಂದ್ಯ ಮಂಗಳವಾರ (ಮೇ 21) ಅಹಮದಾಬಾದ್​ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಮುಖಾಮುಖಿಯಾಗಲಿವೆ. ಬುಧವಾರ (ಮೇ 22) ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆಡಲಿದೆ. ಈ ಪಂದ್ಯವೂ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಿಂದಾಗಿ ಅಹಮದಾಬಾದ್‌ನಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಇದರ ಮಧ್ಯೆಯೇ, ಏರ್‌ಪೋರ್ಟ್‌ನಲ್ಲಿ ನಾಲ್ವರು ಉಗ್ರರ ಬಂಧನವಾಗಿದೆ.

ಮೇ 12ರಂದು ಬಾಂಬ್‌ ಬೆದರಿಕೆ

ಮೇ 12ರಂದು ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಇ-ಮೇಲ್‌ ಮೂಲಕ ಹುಸಿ ಬಾಂಬ್‌ ಬೆದರಿಕೆ ಒಡ್ಡಲಾಗಿತ್ತು. ಬೆದರಿಕೆಯ ಮೇಲ್‌ ಬರುತ್ತಲೇ ಭದ್ರತಾ ಸಿಬ್ಬಂದಿಯು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿತ್ತು. ಇಡೀ ವಿಮಾನ ನಿಲ್ದಾನದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳಿಗಾಗಿ ಇನ್ನಿಲ್ಲದಂತೆ ಪರಿಶೀಲನೆ ನಡೆಸಲಾಗಿತ್ತು. ಹಾಗಾಗಿ, ಉಗ್ರರ ಬಂಧನವು ಮತ್ತಷ್ಟು ಪ್ರಾಮುಖ್ಯತೆ ಪಡೆದಿದೆ.

ಇದನ್ನೂ ಓದಿ: ISIS link: ಐಸಿಸ್‌ ಲಿಂಕ್ ಕೇಸ್‌ನಲ್ಲಿ ಮಾಜಿ ಶಾಸಕ ಇದಿನಬ್ಬ ಮೊಮ್ಮಗನಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು; ಕೋರ್ಟ್‌ ಕೊಟ್ಟ ಕಾರಣ ನೋಡಿ!

Continue Reading

ವಿದೇಶ

Survival Story: ಆ 17 ದಿನಗಳು…ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ

Survival Story: ಇತ್ತೀಚೆಗೆ ತರೆಕಂಡ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ಎಲ್ಲರ ಗಮನ ಸೆಳೆದಿದೆ. ತಮಿಳುನಾಡಿನ ಗುಣ ಗುಹೆಯಲ್ಲಿ ಸಿಕ್ಕಿ ಬೀಳುವ ಗೆಳೆಯನೊಬ್ಬನನ್ನು ರಕ್ಷಿಸಲು ಯತ್ನಿಸುವ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರವನ್ನು ನೋಡುವಾಗ 2018ರಲ್ಲಿ ನಡೆದ ಥೈಲ್ಯಾಂಡ್‌ನ ಗುಹೆಯೊಂದಲ್ಲಿ ಸಿಲುಕಿದ್ದ 13 ಮಂದಿಯ ರಕ್ಷಣೆಯ ರೋಚಕ ಕಾರ್ಯಾಚರಣೆ ಕಣ್ಣ ಮುಂದೆ ಬರುತ್ತದೆ. ಅಂದಿನ ಕಾರ್ಯಾಚರಣೆ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Survival Story
Koo

ಬೆಂಗಳೂರು: ಇತ್ತೀಚೆಗೆ ತರೆಕಂಡ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್’ (Manjummel Boys) ಚಿತ್ರ ದೇಶದ ಗಮನ ಸೆಳೆದಿದೆ. ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ರೂ.ಗಿಂತಲೂ ಅಧಿಕ ಕಲೆಕ್ಷನ್‌ ಮಾಡಿದ ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟು ಅಲ್ಲೂ ಸೂಪರ್‌ ಹಿಟ್‌ ಎನಿಸಿಕೊಂಡಿದೆ. ಚಿದಂಬರಂ ನಿರ್ದೇಶನದ ಈ ಸರ್ವೈವಲ್‌ ಡ್ರಾಮ ಸಾವಿನಂಚಿನಿಂದ ಬದುಕುಳಿದ ಯುವಕನೊಬ್ಬನ ಕಥೆ ಹೇಳುತ್ತದೆ. ಆತನನ್ನು ಬದುಕಿಸಲು ಸ್ನೇಹಿತರು ಪಟ್ಟ ಶ್ರಮವನ್ನು ಕಣ್ಣ ಮುಂದೆ ತಂದಿಡುತ್ತದೆ. ಈ ಚಿತ್ರವನ್ನು ನೋಡುತ್ತಿದ್ದರೆ 2018ರಲ್ಲಿ ನಡೆದ ಥೈಲ್ಯಾಂಡ್‌ನ ಗುಹೆಯೊಂದಲ್ಲಿ ಸಿಲುಕಿದ್ದ 13 ಮಂದಿಯ ರಕ್ಷಣೆಯ ರೋಚಕ ಕಾರ್ಯಾಚರಣೆ ಕಣ್ಣ ಮುಂದೆ ಬರುತ್ತದೆ. ವಿಶ್ವಾದ್ಯಂತ ಸುದ್ದಿಯಾಗಿದ್ದ ಆ ಸಾಹಸಗಾಥೆಯ ವಿವರ ಇಲ್ಲಿದೆ (Survival Story).

ಏನಾಗಿತ್ತು?

ಅದು 2018ರ ಜೂನ್‌ 23. ಥಾಯ್ ಫುಟ್ಬಾಲ್‌ ತಂಡ ದಿ ವೈಲ್ಡ್ ಬೋರ್ಸ್‌ನ 12 ಸದಸ್ಯರು (18 ವರ್ಷದೊಳಗಿನ ಮಕ್ಕಳು) 25 ವರ್ಷದ ತಮ್ಮ ತರಬೇತುದಾರ ಏಕಫೋಲ್ ಚಾಂಟಾವೊಂಗ್ ಅವರೊಂದಿಗೆ ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿ ಬೀಳುವುದರೊಂದಿಗೆ ರೋಚಕ ಘಟನೆಗೆ ಮುನ್ನಡಿ ಬರೆಯಲಾಗುತ್ತದೆ. ಬಿರುಸಾದ ಮಳೆಗೆ ಗುಹೆಯೊಳಗೆ ಸಿಕ್ಕಿ ಬೀಳುವ ಈ 13 ಮಂದಿ ಮುಂದಿನ 17 ದಿನ ಬದುಕುಳಿಯಲು ಅಕ್ಷರಶಃ ಹೋರಾಟ ನಡೆಸುತ್ತಾರೆ.

ದುರ್ಗಮ ಪ್ರದೇಶದಲ್ಲಿರುವ ಈ ಗುಹೆ ಮಕ್ಕಳ ನೆಚ್ಚಿನ ತಾಣ. ಜತೆಗೆ ಗುಹೆ ಒಳಗೆಲ್ಲ ಓಡಾಡಿ ಅವರಿಗೆ ಅಭ್ಯಾಸವಾಗಿತ್ತು. ಅಂದು ಕೂಡ ಈ ಗುಂಪು ತಮ್ಮ ಗೆಳೆಯನೊಬ್ಬನ ಹುಟ್ಟುಹಬ್ಬ ಆಚರಿಸಲು ತಿಂಡಿಗಳ ಜತೆಗೆ ಎಂದಿನಂತೆ ಥಾಮ್ ಲುವಾಂಗ್ ಗುಹೆ ಪ್ರವೇಶಿಸಿತು. ಆದರೆ ಬಳಿಕ ಸುರಿದ ಭೀಕರ ಮಳೆ ಅವರ ಜೀವನದ ಗತಿಯನ್ನೇ ಬದಲಾಯಿಸಲಿದೆ ಎಂದು ಆ ವೇಳೆಗೆ ಅವರಿಗೆ ತಿಳಿದಿರಲಿಲ್ಲ.

ರಣ ಭೀಕರ ಮಳೆ

ಮಕ್ಕಳು ಗುಹೆ ಒಳಗೆ ಪ್ರವೇಶಿಸುತ್ತಿದ್ದಂತೆ ಆರಂಭವಾಯಿತು ರಣ ಭೀಕರ ಮಳೆ. ಎಲ್ಲೆಡೆ ನೀರು ನುಗ್ಗಿ ಬರತೊಡಗಿತು. ಇದೇ ವೇಳೆ ಮಕ್ಕಳನ್ನು ಕಾಣದೆ ಪೋಷಕರು ಗಾಬರಿಗೆ ಒಳಗಾದರು. ಕೂಡಲೇ ಮಕ್ಕಳ ಫುಟ್ಬಾಲ್‌ ಕೋಚ್‌ ಏಕಫೋಲ್ ಚಾಂಟಾವೊಂಗ್ ಮಕ್ಕಳನ್ನು ಹುಡುಕಿಕೊಂಡು ಹೊರಟರು. ಮಕ್ಕಳು ಗುಹೆ ಒಳಗೆ ಇರುವುದು ಹೊರಗೆ ನಿಲ್ಲಿಸಿದ್ದ ಸೈಕಲ್‌ ಮೂಲಕ ಅವರಿಗೆ ಗೊತ್ತಾಯಿತು. ಅದಾಗಲೇ ಗುಹೆ ಒಳಗೆ ನೆರೆ ನುಗ್ಗಿತ್ತು. ಸಿಕ್ಕಿ ಬಿದ್ದಿರುವ ಮಕ್ಕಳನ್ನು ಹೇಗಾದರೂ ಮಾಡಿ ಹೊರ ಕರೆತರಬೇಕೆಂದು ಏಕಫೋಲ್ ಚಾಂಟಾವೊಂಗ್ ಕೂಡ ಗುಹೆ ಒಳ ಹೊಕ್ಕರು. ಆದರೆ ಬಳಿಕ ಅವರೂ ಅಲ್ಲಿ ಬಂಧಿಯಾದರು. ಯಾವ ಪರಿ ಪ್ರವಾಹ ಬಂದಿತ್ತು ಎಂದರೆ ಒಬ್ಬರಿಗೂ ಹೊರ ಬರಲು ಸಾಧ್ಯವಾಗಲಿಲ್ಲ. ಬಳಿಕ ಅವರನ್ನು ರಕ್ಷಿಸಲು ಕೈಗೊಂಡ ರೋಚಕ ಕಾರ್ಯಾಚರಣೆಗೆ ಇಡೀ ಜಗತ್ತೇ ಸಾಕ್ಷಿಯಾಯ್ತು. ಈ ಕಾರ್ಯಾಚರಣೆಗೆ ಭಾರತವೂ ಕೈ ಜೋಡಿಸಿತ್ತು. ಅಲ್ಲಿ ಸಿಲುಕಿಕೊಂಡಿರುವ ಮಕ್ಕಳು ಸೇರಿದಂತೆ ಕೋಚ್‌ನ ಸುರಕ್ಷತೆಗಾಗಿ ಕೋಟ್ಯಂತರ ಮಂದಿ ಪ್ರಾರ್ಥಿಸಿದ್ದರು.

9 ದಿನಗಳ ಬಳಿಕ…

ಈ ಫುಟ್ಬಾಲ್‌ ತಂಡ ಗುಹೆಯೊಳಗೆ ಸಿಕ್ಕಿಬಿದ್ದ 9 ದಿನಗಳ ಕಾಲ ಅವರನ್ನು ಸಂಪರ್ಕಿಸಲು ರಕ್ಷಣಾ ತಂಡಕ್ಕೆ ಸಾಧ್ಯವಾಗಲಿಲ್ಲ. ಬರ್ತ್‌ಡೇ ಪಾರ್ಟಿಗಾಗಿ ತಂದಿದ್ದ ತಿಂಡಿ, ಹನಿ ನೀರು ಮತ್ತು ಧ್ಯಾನ ಅವರ ಕುಟುಕು ಜೀವವನ್ನು ಉಳಿಸಿತ್ತು. ಜತೆಗೆ ಗುಹೆಯ ಮೇಲಿನಿಂತ ತೊಟ್ಟಿಕ್ಕುವ ನೀರೇ ಅವರಿಗೆ ಅಮೃತ ಸಮಾನವಾಗಿತ್ತು. ವಿಶೇಷ ಎಂದರೆ ಮಕ್ಕಳಿಗೆ ತಿಂಡಿ ಹಂಚಿದ್ದ ಕೋಚ್‌ ಅವರಿಗೆ ಕಡಿಮೆಯಾಗಬಾರದು ಎನ್ನುವ ಉದ್ದೇಶದಿಂದ ತಾವು ಸೇವಿಸಿರಲಿಲ್ಲ.

ಕೊನೆಗೂ ಮೂಡಿತು ಭರವಸೆಯ ಬೆಳಕು

ನೂರಾರು ಸ್ವಯಂ ಕಾರ್ಯಕರ್ತರು ಮತ್ತು ಅಧಿಕಾರಿಗಳು ವಿವಿಧ ದೇಶಗಳಿಂದ ನೆರವಿಗಾಗಿ ಧಾವಿಸಿದ್ದರು. ಕೊನೆಗೆ ಘಟನೆ ನಡೆದು 9 ದಿನಗಳಾದ ಬಳಿಕ ಜುಲೈ 2ರಂದು ಬ್ರಿಟನ್‌ನ ಇಬ್ಬರು ಮುಳುಗುತಜ್ಞರು ಕತ್ತಲನ್ನು ಸೀಳಿಕೊಂಡು ಗುಹೆಯ ಮುಂದೆ ಸಾಗಿದ್ದರು. ಅವರ ಹಾಯಿಸಿದ ಬೆಳಕಿಗೆ ಕೊನೆಗೂ ಕೋಚ್ ಮತ್ತು ಬಾಲಕರು ಕಾಣಿಸಿದ್ದರು. ತಿರುವು ಮುರುವುಗಳಿಂದ ಕೂಡಿದ್ದ, ಸಪೂರ ಗುಹೆಯಲ್ಲಿ ಸುಮಾರು 4 ಗಂಟೆಗಳ ಕಾಲ ಈಜಿದ ಬಳಿಕ ರಕ್ಷಣಾ ತಂಡಕ್ಕೆ ಮಕ್ಕಳು ಕಾಣಿಸಿದ್ದರು. ಅವರು ಪತ್ತೆಯಾಗಿದ್ದರೂ ರಕ್ಷಣೆ ಸುಲಭದ್ದಾಗಿರಲಿಲ್ಲ. ಗುಹೆಯ ಬಾಗಿಲಿನಿಂದ ಸುಮಾರು 2 ಮೈಲಿ ದೂರದಲ್ಲಿರುವ ಅವರನ್ನು ಹೊರಗೆ ಕರೆತಲು ಮತ್ತೂ 8 ದಿನ ಹಿಡಿಯಿತು ಎಂದರೆ ಅಲ್ಲಿನ ಪರಿಸ್ಥಿತಿಯನ್ನೊಮ್ಮೆ ಊಹಿಸಿ.

ಬಳಿಕ ಅವರಿಗೆ ಆಮ್ಲಜನಕ ಸರಬರಾಜು ಮಾಡಲು ಆರಂಭಿಸಲಾಯಿತು. ಇದರ ಜತೆಗೆ ಕಾರ್ಯಾಚರಣೆ ತಂಡ ಗುಹೆಯಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರನ್ನು ಯಂತ್ರ ಬಳಸಿ ಖಾಲಿ ಮಾಡಲು ಮುಂದಾಯಿತು. ಹೀಗೆ ಸತತ ಪ್ರಯತ್ನದ ಬಳಿಕ ಕೊನೆಗೂ ಜುಲೈ 10ರಂದು ಸುಮಾರು 17 ದಿನಗಳ ಬಳಿಕ 13 ಮಂದಿ ಸುರಕ್ಷಿತರಾಗಿ ಬಂಧಮುಕ್ತರಾದಾಗ ಇಡೀ ಜಗತ್ತೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು. ನೋವಿನ ವಿಚಾರ ಎಂದರೆ ಕಾರ್ಯಾಚರಣೆಯ ತಂಡದಲ್ಲಿದ್ದ ಇಬ್ಬರು ಮೃತಪಟ್ಟಿದ್ದರು.

ಭಾರತದ ನೆರವು

ಗುಹೆಯಲ್ಲಿದ್ದ ನೀರನ್ನು ಖಾಲಿ ಮಾಡುವ ಕಾರ್ಯದಲ್ಲಿ ಭಾರತವು ಗಣನೀಯ ಕೊಡುಗೆ ನೀಡಿದೆ ಎನ್ನುವುದು ನಾವೆಲ್ಲ ಹೆಮ್ಮೆ ಪಡುವ ವಿಚಾರ. ಹೌದು, ಗುಹೆಯೊಳಗೆ ತುಂಬಿದ್ದ ನೀರನ್ನು ಹೊರ ಹಾಕಲು ಥಾಯ್‌ ಸರ್ಕಾರ ಪೂನಾದ ಕಿರ್ಲೋಸ್ಕರ್‌ ಬ್ರದರ್ಸ್‌ ಕಂಪನಿಯ ಪರಿಣಿತರ ಸಹಾಯ ಪಡೆದುಕೊಂಡಿತ್ತು. ಭಾರತೀಯ ರಾಯಭಾರ ಕಚೇರಿಯ ಶಿಫಾರಸ್ಸಿನ ಮೇರೆಗೆ ಕಿರ್ಲೋಸ್ಕರ್‌ ಕಂಪನಿಯ ಭಾರತ, ಥಾಯ್ಲೆಂಡ್‌ ಮತ್ತು ಇಂಗ್ಲೆಂಡ್‌ನಲ್ಲಿರುವ ಪರಿಣಿತರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಡಾಕ್ಯುಮೆಂಟ್ರಿ

ಈ ಗ್ರೇಟ್‌ ಸರ್ವೈವಲ್‌ ಘಟನೆಯ ಕುರಿತಾಗಿ ಡಾಕ್ಯುಮೆಂಟ್ರಿ ತಯಾರಾಗಿದೆ. ʼದಿ ಟ್ರ್ಯಾಪ್ಡ್‌ 13: ಹೌ ವಿ ಸರ್ವೈವ್‌ಡ್‌ ದಿ ಥೈ ಕೇವ್‌ʼ (The Trapped 13: How We Survived The Thai Cave) ಶೀರ್ಷಿಕೆಯ ಈ ಡಾಕ್ಯುಮೆಂಟ್ರಿ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ.

ಇದನ್ನೂ ಓದಿ: Success Story:‌ ಕೆಜಿಎಫ್‌ನ ‘ರಾಕಿ’ ಹಾಗೆ ಸ್ವಂತ ಹೆಲಿಕಾಪ್ಟರ್‌ನಲ್ಲಿ ತಿರುಗಾಡುವ ರೈತ; ಯಾರಿವರು?

Continue Reading

ವಿದೇಶ

Ebrahim Raisi: ಹೆಲಿಕಾಪ್ಟರ್‌ ದುರಂತಕ್ಕೂ ಮುಂಚಿನ ಇಬ್ರಾಹಿಂ ರೈಸಿ ವಿಡಿಯೋ ವೈರಲ್‌

Ebrahim Raisi:ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ದುರದೃಷ್ಟವಶಾತ್ ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಹುತಾತ್ಮರಾದರು” ಎಂದು ಇರಾನ್‌ ಮೆಹರ್ ಏಜೆನ್ಸಿ ವರದಿ ಮಾಡಿದೆ.

VISTARANEWS.COM


on

Ebrahim Raisi
Koo

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಹಾಗೂ ಅವರ ಎಂಟು ಜನ ಅಧಿಕಾರಿಗಳನ್ನು ಬಲಿಪಡೆದ ಭೀಕರ ಹೆಲಿಕಾಪ್ಟರ್‌ ದುರಂತ (Helicopter Crash)ಕ್ಕೂ ಮುಂಚಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Video Viral) ಆಗಿದೆ. ಹೆಲಿಕಾಪ್ಟರ್‌ ಹಾರಾಟ ಶುರು ಮಾಡುತ್ತಿರುವ ವಿಡಿಯೋ ಸ್ಥಳೀಯ ವಾಹಿನಿಯಲ್ಲಿ ಬಿತ್ತರವಾಗಿತ್ತು. ಇದೀಗ ಈ ವಿಡಿಯೋ ನೋಡಿ ಇರಾನ್‌ ಜನತೆ ಕಣ್ಣೀರು ಮಿಡಿದಿದ್ದಾರೆ. ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಅವರು ಅಜರ್‌ಬೈಜಾನ್‌ಗೆ ತೆರಳಿದ್ದರು. ಇದೇ ವೇಳೆ ಹೆಲಿಕಾಪ್ಟರ್‌ ಪತನಗೊಂಡಿತ್ತು.

ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ದುರದೃಷ್ಟವಶಾತ್ ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಹುತಾತ್ಮರಾದರು” ಎಂದು ಇರಾನ್‌ ಮೆಹರ್ ಏಜೆನ್ಸಿ ವರದಿ ಮಾಡಿದೆ.

ಇದೀಗ ಈ ದುರ್ಘಟನೆಗೂ ಮುನ್ನ ಚಿತ್ರೀಕರಣಗೊಂಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ರೈಸಿ ತನ್ನ ಅಧಿಕಾರಿಗಳ ಜೊತೆ ಕುಳಿತು ಮಾತುಕತೆ ನಡೆಸುತ್ತಿರುವುದನ್ನು ಕಾನಬಹುದಾಗಿದೆ. ಇದಾದ ಕೇವಲ 30ನಿಮಿಷಗಳ ನಂತರ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಸುಮಾರು 16ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ರೈಸಿ ಮತ್ತು ಅವರ ಜೊತೆಗಿದ್ದವರು ಮೃತಪಟ್ಟಿರುವ ಬಗ್ಗೆ ಇರಾನ್‌ ದೃಢಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ

ರೈಸಿ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ ಅಧ್ಯಕ್ಷ ಡಾ ಸಯ್ಯದ್ ಇಬ್ರಾಹಿಂ ರೈಸಿ ಅವರ ದುರಂತಮಯ ನಿಧನದಿಂದ ತೀವ್ರ ದುಃಖ ಹಾಗೂ ಆಘಾತ ಉಂಟಾಗಿದೆ. ಭಾರತ- ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಕೊಡುಗೆಯನ್ನು ಸದಾ ನೆನಪಿಸಿಕೊಳ್ಳಲಾಗುತ್ತದೆ. ಅವರ ಕುಟುಂಬ ಹಾಗೂ ಇರಾನ್‌ನ ಜನತೆಗೆ ನನ್ನ ಹೃದಯಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ. ಈ ದುಃಖದ ಸಂದರ್ಭದಲ್ಲಿ ಭಾರತವು ಇರಾನ್ ಜತೆಗೆ ಇದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:Kangana Ranaut: ಚುನಾವಣೆಯಲ್ಲಿ ಗೆದ್ದರೆ ನಟನೆಗೆ ವಿದಾಯ; ನಟಿ ಕಂಗನಾ ರಣಾವತ್‌ ಘೋಷಣೆ

Continue Reading

ವಿದೇಶ

Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?

Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter Crash) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದ್ದು, ಘಟನೆಯಲ್ಲಿ ಅವರು ಮೃತಪಟ್ಟಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ ಸೇರಿ ಇತರರೂ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Ebrahim Raisi
Koo

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter Crash) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದ್ದು, ಘಟನೆಯಲ್ಲಿ ಅವರು ಮೃತಪಟ್ಟಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ ಸೇರಿ ಇತರರೂ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ರಕ್ಷಣಾ ತಂಡ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

“ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ದುರದೃಷ್ಟವಶಾತ್ ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಹುತಾತ್ಮರಾದರು” ಎಂದು ಇರಾನ್‌ ಮೆಹರ್ ಏಜೆನ್ಸಿ ವರದಿ ಮಾಡಿದೆ.

ಹೆಲಿಕಾಪ್ಟರ್‌ನಲ್ಲಿ ಯಾರಿದ್ದರು?

ಹೆಲಿಕಾಪ್ಟರ್‌ನಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ, ಪೂರ್ವ ಅಜರ್‌ಬೈಜಾನ್‌ ಗವರ್ನರ್‌ ಮಲೇಕ್‌ ರಹಮತಿ ಹಾಗೂ ಪೂರ್ವ ಅಜರ್‌ಬೈಜಾನ್‌ನಲ್ಲಿರುವ ಇರಾನ್‌ ಸುಪ್ರೀಂ ಲೀಡರ್‌ನ ಪ್ರತಿನಿಧಿ ಅಯೊತೊಲ್ಲಾ ಮೊಹಮ್ಮದ್‌ ಅಲಿ ಅಲೆ-ಹಶೇಮ್‌ ಕೂಡ ಇದ್ದರು. ಮಂಜು ಕವಿದ ವಾತಾವರಣದ ಕಾರಣ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಮುಂದಾಗಿದ್ದರು. ಆದರೆ ಲ್ಯಾಂಡಿಂಗ್ ವೇಳೆಯೇ ಹೆಲಿಕಾಪ್ಟರ್ ಅಪಘಾತವಾಗಿದೆ ಎಂದು ಇರಾನ್ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಮತ್ತು ಇತರ ಗಣ್ಯರು ಅಜರ್‌ಬೈಜಾನ್‌ಗೆ ತೆರಳಿದ್ದರು. 

ಕವಿದ ದಟ್ಟ ಮಂಜು ಮತ್ತು ಹವಾಮಾನ ವೈಪರೀತ್ಯ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹೆಲಿಕಾಪ್ಟರ್‌ ಹುಡುಕಾಟ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮಾನವ ರಹಿತ ವೈಮಾನಿಕ ವಾಹನ(UAV)ಹೆಲಿಕಾಪ್ಟರ್‌ ಪತನಗೊಂಡಿರುವ ಸ್ಥಳವನ್ನು ಪತ್ತೆ ಹಚ್ಚಿದ್ದು, ಸದ್ಯ ಅದರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋವನ್ನು ಇರಾನಿಯನ್‌ ಸುದ್ದಿ ವಾಹಿನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದು, ರೆಡ್ ಕ್ರೆಸೆಂಟ್ ಶೋಧ ಮತ್ತು ಪಾರುಗಾಣಿಕಾ ತಂಡಗಳು ಅಧ್ಯಕ್ಷರನ್ನು ಹೊತ್ತ ಹೆಲಿಕಾಪ್ಟರ್ ಅಪಘಾತದ ಸ್ಥಳಕ್ಕೆ ತಲುಪಿವೆ. ರೆಡ್ ಕ್ರೆಸೆಂಟ್ ಸದ್ಯದಲ್ಲೇ ವಿವರವಾದ ಮಾಹಿತಿಯನ್ನು ನೀಡಲಿದೆ ಎಂದು ಹೇಳಿದೆ. ಸದ್ಯ ಇದು ಅಪಘಾತವೇ, ವಿಧ್ವಂಸಕ ಕೃತ್ಯವೇ ಎನ್ನುವ ಅನುಮಾನ ಮೂಡಿದೆ.

ಇಬ್ರಾಹಿಂ ರೈಸಿಗಾಗಿ ಮೋದಿ ಪ್ರಾರ್ಥನೆ

ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನಗೊಂಡಿರುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದರು. “ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್‌ ಪತನದ ಸುದ್ದಿ ತಿಳಿದು ಆತಂಕವಾಗಿದೆ. ಇರಾನ್‌ ಜನರ ಭಾವನೆಗಳ ಜತೆ ನಾವಿದ್ದೇವೆ. ಇಬ್ರಾಹಿಂ ರೈಸಿ ಹಾಗೂ ಅವರ ಜತೆಗಿದ್ದ ಎಲ್ಲರೂ ಸುರಕ್ಷಿತವಾಗಿರಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಮೋದಿ ಪೋಸ್ಟ್‌ ಮಾಡಿದ್ದರು. ಜತೆಗೆ ವಿಶ್ವದ ನಾನಾ ದೇಶಗಳ ನಾಯಕರೂ ರೈಸಿ ಅವರು ಸುರಕ್ಷಿರತಾಗಿ ಪತ್ತೆಯಾಗಲಿ ಎಂದು ಪ್ರಾರ್ಥಿಸಿದ್ದರು.

ಇದನ್ನೂ ಓದಿ: Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

Continue Reading
Advertisement
theft case
ತುಮಕೂರು3 mins ago

Theft Case : ಕಳ್ಳತನವೂ ಈಗ ಪ್ರೊಫೆಷನಲ್‌; ಕದಿಯೋಕೆ ತಿಂಗಳ ಸ್ಯಾಲರಿ ಕೊಡುತ್ತಿದ್ದ ಪ್ರಳಯಾಂತಕ!

Physical Abuse & Murder
ದೇಶ5 mins ago

Physical Abuse & Murder: ಬಾಲಕಿ ಮೇಲೆ ಅತ್ಯಾಚಾರ, ಸಜೀವ ದಹನ ಕೇಸ್‌; ಹಂತಕರಿಗೆ ಮರಣದಂಡನೆ

Crime News
ದೇಶ6 mins ago

ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಶ್ರೀಮಂತನ ಮಗನಿಗೆ 15 ಗಂಟೆಯೊಳಗೆ ಜಾಮೀನು! ಪ್ರಬಂಧ ಬರೆಯುವ ಶಿಕ್ಷೆ!

ISIS Terrorists
ದೇಶ8 mins ago

ISIS Terrorists: ಐಪಿಎಲ್‌ ಪಂದ್ಯಕ್ಕೂ ಮೊದಲೇ ಗುಜರಾತ್‌ನಲ್ಲಿ ನಾಲ್ವರು ಐಸಿಸ್‌ ಉಗ್ರರ ಬಂಧನ; ಇವರ ಸಂಚೇನು?

Deepika Padukone Enjoy Lunch Date After Casting Their Vote
ಬಾಲಿವುಡ್9 mins ago

Deepika Padukone: ವೋಟ್‌ ಮಾಡಿದ ದೀಪಿಕಾ ಪಡುಕೋಣೆ; ಅವರ ಹೊಟ್ಟೆ ನೋಡಿ ಗಂಡು ಮಗು ಎಂದ ನೆಟ್ಟಿಗರು!

Prajwal Revanna Case One more SPP appointed for SIT cases Govt gears up for arguments in High Court
ಕ್ರೈಂ27 mins ago

Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇನ್ನೊಬ್ಬ ಎಸ್‌ಪಿಪಿ ನೇಮಕ; ಹೈಕೋರ್ಟ್‌ನಲ್ಲಿ ವಾದಕ್ಕೆ ಸಜ್ಜಾದ ಸರ್ಕಾರ

MS Dhoni Retirement
ಕ್ರಿಕೆಟ್31 mins ago

MS Dhoni Retirement: ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಚೆನ್ನೈ ಫ್ರಾಂಚೈಸಿ

Kannada New Movie sanju weds geetha another movie came
ಸ್ಯಾಂಡಲ್ ವುಡ್34 mins ago

Kannada New Movie: `ಸಂಜು ವೆಡ್ಸ್ ಗೀತಾ’ ಚಿತ್ರದ ನಿರ್ಮಾಪಕರಿಂದ ಬರ್ತಿದೆ ಮತ್ತೊಂದು ಅದ್ಧೂರಿ ಚಿತ್ರ!

HD Revanna
ಪ್ರಮುಖ ಸುದ್ದಿ36 mins ago

HD Revanna: ಹೊಳೆನರಸೀಪುರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಎಚ್‌ಡಿ ರೇವಣ್ಣಗೆ ಜಾಮೀನು, ಬಿಗ್‌ ರಿಲೀಫ್

IPL 2024
ಕ್ರೀಡೆ1 hour ago

IPL 2024: ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನ ಇದೆಯೇ? ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ2 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ24 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌