1.ದಲಿತ ನಿಂದನೆ, ಆಸ್ತಿ ಕಬಳಿಕೆ ಸುಳಿಯಲ್ಲಿ ಸಚಿವ ಸುಧಾಕರ್; ರಾಜೀನಾಮೆಗೆ ಹೆಚ್ಚಿದ ಒತ್ತಡ
ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್ (Minister D Sudhakar) ಮೇಲೆ ದಾಖಲಾಗಿರುವ ಎಫ್ಐಆರ್ (FIR registered) ಪ್ರಕರಣವು ಬಹಳ ಗಂಭೀರವಾಗಿದೆ. ಆದರೆ, ಇವರು ಸಚಿವರು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸುಧಾಕರ್ ರಾಜೀನಾಮೆ ನೀಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ 1: ಸಿಎಂ ದಲಿತ ಉದ್ಧಾರಕರಾ? ದಲಿತರಿಗೆ ಧಮ್ಕಿ ಹಾಕಿದ ಸುಧಾಕರ್ರನ್ನು ಬಂಧಿಸಿ: ಎಚ್ಡಿಕೆ
ಪೂರಕ ವರದಿ 2: ಡಿ ಸುಧಾಕರ್ ಮೇಲೆ ಜಾತಿ ನಿಂದನೆ ಕೇಸ್ ದಾಖಲಾಗಿದೆಯಾ ಎಂದು ಕೇಳಿದ ಸಿಎಂ
2. ರಾಜ್ಯಕ್ಕೆ ಮತ್ತೆ ಕಾವೇರಿ ಹೊಡೆತ; ಇನ್ನೂ 15 ದಿನ 5000 ಕ್ಯೂಸೆಕ್ ನೀರು ಬಿಡಲು cwrc ಆದೇಶ
ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟು ಸುಸ್ತಾಗಿರುವ ರಾಜ್ಯಕ್ಕೆ ಮತ್ತೆ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್ ನೀರು (5000 cusec water per day) ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಕರ್ನಾಟಕದ (karnataka state) ಸಂಕಟವನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ 1: CWRCಗೆ ತಲೆ ಸರಿ ಇದೆಯಾ? KRSನಲ್ಲಿರುವ ನೀರಿನ ಪ್ರಮಾಣ ನೋಡಿ ನೀವೇ Decide ಮಾಡಿ
3. ಅಧಿಕಾರಿಗಳಿಗೆ ವರ್ಕ್ ಫ್ರಂ ಹೋಮ್ ಇಲ್ಲ; ಕಚೇರಿಗೇ ಬರ್ಬೇಕು, ಪ್ರವಾಸ ಮಾಡ್ಬೇಕು; ಸಿಎಂ ಕಟ್ಟಾಜ್ಞೆ
ಇನ್ನು ಮುಂದೆ ಯಾವ ಅಧಿಕಾರಿಗಳೂ ಮನೆಯಲ್ಲೇ ಇದ್ದೇನೆ, ಆಫೀಸ್ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುವ ಹಾಗಿಲ್ಲ. ಯಾಕೆಂದರೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳು ಕಚೇರಿಗೆ ಹೋಗಲೇಬೇಕು, ವರ್ಕ್ ಫ್ರಂ ಹೋಮ್ ಮಾಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ 1: ವಾರಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಜನ ಸಂಪರ್ಕ ಸಭೆ; ಡಿಸಿ, ಜಿಪಂ ಸಿಇಒಗಳಿಗೆ ಸಿಎಂ ಆದೇಶ
ಪೂರಕ ಸುದ್ದಿ 2: ವಿಲೇಜ್ ಅಕೌಂಟೆಂಟ್ಗಳು ಕಚೇರಿಯಲ್ಲೇ ಇರಬೇಕು ಮತ್ತು ಸಿಎಂ ಅವರ 25 ಸೂಚನೆಗಳು
4. ಸರ್ಕಾರದ ವಿರುದ್ಧ ಮುಗಿ ಬೀಳಲು ಬಿಜೆಪಿ ಸಜ್ಜು; ಬಿಎಸ್ವೈ ನೇತೃತ್ವದಲ್ಲಿ ಮಹತ್ವದ ಸಭೆ
ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಮಾಡಲು ಬಿಜೆಪಿ ಸಜ್ಜಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ರೂಪುರೇಷೆ ಬಗ್ಗೆ ಮಂಗಳವಾರ ಸಭೆ ನಡೆಸಿ ತೀರ್ಮಾನಿಸಲಾಗಿದೆ. ಮುಂದಿನ ಹೋರಾಟ ತೀವ್ರಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಅಶೋಕ ಸಾಮ್ರಾಜ್ಯದಲ್ಲಿ ಆಪರೇಷನ್ ಹಸ್ತ; ಸಾಮ್ರಾಟ್ ಕೈಬಿಟ್ಟ ಬಲಗೈ ಬಂಟರು
ಮಾಜಿ ಡಿಸಿಎಂ, ಪದ್ಮನಾಭನಗರ ಶಾಸಕ ಆರ್. ಅಶೋಕ್ ಕ್ಷೇತ್ರಕ್ಕೆ ಈಗ ಆಪರೇಷನ್ ಹಸ್ತ ಭೀತಿ ಎದುರಾಗಿದೆ. ಅಶೋಕ್ ಪರಮಾಪ್ತರನ್ನು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ಗೆ ಸೆಳೆದಿದ್ದಾರೆ. ಮುಂಬರುವ ಚುನಾವಣೆಗಳನ್ನು ಟಾರ್ಗೆಟ್ ಮಾಡಿ ಈ ಬೆಳವಣಿಗೆಗಳು ನಡೆದಿವೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಏಷ್ಯಾ ಕಪ್ : ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಸೂಪರ್ ಜಯ
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 41 ರನ್ಗಳ ಜಯ ಗಳಿಸಿತು. ಗೆಲ್ಲಲು 214 ರನ್ಗಳ ಗುರಿ ಪಡೆದ ಲಂಕಾ 172 ರನ್ಗಳಿಗೆ ಆಲೌಟ್ ಆಯಿತು. ಲಂಕಾ ಪರ ಐದು ವಿಕೆಟ್ಗಳ ಗೊಂಚಲು ಧರಿಸಿದ್ದ ಯುವ ಆಲ್ರೌಂಡರ್ ದುನಿತ್ ವೆಲ್ಲಾಲಗೆ ಬ್ಯಾಟಿಂಗ್ನಲ್ಲೂ ಮಿಂಚಿದರು. 42 ರನ್ ಗಳಿಸಿ ಅಜೇಯರಾಗುಳಿದ ದುನಿತ್ ಆಟ ಇಡೀ ಮ್ಯಾಚ್ನಲ್ಲಿ ಆಕರ್ಷಣೆಯಾಗಿತ್ತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ಸಚಿನ್ ದಾಖಲೆ ಮುರಿದು 10 ಸಾವಿರ ರನ್ ಎಲೈಟ್ ಪಟ್ಟಿ ಸೇರಿದ ರೋಹಿತ್ ಶರ್ಮಾ
7. ಹೊಸ ಸಂಸತ್ನಲ್ಲಿ ಸಿಬ್ಬಂದಿಗೆ ಹೊಸ ʼಭಾರತೀಯʼ ಸಮವಸ್ತ್ರ; ಏನೇನು ಬದಲಾವಣೆ?
ನೂತನ ಪಾರ್ಲಿಮೆಂಟ್ ಭವನದಲ್ಲಿ ಮುಂದಿನ ವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ (Special Parliament session) ಸಂಸತ್ತಿನ ಸಿಬ್ಬಂದಿ ಎರಡೂ ಸದನಗಳ ಒಳಗೆ ಮತ್ತು ಹೊರಗೆ ಹೊಸ ಸಮವಸ್ತ್ರಗಳನ್ನು ಧರಿಸಲಿದ್ದಾರೆ ಎಂದು ಲೋಕಸಭೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಸನಾತನ ಧರ್ಮ ನಿರ್ನಾಮಕ್ಕಾಗಿಯೇ I.N.D.IA ಮೈತ್ರಿಕೂಟ ರಚನೆ- ಡಿಎಂಕೆ ಸಚಿವನ ಮತ್ತೊಂದು ವಿವಾದ
ಸನಾತನ ಧರ್ಮವನ್ನು ಡೆಂಗೆ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ವಿರುದ್ದ ಹಲವು ಪ್ರಕರಣಗಳ ದಾಖಲಾಗಿವೆ. ಇದೀಗ, ಡಿಎಂಕೆ ಸರ್ಕಾರದ ಮತ್ತೊಬ್ಬ ಸಚಿವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳುನಾಡು ಉನ್ನತ ಸಚಿವ ಕೆ ಪೊನ್ಮುಡಿ ಅವರು, ಇಂಡಿಯಾ ಕೂಟ(ಪ್ರತಿಪಕ್ಷಗಳ ಮೈತ್ರಿ ಕೂಟ INIDA Bloc)ವನ್ನು ಸನಾತನ ಧರ್ಮದ ವಿರುದ್ಧ ಹೋರಾಡಲು ರಚಿಸಲಾಗಿದೆ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಲೋಕಸಭೆ ಚುನಾವಣೆ ಮೊದ್ಲೇ ಪಿಒಕೆ ಭಾರತ ಸೇರುತ್ತಾ?- ಸಲ್ವ ದಿನ ಕಾದು ನೋಡಿ ಎಂದ ಕೇಂದ್ರ ಸಚಿವ
ಶೀಘ್ರದಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ (India) ವಿಲೀನಗೊಳಿಸಲಾಗುವುದು ಭಾರತೀಯ ಸೇನಾ ಮಾಜಿ ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ವಿ ಕೆ ಸಿಂಗ್ (Union Minister VK Singh) ಅವರು ಹೇಳಿದ್ದಾರೆ. ಭಾರತದ ಗಡಿ ಪ್ರವೇಶಕ್ಕೆ ಶಿಯಾ ಮುಸ್ಲಿಮರು ಕಾರ್ಗಿಲ್ ಮೂಲಕ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸುವಾಗ ಕೇಂದ್ರ ಸಚಿವರು, ಈ ಕ್ಲೇಮ್ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಕಸ ಮಾರಿ ಚಂದ್ರಯಾನದ ಬಜೆಟ್ನಷ್ಟು ಕಾಸು ಗಳಿಸಿದ ಸರ್ಕಾರ
ಚಂದ್ರಯಾನ- 3 ಮಿಷನ್ನ ಬಜೆಟ್ಗೆ ಸಮನಾದ ಮೊತ್ತವನ್ನು ಕೇಂದ್ರ ಸರ್ಕಾರ ಕಸ ಮಾರಿಯೇ ಗಳಿಸಿದೆ! ಇದು ಹೇಗೆ ಅಂತೀರಾ? ಈ ವರದಿ ಓದಿ ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ