1. ಬರ ಬರಲಿ ಅಂತ ರೈತರೇ ಕಾಯ್ತಾರೆ; ಸಚಿವ ಶಿವಾನಂದ ಪಾಟೀಲ್ ಇದೆಂಥಾ ಮಾತು?
ಇಡೀ ರಾಜ್ಯದ ರೈತರು ಬರದಿಂದ (Drought Situation) ಕಂಗೆಟ್ಟು ಆಕಾಶ ನೋಡುತ್ತಿದ್ದಾರೆ. ಸರ್ಕಾರವೂ ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿದೆ. ಅದರ ನಡುವೆ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ (Agriculture Marketing Minister) ಶಿವಾನಂದ ಪಾಟೀಲ್ (Shivananda pateel) ಉಡಾಫೆ ಮಾತೊಂದನ್ನು ಆಡಿದ್ದಾರೆ. ʻʻಬರಗಾಲ ಬರಲೆಂದು ರೈತರು ದಾರಿ ಕಾಯ್ತಾರೆʼʼ ಎಂದು ಹೇಳುವ ಮೂಲಕ ಅವರು ರೈತರನ್ನು ಅಪಮಾನಿಸಿದ್ದಾರೆ ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ರೈತರಿಗೆ ಅಪಮಾನ; ಸಚಿವ ಪಾಟೀಲ್ ವಿರುದ್ಧ ಬಿಜೆಪಿ ಆಕ್ರೋಶ; ಪದಚ್ಯುತಿಗೆ ಆಗ್ರಹ
ಈ ಸುದ್ದಿಯನ್ನೂ ಓದಿ: ರೈತರನ್ನು ಅವಮಾನಿಸುವ ಸಚಿವರನ್ನು ವಜಾ ಮಾಡಿ: ವಿಜಯೇಂದ್ರ ಆಗ್ರಹ
ಈ ಸುದ್ದಿಯನ್ನೂ ಓದಿ: ನಾನು ಹಾಗೆ ಹೇಳಿಲ್ಲ, ಬಿಜೆಪಿಗೆ ಕೆಲ್ಸ ಇಲ್ಲ; ಉಲ್ಟಾ ಹೊಡೆದ ಶಿವಾನಂದ ಪಾಟೀಲ್
2. ಕೋಟ ಶ್ರೀನಿವಾಸ ಪೂಜಾರಿ ಮೇಲ್ಮನೆ ವಿಪಕ್ಷ ನಾಯಕ, ಬೆಲ್ಲದ್‌ಗೂ ಸ್ಥಾನ
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ರಾಜ್ಯ ಘಟಕದಲ್ಲಿ ಎರಡನೇ ಹಂತದ ಅಧಿಕಾರ ಹಂಚಿಕೆ (BJP Karnataka) ಮಾಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದ್ದಾರೆ. ಮೇಲ್ಮನೆ ವಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಅರವಿಂದ್ ಬೆಲ್ಲದ್ ಅವರಿಗೂ ಸ್ಥಾನ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಮೂರು ಕ್ರಿಮಿನಲ್ ವಿಧೇಯಕಗಳಿಗೆ ರಾಷ್ಟ್ರಪತಿ ಅಂಕಿತ; ದೇಶದಲ್ಲಿ ಹೊಸ ಕಾನೂನು ಕ್ರಾಂತಿ
ಭಾರತೀಯ ಅಪರಾಧ ತನಿಖೆ ಮತ್ತು ನ್ಯಾಯಾಂಗ ವಿಚಾರಣೆಯ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಬದಲಾಯಿಸಲಿರುವ ಮೂರು ಕ್ರಿಮಿನಲ್ ಕಾನೂನು ವಿಧೇಯಕಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಅಂಕಿತ ಹಾಕಿದ್ದಾರೆ. ಇದರಿಂದಾಗಿ ಮೂರೂ ವಿಧೇಯಕಗಳು ಇನ್ನು ಕಾಯಿದೆಗಳಾಗಿ ಜಾರಿಗೆ ಬರಲಿದ್ದು, ದೇಶದ ಕಾನೂನು ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭವಾದಂತಾಗಿದೆ. ವಸಾಹತು ಕಾಲದ ಕಾನೂನುಗಳು ಮೂಲೆಗೆ ಸೇರಿ, ದೇಶದಲ್ಲಿ ಹೊಸ ಕಾನೂನುಗಳು ಜಾರಿಗೆ ಬರಲಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ರಾಜ್ಯದಲ್ಲಿ 35ಕ್ಕೂ ಹೆಚ್ಚು ಮಂದಿಗೆ ಜೆಎನ್1 ಸೋಂಕು ದೃಢ; ಕರ್ನಾಟಕ ಇನ್ ಡೇಂಜರ್?
ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಜೆಎನ್ 1 ಪ್ರಕರಣಗಳು (COVID Subvariant JN1) ಪತ್ತೆಯಾಗಿದೆ. ರಾಜ್ಯದಲ್ಲಿ ಈಗ 436 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 35 ರೂಪಾಂತರ ಜೆಎನ್1 ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಹೊಸಕೋಟೆಯಲ್ಲಿ ದೇವಸ್ಥಾನದ ಪ್ರಸಾದ ಸೇವಿಸಿ ಮಹಿಳೆ ಸಾವು, ನೂರಾರು ಮಂದಿ ಅಸ್ವಸ್ಥ
ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡು, ಒಬ್ಬ ಮಹಿಳೆ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ (Hoskote News) ನಡೆದಿದೆ. ಅವಲಹಳ್ಳಿ, ನಂದಗುಡಿ, ಹಾಗೂ ಹೊಸಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಸಾದ ಸೇವಿಸಿದ ಬಳಿಕ ಹಲವರು ಅಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಗ್ಯಾಸ್ ಗೀಸರ್ ಅಪಾಯಕಾರಿ ಯಾಕೆ? ಮುನ್ನೆಚ್ಚರಿಕೆ ವಹಿಸುವುದು ಹೇಗೆ?
ಕರ್ನಾಟಕ ಸೇರಿದಂತೆ ದೇಶದ ನಾನಾ ಕಡೆ ಇತ್ತೀಚಿನ ಕೆಲವು ದಿನಗಳಲ್ಲಿ ವರದಿಯಾದ ಪ್ರಕಾರ ಹಲವಾರು ಮಂದಿ ಗೀಸರ್ನ ಗ್ಯಾಸ್ ಸೋರಿಕೆಯಾಗಿ (Gas geyser leak) ಮೃತಪಟ್ಟಿದ್ದಾರೆ. ಗ್ಯಾಸ್ ಗೀಸರ್ ಆನ್ನಲ್ಲಿಟ್ಟು ಸ್ನಾನ ಮಾಡಲು ಮುಂದಾದ ಹಲವಾರು ಮಂದಿ ವಿಷಾನಿಲ ದೇಹಕ್ಕೆ ಸೇರಿ ಅಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಹೀಗಾಗಿ ಗ್ಯಾಸ್ ಗೀಸರ್ ಬಳಕೆಯ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಹಾಗಿದ್ದರೆ ಈ ಗೀಸರ್ ಯಾಕಿಷ್ಟು ಡೇಂಜರಸ್ ಆಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಗೀಸರ್ ಗ್ಯಾಸ್ ಸೋರಿಕೆ; ಪ್ರಜ್ಞೆ ತಪ್ಪಿ ಬಿದ್ದ ಯುವತಿ ಬಾತ್‌ರೂಮ್‌ನಲ್ಲೇ ಸಾವು
7. ಪಾಕಿಸ್ತಾನದಲ್ಲಿ ಮತ್ತೊಬ್ಬ ಭಾರತ ವಿರೋಧಿ ಉಗ್ರ ಬಲಿ; ಬೀದಿ ನಾಯಿಯಂತೆ ನರಳಿ ಸತ್ತ ದುಷ್ಟ
ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರರು ಹತ್ಯೆಗೀಡಾಗುತ್ತಿರುವ ಸುದ್ದಿಗಳು ಸಾಮಾನ್ಯವಾಗಿವೆ. ಅದರಲ್ಲೂ, ‘ಅಪರಿಚಿತರ’ ಗುಂಡಿನ ದಾಳಿಗೆ ಹತರಾಗುತ್ತಿರುವ ಉಗ್ರರ ಸಂಖ್ಯೆ ಜಾಸ್ತಿಯಾಗಿದೆ. ಜೈಶೆ ಮೊಹಮ್ಮದ್, ಲಷ್ಕರೆ ತಯ್ಬಾದಂತಹ ಸಂಘಟನೆಗಳ ಉಗ್ರರು ಬಲಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಕಸುರ್‌ನಲ್ಲಿ ಲಷ್ಕರೆ ತಯ್ಬಾದ ಅಬ್ದುಲ್ಲಾ ಶಹೀನ್ (Abdullah Shaheen) ಎಂಬ ಉಗ್ರನು ಸಾವಿಗೀಡಾಗಿದ್ದಾನೆ. ‘ಅಪರಿಚಿತ’ ವಾಹನ ಡಿಕ್ಕಿಯಾಗಿ ಅಬ್ದುಲ್ಲಾ ಶಹೀನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಭಾರತ-ದ.ಆಫ್ರಿಕಾ ಟೆಸ್ಟ್ ಇತಿಹಾಸ, ಪಿಚ್ ರಿಪೋರ್ಟ್ ಹೇಗಿದೆ?
ಭಾರತ ಮತ್ತು ದಕ್ಷಿಣ ಆಫ್ರಿಕಾ(IND vs SA) ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಂಗಳವಾರ ಸೆಂಚುರಿಯನ್ನಲ್ಲಿ(SuperSport Park, Centurion) ಆರಂಭಗೊಳ್ಳಲಿದೆ. ಕ್ರಿಸ್ಮಸ್ನ ಮರುದಿನ ನಡೆಯುವ ಈ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ. ಈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಮತ್ತು ಮುಖಾಮುಖಿಯ ಸಂಪೂರ್ಣ ವರದಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮದುವೆ ಆಗುವುದಾಗಿ ಅಬಾರ್ಷನ್ ಮಾಡಿಸಿ ಕೈಕೊಟ್ರಾ ಕ್ರಿಕೆಟರ್ ಕಾರಿಯಪ್ಪ!
: ಮದುವೆ ಆಗುವುದಾಗಿ ಹೇಳಿ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ (KC Cariyappa Love Case) ವಂಚಿಸಿದ್ದಾರೆ ಎಂದು ಮಾಜಿ ಪ್ರಿಯತಮೆ ಠಾಣೆ ಮೆಟ್ಟಿಲೇರಿದ್ದರೆ, ಇತ್ತ ಕುಟುಂಬಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯತಮೆ ವಿರುದ್ಧ ಕೆ.ಸಿ ಕಾರಿಯಪ್ಪ ದೂರು ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಭಾರತದ ಸ್ಮಿತಾ ಶ್ರೀವಾಸ್ತವ ಈಗ ಜಗತ್ತಿನ ಅತ್ಯಂತ ಉದ್ದ ಕೂದಲ ಒಡತಿ!
ಉತ್ತರ ಪ್ರದೇಶದ ಸ್ಮಿತಾ ಶ್ರೀವಾಸ್ತವ. ತನ್ನ ಉದ್ದ ಕೂದಲ ಮೂಲಕವೇ (Longest Hair) ಗಿನ್ನೆಸ್ ವಿಶ್ವ ದಾಖಲೆ (Guinness World Records) ಕೀರ್ತಿಗೆ ಭಾಜನರಾಗಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ಉದ್ದ ಕೂದಲಿನ ಮಹಿಳೆ ಎಂಬ ಬಿರುದಿಗೆ (Viral News) ಪಾತ್ರವಾಗಿದ್ದೂ ಅಲ್ಲದೆ, ಗಿನ್ನೆಸ್ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ