1.ಬಳಸುವ ಪದಗಳ ಬಗ್ಗೆ ನಿಗಾ ಇರಲಿ; ಉದಯನಿಧಿ ಸ್ಟಾಲಿನ್ ಮೇಲೆ ನಿರ್ಮಲಾನಂದನಾಥ ಶ್ರೀ ಗುಡುಗು
ಸನಾತನ ಧರ್ಮ ಕೊರೊನಾ, ಡೆಂಘೀ ಇದ್ದ ಹಾಗೆ ಎಂಬ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ವಿರುದ್ಧ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಗುಡುಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದಗಳ ಬಗ್ಗೆ ನಿಗಾ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಉದಯನಿಧಿ ಬಳಿಕ ಸನಾತನ ಧರ್ಮವನ್ನು ಏಡ್ಸ್, ಕುಷ್ಠ ರೋಗಕ್ಕೆ ಹೋಲಿಸಿದ ಡಿಎಂಕೆಯ ಎ ರಾಜಾ
2. ಸಮವಸ್ತ್ರ ಪೂರೈಸಿದ್ದ ಕೇಂದ್ರೀಯ ಭಂಡಾರದ ವಿರುದ್ಧ ತನಿಖೆ; ಬಿಜೆಪಿ ವಿರುದ್ಧ ಮತ್ತೊಂದು ಅಸ್ತ್ರ
ಈ ಹಿಂದಿನ ಬಿಜೆಪಿ ಸರ್ಕಾರದ ಮೇಲೆ “40 ಪರ್ಸೆಂಟ್” ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈಗ, ಕಳೆದ ಸರ್ಕಾರದ ನಿರ್ಧಾರಗಳ ಮೇಲೆ ಒಂದೊಂದೇ ತನಿಖಾಸ್ತ್ತವನ್ನು ಪ್ರಯೋಗ ಮಾಡುತ್ತಿದೆ. ಗುರುವಾರ (ಸೆಪ್ಟೆಂಬರ್ 7) ನಡೆದ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಕಳೆದ ಬಾರಿ ಕಳಪೆ ಸಮವಸ್ತ್ರ ಪೂರೈಕೆ ಮಾಡಿದ ಆರೋಪದ ಮೇಲೆ ಕೇಂದ್ರೀಯ ಭಂಡಾರದ ವಿರುದ್ಧ ತನಿಖೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಮುಂದಿನ ವಾರದ ಕ್ಯಾಬಿನೆಟ್‌ನಲ್ಲಿ ಬರ ತಾಲೂಕು ಘೋಷಣೆ
3.ಭಾರತದ ಪ್ರತಿಷ್ಠೆ ಹೆಚ್ಚಿಸಲಿದೆಯೇ ಜಿ 20 ಶೃಂಗ ಸಭೆ? ನೀವು ತಿಳಿದಿರಬೇಕಾದ ಸಂಗತಿಗಳಿವು
ಸೆಪ್ಟೆಂಬರ್ 9-10ರಂದು ನಡೆಯಲಿರುವ G20 ರಾಷ್ಟ್ರಗಳ ಮುಖ್ಯಸ್ಥರ ಶೃಂಗಸಭೆಗಾಗಿ (G20 Summit 2023) ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ನಾಯಕರು ಹೊಸದಿಲ್ಲಿಯಲ್ಲಿ ಬಂದು ಸೇರಲಿದ್ದಾರೆ. ಈ ಸಲದ ಜಿ20 ಅಧ್ಯಕ್ಷತೆ ಭಾರತದ್ದು. ಒಂದು ವರ್ಷ ಅವಧಿಯ ಈ ಅಧ್ಯಕ್ಷತೆ ಈ ಶೃಂಗಸಭೆಯ ಕೊನೆಯಲ್ಲಿ ಜಿ20 ನಾಯಕರ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಇದರ ವಿಶೇಷತೆಗಳನ್ನು ಇಲ್ಲಿ ದಾಖಲಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಜಿ 20 ಶೃಂಗ ಸಭೆ ಭಾರತ ಮಂಟಪ ಎಷ್ಟು ಅದ್ಭುತವಾಗಿದೆ ನೋಡಿ! ಇದಕ್ಕಿದೆ ಕರ್ನಾಟಕ ಲಿಂಕ್
4. ಬಿಜೆಪಿ ಟಿಕೆಟ್ ಪಾಲಿಟಿಕ್ಸ್; 3 ಕ್ಷೇತ್ರ, 3 ನಾಯಕರು! ಏನಿದೆ ಬೊಮ್ಮಾಯಿ ಲೆಕ್ಕಾಚಾರ?
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೆಟ್ ಲಾಬಿ ಜೋರಾಗಿ ನಡೆಯುತ್ತಿದೆ. ಇತ್ತ ರಾಜ್ಯದಲ್ಲಿ ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಇದು ಸಿಗದಿದ್ದರೆ ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಉತ್ಸಾಹ ತೋರಿದ್ದಾರೆ. ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ಆಫರ್ ನೀಡಿದೆ. ಮಾಜಿ ಸಚಿವ ಗೋವಿಂದ ಕಾರಜೋಳ ಸಹ ಸ್ಪರ್ಧೆ ಬಯಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಇಲಾಖೆಗಳ ಮನವೊಲಿಕೆ ಬಗ್ಗದ ಸಂಘಟನೆಗಳು; ಸೆ.11ರ ಬಂದ್ ಫಿಕ್ಸ್?
ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು (Free Bus Service) ಅವಕಾಶ ನೀಡಿರುವ ಸರ್ಕಾರದ ಶಕ್ತಿ ಯೋಜನೆಯಿಂದ (Shakthi Scheme) ಸಂಕಷ್ಟಕ್ಕೆ ಒಳಗಾದ ಖಾಸಗಿ ಸಾರಿಗೆ ಸಂಸ್ಥೆಗಳು (Private Passenger Vehicles) ಕರೆ ನೀಡಿರುವ ಸೆಪ್ಟೆಂಬರ್ 11ರ ಬಂದ್‌ನ್ನು (September 11 bundh) ಯಾವ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ (Transport Strike) ಎಂದು ಒಕ್ಕೂಟ ತಿಳಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಭಾರತ – ಆಸಿಯಾನ್ ಏಳಿಗೆಗೆ 12 ಸೂತ್ರ ಕೊಟ್ಟ ಮೋದಿ; ಉಗ್ರವಾದ ತಡೆಗೂ ಕರೆ
ಇಂಡೋನೇಷ್ಯಾ ರಾಜಧಾನಿ ಜಕಾರ್ತದಲ್ಲಿ (PM Modi Indonesia Visit) ನಡೆದ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ರಾಷ್ಟ್ರಗಳ ನಾಯಕರನ್ನು ಭೇಟಿಯಾದರು. ಹಾಗೆಯೇ, ಸಭೆಯ ವೇಳೆ ಮೋದಿ ಅವರು ಭಾರತ ಹಾಗೂ ಆಸಿಯಾನ್ ಏಳಿಗೆಗೆ 12 ಸೂತ್ರಗಳನ್ನು ಹಾಕಿಕೊಟ್ಟರು. ಭಾರತ ಸೇರಿ ಆಸಿಯಾನ್ ದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಅವರು 12 ಅಂಶಗಳನ್ನು ತಿಳಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ವಿಷ್ಣು ಪುರಾಣ ಉಲ್ಲೇಖಿಸಿ ʼಭಾರತʼದ ಅರ್ಥ ತಿಳಿಸಿದ್ದ ಮೋದಿ; ಹೆಸರು ಬದಲಿಗೆ ಮೊದಲೇ ಪ್ಲ್ಯಾನ್?
7. ತರೀಕೆರೆ ಖಾಸಗಿ ಬಸ್ ಅಟ್ಟಹಾಸದಲ್ಲಿ ಗಾಯಗೊಂಡಿದ್ದ ಒಬ್ಬ ಬಾಲಕಿ ಮೃತ್ಯು; ಇನ್ನೊಬ್ಬಳು ಗಂಭೀರ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ಬಸ್ ಒಂದು ಯದ್ವಾತದ್ವಾ ಅಟ್ಟಹಾಸ ಮಾಡಿ ಶಾಲೆಗೆ ಹೊರಟಿದ್ದ ಬಾಲಕಿಯರ ಮೇಲೆ ನುಗ್ಗಿದ ಪರಿಣಾಮ ಇಬ್ಬರು ಹೆಣ್ಮಕ್ಕಳಿಗೆ ಗಂಭೀರ ಗಾಯವಾಗಿತ್ತು. ಇವರ ಪೈಕಿ ಒಬ್ಬಳು ಮೃತಪಟ್ಟಿದ್ದಾಳೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಪಾಕ್ ವಿರುದ್ಧ ಕಣಕ್ಕಿಳಿಯಲಿದ್ದಾರೆ ರಾಹುಲ್; ಕೊಲಂಬೊದಲ್ಲಿ ಬ್ಯಾಟಿಂಗ್ ಅಭ್ಯಾಸ
ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ನ(Asia Cup 2023) ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಕನ್ನಡಿಗ ಕೆ.ಎಲ್. ರಾಹುಲ್(KL Rahul) ಅವರು ಈಗ ಫುಲ್ ಫಿಟ್ ಆಗಿದ್ದು ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಸೆಪ್ಟೆಂಬರ್ 10 ರಂದು ನಡೆಯುವ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ(INDvsPAK) ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಸೆ.8ರಂದು ರಾಜ್ಯಾದ್ಯಂತ ಸುರಿಯಲಿದೆ ಧಾರಾಕಾರ ಮಳೆ; ಮೀನುಗಾರರಿಗೆ ಅಲರ್ಟ್
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಇನ್ನೊಂದು ವಾರ ಮುಂದುವರಿಯಲಿದೆ. ಸೆ.8 ರಂದು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ಮಳೆ (Weather report) ಸುರಿಯಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಶಾರುಖ್ ಖಾನ್ ಜವಾನ್ ಸಿನಿಮಾ ವಿಮರ್ಶೆ v: ಕ್ಷಣಕ್ಷಣವೂ ಕಣ್ಣಿಗೆ ಹಬ್ಬ, ಪೈಸಾ ವಸೂಲ್ ಮಸಾಲಾ
ಆಕರ್ಷಕ ಮತ್ತು ಮನರಂಜನಾತ್ಮಕವಾಗಿರುವ ಎಲ್ಲವನ್ನೂ ಜವಾನ್ ಚಿತ್ರ (Jawan movie) ಮಿಕ್ಸ್ ಮಾಡುತ್ತದೆ. ಆಕ್ಷನ್, ಡ್ರಾಮಾ, ಹಾಡು, ರೊಮ್ಯಾನ್ಸ್ ಜೊತೆಗೆ ಮಸಾಲೆ ಅಂಶಗಳೆಲ್ಲವನ್ನೂ ಹೇರಳವಾಗಿ ಹೊಂದಿದೆ ಎನ್ನುತ್ತದೆ ಶಾರುಖ್ ಖಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾದ ವಿಮರ್ಶೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ