Site icon Vistara News

VISTARA TOP 10 NEWS : ದೀಪಾವಳಿ ಬಳಿಕ ಆಪರೇಷನ್‌, ಜತೆಗೆ ಹೊಸ ಕೋವಿಡ್‌ ರೂಪಾಂತರಿ ಟೆನ್ಶನ್!

Vistara Top 10 News 08112023

1. ದೀಪಾವಳಿ ಬಳಿಕ ಮತ್ತೆ ಆಪರೇಷನ್‌‌ ಹಸ್ತ; ಡಿಕೆಶಿ ಸಂಪರ್ಕದಲ್ಲಿ BJP, JDS ನಾಯಕರು
ದೀಪಾವಳಿ ಕಳೆಯುತ್ತಿದ್ದಂತೆಯೇ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಆಪರೇಷನ್‌ ಹಸ್ತಕ್ಕೆ (Operation Hasta) ವೇದಿಕೆ ರೆಡಿಯಾಗಿದೆ. ನವೆಂಬರ್‌ 14ರಂದು ದೀಪಾವಳಿ ಸಂಭ್ರಮ (Deepavali Festival) ಮುಕ್ತಾಯದ ಬೆನ್ನಿಗೇ ನವೆಂಬರ್‌ 15ರಂದು ಕಾಂಗ್ರೆಸ್‌ ಪಕ್ಷವು ಬಿಜೆಪಿ ಹಾಗೂ ಜೆಡಿಎಸ್‌ನ ಹಲವು ನಾಯಕರನ್ನು ಸೇರಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಗೃಹ ಲಕ್ಷ್ಮಿ ಹಣ ಸಿಕ್ಕಿಲ್ಲ ಎಂಬ ಆತಂಕ ಬೇಡ, ಎಲ್ಲ ಮೊತ್ತ ಒಟ್ಟಿಗೇ ಸಿಗಲಿದೆ
ಗೃಹಲಕ್ಷ್ಮಿ ಯೋಜನೆಯಲ್ಲಿ (Gruhalakshmi scheme) ನೋಂದಾಯಿಸಿಕೊಂಡ ಗೃಹಿಣಿಯರಲ್ಲಿ ಶೇಕಡಾ 95ರಷ್ಟು ಮನೆ ಒಡತಿಯರಿಗೆ ಈಗಾಗಲೇ ಹಣ ತಲುಪಿದೆ. ತಾಂತ್ರಿಕ ಸಮಸ್ಯೆಯಿಂದಾಗಿ (Technical Problem) ಶೇಕಡಾ 5ರಷ್ಟು ಜನರಿಗೆ ತಲುಪಿಲ್ಲ. ಈ ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ. ಒಮ್ಮೆ ತಾಂತ್ರಿಕ ಸಮಸ್ಯೆ ಪರಿಹಾರವಾದ ಬಳಿಕ ಬಾಕಿ ಮೊತ್ತವನ್ನೂ ಸೇರಿಸಿಯೇ ಕೊಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌ ಷಡಾಕ್ಷರಿ ವರ್ಗಾವಣೆ: ಇದು ಪಕ್ಕಾ ಪಾಲಿಟಿಕ್ಸಾ?
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರನ್ನು ರಾಜ್ಯ ಸರ್ಕಾರವು ವರ್ಗಾವಣೆ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ಹಿಂದೆ ದೊಡ್ಡ ಮಟ್ಟದ ರಾಜಕೀಯವಿದೆ ಎಂಬ ಸುದ್ದಿ ಹರಡಿದೆ. ಮಧು ಬಂಗಾರಪ್ಪ ಅವರು ಮಾಡಿದ ಮನವಿಯನ್ನು ಆಧರಿಸಿ ಈ ವರ್ಗಾವಣೆ ನಡೆದಿದೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಷಡಾಕ್ಷರಿ ವರ್ಗಾವಣೆ ಹಿಂದೆ ಮಧು ಬಂಗಾರಪ್ಪ; ಏನಿದು ಮಣ್ಣು ಸಾಗಾಟ ಆರೋಪ

4. DV Sadananda Gowda : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿ.ವಿ. ಸದಾನಂದ ಗೌಡ
ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ ಸದಾನಂದ ಗೌಡ (DV Sadananda Gowda) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಅವರಿಗೆ ಈಗ 70 ವರ್ಷ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. IIT Dress Code: ಯುವತಿಯರು ಸೀರೆಯಲ್ಲೇ ಬರಬೇಕು; ವಿವಾದಕ್ಕೆ ಕಾರಣವಾದ ಐಐಟಿ ಡ್ರೆಸ್‌ ಕೋಡ್‌!
ಕೋಲ್ಕೊತಾ: ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮಧ್ಯೆ ಬಡವ-ಶ್ರೀಮಂತ ಎಂಬ ಭೇದ-ಭಾವ ಮೂಡಬಾರದು ಎಂದು ವಸ್ತ್ರಸಂಹಿತೆ (Dress Code) ಜಾರಿಗೊಳಿಸಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ (West Bengal) ಖರಗ್‌ಪುರ ಐಐಟಿಯು ಘಟಿಕೋತ್ಸವಕ್ಕೂ ವಿದ್ಯಾರ್ಥಿಗಳು ಇಂತಹ ದಿರಸನ್ನೇ ಧರಿಸಿ ಬರಬೇಕು ಎಂದು ಸುತ್ತೋಲೆ ಹೊರಡಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ICC RANKINGನಲ್ಲಿ ಭಾರತೀಯರೇ ಟಾಪ್: ಶುಭಮನ್‌ ಗಿಲ್‌ ನಂ.1 ಬ್ಯಾಟರ್‌, ಸಿರಾಜ್‌ ನಂ.1 ಬೌಲರ್‌
ಐಸಿಸಿ ಏಕದಿನ ಬ್ಯಾಟಿಂಗ್​(ICC Rankings) ಮತ್ತು ಬೌಲಿಂಗ್​ ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾ ಆಟಗಾರರು ಪ್ರಾಬಲ್ಯ ಸಾಧಿಸಿದ್ದಾರೆ. ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಅವರು ನಂ.1 ಬ್ಯಾಟರ್​ ಮತ್ತು ಮೊಹಮ್ಮದ್​ ಸಿರಾಜ್(Mohammed Siraj)​ ಅವರು ನಂ.1 ಬೌಲರ್​ ಆಗಿ ಹೊರಹೊಮ್ಮಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಕಾಂತಾರದ ಪಂಜುರ್ಲಿ ಬಲದಿಂದ ಮ್ಯಾಕ್ಸ್‌ವೆಲ್‌ 201 ರನ್‌ ಚಚ್ಚಿದರೆ?
ವಿಶ್ವಕಪ್‌ನ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

7. ಲೈಂಗಿಕ ದೌರ್ಜನ್ಯ ಪ್ರಕರಣ; ಮುರುಘಾಶ್ರೀಗೆ ಕೊನೆಗೂ ಜಾಮೀನು; ಬಿಡುಗಡೆ ಆಗ್ತಾರಾ?
ಮಠದ ಹಾಸ್ಟೆಲ್‌ನಲ್ಲಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 14 ತಿಂಗಳ ಹಿಂದೆ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾಶರಣರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಹಾಗಿದ್ದರೆ ಅವರು ಬಿಡುಗಡೆಯಾಗುತ್ತಾರಾ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಹೆಣ್ಣು ಮಕ್ಕಳ ಕುರಿತು ಹೇಳಿಕೆ; ಕ್ಷಮೆಯಾಚಿಸಿದ ಸಿಎಂ ನಿತೀಶ್‌ ಕುಮಾರ್‌
ಹೆಣ್ಣುಮಕ್ಕಳು ಕಲಿತರೆ ಗರ್ಭಿಣಿಯಾಗಲು ನಿರಾಕರಿಸುತ್ತಾರೆ, ಗಂಡನಿಗೆ ಅವಕಾಶವೇ ನೀಡುವುದಿಲ್ಲ” ಎಂದು ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಒಳಗಾದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರು ಕ್ಷಮೆ ಯಾಚಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಇನ್ನೆಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ; ನಿತೀಶ್‌ ಕುಮಾರ್‌ಗೆ ಮೋದಿ ಮಾತಿನೇಟು!

9. ವಿಸ್ತಾರ Explainer: 11 ದೇಶಗಳಲ್ಲಿ ಪತ್ತೆಯಾದ ಹೊಸ ಕೋವಿಡ್‌ ರೂಪಾಂತರಿ JN.1; ವಿಜ್ಞಾನಿಗಳಿಗೆ ಚಿಂತೆ ಏಕೆ?ಕೋವಿಡ್- 19 (Covid- 19 virus) ವೈರಸ್‌ನ ಹೊಸ ರೂಪಾಂತರಿಯೊಂದು ಕಾಣಿಸಿಕೊಂಡಿದ್ದು, ಜಗತ್ತಿನ ಹಲವು ದೇಶಗಳಲ್ಲಿ ಕಳವಳವನ್ನು ಉಂಟುಮಾಡಿದೆ. ಏಕೆಂದರೆ ಈ ರೂಪಾಂತರಿಯ (Variant) ಸಾಂಕ್ರಾಮಿಕತೆ (infectious) ಹೆಚ್ಚು ಇದೆ ಮತ್ತು ಲಸಿಕೆಯ ಪ್ರತಿರೋಧ ಶಕ್ತಿಯನ್ನು (vaccine immunity) ತಪ್ಪಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ದಾಳಿ ಮಾಡಿದ ಚಿರತೆಯನ್ನು ಹಿಮ್ಮೆಟ್ಟಿಸಿ ಪುಟ್ಟ ಮಗಳನ್ನು ರಕ್ಷಿಸಿದ ಅಪ್ಪ
ಒಬ್ಬ ತಂದೆ ತನ್ನ ಮಕ್ಕಳನ್ನು, ಕುಟುಂಬವನ್ನು ರಕ್ಷಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಕಾದಾಡಲು ರೆಡಿ ಇರುತ್ತಾನೆ ಎನ್ನುವುದು ಹಲವಾರು ಬಾರಿ ಪ್ರೂವ್‌ ಆಗಿ ಹೋಗಿರುವ ಸತ್ಯ. ಆದರೆ, ಅದಕ್ಕೊಂದು ಅದ್ಭುತವಾದ ಪ್ರೀತಿ ಬೇಕು, ಆತ್ಮಬಲ ಬೇಕು, ನನ್ನ ಕುಟುಂಬಕ್ಕಾಗಿ ಯಾರನ್ನು ಎದುರು ಹಾಕಿಕೊಳ್ಳಬಲ್ಲೆ ಎನ್ನುವ ಧೈರ್ಯ ಬೇಕು. ಇಂಥಹುದೊಂದು ಧೈರ್ಯವನ್ನು ಪ್ರದರ್ಶಿಸಿದ ವ್ಯಕ್ತಿಯೊಬ್ಬರು ತನ್ನ ಏಳು ವರ್ಷದ ಮಗಳನ್ನು ಸಾವಿನೊಂದಿಗೆ ಕಾದಾಡಿ ಅದರ ಬಾಯಿಯಿಂದ ರಕ್ಷಿಸಿಕೊಂಡು ಬಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version