Site icon Vistara News

VISTARA TOP 10 NEWS : ಕಂಪೌಂಡ್‌ ಹಾರಿದ ಆರ್‌.ಡಿ ಪಾಟೀಲ್‌, ಜಗತ್ತಿನ ಪ್ರೀತಿ ಗೆದ್ದ ಮ್ಯಾಕ್ಸ್‌ವೆಲ್‌!

Vistara Top 10 News 07112023

1.ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಕಾಂಪೌಂಡ್ ಹಾರಿ ಪರಾರಿ: ಸುಳಿವು ನೀಡಿಯೇ ದಾಳಿ?
ಪಿಎಸ್ಐ ಹಗರಣದ (PSI Scam) ಕಿಂಗ್ ಪಿನ್‌ ಆರ್‌.ಡಿ ಪಾಟೀಲ್‌ ಕಲಬುರಗಿ ನಗರದಲ್ಲೇ ತಂಗಿದ್ದು, ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಿದ್ದಾನೆ. ಪೊಲೀಸರ ಕೈಗೆ ಸಿಗದೆ ಕಳ್ಳಾಟವಾಡುತ್ತಿದ್ದಾನೆ. ಸದ್ಯ ವಾಸವಿದ್ದ ಅಪಾರ್ಟ್‌ಮೆಂಟ್‌ನಿಂದ ಹಾರಿ ಪರಾರಿ ಆಗಿದ್ದಾನೆ. ಪೊಲೀಸರೇ ಆತನಿಗೆ ದಾಳಿಯ ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ಆರ್‌.ಡಿ. ಪಾಟೀಲ್‌ ಪರಾರಿ: ಸರ್ಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ; ಅರೆಸ್ಟ್‌ ಮಾಡ್ತೇವೆ ಎಂದ ಕಾಂಗ್ರೆಸ್‌

2. Reservation Politics : ಸರ್ಕಾರಕ್ಕೆ ಮೀಸಲಾತಿ ಸಂಕಷ್ಟ; ಸರ್ಕಾರದ ವಿರುದ್ಧ ಸಚಿವರ ʼಮುನಿʼ
ರಾಜ್ಯ ಸರ್ಕಾರಕ್ಕೆ ಮತ್ತೆ ಒಳ ಮೀಸಲಾತಿ ಸಂಕಷ್ಟ ಎದುರಾಗಿದೆ. ಕಳೆದ ಬಿಜೆಪಿ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯದ ಹೋರಾಟ ಬಿಸಿ ಮುಟ್ಟಿಸಿತ್ತು. ಈಗ ಎಡಗೈ ಸಮುದಾಯದವರು ಮೀಸಲಾತಿ ಜಾರಿಗೆ ಪಟ್ಟು ಹಿಡಿದಿದ್ದಾರೆ. ಸಚಿವ ಕೆ.ಎಚ್.‌ ಮುನಿಯಪ್ಪ ಇದರ ಮುಂದಾಳತ್ವವನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಈ ವಿಚಾರವನ್ನು ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ದಿಲ್ಲಿಗೆ ಹೊರಡುವ ಮುನ್ನ ಸತೀಶ್‌ ಜಾರಕಿಹೊಳಿ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ. ಶಿವಕುಮಾರ್‌ ಮೇಲೆ ಹಲವು ಕಾರಣಗಳಿಗೆ ಮುನಿಸಿಕೊಂಡಿದ್ದ ಸಚಿವ ಸತೀಶ್‌ ಜಾರಕಿಹೊಳಿ (Minister Satish Jarkiholi) ನಿವಾಸಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ದಿಢೀರ್‌ ಭೇಟಿ ಮಾಡಿ‌ ಮಾತುಕತೆ ನಡೆಸಿದ್ದಾರೆ. ಅಲ್ಲಿ ಮಾತುಕತೆ ನಡೆಸಿದ ಬಳಿಕ ಅವರು ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಬರಾಘಾತದ ನಡುವೆಯೇ ರಾಜ್ಯಾದ್ಯಂತ ಹಿಂಗಾರು ಚುರುಕು- ಮಳೆಗೆ ಮುಳುಗೆದ್ದ ಬೆಂಗಳೂರು
ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು, ಟ್ರಫ್‌ ನಿರ್ಮಾಣವಾಗಿದೆ. ಇದರ ಪ್ರಭಾವದಿಂದಾಗಿ ರಾಜ್ಯಾದ್ಯಂತ (Karnataka Weather Forecast) ಮಳೆಯಾಗುತ್ತಿದೆ. ಬರದ ಕಾಲದಲ್ಲಿ ಇದು ಸಾಕಷ್ಟು ನೆಮ್ಮದಿಯನ್ನು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ನಾಳೆಯೂ ಆರ್ಭಟಿಸಲಿದ್ದಾನೆ ವರುಣ; ಸಂಪೂರ್ಣ ಕರ್ನಾಟಕ ಮಳೆ ಮಯ

5. ವಿಸ್ತಾರ ಅಭಿಯಾನಕ್ಕೆ ಕಣ್ತೆರೆದ ಸರ್ಕಾರ: ಎಲೆಚುಕ್ಕೆ ರೋಗದ ಔಷಧ ಸಂಶೋಧನೆಗೆ 43 ಲಕ್ಷ ಹಣ ರಿಲೀಸ್
ಮಲೆನಾಡು ಭಾಗದಲ್ಲಿ ಅಡಿಕೆಯನ್ನು ಕಾಡುತ್ತಿರುವ ಎಲೆ ಚುಕ್ಕೆ ರೋಗದ (Leaf spot Disease) ಕುರಿತು ʻವಿಸ್ತಾರ ನ್ಯೂಸ್‌ʼ ನಡೆಸಿದ್ದ ʻಅಡಕತ್ತರಿಯಲ್ಲಿ ಅಡಕೆʼ ಎಂಬ ಅಭಿಯಾನದಿಂದ ಕೊನೆಗೂ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ (Congress Government) ಈ ರೋಗದ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧವನ್ನು ಕಂಡು ಹಿಡಿಯುವ ಸಂಶೋಧನೆಗೆ ಹಣಕಾಸಿನ ನೆರವು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ದೆಹಲಿ ವಾಯುಮಾಲಿನ್ಯಕ್ಕೆ ಸುಪ್ರೀಂ ಆಕ್ರೋಶ- ಕೃಷಿ ತ್ಯಾಜ್ಯ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಸೂಚನೆ
ದಿಲ್ಲಿಯ ವಾಯುಮಾಲಿನ್ಯಕ್ಕೆ (Delhi Air Pollution) ಕಾರಣವಾಗಿರುವ ಕೃಷಿ ತ್ಯಾಜ್ಯ ಸುಡುವುದಕ್ಕೆ (stubble burning) ಕೂಡಲೇ ತಡೆ ಹಾಕಿ ಎಂದು ಸುಪ್ರೀಂ ಕೋರ್ಟ್‌ (Supreme court) ಪಂಜಾಬ್‌, ಹರಿಯಾಣ, ದಿಲ್ಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳಿಗೆ ತಾಕೀತು ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಪ್ಯಾಲೆಸ್ತೇನ್‌ ಮೇಲೆ ಇಸ್ರೇಲ್ ಆರ್ಥಿಕ ಸಮರ: 1 ಲಕ್ಷ ಪ್ಯಾಲೆಸ್ತೇನಿ ಕಾರ್ಮಿಕರ ಜಾಗದಲ್ಲಿ ಇನ್ನು ಭಾರತೀಯರು
ಪ್ಯಾಲೆಸ್ತೀನ್‌ (Palestine) ಕಾರ್ಮಿಕರ ಜಾಗದಲ್ಲಿ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್‌ (Israel) ಮುಂದಾಗಿದೆ. ಇಸ್ರೇಲ್ ಸುಮಾರು ಒಂದು ಲಕ್ಷ ಭಾರತೀಯ ಕಾರ್ಮಿಕರನ್ನು (Indian workers) ನೇಮಿಸಿಕೊಳ್ಳುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಮಾಕ್ಸ್​ವೆಲ್ ಒಂಟಿ ಹೋರಾಟ: ವಿಶ್ವ ದಾಖಲೆ ದ್ವಿಶತಕದೊಂದಿಗೆ ಆಸೀಸ್‌ಗೆ ಸ್ಮರಣೀಯ ಜಯ ನೀಡಿದ ಮ್ಯಾಕ್ಸಿ
ಗ್ಲೆನ್​ ಮ್ಯಾಕ್ಸ್​ವೆಲ್ ಅವರ ವಿಶ್ವ ದಾಖಲೆಯ ದ್ವಿಶತಕದ (201*) ನೆರವು ಪಡೆದ ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧದ ತನ್ನ ವಿಶ್ವ ಕಪ್​ ಪಂದ್ಯದಲ್ಲಿ (ICC World Cup 2023) 3 ವಿಕೆಟ್​ ಗೆಲುವು ಸಾಧಿಸಿದೆ. 91 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಮ್ಯಾಕ್ಸ್​ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುರಿಯದ ಏಳನೇ ವಿಕೆಟ್​ಗೆ 202 ರನ್ ಪೇರಿಸುವ ಮೂಲಕ ಗೆಲುವು ದಾಖಲಿಸಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. DeepFake: ಡೀಪ್‌ಫೇಕ್‌ ವಿಡಿಯೊ ಮಾಡಿದ್ರೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಪಕ್ಕಾ!
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಕಲಿ ವಿಡಿಯೊ ವೈರಲ್‌ ಆದ ಬಳಿಕ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮಹಿಳೆಯರ ಸುರಕ್ಷತೆ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂವಹನ ಸಾಧನ ಅಥವಾ ಕಂಪ್ಯೂಟರ್ ಮೂಲಕ ವ್ಯಕ್ತಿಗತವಾಗಿ ಮೋಸ ಮಾಡುವವರಿಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದಾದ ಕಾನೂನನ್ನು ಜ್ಞಾಪಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಉ. ಪ್ರದೇಶದ ಬಾಲಕಿ ಮೈಮೇಲೆ ಮೂಡುತ್ತಿವೆ ‘ರಾಧೆ’, ‘ರಾಮ್’ ಹೆಸರು! ಇದನ್ನು ಕಂಡು ವೈದ್ಯರಿಗೂ ಶಾಕ್!
ಉತ್ತರ ಪ್ರದೇಶದ (Uttar Pradesh) 8 ವರ್ಷದ ಬಾಲಕಿಯೊಬ್ಬಳು ದಿಢೀರ್‌ನೇ ವಿಚಿತ್ರ ಕಾರಣಕ್ಕೆ ಪ್ರಸಿದ್ಧಿಯಾಗುತ್ತಿದ್ದಾಳೆ. ಈ ಬಾಲಕಿಯ ಮೈ ಮೇಲೆ ಹಿಂದಿ ಭಾಷೆಯಲ್ಲಿ ರಾಧೆ (Radhe) ಮತ್ತು ರಾಮ್ (Ram) ಹೆಸರು ಮೂಡುತ್ತಿವೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version