1. ದೇಶದಲ್ಲಿ ಮನುಸ್ಮೃತಿ ಜಾರಿಗೆ ಹುನ್ನಾರ ನಡೆದಿದೆ, ಎಚ್ಚರವಾಗಿರಿ ಎಂದ ಸಿದ್ದರಾಮಯ್ಯ
ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು (Indian Constitution) ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಾಡಿಗೆ ಕರೆ ನೀಡಿದ್ದಾರೆ. ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: ರಾಮಚರಿತ ಮಾನಸವನ್ನು ಸೈನೈಡ್‌ಗೆ ಹೋಲಿಸಿದ I.N.D.I.A ಸಚಿವ
2. ಚೈತ್ರಾ ಕುಂದಾಪುರ ಫುಲ್ ನಾರ್ಮಲ್; ಫಿಟ್ಸೂ ಇಲ್ಲ ಏನೂ ಇಲ್ಲ; ಅವಳದ್ದು ಬರೀ ಡ್ರಾಮಾ!
ಐದು ಕೋಟಿ ರೂ. ವಂಚನೆ ಪ್ರಕರಣದ ಪ್ರಧಾನ ಆರೋಪಿ ಚೈತ್ರಾ ಕುಂದಾಪುರ ಆತ್ಮಹತ್ಯೆ, ಆಕೆಗೆ ಫಿಟ್ಸ್ ಎಂಬ ಸುದ್ದಿಗಳೆಲ್ಲ ಸುಳ್ಳಾಗಿದ್ದು, ಆಕೆ ಅನಾರೋಗ್ಯದ ಡ್ರಾಮಾ ಮಾಡಿದ್ದು ಬಯಲಾಗಿದೆ. ಇದೀಗ ಆಸ್ಪತ್ರೆಯಲ್ಲಿರುವ ಆಕೆಯ ವಿಚಾರಣೆ ಶನಿವಾರ ಮುಂದುವರಿಯಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ 1: 1.5 ಕೋಟಿ ಡೀಲ್ ಆದ್ಮೇಲೆ ಹಾಲಶ್ರೀ ಸ್ವಾಮೀಜಿ ಲೈಫೇ ಫುಲ್ ಚೇಂಜ್!; ಕಾರು, ಪೆಟ್ರೋಲ್ ಪಂಪ್, ಜಾಗ ಖರೀದಿ!
ಪೂರಕ ಸುದ್ದಿ 2: Chaitra Kundapura : ನಂಗೆ ಟಿಕೆಟ್ ಕೊಡ್ಬೇಕೋ, ಬಿಡ್ಬೇಕೋ ಅಂತ ಡಿಸೈಡ್ ಮಾಡಲು ಚೈತ್ರಾ ಯಾರು?; ಶೋಭಾ ಕರಂದ್ಲಾಜೆ ಕಿಡಿ
3. ಹುತಾತ್ಮ ತಂದೆಗೆ ಸೇನೆ ಬಟ್ಟೆ ಧರಿಸಿ ಸೆಲ್ಯೂಟ್ ಹೊಡೆದ 6 ವರ್ಷದ ಮಗ
ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಪೊಲೀಸರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಾವಿರಾರು ಜನರ ಕಣ್ಣೀರಿನ ಮಧ್ಯೆ ಶುಕ್ರವಾರ ನಡೆಯಿತು. ಅದರಲ್ಲೂ, ಪಂಜಾಬ್‌ನ ಮಲ್ಲನ್‌ಪುರ ಗರೀಬ್‌ದಾಸ್‌ನಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಅಂತ್ಯಸಂಸ್ಕಾರದ ವೇಳೆ ಅವರ ಆರು ವರ್ಷದ ಮಗನು ಕೊನೆಯ ಬಾರಿ ಸೆಲ್ಯೂಟ್ ಮಾಡಿರುವ ಭಾವುಕ ವಿಡಿಯೊ ವೈರಲ್ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ1: ಕಾಶ್ಮೀರದಲ್ಲಿ ಉಗ್ರರಿಗಾಗಿ ಸತತ ಶೋಧ, ಮತ್ತೊಬ್ಬ ಯೋಧ ನಾಪತ್ತೆ
ಪೂರಕ ಸುದ್ದಿ2: ಭಯೋತ್ಪಾದನೆ ನಿಲ್ಲಿಸುವ ತನಕ ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಅಸಾಧ್ಯ
4. ಮೇಕ್ ಇನ್ ಇಂಡಿಯಾಗೆ ಬಲ; ವಾಯುಪಡೆ ಸೇರಲಿವೆ 12 ಸು 30 ಎಂಕೆಐ ಯುದ್ಧ ವಿಮಾನ
ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾ (Make In India) ಯೋಜನೆಗೆ ಬಲ ನೀಡುವ ದಿಸೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ದೇಶದ ವಾಯುಪಡೆಗೆ (Indian Air Force) 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 12 ಸು-30ಎಂಕೆಐ (Su 30MKI) ಯುದ್ಧವಿಮಾನಗಳನ್ನು ಸೇರಿಸಿಕೊಳ್ಳುವ ವಾಯುಪಡೆಯ ಪ್ರಸ್ತಾಪಕ್ಕೆ ರಕ್ಷಣಾ ಸಚಿವಾಲಯವು ಶುಕ್ರವಾರ ಅನುಮೋದನೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಆದರೆ..
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವ ಪಾಲಿಕೆ ಠರಾವಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದು ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್ ಎಂದು ಭಾವಿಸಲಾಗಿದೆ. ಆದರೆ, ಪಾಲಿಕೆ ಆಯುಕರು ಮಾತ್ರ ಇನ್ನೂ ಅನುಮತಿ ನೀಡದೆ ಇರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರಿಕ್‌ಗೆ ಕದ್ರಿ ದೇವಸ್ಥಾನವೇ ಟಾರ್ಗೆಟ್: NIA ದೃಢ
ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಶಾರಿಕ್‌ನ ಟಾರ್ಗೆಟ್ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನವೇ ಆಗಿತ್ತು ಎಂದು ಎನ್ಐಎ ಅಧಿಕೃತ (Cooker blast in Mangalore) ಪ್ರಕಟಣೆ ಹೊರಡಿಸಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್, ಮಂಗಳೂರು ಗೋಡೆ ಬರಹದ ಮಾಸ್ಟರ್ ಮೈಂಡ್ ಆಗಿರುವ ಅರಾಫತ್ ಅಲಿ ಬಂಧನ ಬೆನ್ನಲ್ಲೇ ಅಧಿಕೃತ ಹೇಳಿಕೆ ಪ್ರಕಟಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಾಟರ್ ಬಾಯ್; ಸೂಪರ್ ಬ್ರೋ ಎಂದ ಜನ
ವಿರಾಟ್ ಕೊಹ್ಲಿಯನ್ನು ಬಾಂಗ್ಲಾದೇಶ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಆಡಿಸಿಲ್ಲ. ಆದರೆ ರೆಸ್ಟ್ ಪಡೆಯುವುದು ಕೊಹ್ಲಿಯ ಜಾಯಮಾನವಲ್ಲ. ಬದಲಾಗಿ ತಂಡದ ವಾಟರ್ಬಾಯ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಿರಿಯ ಹಾಗೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ ಆಟಗಾರರಿಗೆ ನೀರು ತಂದುಕೊಡುವ ಕೆಲಸ ಮಾಡುತ್ತಾರೆ ಎಂಬುದು ಕ್ರಿಕೆಟ್ ಕ್ಷೇತ್ರಕ್ಕೆ ಅಚ್ಚರಿಯ ಸಂಗತಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಪಡೆಯೋದು ಹೇಗೆ? ಅಳವಡಿಸದಿದ್ರೆ ಭಾರಿ ದಂಡ!ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ, ತ್ರಿಚಕ್ರ ಸೇರಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಎಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮಧ್ಯಪ್ರದೇಶದಲ್ಲಿ ಸಿಲಿಂಡರ್ ಬೆಲೆ ಕೇವಲ 450 ರೂ! ಎಲೆಕ್ಷನ್ ಗೆಲ್ಲಲು ಬಿಜೆಪಿ ಉಚಿತ ಕೊಡುಗೆ
ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ಮಧ್ಯ ಪ್ರದೇಶದಲ್ಲಿ (MP Election 2023) ಮತದಾರರನ್ನು ಓಲೈಸುವ ಕಸರತ್ತು ಜೋರಾಗಿ ನಡೆಯುತ್ತಿದೆ. ಆಡಳಿತ ಪಕ್ಷವಾಗಿರುವ ಬಿಜೆಪಿ (BJP) ಮತ್ತೆ ಅಧಿಕಾರಕ್ಕೇರುವ ತಂತ್ರ ಹೆಣೆಯುತ್ತಿದ್ದು, ಅಡುಗೆ ಅನಿಲ ಸಿಲಿಂಡರ್ (Gas Cylinder) ಬೆಲೆಯನ್ನು ಕನಿಷ್ಠ ಮಟ್ಟಕ್ಕೆ (Price Cut) ಇಳಿಕೆ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಸೀರೆ, ಚಪ್ಪಲಿಯಲ್ಲೇ ಸ್ಪೇನ್‌ನಲ್ಲಿ ಜಾಗಿಂಗ್ ಮಾಡಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ಅವರದು ಯಾವುದೇ ಆಡಂಬರವಿಲ್ಲದ ಸಿಂಪಲ್ ಜೀವನ ಶೈಲಿ. ಇಂತಹ ಮಮತಾ ಬ್ಯಾನರ್ಜಿಯವರು ಸ್ಪೇನ್‌ನಲ್ಲಿ ಬೆಳಗ್ಗೆ ಬೆಳಗ್ಗೆ ಜಾಗಿಂಗ್ ಹೋಗಿದ್ದು, ಆಗಲೂ ಅವರು ಸಾಮಾನ್ಯ ಸೀರೆ, ಸ್ಲಿಪ್ಪರ್ ಧರಿಸಿದ್ದ ವಿಡಿಯೊ ಈಗ ವೈರಲ್ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ನೋಡಿ