Site icon Vistara News

VISTARA TOP 10 NEWS : ತ್ರಿವಳಿ ಸಾಧಕರಿಗೆ ಭಾರತ ರತ್ನ ಗರಿ, ಉತ್ತರಾಖಂಡದಲ್ಲಿ ಹಿಂಸೆಯ ಉರಿ

Vistara Top 10 News 09022024

1. ನರಸಿಂಹ ರಾವ್, ಚರಣ್‌ಸಿಂಗ್, ಸ್ವಾಮಿನಾಥನ್‌ಗೆ ಭಾರತ ರತ್ನ ಗರಿ: ಕೊನೆಗೂ ಸಿಕ್ತು ಗೌರವ
ಭಾರತದ ಮೂವರು ಮಹಾನ್‌ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ (Bharat Ratna) ಪ್ರಶಸ್ತಿ ಘೋಷಿಸಿದೆ. ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‌ (PV Narasimha Rao), ಚೌಧರಿ ಚರಣ್‌ ಸಿಂಗ್‌ (Charan singh chaudhary) ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್‌ (MS Swaminathan) ಅವರಿಗೆ ಭಾರತರತ್ನ ಘೋಷಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇದನ್ನೂ ಓದಿ: Bharat Ratna: ಚೌಧರಿಗೆ ಭಾರತರತ್ನ ಘೋಷಣೆ ಬೆನ್ನಲ್ಲೇ ಬಿಜೆಪಿ ಜತೆ ಮೈತ್ರಿ ಎಂದ ಆರ್‌ಎಲ್‌ಡಿ!
ಇದನ್ನೂ ಓದಿ: ನರಸಿಂಹ ರಾವ್‌ಗೆ ಭಾರತ ರತ್ನ; ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದ ಮೊಮ್ಮಗ
ಇದನ್ನೂ ಓದಿ: ರೈತ ಮಹಾನಾಯಕ, ಭೂಸುಧಾರಣೆಯ ರೂವಾರಿ, ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌
ಇದನ್ನೂ ಓದಿ: PV Narasimha Rao: 15 ಭಾಷೆ ಬಲ್ಲ, ಆರ್ಥಿಕತೆ ಮೇಲೆತ್ತಿದ ಛಲದಂಕಮಲ್ಲ ನರಸಿಂಹರಾವ್!

2. ಉತ್ತರಾಖಂಡದಲ್ಲಿ ಅಕ್ರಮ ಮದರಸಾ ನೆಲಸಮ ಬಳಿಕ ಹಿಂಸಾಚಾರಕ್ಕೆ 4 ಬಲಿ; ಪರಿಸ್ಥಿತಿ ಉದ್ವಿಗ್ನ
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಗುರುವಾರ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾ ನೆಲಸಮ (Illegal Madrasa) ಮಾಡುವ ವೇಳೆ ಸಂಭವಿಸಿದ ಹಿಂಸಾಚಾರ ಇನ್ನಷ್ಟು ಭುಗಿಲೆದ್ದಿದೆ. ಹಿಂಸಾಚಾರದಿಂದಾಗಿ ನಾಲ್ವರು ಮೃತಪಟ್ಟರೆ, 250ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಕಾಂಗ್ರೆಸ್‌ನಲ್ಲಿ ಹೆಚ್ಚಿದ ಬಣ ರಾಜಕೀಯ; ಲೋಕಸಭೆ ಎಲೆಕ್ಷನ್‌ವರೆಗೂ ಇಲ್ಲ ನಿಗಮ-ಮಂಡಳಿ ನೇಮಕ? ಮುಂಬರುವ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ (Congress Karnataka) ಭಾರಿ ಕಸರತ್ತು ನಡೆಸುತ್ತಿದೆ. ಈ ನಡುವೆ ನಿಗಮ ಮಂಡಳಿ ಸ್ಥಾನದ ಲಾಬಿ ಪಾಲಿಟಿಕ್ಸ್ ಜೋರಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ಮುಗಿಯುವವರೆಗೂ ನಿಗಮ ಮಂಡಳಿಗಳ ಪಟ್ಟಿ ಬಿಡುಗಡೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಶಿಕ್ಷಣ ಸಂಸ್ಥೆಗಳ ಸುತ್ತ ಗಾಂಜಾ ಮಾರಾಟ; ಸೂಕ್ತ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಮತ್ತು ಮಾದಕ ಪದಾರ್ಥಗಳ (cannabis Sale) ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.ಅಯೋಧ್ಯೆ ಮಸೀದಿಗೆ ಚಿನ್ನದಲ್ಲಿ ಕುರಾನ್‌ ಶ್ಲೋಕ ಬರೆದ ತಳಪಾಯದ ಇಟ್ಟಿಗೆ ಸಿದ್ಧ
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾನ (Ram Lalla) ವಿಗ್ರಹದ ಪ್ರಾಣ-ಪ್ರತಿಷ್ಠೆ ನೆರವೇರಿದ ಕೆಲ ದಿನಗಳಲ್ಲಿಯೇ, ಇಲ್ಲಿ ಸ್ಥಾಪನೆಗೆ ಉದ್ದೇಶಿಸಲಾಗಿರುವ ಬೃಹತ್‌ ಮಸೀದಿಗೆ (Ayodhya Mosque) ಅಡಿಪಾಯದ ವಿಶೇಷ ಇಟ್ಟಿಗೆ (Special Brick) ಸಿದ್ಧವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6.ಜೈಲಿನಲ್ಲೇ 196 ಮಕ್ಕಳನ್ನು ಹೆತ್ತ ಮಹಿಳಾ ಕೈದಿಗಳು; ತಂದೆಯರು ಯಾರೆಂಬುದೇ ಕಗ್ಗಂಟು!
ಪಶ್ಚಿಮ ಬಂಗಾಳದ ಜೈಲುಗಳಲ್ಲಿರುವ ಮಹಿಳಾ ಕೈದಿಗಳು ಇದುವರೆಗೆ 196 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿಯು ಖುದ್ದು ಕೋಲ್ಕೊತಾ ಹೈಕೋರ್ಟ್‌ ಸೇರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಮಿಕಸ್‌ ಕ್ಯೂರಿ ಆಗಿರುವ ತಪಸ್‌ ಭಾಂಜಾ ಸಲ್ಲಿಸಿದ ವರದಿಯಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಬರೀ 2 ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಹೋಗ್ಬೇಕಾ? ಹೀಗೆ ಬನ್ನಿ!
ಬೆಂಗಳೂರಿನಿಂದ ಚೆನ್ನೈಗೆ ಹೋಗಲು ಎರಡೇ ಗಂಟೆ ಸಾಕು ಅಂದರೆ ನಂಬೋದು ಹೇಗೆ ಅಂತೀರಾ? ಇನ್ನೊಂದು ವರ್ಷದಲ್ಲಿ ಸಿದ್ಧವಾಗಲಿರುವ ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಒಮ್ಮೆ ತೆರೆದುಕೊಂಡರೆ ಈ ಕನಸು ನನಸಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8.Job Alert: ದಕ್ಷಿಣ ರೈಲ್ವೆ ವಲಯದಿಂದ 2,860 ಅಪ್ರೆಂಟಿಸ್‌ಗಳ ನೇಮಕಕ್ಕೆ ಅರ್ಜಿ ಆಹ್ವಾನ
ರೈಲ್ವೆ ಇಲಾಖೆಯಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಆಗ್ರಹಿಸುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ದಕ್ಷಿಣ ರೈಲ್ವೆ ವಲಯದ, ರೈಲ್ವೆ ನೇಮಕಾತಿ ಕೋಶವು ವಲಯದ ಎಲ್ಲ ಡಿವಿಷನ್‌ಗಳಲ್ಲಿನ ಖಾಲಿ ಇರುವ ತರಬೇತುದಾರ ಹುದ್ದೆಗಳ (Apprentice posts) ಭರ್ತಿಗೆ ಅಧಿಸೂಚನೆ ಹೊರಡಿಸಿದೆ (Southern Railway Apprentice Recruitment 2024). ಒಟ್ಟು 2,860 ಅಪ್ರೆಂಟಿಸ್‌ ಹುದ್ದೆಗಳಿವೆ. ಆಸಕ್ತರು 2024ರ ಫೆಬ್ರವರಿ 28ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು (Job Alert). ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.ನನ್ನ ಪತ್ನಿಯ ಹೆಸರು ಕೆಡಿಸುವ ಪ್ರಯತ್ನ; ಅಪ್ಪನ ಆರೋಪದ ವಿರುದ್ಧ ಜಡೇಜಾ ಕೆಂಡಾಮಂಡಲ
ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು ತಮ್ಮ ತಂದೆ ಅನಿರುದ್ಧ್ ಸಿಂಗ್ ಮಾಡಿರುವ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ. ನಮ್ಮಿಬ್ಬರ ನಡುವಿನ ಸಂಬಂಧವನ್ನು ಜಡೇಜಾ ಪತ್ನಿ ರಿವಾಬಾ ಜಡೇಜಾ ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಅಲ್ಲದೆ ಇದು ಪತ್ನಿಯ ಮಾನಹಾನಿ ಮಾಡುವ ಹೇಳಿಕೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10.Rohit Sharma : ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೊ ಮಾಡಿಕೊಂಡ ರೋಹಿತ್, ಪಾಂಡ್ಯ!
ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ (Rohit Sharma) ನಡುವೆ ಶೀತಲ ಸಮರ ಶುರುವಾಗಿದೆ. ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಪಾಂಡ್ಯ ಅವರ ಮರಳುವಿಕೆಯೊಂದಿಗೆ ಈ ಜಗಳ ಶುರುವಾಗಿದೆ ಎನ್ನಲಾಗಿದೆ. ತಂಡದ ನಾಯಕನಾಗಿ ರೋಹಿತ್ ಅವರ ಹತ್ತು ವರ್ಷಗಳ ಓಟವೂ ಕೊನೆಗೊಳ್ಳಲಿದೆ ಎಂಬುದೇ ಈ ಸಮರದ ಹಿನ್ನೆಲೆ. ಈಗ ಅವರಿಬ್ಬರೂ ಇನ್‌ಸ್ಟಾದಲ್ಲಿ ಪರಸ್ಪರ ಅನ್‌ ಫಾಲೋ ಮಾಡಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version