1.5ನೇ ಗ್ಯಾರಂಟಿ ಯುವನಿಧಿ ಡಿ.21ರಿಂದ ಜಾರಿ; ಅರ್ಜಿ ಸಲ್ಲಿಕೆ ಪೂರ್ಣ ಮಾಹಿತಿ
ರಾಜ್ಯ ಕಾಂಗ್ರೆಸ್ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿಗೆ (yuvanidhi) ಚಾಲನೆ ನೀಡಲು ಮುಹೂರ್ತ ಫಿಕ್ಸ್ ಆಗಿದೆ. ಪದವೀಧರರು ಮತ್ತು ಡಿಪ್ಲೋಮಾ ಹೋಲ್ಡರ್‌ಗಳಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ಇದೇ ಡಿಸೆಂಬರ್ 21 ರಿಂದ ನೋಂದಣಿ ಪ್ರಕ್ರಿಯೆ ಆರಂಭ ಆಗಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ ಮಂಡನೆ; ಹೆಚ್ಚಲಿದೆ ಮುದ್ರಾಂಕ ಶುಲ್ಕ!
ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ 2023 ಅನ್ನು ವಿಧಾನ ಪರಿಷತ್‌ನಲ್ಲಿ (Belagavi Winter Session) ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna ByreGowda) ಮಂಡಿಸಿದ್ದಾರೆ. ಅಲ್ಲದೆ, ಇದರಿಂದ ಮುದ್ರಾಂಕ ಶುಲ್ಕದಲ್ಲಿ (Stamp Duty) ಏರಿಕೆಯಾಗಲಿದೆಯೇ ಹೊರತು ನೋಂದಣಿ ಶುಲ್ಕ (Registration Fee) ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3.ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಟಾಸ್ಕ್ ಫೋರ್ಸ್: ದಿನೇಶ್ ಗುಂಡೂರಾವ್
ಬೆಳಗಾವಿ: ಹೆಣ್ಣು ಭ್ರೂಣ ಹತ್ಯೆಗಳನ್ನು (Female Foeticide) ತಡೆಯಲು ನಾವು ಸ್ಪಷ್ಟ ಕ್ರಮ ತೆಗೆದುಕೊಳ್ಳಲೇಬೇಕು. ಬಹಳ ಕಡೆ ಇದು ಅವ್ಯಾಹತವಾಗಿ ನಡೆಯುತ್ತಿದೆ. ಅಧಿಕಾರಿಗಳು ಹೆಚ್ಚು ಗಮನ ಹರಿಸುತ್ತಿಲ್ಲ ಎಂಬುದು ಗೊತ್ತಾಗಿದೆ. ಭ್ರೂಣ ಹತ್ಯೆ ಕೊಲೆಗಿಂತ ಕಮ್ಮಿಯೇನಲ್ಲ. ಹೀಗಾಗಿ ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಕಾರ್ಯಪಡೆ ರಚಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಹೊಸ ವರ್ಷಕ್ಕೆ ನಶೆ ಏರಿಸಲು ರೆಡಿ; 21 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!
ರಾಜಧಾನಿಯಲ್ಲಿ ಹೊಸ ವರ್ಷ ಎಂದರೆ ನಶೆ ಎಂಬಷ್ಟು ಕಳಂಕ ಕೇಳಿಬರುತ್ತಿದೆ. ಯುವಜನರ ನಶೆಯ ಆಸೆಯನ್ನು ಈಡೇರಿಸಲು ಡ್ರಗ್ ಪೆಡ್ಲರ್‌ಗಳು ಕೂಡಾ ರೆಡಿಯಾಗಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ದಾಳಿಯೊಂದರಲ್ಲಿ 21 ಕೋಟಿ ಮೌಲ್ಯದ ಡ್ರಗ್ಸ್ ವಶವಾಗಿರುವುದು ಇದನ್ನೆಲ್ಲ ಸಾರಿ ಹೇಳುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಮೊದಲ ಬಾರಿ ಶಾಸಕರಾದ ಭಜನ್‌ಲಾಲ್ ಶರ್ಮಾ ರಾಜಸ್ಥಾನದ ಸಿಎಂ
ಜೈಪುರ: ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಭಜನ್ ಲಾಲ್ ಶರ್ಮಾ (Bhajan Lal Sharma) ಅವರನ್ನು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಾರತೀಯ ಜನತಾ ಪಕ್ಷ ಮಂಗಳವಾರ ಘೋಷಿಸಿದೆ. ದಿಯಾ ಕುಮಾರಿ ಹಾಗೂ ಪ್ರೇಮ್ಚಂದ್ ಭೈರವ ಅವರು ಉಪಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಯಾರಿವರು ರಾಜಸ್ಥಾನದ ನೂತನ ಸಿಎಂ ಭಜನ್‌ಲಾಲ್ ಶರ್ಮಾ?
ಈ ಸುದ್ದಿಯನ್ನೂ ಓದಿ: ಶಿವರಾಜ್ ಸಿಂಗ್ ಚೌಹಾಣ್‌ಗೆ ಸಿಗದ ಸಿಎಂ ಹುದ್ದೆ; ಬಿಕ್ಕಿ ಬಿಕ್ಕಿ ಅತ್ತ ಮಹಿಳೆಯರು!
6. ಲಿಂಗಾಯತರಿಗೆ ಮೀಸಲಾತಿ; ಸಿಎಂ ಭರವಸೆ ಮಧ್ಯೆ ಬುಧವಾರ ನಡೆಯಲಿದೆಯೇ ಉಗ್ರ ಹೋರಾಟ?
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಅಥವಾ 2ಡಿ ಪೈಕಿ ಯಾವುದಾದರೂ ಒಂದು ಪ್ರವರ್ಗದ ಅಡಿಯಲ್ಲಿ ಮೀಸಲಾತಿ (2A Reservation) ನೀಡಬೇಕು ಎಂಬ ಹಕ್ಕೊತ್ತಾಯವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ಮಂಡಿಸಲಾಗಿದೆ. ಅವರಿನ್ನೂ ಸ್ಪಷ್ಟವಾಗಿ ಏನೂ ಹೇಳಿಲ್ಲ. ಹೀಗಾಗಿ ಮುಂದಿನ ಹೋರಾಟದ ನಿರ್ಣಯ ಬುಧವಾರ ನಡೆಯುವ ಸಾಧ್ಯತೆ ಇದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಕೇಸ್; 8 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ಬಂಧಿತ 8 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಸ ನೀಡಿದೆ. ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಪ್ರಕರಣದ (Assault Case) ವಿಚಾರಣೆ ನಡೆಸಿರುವ 4ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ತೇಜಶ್ರೀ ಅವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಹಿಂದೂ ದೇಗುಲಗಳ ಬಗ್ಗೆ ಕೇರಳ ಸರ್ಕಾರದ ನಿರ್ಲಕ್ಷ್ಯ; ಶಬರಿಮಲೆಯಲ್ಲಿ ಸಮಸ್ಯೆಗಳ ಸರʼಮಾಲೆʼ
ಕೇರಳ ಸರ್ಕಾರ ಅಲ್ಲಿನ ಹಿಂದು ದೇಗುಲಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಭಾವ ಹೊಂದಿದೆ ಎಂಬುದಕ್ಕೆ ನೂರಾರು ಪುರಾವೆಗಳಿವೆ. ಅವುಗಳು ಪುನರಾವರ್ತನೆಗಳಾಗುತ್ತಿವೆ. ಇದೀಗ ಅಲ್ಲಿನ ಪ್ರಸಿದ್ಧ ಶ್ರದ್ಧಾಕೇಂದ್ರವಾಗಿರುವ ಶಬರಿಮಲೆ (sabarimala temple) ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವ್ಯವಸ್ಥಾಪನಾ ದೋಷ ಉಂಟಾಗಿದ್ದು ಭಕ್ತಿ- ಭಾವದಿಂದ ಅಲ್ಲಿಗೆ ತೆರಳಿರುವ ಲಕ್ಷಾಂತರ ಭಕ್ತರು ಸಮಸ್ಯೆ ಎದುರಿಸುವಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ದ್ರಾವಿಡ್ ಮಗ v/s ಸೆಹ್ವಾಗ್ ಮಗ; ಚಿಣ್ಣರ ಭರ್ಜರಿ ಫೈಟ್
ಭಾರತದ ಕ್ರಿಕೆಟ್ ಲೆಜೆಂಡ್ಗಳಾದ ರಾಹುಲ್ ದ್ರಾವಿಡ್ (Rahul Dravid) ಮತ್ತು ವೀರೇಂದ್ರ ಸೆಹ್ವಾಗ್ ಅವರ ಹೆಸರುಗಳು ಕ್ರಿಕೆಟ್ ಟೂರ್ನಮೆಂಟ್ ಸ್ಕೋರ್ ಬೋರ್ಡ್ನಲ್ಲಿ ನೋಡಿ ಸುಮಾರು ಒಂದು ದಶಕ ಕಳೆದಿದೆ. ಆದರೆ, ಡಿಸೆಂಬರ್ 11 ರಂದು ಪ್ರಾರಂಭವಾದ ವಿಜಯ್ ಮರ್ಚೆಂಟ್ ಟ್ರೋಫಿ ರಾಷ್ಟ್ರೀಯ ಅಂಡರ್ -16 ಬಾಲಕರ ಟೂರ್ನಮೆಂಟ್ ನಲ್ಲಿ ಕರ್ನಾಟಕ ಮತ್ತು ದೆಹಲಿ ನಡುವಿನ ಮೂರು ದಿನಗಳ ಮುಖಾಮುಖಿಯಲ್ಲಿ ದ್ರಾವಿಡ್ ಮತ್ತು ಸೆಹ್ವಾಗ್ ಕಾಣಿಸಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಅಯೋಧ್ಯೆ ರಾಮ ಮಂದಿರ ಅರ್ಚಕನ ಫೇಕ್ ಅಶ್ಲೀಲ ವಿಡಿಯೊ! ಕಾಂಗ್ರೆಸ್ ನಾಯಕ ಅರೆಸ್ಟ್!
ಅಯೋಧ್ಯೆಯ ಶ್ರೀರಾಮ ಮಂದಿರ (Ayodhya Ram Mandir) ಮುಖ್ಯ ಅರ್ಚಕರಾಗಿ ನೇಮಕಗೊಂಡಿರುವ ಮೋಹಿತ್ ಪಾಂಡೆ (Priest Mohit Pandey) ಅವರ ನಕಲಿ ಅಶ್ಲೀಲ ವಿಡಿಯೋವನ್ನು (Fake porn video) ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು (Gujarat Police) ಕಾಂಗ್ರೆಸ್ ನಾಯಕ ಹಿತೇಂದ್ರ ಪಿತಾಡಿಯಾ ಅವರನ್ನು ಬಂಧಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ