Site icon Vistara News

2024 election results : ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಪಾರಮ್ಯ; ಅಣ್ಣಾ ಮಲೈಗೆ ಹಿನ್ನಡೆ

2024 election results

ಬೆಂಗಳೂರು : ತಮಿಳುನಾಡಿನಲ್ಲಿ ಮತ ಎಣಿಕೆ ಆರಂಭವಾದ ಮೊಲದ ಮೂರು ಗಂಟೆಗಳ ಬಳಿಕ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಇಂಡಿ ಮೈತ್ರಿಕೂಟವು (2024 election results) 39 ಸ್ಥಾನಗಳಲ್ಲಿ 32 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಸಾಧಿಸುವತ್ತ ಸಾಗುತ್ತಿದೆ. ಎನ್​​ಡಿಎ ಮಿತ್ರಪಕ್ಷ ಪಿಎಂಕೆ ಧರ್ಮಪುರಿಯಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದರೆ, ಕೊಯಮತ್ತೂರಿನಲ್ಲಿ ಬಿಜೆಪಿಯ ಅಣ್ಣಾಮಲೈ ಹಿನ್ನಡೆಯಲ್ಲಿದ್ದಾರೆ. ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಈ ವರ್ಷ ಶೇಕಡಾ 69.72 ರಷ್ಟು ಮತದಾನವಾಗಿದೆ.

ಪ್ರಮುಖ ಅಭ್ಯರ್ಥಿಗಳು ಮತ್ತು ಕ್ಷೇತ್ರಗಳು: ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಕೊಯಮತ್ತೂರಿನಲ್ಲಿ ಡಿಎಂಕೆಯ ಗಣಪತಿ ಪಿ ಮತ್ತು ಎಐಎಡಿಎಂಕೆಯ ಸಿಂಗೈ ವಿರುದ್ಧ ಸ್ಪರ್ಧಿಸಿದರೆ, ಹಾಲಿ ಡಿಎಂಕೆ ಸಂಸದೆ ಕನಿಮೋಳಿ ತೂತುಕುಡಿಯಲ್ಲಿ ಎಐಎಡಿಎಂಕೆಯ ಆರ್.ಶಿವಸಾಮಿ ವೇಲುಮಣಿ ಅವರನ್ನು ಎದುರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜ್ ಚೆನ್ನೈ ದಕ್ಷಿಣದಿಂದ ಸ್ಪರ್ಧಿಸಿದರೆ, ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರು ನೀಲಗಿರಿಯಲ್ಲಿ ಕೇಂದ್ರ ಮೀನುಗಾರಿಕೆ ರಾಜ್ಯ ಸಚಿವರೂ ಆಗಿರುವ ಬಿಜೆಪಿಯ ಎಲ್.ಮುರುಗನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ: Election Results 2024: ಆರಂಭಿಕ ಹಿನ್ನಡೆ ಬಳಿಕ ವಾರಾಣಸಿಯಲ್ಲಿ ಪುಟಿದೆದ್ದ ಮೋದಿ; 18 ಸಾವಿರ ಮತಗಳ ಲೀಡ್

ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತೀವ್ರ ಪ್ರಚಾರ ನಡೆಸಿದ್ದು. ಅವರು 9 ಬಾರಿ ಅಲ್ಲಿಗೆ ಹೋಗಿದ್ದರು. ಎಐಎಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳದ ಕಾರಣ ಲೋಕಸಭಾ ಚುನಾವಣಾ ಫಲಿತಾಂಶಗಳು ಪೂರಕವಾಗಿಲ್ಲ. ಜೂನ್ 1 ರಂದು ಹಲವಾರು ಏಜೆನ್ಸಿಗಳು ಘೋಷಿಸಿದ ಚುನಾವಣೋತ್ತರ ಸಮೀಕ್ಷೆಗಳು ಕೇಸರಿ ಪಕ್ಷವು ರಾಜ್ಯದಲ್ಲಿ ನಾಲ್ಕು ಸ್ಥಾನಗಳನ್ನು ಗಳಿಸಲಿದೆ ಎಂದು ಸೂಚಿಸಿತ್ತು. ಡಿಎಂಕೆ ಭರ್ಜರಿ ಗೆಲುವು ಸಾಧಿಸಬಹುದು ಮತ್ತು ಎಐಎಡಿಎಂಕೆ ನಂತರದ ಸ್ಥಾನದಲ್ಲಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಂದೇ ಒಂದು ಸ್ಥಾನವನ್ನು ಪಡೆಯಲು ಬಿಜೆಪಿ ವಿಫಲವಾಗಿತ್ತು.

ಸ್ಟ್ರಾಂಗ್​ ರೂಮ್​ ಕಿ ಮಿಸ್​

ತಿರುನೆಲ್ವೇಲಿ ಕ್ಷೇತ್ರದ ಅಂಬಾಸಮುದ್ರಂ ವಿಧಾನಸಭಾ ಕ್ಷೇತ್ರದ ಇವಿಎಂಗಳನ್ನು ಹೊಂದಿರುವ ಸ್ಟ್ರಾಂಗ್ ರೂಮ್​​ನ ಕೀಲಿ ಕಾಣೆಯಾಗಿದೆ. ಇದರಿಂದ ಕೆಲವು ನಿಮಿಷಗಳ ಕಾಲ ಗೊಂದಲ ಉಂಟಾಯಿತು. ಈ ವೇಳೆ ಉಂಟಾದ ಪ್ರತಿಭಟನೆಯಲ್ಲಿ ಕೆಲವು ಏಜೆಂಟರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಸ್ಟ್ರಾಂಗ್ ರೂಂನ ಕೀಗಳು ಪತ್ತೆಯಾಗಿದ್ದರೂ, ಎಣಿಕೆಯನ್ನು ಪ್ರಾರಂಭಿಸಲು ಅಧಿಕಾರಿಗಳು ಬೀಗಗಳನ್ನು ಮುರಿಯಬೇಕಾಯಿತು.

Exit mobile version