ಬೆಂಗಳೂರು : ಟಾಟಾ ಮೋಟಾರ್ಸ್ ಇಂದು ದೇಶದ ಅತ್ಯಂತ ಹೆಚ್ಚು ಮಾರಾಟವಾಗುವ ಎಸ್ ಯುವಿಯಾದ ಹೊಸ ನೆಕ್ಸಾನ್ (Tata Nexon) ಗ್ಲೋಬಲ್ ನ್ಯೂ ಕಾರ್ ಅಸೆಸ್ ಮೆಂಟ್ ಪ್ರೋಗ್ರಾಂ (ಜಿಎನ್ ಸಿಎಪಿ) ನಿಂದ ಗರಿಷ್ಠ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಹಿರಿಯ ಪ್ರಯಾಣಿಕರ ಸುರಕ್ಷತಾ (32.22/34 ಪಾಯಿಂಟ್ ಗಳು) ಮತ್ತು ಮಕ್ಕಳ ಸುರಕ್ತೆಯ (44.52/49 ಪಾಯಿಂಟ್ ಗಳು) ಎರಡಕ್ಕೂ 5-ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ. ಈ ಗಮನಾರ್ಹ ಸಾಧನೆಯು ಸುರಕ್ಷತೆಗೆ ಟಾಟಾ ಮೋಟಾರ್ಸ್ ನ ಬದ್ಧತೆಯನ್ನು ವಿಸ್ತರಿಸಿದೆ. ಕಂಪನಿಯ ಎಲ್ಲ ಹೊಸ ಎಸ್ ಯುವಿ ಮಾದರಿಗಳು ಈಗ ಜಿಎನ್ ಸಿಎಪಿಯಿಂದ ಅಪೇಕ್ಷಿತ 5-ಸ್ಟಾರ್ ರೇಟಿಂಗ್ ಹೊಂದಿದಂತಾಗಿದೆ.
2024 ಟಾಟಾ ನೆಕ್ಸಾನ್ ಕಾರು ವಯಸ್ಕರ ಸುರಕ್ಷತೆಗಾಗಿ 34.00ರಲ್ಲಿ 32.22 ಅಂಕಗಳನ್ನು ಗಳಿಸಿದೆ/ ಇದು ಅದರ ದೃಢವಾದ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ರಚನೆಯನ್ನು ಬಲಪಡಿಸುತ್ತದೆ. ತಲೆ ಮತ್ತು ಕುತ್ತಿಗೆಗೆ ನೀಡುವಂಥ ಸುರಕ್ಷತೆಯೂ ಈ ಕಾರಿನಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದರೆ ಎದೆಗೆ ಸುರಕ್ಷತೆ ನೀಡುವಲ್ಲಿ ಸ್ವಲ್ಪ ಹಿನ್ನಡೆ ಹೊಂದಿದೆ. ಹೆಚ್ಚುವರಿಯಾಗಿ ಚಾಲಕ ಮತ್ತು ಪ್ರಯಾಣಿಕರ ಮೊಣಕಾಲುಗಳಿಗೂ ಹೆಚ್ಚು ರಕ್ಷಣೆ ನೀಡುತ್ತದೆ. ಇದು ಒಟ್ಟಾರೆ ಅತ್ಯುತ್ತಮ ಸ್ಟಾರ್ ಪಡೆದುಕೊಂಡಿದೆ. ಸೈಡ್ ಎಫೆಕ್ಟ್ ವಿಶ್ಲೇಷಣೆಯಲ್ಲಿ ತಲೆ, ಹೊಟ್ಟೆ ಮತ್ತು ಸೊಂಟಕ್ಕೆ ಅತ್ಯುತ್ತಮ ರಕ್ಷಣೆ ನೀಡುತ್ತದೆ. ಸೈಡ್ ಪೋಲ್ ಇಂಪ್ಯಾಕ್ಟ್ ಪರೀಕ್ಷೆಯು ಸ್ಟ್ಯಾಂಡರ್ಡ್ ಕರ್ಟನ್ ಏರ್ ಬ್ಯಾಗ್ ಗಳ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸಿದೆ.
ಸ್ಥಿರವಾಗಿರುವ ಬಾಡಿ ಶೆಲ್
ಟಾಟಾ ನೆಕ್ಸಾನ್ ನ ಬಾಡಿಶೆಲ್ ಸ್ಥಿರವಾಗಿದೆ ಎಂದು ರೇಟ್ ಮಾಡಲಾಗಿದೆ. ಇದು ಹೆಚ್ಚುವರಿ ಲೋಡ್ ಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸ್ಟ್ಯಾಂಡರ್ಡ್ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ) ಹೊಂದಿರುವ ಈ ಕಾರು ಗ್ಲೋಬಲ್ ಎನ್ಸಿಎಪಿಯ ಇತ್ತೀಚಿನ ಅವಶ್ಯಕತೆಗಳನ್ನು ಪೂರೈಸಿದೆ, ಪರೀಕ್ಷೆಯಲ್ಲಿ ಸ್ವೀಕಾರಾರ್ಹ ಕಾರ್ಯಕ್ಷಮತೆಯನ್ನು ಖಚಿತಪಡಿಸಿದೆ. ಎಲ್ಲಾ ಸೀಟ್ಗಳಲ್ಲಿ ಸ್ಟ್ಯಾಂಡರ್ಡ್ ಸೀಟ್ ಬೆಲ್ಟ್ ರಿಮೈಂಡರ್ (ಎಸ್ಬಿಆರ್) ನಿಯಮಗಳನ್ನು ಪೂರೈಸಿವೆ. ಇದು ನೆಕ್ಸಾನ್ಗೆ ಅತ್ಯುತ್ತಮ 5 ಸ್ಟಾರ್ ರೇಟಿಂಗ್ ಪಡೆಯಲು ನೆರವಾಯಿತು.
ಮಕ್ಕಳ ಸುರಕ್ಷತಾ ರೇಟಿಂಗ್
ಟಾಟಾ ಮೋಟಾರ್ಸ್ 2024 ನೆಕ್ಸಾನ್ ವಿನ್ಯಾಸದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿದೆ. ಮಕ್ಕಳ ಸುರಕ್ಷತೆ ವಿಭಾಗದಲ್ಲಿ 49.00 ರಲ್ಲಿ 44.52 ರ ಗಮನಾರ್ಹ ಸ್ಕೋರ್ ಪಡೆದುಕೊಂಡಿದೆ.. ಫ್ರಂಟಲ್ ಇಂಪ್ಯಾಕ್ಟ್ ಪರೀಕ್ಷೆಯ ಸಮಯದಲ್ಲಿ, 3 ವರ್ಷ ಮತ್ತು 18 ತಿಂಗಳ ಮಗುವಿನ ಆಸನಗಳನ್ನು ಐ-ಗಾತ್ರದ ಆಂಕೋರೇಜ್ ಬಳಸಿ ಸುಭದ್ರಗೊಳಿಸಲಾಗಿದೆ. ಇದರಿಂದ ತಲೆಗೆ ಏಟು ಬೀಳುವುದು ತಪ್ಪುತ್ತದೆ ಹಾಗೂ ಕಿರಿಯ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಿದೆ.
ಇದನ್ನೂ ಓದಿ : Hero Mavrick 440 : ಹೀರೋ ಮೋಟಾರ್ಸ್ನ ಅತ್ಯಂತ ದುಬಾರಿ ಬೈಕ್ ಅನಾವರಣ
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ನ ಮುಖ್ಯ ಉತ್ಪನ್ನ ಅಧಿಕಾರಿ ಮೋಹನ್ ಸಾವರ್ಕರ್ ಅವರು 5 ಸ್ಟಾರ್ ರೇಟಿಗ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಸುರಕ್ಷತೆಯು ನಮ್ಮ ಕಾರಿನ ಡಿಎನ್ ಎಯಲ್ಲಿ ಬೇರೂರಿದೆ. 2022 ಹೊಸ ಪ್ರೋಟೋಕಾಲ್ ಪ್ರಕಾರ ಹೊಸ ನೆಕ್ಸಾನ್ ಗಾಗಿ ಗ್ಲೋಬಲ್ ಎನ್ ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಗಳಿಸಲು ನಾವು ಹೆಮ್ಮೆಪಡುತ್ತೇವೆ. ಇದು 2018 ರಲ್ಲಿ ಅನ್ಕ್ಯಾಪ್ನಿಂದ 5-ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರು ಮತ್ತು ಇದು ಈ ಪರಂಪರೆಯನ್ನು ಎತ್ತಿಹಿಡಿಯುತ್ತದೆ. ಎಂದು ಹೇಳಿದರು.