Site icon Vistara News

‌2nd PUC Exam Result: ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶ ಪ್ರಕಟ, 23.73% ವಿದ್ಯಾರ್ಥಿಗಳು ಪಾಸ್

2nd Puc Result

ಬೆಂಗಳೂರು: 2024ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 3 ಫಲಿತಾಂಶಗಳನ್ನು (2nd PUC Exam Result) ಪ್ರಕಟಿಸಲಾಗಿದೆ. 23.73% ವಿದ್ಯಾರ್ಥಿಗಳು (PUC Students) ಉತ್ತೀರ್ಣರಾಗಿದ್ದಾರೆ. ಶಾಲಾ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶದ (PUC Result) ಅಂಕಿ ಅಂಶ ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ಹಾಜರಾದ 75,466 ವಿದ್ಯಾರ್ಥಿಗಳಲ್ಲಿ 17,911 ಮಂದಿ ಪಾಸ್ (Pass) ಆಗಿದ್ದಾರೆ.

ಜೂನ್/ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ- 3 ಅನ್ನು ದಿನಾಂಕ ಜೂನ್‌ 24ರಿಂದ ಜುಲೈ 5ರವರೆಗೆ ಒಟ್ಟು 248 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಒಟ್ಟು 12 ಮೌಲ್ಯಮಾಪನ ಶಿಬಿರಗಳಲ್ಲಿ ದಿನಾಂಕ ಜುಲೈ 9ರಿಂದ 14ರವರೆಗೆ 2293 ಮೌಲ್ಯಮಾಪಕರಿಂದ ನಡೆಸಲಾಯಿತು.

ಫಲಿತಾಂಶವನ್ನು ಇಂದು ಮಧ್ಯಾಹ್ನ 3:00 ಗಂಟೆಗೆ ಕಾಲೇಜುಗಳಲ್ಲಿ ಪ್ರಕಟಿಸಲಾಗುತ್ತಿದೆ. ಪರೀಕ್ಷೆ-3ರ ಫಲಿತಾಂಶವನ್ನು https://karresults.nic.in ವೆಬ್‌ಸೈಟ್‌ನಲ್ಲಿಯೂ ಪ್ರಚುರಪಡಿಸಲಾಗಿದೆ. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆ 1, ಪರೀಕ್ಷೆ 2 ಮತ್ತು ಪರೀಕ್ಷೆ- 3ರಲ್ಲಿ ವಿಷಯವಾರು ಗಳಿಸಿದ ಅತಿಹೆಚ್ಚು ಅಂಕಗಳನ್ನು ಪರಿಗಣಿಸಿ ಅಂತಿಮ ಫಲಿತಾಂಶವನ್ನು https://kseab.karnataka.gov.in ಅಂತರ್ಜಾಲದಲ್ಲಿ ನಂತರ ಪ್ರಕಟಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ಪರೀಕ್ಷೆಗೆ ನೋಂದಾಯಿಸಿದವರ ಸಂಖ್ಯೆ 76,005, ಹಾಜರಾದವರು 75,466, ಉತ್ತೀರ್ಣರಾದವರು 17,911 ಹಾಗೂ ಶೇಕಡವಾರು ಫಲಿತಾಂಶ 23.73. ಉತ್ತೀರ್ಣರಾದವರಲ್ಲಿ ಬಾಲಕಿಯರ ಪ್ರಮಾಣ 26.65% ಹಾಗೂ ಬಾಲಕರು 21.65%. ಕಲಾ ವಿಭಾಗದಲ್ಲಿ 21.71%, ವಾಣಿಜ್ಯದಲ್ಲಿ 23.58% ಹಾಗೂ ವಿಜ್ಞಾನದಲ್ಲಿ 27.06% ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ.

ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 17ರಿಂದ 21
ಸ್ಕ್ಯಾನಿಂಗ್‌ ಪ್ರತಿಯನ್ನು ಅಂತರ್ಜಾಲದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವ ದಿನಾಂಕ: ಜುಲೈ 18ರಿಂದ 22
ಮರುಮೌಲ್ಯಮಾಪನ ಹಾಗೂ ಮರುಎಣಿಕೆಗೆ ಅರ್ಜಿ ಸಲ್ಲಿಸಲು ಜುಲೈ 18ರಿಂದ 24. ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಂಡವರಿಗೆ ಮಾತ್ರ ಅವಕಾಶ.
ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ಪೇಪರ್‌ಗೆ ಶುಲ್ಕ- 530 ರೂ.
ಮರುಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ- 1670 ರೂ.

ಈ ಬಾರಿ ಆಯ್ಕೆಯಾದ 105 ಸಂಸದರು ಪಿಯುಸಿ ದಾಟಿಲ್ಲ!

ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಗೆದ್ದು ಸಂಸತ್ತು ಪ್ರವೇಶಿಸಿರುವ ಶೇ. 19ರಷ್ಟು ನೂತನ ಸಂಸದರ (MPs) ಶೈಕ್ಷಣಿಕ ಅರ್ಹತೆ (education qualification) 12 ನೇ ತರಗತಿಗಿಂತ ಕೆಳಗಿದೆ. ಶೇ. 77ರಷ್ಟು ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಅರ್ಹತೆಯನ್ನು ಪಡೆದಿದ್ದಾರೆ ಎಂದು ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಹೇಳಿದೆ.

ವಿಜೇತ ಅಭ್ಯರ್ಥಿಗಳಲ್ಲಿ ಸುಮಾರು 105 ಮಂದಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು 5ನೇ ತರಗತಿ ಮತ್ತು 12 ನೇ ತರಗತಿಯ ನಡುವೆ ಎಂದು ಘೋಷಿಸಿದ್ದಾರೆ. 420 ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. 17 ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಮಾಡಿದ್ದು, ಒಬ್ಬ ವಿಜೇತರು “ಕೇವಲ ಸಾಕ್ಷರರು” ಎಂದು ಹೇಳಿಕೊಂಡಿದ್ದಾರೆ. ಚುನಾವಣಾ ಕಣದಲ್ಲಿ ಇಳಿಯುವಾಗ ತಾವು ಅನಕ್ಷರಸ್ಥರೆಂದು ಘೋಷಿಸಿಕೊಂಡ ಎಲ್ಲಾ 121 ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.

ಯಾರು ಎಷ್ಟು?

5ನೇ ತರಗತಿಯವರೆಗೆ ಓದಿರುವ ಇಬ್ಬರು ವಿಜೇತ ಅಭ್ಯರ್ಥಿಗಳಿದ್ದರೆ, ನಾಲ್ವರು 8 ನೇ ತರಗತಿಯವರೆಗೆ ಓದಿದ್ದೇವೆ ಎಂದು ಹೇಳಿದ್ದಾರೆ. 34 ಅಭ್ಯರ್ಥಿಗಳು ತಾವು 10 ನೇ ತರಗತಿಯವರೆಗೆ ಮತ್ತು 65 ಅಭ್ಯರ್ಥಿಗಳು 12ನೇ ತರಗತಿಯವರೆಗೆ ಓದಿರುವುದಾಗಿ ಘೋಷಿಸಿದ್ದಾರೆ.

ಕೃಷಿಕರು

ಪಿ ಆರ್ ಎಸ್ ಶಾಸಕಾಂಗ ಸಂಶೋಧನೆ ವಿಶ್ಲೇಷಣೆಯ ಪ್ರಕಾರ 543 ಸಂಸದರಲ್ಲಿ ಛತ್ತೀಸ್‌ಗಢದ ಶೇ. 91 ಸಂಸದರು, ಮಧ್ಯಪ್ರದೇಶದಿಂದ ಶೇ. 72 ಮತ್ತು ಗುಜರಾತ್‌ನ ಶೇ. 65 ಸಂಸದರು ಕೃಷಿಯನ್ನು ತಮ್ಮ ವೃತ್ತಿ ಎಂದು ಘೋಷಿಸಿದ್ದಾರೆ.
18ನೇ ಲೋಕಸಭೆಗೆ ಚುನಾಯಿತರಾದ ಸಂಸದರಲ್ಲಿ ಸುಮಾರು ಶೇ. 7 ರಷ್ಟು ಮಂದಿ ವಕೀಲರು ಮತ್ತು ಶೇ. 4ರಷ್ಟು ಮಂದಿ ವೈದ್ಯಕೀಯ ವೃತ್ತಿಯವರು ಇದ್ದಾರೆ.

ಇದನ್ನೂ ಓದಿ: UGCET 2024: ಅರ್ಹತಾ ಅಂಕ ಶೇ 45ಕ್ಕೆ ಇಳಿಕೆ ; ಆರ್ಕಿಟೆಕ್ಚರ್ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಜು. 13ರವರೆಗೆ ಅವಕಾಶ

Exit mobile version