Site icon Vistara News

Indian Labourers: ಇಟಲಿಯಲ್ಲಿ ‘ಗುಲಾಮಗಿರಿ’ಗೆ ಸಿಲುಕಿದ್ದ 33 ಭಾರತದ ಕಾರ್ಮಿಕರನ್ನು ರಕ್ಷಿಸಿದ ಪೊಲೀಸರು!

Indian Labourers

33 Indian Farm Labourers Freed From Slavery By Italy Police

ರೋಮ್:‌ ಬಡತನದಿಂದ ಬೇಸತ್ತು ಬೇರೆ ದೇಶಗಳಿಗೆ ವಲಸೆ ಹೋಗುವ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತದೆ. ಅದರಲ್ಲೂ, ಭಾರತದಿಂದ ಉದ್ಯೋಗದ ಆಸೆಗೆ ದುಬೈ, ಅಮೆರಿಕ ಸೇರಿ ಹಲವು ದೇಶಗಳಿಗೆ ಹೋಗುವವರಿಗೆ ವಂಚನೆ ಮಾಡಲಾಗುತ್ತದೆ. ಹೀಗೆ, ಉದ್ಯೋಗದ ಆಸೆಗಾಗಿ ಇಟಲಿಗೆ ತೆರಳಿ, ಅಲ್ಲಿ ವಂಚನೆಗೀಡಾಗಿ, ಗುಲಾಮಗಿರಿಯ ಕೆಲಸದಲ್ಲಿ ತೊಡಗಿದ್ದ 33 ಭಾರತೀಯರನ್ನು ಇಟಲಿ ಪೊಲೀಸರು (Italy Police) ರಕ್ಷಣೆ ಮಾಡಿದ್ದಾರೆ. ಭಾರತದ ಕೃಷಿ ಕಾರ್ಮಿಕರ (Indian Labourers) ರಕ್ಷಣೆ ಕುರಿತು ಅವರೇ ಮಾಹಿತಿ ನೀಡಿದ್ದಾರೆ.

ಹೌದು, ಇಟಲಿಯ ವೆರೋನಾ ಪ್ರಾಂತ್ಯದಲ್ಲಿ ‘ಗುಲಾಮಗಿರಿ’ಗೆ ಸಿಲುಕಿದ್ದ ಪಂಜಾಬ್‌ನ ಕಾರ್ಮಿಕರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹಾಗೆಯೇ, ಇಬ್ಬರು ದುಷ್ಕರ್ಮಿಗಳಿಂದ 4.55 ಕೋಟಿ ರೂಪಾಯಿಯನ್ನು (5.45 ಲಕ್ಷ ಡಾಲರ್)‌ ವಶಪಡಿಸಿಕೊಂಡಿದ್ದಾರೆ. ಉತ್ತಮ ಭವಿಷ್ಯ, ಮಾಸಿಕ 15 ಲಕ್ಷ ರೂ. ಸಂಬಳದ ಆಮಿಷವೊಡ್ಡಿ ಕೆಲ ಕಾರ್ಮಿಕರು ಪಂಜಾಬ್‌ನ ಕೃಷಿ ಕಾರ್ಮಿಕರನ್ನು ಇಟಲಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿ ಕೃಷಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, ಗಂಟೆಗೆ 400 ರೂ. ಮಾತ್ರ ಕೂಲಿ ಕೊಟ್ಟು, ವಾರದ ಏಳು ದಿನವೂ ನಿತ್ಯ 12 ತಾಸು ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಇದರಿಂದಾಗಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಪೊಲೀಸರು ಅವರನ್ನು ರಕ್ಷಿಸಿದ್ದರು.

ಭಾರತದ ಸತ್ನಾಮ್‌ ಸಿಂಗ್‌ ನಿಧನ

ಕಳೆದ ಜೂನ್‌ 20ರಂದು ಇಟಲಿಯಲ್ಲಿ ಶೋಷಣೆಗೊಳಗಾಗಿ, ಪಂಜಾಬ್‌ ಮೂಲದ ಕಾರ್ಮಿಕ ಸತ್ನಾಮ್‌ ಸಿಂಗ್‌ (31) ಎಂಬ ವ್ಯಕ್ತಿ ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಜಾಲವನ್ನು ಭೇದಿಸಿದ್ದಾರೆ. ಇಟಲಿಯ ಕೃಷಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸತ್ನಾಮ್‌ ಸಿಂಗ್‌ ಅವರ ಕೈ ಮಷೀನ್‌ನಲ್ಲಿ ಸಿಲುಕಿ ತುಂಡಾಗಿತ್ತು. ಇದಾದ ಬಳಿಕ ಕಂಪನಿಯ ಮಾಲೀಕನು ಸತ್ನಾಮ್‌ ಸಿಂಗ್‌ ಅವರನ್ನು ರೋಮ್‌ ಬಳಿ ಲೇಜಿಯೋ ಎಂಬಲ್ಲಿ ರಸ್ತೆ ಮೇಲೆ ಎಸೆದು ಹೋಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸತ್ನಾಮ್‌ ಸಿಂಗ್‌ ಅವರು ಮೃತಪಟ್ಟಿದ್ದರು.

ಇಟಲಿಯಲ್ಲಿ ದಾರುಣವಾಗಿ ಸಾವಿಗೀಡಾದ ಪಂಜಾಬ್‌ ಕಾರ್ಮಿಕ ಸತ್ನಾಮ್‌ ಸಿಂಗ್.

ಸತ್ನಾಮ್‌ ಸಿಂಗ್‌ ಅವರು ರಸ್ತೆಯಲ್ಲಿ ಬಿದ್ದಿದ್ದನ್ನು ನೋಡಿ ಬಳಕ ರೋಮ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳವರೆಗೆ ಸತತವಾಗಿ ಚಿಕಿತ್ಸೆ ಪಡೆದರೂ ಸತ್ನಾಮ್‌ ಸಿಂಗ್‌ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇಟಲಿಯಲ್ಲಿ ಸಿಖ್‌ ಕಾರ್ಮಿಕನ ದಾರುಣ ಸಾವಿನ ಕುರಿತು ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾರ್ಮಿಕರ ಶೋಷಣೆ ಕುರಿತು ಜನಾಕ್ರೋಶ ವ್ಯಕ್ತವಾಗಿತ್ತು. ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: Modi In Qatar: 8 ಭಾರತೀಯರ ಬಿಡುಗಡೆ ಬೆನ್ನಲ್ಲೇ ಮೋದಿ ಕತಾರ್‌ ಭೇಟಿ; ಅದ್ಧೂರಿ ಸ್ವಾಗತ

Exit mobile version