Site icon Vistara News

Bank Loan Fraud : 34,000 ಕೋಟಿ ರೂ. ಬ್ಯಾಂಕ್​​ ವಂಚನೆ, ಡಿಎಚ್​​ಎಫ್ಎಲ್​​​ ಮಾಜಿ ನಿರ್ದೇಶಕನ ಬಂಧನ

Bank Loan Fraud

ನವದೆಹಲಿ: 17 ಸದಸ್ಯರ ಬ್ಯಾಂಕ್ ಒಕ್ಕೂಟಕ್ಕೆ 34,000 ಕೋಟಿ ರೂ. ವಂಚನೆ ಮಾಡಿದ (Bank Loan Fraud) ಆರೋಪದ ಮೇಲೆ ಡಿಎಚ್ಎಫ್ಎಲ್ ಮಾಜಿ ನಿರ್ದೇಶಕ ಧೀರಜ್ ವಾಧ್ವಾನ್ ಅವರನ್ನು ಸಿಬಿಐ ಮಂಗಳವಾರ ಬಂಧಿಸಿದೆ ಸೋಮವಾರ ರಾತ್ರಿ ಮುಂಬೈನಲ್ಲಿ ವಶಕ್ಕೆ ಪಡೆದ ವಾಧ್ವಾನ್ ಅವರನ್ನು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅದು ಅವರನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಡಿಎಚ್ಎಫ್ಎಲ್​​ನ ಮಾಜಿ ನಿರ್ದೇಶಕ ಮತ್ತು ಅವರ ಸಹೋದರ ಕಪಿಲ್ ಅವರನ್ನು ಈ ಹಿಂದೆ ಜುಲೈ 19, 2022 ರಂದು ಬಂಧಿಸಲಾಗಿತ್ತು. ಅಕ್ಟೋಬರ್ 15, 2022 ರಂದು ಕಪಿಲ್ ಮತ್ತು ಧೀರಜ್ ಸೇರಿದಂತೆ 75 ಸಂಸ್ಥೆಗಳ ವಿರುದ್ಧ ಸಿಬಿಐ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ತನಿಖೆ ಅಪೂರ್ಣವಾಗಿದೆ ಮತ್ತು ಸಲ್ಲಿಸಲಾದ ಚಾರ್ಜ್​ಶೀಟ್​ನಲ್ಲಿ ತೊಡಕುಗಳಿಗೆ ಎಂಬ ಆಧಾರದ ಮೇಲೆ ಅವರಿಗೆ ಡಿಸೆಂಬರ್ 3, 2022 ರಂದು ವಿಶೇಷ ನ್ಯಾಯಾಲಯದಿಂದ “ಶಾಸನಬದ್ಧ” ಜಾಮೀನು ನೀಡಿತ್ತು. ಈ ಆದೇಶವನ್ನು ದೆಹಲಿ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ.

ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮತ್ತು ಇತ್ಯರ್ಥಪಡಿಸಿದ ಕಾನೂನು ಸ್ಥಾನವನ್ನು ನಿರ್ಲಕ್ಷಿಸುವಲ್ಲಿ “ಕಾನೂನಿನ ಗಂಭೀರ ತಪ್ಪು ಮಾಡಿದೆ” ಎಂದು ಉಲ್ಲೇಖಿಸಿ ಜಾಮೀನು ಆದೇಶಗಳನ್ನು ಸರ್ವೋಚ್ಛ ರದ್ದುಗೊಳಿಸಿತು.

ಏತನ್ಮಧ್ಯೆ, ಧೀರಜ್ ವಾಧ್ವಾನ್ ಅವರನ್ನು ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ವೈದ್ಯಕೀಯ ಆಧಾರದ ಮೇಲೆ ಬಾಂಬೆ ಹೈಕೋರ್ಟ್​​ನಿಂದ ಪ್ರತ್ಯೇಕ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿದ್ದರು. ಬಾಂಬೆ ಹೈಕೋರ್ಟ್ ಈ ವರ್ಷದ ಮೇ 2 ರಂದು ಆ ಪ್ರಕರಣದಲ್ಲಿ ಜಾಮೀನನ್ನು ಕ್ರಮಬದ್ಧಗೊಳಿಸಿತ್ತು. ಸಿಬಿಐ ಬಂಧನದಿಂದ ಅವರ ರಕ್ಷಣೆಯನ್ನು ಒಂದು ವಾರ ವಿಸ್ತರಿಸಿತ್ತು. ರಕ್ಷಣಾ ಅವಧಿ ಮುಗಿದ ನಂತರ ಸಿಬಿಐ ವಾಧ್ವಾನ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Swati Maliwal : ಸ್ವಾತಿ ಮಾಲಿವಾಲ್​​ ಮೇಲೆ ಕೇಜ್ರಿವಾಲ್ ಸಹಾಯಕನಿಂದ ಹಲ್ಲೆ; ಆಪ್​​ನಿಂದ ತಪ್ಪೊಪ್ಪಿಗೆ

ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಧೀರಜ್ ವಾಧ್ವಾನ್ ಮತ್ತು ಅವರ ಸಹೋದರ ಕಪಿಲ್ ವಾಧ್ವಾನ್ ಮತ್ತು ಅಜಯ್ ನವಂದರ್ ಈ ಆರೋಪಿಗಳಾಗಿದ್ದಾರೆ.

ಸಾಲ ವಾಪಸ್​ ಕೊಡದ ಡಿಎಚ್​ಎಲ್​ಎಫ್​

2010 ಮತ್ತು 2018 ರ ನಡುವೆ ಡಿಎಚ್ಎಫ್ಎಲ್​ಗೆ 42,871 ಕೋಟಿ ರೂ.ಗಳ ಸಾಲ ನೀಡಿದ್ದ 17 ಸದಸ್ಯರ ಸಾಲದಾತ ಒಕ್ಕೂಟದ ಮುಂಚೂಣಿ ಸಂಸ್ಥೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಮೇರೆಗೆ ಸಿಬಿಐ ವಾಧ್ವಾನ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿತ್ತು.

ಕಪಿಲ್ ಮತ್ತು ಧೀರಜ್ ವಾಧ್ವಾನ್ ಇತರರೊಂದಿಗೆ ಕ್ರಿಮಿನಲ್ ಪಿತೂರಿ ಮಾಡಿದ್ದು ಸತ್ಯ ಮರೆ ಮಾಚಲಾಗಿದೆ ಎಂದು ಹೇಳಲಾಗಿದೆ. ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮಾಡಿದ್ದಾರೆ ಮತ್ತು 2019 ರ ಮೇ ತಿಂಗಳಿನಿಂದ ಸಾಲ ಮರುಪಾವತಿಯಲ್ಲಿ ವಿಫಲರಾಗುವ ಮೂಲಕ ಒಕ್ಕೂಟಕ್ಕೆ 34,615 ಕೋಟಿ ರೂ.ಗಳನ್ನು ವಂಚಿಸಲಾಗಿದೆ. ಅಲ್ಲದೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಿಬಿಐ ತನ್ನ ಚಾರ್ಜ್​ಶೀಟ್​ನಲ್ಲಿ ಆರೋಪಿಸಿದೆ.

Exit mobile version