Site icon Vistara News

ವಿದ್ಯುತ್​ ತಂತಿ ಸ್ಪರ್ಶಿಸಿ ಮದುವೆ ದಿಬ್ಬಣದ ಬಸ್ ಭಸ್ಮ​, ಐವರ ದುರ್ಮರಣ; ಇಲ್ಲಿದೆ ಭಯಾನಕ ವಿಡಿಯೊ

Fire Accident

ಘಾಜಿಪುರ: ಉತ್ತರ ಪ್ರದೇಶದ ಗಾಜಿಪುರದಲ್ಲಿ ಮದುವೆ ದಿಬ್ಬಣದ ಬಸ್​​ ಒಂದು ವಿದ್ಯುತ್​ ತಂತಿಗೆ ಸ್ಪರ್ಶಿಸಿ ಸುಟ್ಟು ಕರಕಲಾದ (Fire Mishap) ಘಟನೆ ಹೃದಯ ವಿದ್ರಾವಕ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಬಸ್ ಮದುವೆಯ ಸ್ಥಳವಾದ ದೇವಾಲಯದ ಕಡೆಗೆ ಚಲಿಸುತ್ತಿತ್ತು. ಈ ವೇಳೆ ಬಸ್​ನಲ್ಲಿ 30 ಪ್ರಯಾಣಿಕರು ಇದ್ದರು. ಸ್ಥಳೀಯರು ಬಸ್​​ನ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಪ್ರಯೋಜನ ಆಗಿಲಿಲ್ಲ ಎನ್ನಲಾಗಿದೆ.

ಸ್ಥಳದಿಂದ ಆಘಾತಕಾರಿ ದೃಶ್ಯಗಳು ಸ್ಥಳೀಯ ನಿವಾಸಿಗಳು ಬೆಂಕಿಯನ್ನು ನಂದಿಸಲು ಹೆಣಗಾಡುತ್ತಿರುವಾಗ ಎತ್ತರದ ಜ್ವಾಲೆಗಳು ಉಲ್ಬಣಗೊಳ್ಳುತ್ತಿರುವುದನ್ನು ತೋರಿಸಿದೆ.

ಘಟನೆಯಲ್ಲಿ ಗಾಯಗೊಂಡವರಿಗೆ ಹಾಗೂ ಮೃತಪಟ್ಟವರ ಕುಟುಂಬಸ್ಥರಿಗೆ ಸಹಾಯ ಮಾಡಲು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಮತ್ತು ಗಾಯಗೊಂಡವರಿಗೆ ತಲಾ 50,000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ : Byju’s Offices: ಸಾಲದ ಸುಳಿ; ದೇಶದ ಎಲ್ಲ ಕಚೇರಿಗಳಿಗೆ ಬೀಗ ಜಡಿದ ಬೈಜೂಸ್!‌

ಪ್ರಯಾಣಿಕರಿಂದ ತುಂಬಿದ್ದ ಬಸ್ 11 ಸಾವಿರ ವೋಲ್ಟ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದ ನಂತರ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಬೆಂಕಿ ಬಿದ್ದ ಕಾರಣ ಜನರು ರಕ್ಷಣೆಗಾಗಿ ಹೊರಗೆ ಜಿಗಿಯಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಅನೇಕ ಜನರು ಜೀವಂತವಾಗಿ ಸುಟ್ಟು ಹೋಗಿದ್ದಾರೆ.

ಮೌ ಜಿಲ್ಲೆಯಿಂದ ಗಾಜಿಪುರದ ಬರೇಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಗೆ ಮದುವೆ ಮೆರವಣಿಗೆ ಬಂದಿತ್ತು. ಮಹಾಹರ್ ಧಾಮ್ ದೇವಸ್ಥಾನದಲ್ಲಿ ಮದುವೆಯಾಗಬೇಕಿತ್ತು. ಕಳೆದ ಮೂರು ದಿನಗಳಿಂದ ಈ ದೇವಾಲಯದಲ್ಲಿ ಜಾತ್ರೆಯನ್ನು ಆಯೋಜಿಸಲಾಗಿತ್ತು. ಈ ಕಾರಣದಿಂದಾಗಿ ಜನಸಂದಣಿ ಇತ್ತು. ಹೀಗಾಗಿ ಬಸ್ ಚಾಲಕನಿಗೆ ಮುಖ್ಯ ರಸ್ತೆಯ ಬದಲು ಬೇರೆ ಮಾರ್ಗದ ಮೂಲಕ ಹೋಗಲು ತಿಳಿಸಲಾಗಿತ್ತು. ಈ ವೇಳೆ ಮದುಮಗಳು ಸೇರಿದಂತೆ ಕೆಲವರು ಬಸ್​ನಿಂದ ಇಳಿದಿದ್ದರು. ಕೆಲವು ವೃದ್ಧ ಮಹಿಳೆಯರು ಮತ್ತು ಮಕ್ಕಳು ಬಸ್ ನಲ್ಲಿದ್ದರು. ಕಚ್ಚಾ ರಸ್ತೆಯ ಮುಂದೆ ಬಸ್​ ಹೋಗುವಾಗ ಹೈಟೆನ್ಷನ್ ತಂತಿ ಬಸ್​ ಮೇಲೆ ಬಿದ್ದಿದೆ.

ಬಸ್ ಸಿಎನ್ ಜಿ ಇಂಧನದಿಂದ ಚಲಿಸುತ್ತಿತ್ತು. ಇದರಿಂದಾಗಿ ಬೆಂಕಿ ಬಹಳ ವೇಗವಾಗಿ ಹರಡಿತ್ತು. ಈ ಸಮಯದಲ್ಲಿ, ಗ್ರಾಮದ ಕೆಲವು ಜನರು ಸಹಾಯ ಮಾಡಲು ಮುಂದಾಗಿದ್ದರುಗ್ರಾಮಸ್ಥರ ಪ್ರಕಾರ, ಈ ತಂತಿಯನ್ನು ಸರಿಪಡಿಸುವಂತೆ ಗ್ರಾಮಸ್ಥರು ವಿದ್ಯುತ್ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರು/ ಆದರೆ ಅವರ ದೂರಿಗೆ ಯಾವುದೇ ಗಮನ ಹರಿಸಿರಲಿಲ್ಲ.

Exit mobile version