ಬೆಂಗಳೂರು: ಪರ್ಫಾಮೆನ್ಸ್ ಬೈಕ್ಗಳ ಕಡೆಗಿನ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ಹೆಚ್ಚು ಸಿಸಿ ಹಾಗೂ ಅಧಿಕ ಪವರ್ ಬಿಡುಗಡೆ ಮಾಡುವ ಬೈಕ್ಗಳನ್ನು ಹೊಸ ಪೀಳಿಗೆಯ ಜನರು ಇಷ್ಟ ಪಡುತ್ತಾರೆ. 150 ಸಿಸಿಗಳಿಗಿಂತ ಹೆಚ್ಚಿನ ಬೈಕ್ಗಳೇ ಅವರ ಆದ್ಯತೆಗಳಾಗಿರುತ್ತವೆ. ಹಿಂದೆಲ್ಲ ಭಾರತದ ಮಾರುಕಟ್ಟೆಯಲ್ಲಿ ಪವರ್ಫುಲ್ ಬೈಕ್ಗಳ (Powerful Bikes) ಸಂಖ್ಯೆ ಕಡಿಮೆಯಿದ್ದವು. ಆದರೆ, ಪರಿಸ್ಥಿತಿ ಹಿಂದಿನಂತಿಲ್ಲ. ಕಳೆದ ದಶಕದಲ್ಲಿ, ಪರ್ಫಾಮೆನ್ಸ್ ಬೈಕ್ ಗಳು ಹೆಚ್ಚು ಪ್ರವೇಶಿಸಿವೆ ಮತ್ತು ಕೈಗೆಟುಕುವ ಬೆಲೆಗೆ ದೊರೆಯುತ್ತಿವೆ. ಜತೆಗೆ ಸ್ಪರ್ಧೆಯೂ ಹೆಚ್ಚಿದೆ. ಹೀಗೆ 2.5 ಲಕ್ಷ ರೂಪಾಯಿಗಿಂತ ಕಡಿಮೆ (ಎಕ್ಸ್ಶೋರೂಮ್) ಬೆಲೆಹೊಂದಿರುವ ಕೆಲವು ಬೈಕ್ಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳಿ.
ಕೆಟಿಎಂ 250 ಡ್ಯೂಕ್ (31 ಬಿಹೆಚ್ ಪಿ)
ಕೆಟಿಎಂ ಡ್ಯೂಕ್ ಪವರ್ಫುಲ್ ಬೈಕ್ ಮಾತ್ರವಲ್ಲದೆ ಅತ್ಯುತ್ತಮ ಹ್ಯಾಂಡ್ಲರ್ ಕೂಡ ಆಗಿದೆ. ಉತ್ತಮ ಗುಣಮಟ್ಟದ ಬಿಡಿಭಾಗಗಳು ಮತ್ತು ಫೀಚರ್ಗಳನ್ನು ಹೊಂದಿರುವ 250 ಡ್ಯೂಕ್ ಮಾರುಕಟ್ಟೆಯಲ್ಲಿ ಛಾಪು ಮೂಡಿಸಿದೆ. ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 9,250 ಆರ್ ಪಿಎಂನಲ್ಲಿ 31 ಬಿಹೆಚ್ ಪಿ ಪವರ್ ಮತ್ತು 7,250 ಆರ್ ಪಿಎಂನಲ್ಲಿ 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೆನ್-3 250 ಡ್ಯೂಕ್ ಬೈಕಿನಲ್ಲಿ ಪರಿಷ್ಕೃತ ಎರ್ಗೊನಾಮಿಕ್ಸ್, ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ. 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.40 ಲಕ್ಷಗಳಾಗಿದೆ.
ಟಿವಿಎಸ್ ಅಪಾಚೆ ಆರ್ ಟಿಆರ್ 310 (35.6 ಬಿಹೆಚ್ ಪಿ)
ಅಪಾಚೆ ಆರ್ ಟಿಆರ್ 310 ಬೈಕ್ ಅಪಾಚೆ ಆರ್ ಆರ್ 310 ಬೈಕಿನ ನೇಕೆಡ್ ಆವೃತ್ತಿಯಾಗಿದೆ. ಆದರೆ ಎಂಜಿನ್ ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಬದಲಾವಣೆಯಿಲ್ಲ. ಆರ್ ಟಿಆರ್ 310 ಬೈಕ್ 312 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,700 ಆರ್ ಪಿಎಂನಲ್ಲಿ 35.6 ಬಿಹೆಚ್ ಪಿ ಪವರ್ ಮತ್ತು 6,650 ಆರ್ ಪಿಎಂನಲ್ಲಿ 28.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅಪಾಚೆ ಆರ್ ಟಿಆರ್ 310 ಬೈಕ್ ಎಲೆಕ್ಟ್ರಾನಿಕ್ ವಿಜಾರ್ಡಿ ಮತ್ತು ಸೇಫ್ಟಿ ನೆಟ್ನಂಥ ಸುರಕ್ಷತಾ ಫೀಚರ್ಗಳಿಂ ಕೂಡಿದೆ. 2.43 ಲಕ್ಷ ರೂ.ಗಳಿಂದ 2.63 ಲಕ್ಷ ರೂ.ಗಳ ನಡುವಿನ ಬೆಲೆಯ ಮೂರು ವೇರಿಯೆಂಟ್ಗಳು ದೊರೆಯುತ್ತವೆ.
ಬಜಾಜ್ ಡೊಮಿನಾರ್ 400 (40 ಎಚ್ಪಿ)
ಡೊಮಿನಾರ್ 400 ಬೈಕ್ ಕೆಟಿಎಂ 390 ಡ್ಯೂಕ್ ಬೈಕಿನಿಂದ ಎರವಲು ಪಡೆದ ಎಂಜಿನ್ಹೊಂ ದಿದೆ. ಇದರ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 8,800 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೊಮಿನಾರ್ 400 ಬೈಕ್ನ ಪ್ಲಸ್ ಮತ್ತು ಮೈನಸ್ ವಿಚಾರವೆಂದರೆ ಅದರ ತೂಕ. 192 ಕೆ.ಜಿ ತೂಕವನ್ನು ಹೊಂದಿರುವ ಇದು ಈ ಪಟ್ಟಿಯಲ್ಲಿ ಅತಿ ಭಾರವಾದ ಬೈಕ್ ಆಗಿದೆ. ಡೊಮಿನಾರ್ 400 ಬೈಕಿನ ಬೆಲೆಯು ರೂ.2.30 ಲಕ್ಷ ರೂಪಾಯಿ.
ಬಜಾಜ್ ಪಲ್ಸರ್ ಎನ್ಎಸ್400ಝಡ್ (40ಹೆಚ್ಪಿ)
ಪಲ್ಸರ್ ಎನ್ ಎಸ್ 400 ಝಡ್ ಬಜಾಜ್ ನ ಪಲ್ಸರ್ ಸರಣಿಯ ಬೈಕುಗಳ ಪಟ್ಟಿಗೆ ಹೊಸ ಸೇರ್ಪಡೆ. ಇದು ಡೊಮಿನಾರ್ 400ರ ಎಂಜಿನ್ ಮತ್ತು ಫ್ರೇಮ್ ಅನ್ನು ಹಂಚಿಕೊಳ್ಳುತ್ತದೆ. ಆದರೆ 18 ಕೆಜಿ ಹಗುರ. 174 ಕೆ.ಜಿ ತೂಕ ಹೊಂದಿರುವ ಎನ್ ಎಸ್ 400 ಝಡ್ ಕಾರ್ಯಕ್ಷಮತೆಯ ವಿಷಯದಲ್ಲಿ ಸ್ಪಷ್ಟ ಪ್ರಯೋಜನ ಹೊಂದಿದೆ. ಎಬಿಎಸ್ ನೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುವ ಟ್ರಾಕ್ಷನ್ ಕಂಟ್ರೋಲ್ ಮತ್ತು ರೈಡಿಂಗ್ ಮೋಡ್ ಗಳಂತಹ ಫೀಚರ್ಗಳಿಎ. ಪಲ್ಸರ್ ಎನ್ ಎಸ್ 400 ಝಡ್ ಬೈಕಿನ ಬೆಲೆಯು ರೂ.1.85 ಲಕ್ಷಗಳಾಗಿದೆ.
ಇದನ್ನೂ ಓದಿ: Car Care Tips : ನಿಮ್ಮ ಕಾರಿನ ಈ ಬಿಡಿಭಾಗಗಳಿಗೂ ಇವೆ ಎಕ್ಸ್ಪೈರಿ ಡೇಟ್; ಅವುಗಳು ಯಾವವು ಎಂಬುದು ತಿಳಿದಿರಲಿ
ಟ್ರಯಂಫ್ ಸ್ಪೀಡ್ 400 (40hp)
ಟ್ರಯಂಫ್ ಸ್ಪೀಡ್ 400 ಹಿಂದಿನ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, 176 ಕೆಜಿ ತೂಕವನ್ನು ಹೊಂದಿರುವ ಇದು ಬಜಾಜ್ ಪಲ್ಸರ್ ಎನ್ ಎಸ್ 400 ಝಡ್ ಗಿಂತ ಕೇವಲ 2 ಕೆ.ಜಿ ಹೆಚ್ಚು ತೂಕ ಹೊಂದಿದೆ. ಟ್ರಯಂಫ್ ಬೈಕ್ 398 ಸಿಸಿ ಎಂಜಿನ್ ಸಹಾಯದಿಂದ 8,000 ಆರ್ ಪಿಎಂನಲ್ಲಿ 40 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 37.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 2.34 ಲಕ್ಷ ರೂ.ಗಳಲ್ಲಿ, ಟ್ರಯಂಫ್ ‘ವಾಲ್ಯೂ ಫಾರ್ ಮನಿ.